Saturday, December 6, 2025
Saturday, December 6, 2025

Brahmana Mahasabha DVG ಓದಿದ್ದನ್ನ ಕೇಳಿದ್ದನ್ನ ಅರ್ಥೈಸಿ ಮನಕ್ಕೆ ತಂದುಕೊಳ್ಳಬೇಕು- ಎಚ್.ಬಿ.ಮಂಜುನಾಥ್

Date:

Brahmana Mahasabha DVG ಯಾವುದೇ ಸದ್ವಿದ್ಯೆಯಾಗಲಿ ಓದಿದಾಕ್ಷಣ ಅಥವಾ ಕೇಳಿದಾಕ್ಷಣ ಅದು ಜ್ಞಾನವಾಗುವುದಿಲ್ಲ, ಓದಿದ್ದನ್ನು ಅಥವಾ ಕೇಳಿದ್ದನ್ನು ಅರ್ಥ ಮಾಡಿಕೊಳ್ಳುತ್ತಾ ಮನಸ್ಸಿಗೆ ತೆಗೆದುಕೊಳ್ಳಬೇಕು, ಹಾಗೆ ಮನಸ್ಸಿಗೆ ತೆಗೆದುಕೊಂಡದ್ದನ್ನು ಗಟ್ಟಿಯಾಗಿ ನೆಲೆ ನಿಲ್ಲಿಸಿಕೊಳ್ಳಬೇಕು ಎಂದು ಹಿರಿಯ ಪತ್ರಕರ್ತ ಎಚ್ ಬಿ ಮಂಜುನಾಥ್ ಕಿವಿಮಾತು ಹೇಳಿದರು.

ಅವರು ದಾವಣಗೆರೆ ಬ್ರಾಹ್ಮಣ ಸಮಾಜ ಸೇವಾ ಸಂಘ ವತಿಯಿಂದ ಏರ್ಪಾಡಾಗಿರುವ ವಿಪ್ರವಟು ಶಿಕ್ಷಣ ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ತ್ರಯಂಗ ಯೋಗದ ಬಗ್ಗೆ ಮಾತನಾಡುತ್ತಾ ವೇದ, ಉಪನಿಷತ್ತು, ಆಗಮ, ಪುರಾಣ, ಇತಿಹಾಸಾದಿಗಳ ಕಾಲದಿಂದಲೂ ಶ್ರವಣ, ಮನನ, ನಿದಿಧ್ಯಾಸನವೆಂಬ ತ್ರಯಂಗ ಯೋಗಕ್ಕೆ ಪ್ರಾಮುಖ್ಯತೆ ಇದ್ದು ಕೇಳಿದ್ದನ್ನು ಓದಿದ್ದನ್ನು ಅರ್ಥಮಾಡಿಕೊಳ್ಳುತ್ತಾ ಜೀವನ ಅನುಭವಗಳೊಂದಿಗೆ ಅದನ್ನು ಸಮೀಕರಿಸುತ್ತಾ ಮೌಲ್ಯಯುತವಾದವುಗಳನ್ನು ಮನಸ್ಸಿಗೆ ತೆಗೆದುಕೊಂಡು ನೆಲೆಗೊಳ್ಳಿಸಿಕೊಂಡಾಗ ಜ್ಞಾನವಾಗಿ ಇರುತ್ತದೆ ಎಂದರು.

Brahmana Mahasabha DVG ಕೇವಲ ಬಾಯಿ ಪಾಠ ಜ್ಞಾನವಾಗುವುದಿಲ್ಲ, ಪುನರುಚ್ಛಾರವಾಗುತ್ತದೆ ಅಷ್ಟೇ, ಮಂತ್ರಗಳೂ ಅಷ್ಟೇ, ಕೇವಲ ಹೇಳಿದರೆ ಕೇಳಿದರೆ ಪ್ರಯೋಜನವಿಲ್ಲ, ಅರ್ಥ ತಿಳಿದುಕೊಳ್ಳಬೇಕು, ಅದೂ ಸಹ ನಿಘಂಟನ್ನು ನೋಡಿ ಪದ ಪದಗಳ ಅರ್ಥ ತಿಳಿಯುತ್ತಾ ಹೋದರೆ ಮಂತ್ರಗಳೂ ನಿಸ್ಸಾರವೆನಿಸುತ್ತವೆ.

ಮಂತ್ರಗಳ ಆದಿ ಭೌತಿಕದ ಆದಿ ದೈವಿಕದ ಆಚೆಗಿನ ಆಧ್ಯಾತ್ಮಿಕ ಅರ್ಥ ತಿಳಿದುಕೊಂಡಾಗ ಮಾತ್ರ ಅವುಗಳ ಮೌಲ್ಯ ಗೊತ್ತಾಗುತ್ತದೆ, ಮನದಟ್ಟಾಗುತ್ತದೆ. ಅದಕ್ಕಾಗಿ ಇಂತಹ ಶಿಬಿರಗಳು ವಿದ್ಯಾರ್ಥಿ ದೆಸೆಯಿಂದಲೇ ಅಗತ್ಯ ಎಂದ ಎಚ್ ಬಿ ಮಂಜುನಾಥ್ ಜ್ಞಾನದಿಂದ ಭಯ ಶೋಕ ಮೋಹಗಳ ನಿವಾರಣೆ ಸಾಧ್ಯ ಎಂಬುದನ್ನು ಉದಾಹರಣೆಗಳ ಸಹಿತ ವಿವರಿಸಿದರು.

ದಾವಣಗೆರೆ ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಡಾ. ಶಶಿಕಾಂತ್, ಲೆಕ್ಕಪರಿಶೋಧಕರಾದ ವಿನಾಯಕ ಜೋಶಿ, ಶ್ರೀನಿವಾಸ್, ಕುಲಕರ್ಣಿ ಮೊದಲಾದವರು ಉಪಸ್ಥಿತರಿದ್ದರು. ಫಲ ಸಮರ್ಪಣೆಯೊಂದಿಗೆ ಮಂಜುನಾಥರನ್ನು ಗೌರವಿಸಲಾಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...