Karnataka Assembly Election ಹುಬ್ಬಳ್ಳಿ– ಧಾರವಾಡ ಸೆಂಟ್ರಲ್ ಕ್ಷೇತ್ರದ ಟಿಕೆಟ್ ಕೈತಪ್ಪುವುದು ಖಚಿತವಾಗುತ್ತಿದ್ದಂತೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಜಗದೀಶ ಶೆಟ್ಟರ್ ಶನಿವಾರ ಘೋಷಣೆ ಮಾಡಿದ್ದಾರೆ. ಭಾನುವಾರ ಬೆಳಿಗ್ಗೆ ಶಿರಸಿಯಲ್ಲಿ ವಿಧಾನಸಭಾಧ್ಯಕ್ಷ
ರನ್ನು ಭೇಟಿ ಮಾಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ ಎಂದು ತಿಳಿಸಿದರು. ಈ ಮೂಲಕ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಹಗ್ಗ ಜಗ್ಗಾಟಕ್ಕೆ ತೆರೆ ಬಿದ್ದಿದೆ.
ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಶಿರಸಿ ಕಚೇರಿಗೆ ಭಾನುವಾರ ತಮ್ಮ ಬೆಂಬಲಿಗರ ಜೊತೆಗೂಡಿ ಬಂದ ಶೆಟ್ಟರ್ ಕಾಗೇರಿ ಜೊತೆ ಕೆಲ ಸಮಯ ಚರ್ಚಿಸಿದರು.
ಶನಿವಾರ ಬಿಜೆಪಿ ಪ್ರಮುಖರು ಸೇರಿ ಹುಬ್ಬಳ್ಳಿಯಲ್ಲಿ ಶೆಟ್ಟರ್ ಜೊತೆ ನಡೆಸಿದ ಸಂಧಾನ ವಿಫಲವಾದ ಕಾರಣ ಶೆಟ್ಟರ್ ರಾಜೀನಾಮೆ ಸಲ್ಲಿಸಿದ್ದರು.
Karnataka Assembly Election ಶಾಸಕ ಸ್ಥಾನದ ಜೊತೆಗೆ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೂ ಇಂದೇ ರಾಜಿನಾಮೆ ಕೊಡುತ್ತೇನೆ. ನಂತರ ವಾಪಸ್ ಬಂದು ಹಿತೈಷಿಗಳ ಜೊತೆ ಚರ್ಚಿಸಿ ಮುಂದಿನ ಹೆಜ್ಜೆ ಬಗ್ಗೆ ನಿರ್ಧರಿಸುತ್ತೇನೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದರು.
ನೇರ ಶಿರಸಿಗೆ ತೆರಳಿ
ಸ್ಪೀಕರ್ ಕಾಗೇರಿ ಅವರ ಗೃಹಕಚೇರಿಯಲ್ಲಿ ಖುದ್ದು ರಾಜಿನಾಮೆ ಪತ್ರ ಸಲ್ಲಿಸಿದ್ದಾರೆ.
ಇಲ್ಲಿಯವರೆಗೂ ಹೈ ಕಮಾಂಡ್ ಮಾತಿಗೆ ಶೆಟ್ಟರ್ ಧನಾತ್ಮಕ ಸ್ಪಂದಿಸುವರೆಂಬ ನಿರೀಕ್ಷೆ ಹುಸಿಯಾಗಿದೆ.
ದೂರದಲ್ಲೇ ಇದ್ದರೂ ಹಿರಿಯ ಬಿಜೆಪಿ ನಾಯಕ ಬಿಎಸ್ ವೈ
ಸಂಧಾನ ಮಾತುಕತೆಯ ಎಲ್ಲ ವಿಷಯಗಳನ್ನೂ ಬಹಿರಂಗಪಡಿಸಿದರು.
ಶೆಟ್ಟರ್ ಅವರೇ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ
” ಇಷ್ಟೆಲ್ಲಾ ಸ್ಥಾನ ಮಾನ ಅನುಭವಿ ಸಿಯೂ ಅವರು (ಬಿಎಸ್ ವೈ) ಕೆಜೆಪಿ ಕಡೆ ಹೋಗಲಿಲ್ಲವೆ? ಎಂದು ಶೆಟ್ಟರ್ ಪ್ರಶ್ನಿಸಿದ್ದನ್ನ ಬಿಎಸ್ ವೈ ಗಮನಕ್ಕೆ ಪತ್ರಕರ್ತರು ತಂದರು.
“ತಾವು ಹೋಗಿದ್ದು ನಿಜ.ಆದರೆ ವಾಪಸ್ ಬಿಜೆಪಿ ಗೆ ಬಂದು ಜನತೆಯ ಕ್ಷಮೆ ಕೇಳಿದೆ” ಎಂದು ಬಿಎಸ್ ವೈ ಪತ್ರಕರ್ತರಿಗೆ ಉತ್ತರಿಸದರು.
ಮುಂದೊಮ್ಮೆ ಶೆಟ್ಟರ್ ಹಾಗೆ ವಾಪಸ್ ಬಂದರೆ ನಿಮ್ಮ ಅಭಿಪ್ರಾಯವೇನು ಎಂಬ ಮಾಧ್ಯಮದವರ ಪ್ರಶ್ನೆಗೆ ” ತೆರೆದ ಮನಸ್ಸಿನಿಂದ ಸ್ವಾಗತಿಸುತ್ತೇವೆ” ಎಂದು ಬಿಎಸ್ ವೈ ನುಡಿದರು.