Assembly Election ಇಡೀ ಬಿಜೆಪಿ ಪಕ್ಷಕ್ಕೆ ಇವತ್ತು ಪಕ್ಷಾಘಾತವಾದಂತೆ. ಸುಧಾರಿಸಿಕೊಳ್ಳಲು ಕೆಲು ದಿನಗಳೇ ಬೇಕಾಗುತ್ತದೆ.ದಕ್ಷಿಣಭಾರತದಲ್ಲೇ ಮೊದಲಿಗೆ ಬಿಜೆಪಿ ಸರ್ಕಾರ ತರುವಲ್ಲಿ ಬಿಎಸ್ ವೈ ಅವರೊಡನೆ ಹೆಗಲಿಗೆ ಹೆಗಲು ಕೊಟ್ಟ ನಾಯಕ ಶೆಟ್ಟರ್ ಬಿಜೆಪಿ ಗೆ ಗುಡ್ ಬೈ ಹೇಳಿರುವುದು ಅಚ್ಚರಿಯ ಸುದ್ದಿ. ರಾಜ್ಯದಲ್ಲೇ ಬಿಜೆಪಿ ವಲಯದಲ್ಲಿ ಅನಿರೀಕ್ಷಿತ ಬೆಳವಣಿಗೆ.
ರಾಜ್ಯದಲ್ಲಿ ಬಿಜೆಪಿಗೆ ಭವಿಷ್ಯವೇ ಇಲ್ಲ ಎಂದು ಬರೀ ವಿರೋಧ ಪಕ್ಷಗಳ ಸಾಲಿನಲ್ಲಿ ಕೂರುತ್ತಿದ್ದ ನಾಯಕಮಣಿಗಳು ಆಡಳಿತದ ಚುಕ್ಕಾಣಿ ಹಿಡಿಯುವಲ್ಲಿ ಬಿಎಸ್ ವೈ,ಶೆಟ್ಟರ್,ಈಶ್ವರಪ್ಪ,
ಜನಾರ್ದನ ರೆಡ್ಡಿ ,ಮುಂತಾದವರ
ಕೊಡುಗೆ ಇದೆ. ಕೇಂದ್ರದ ನಾಯಕರೂ ಕೂಡ ರಾಜ್ಯಮಟ್ಟದ ನಾಯಕರಿಗೆ ಮಣೆ ಹಾಕುವ ಪರಿಸ್ಥಿತಿ ನಿರ್ಮಾಣವಾಗಿತ್ತು.
Assembly Election ಆದರೆ ಯಾವತ್ತು ಕೇಂದ್ರದಲ್ಲಿ ಬಿಜೆಪಿ ಸಮರ್ಥವಾಗಿ ಬೇರೂರಿತೋ ಅಲ್ಲಿಂದ ರಾಜ್ಯಗಳಲ್ಲಿನ ಪಕ್ಷ ಬೆಳವಣಿಗೆ ಬಗ್ಗೆ ಸೂತ್ರವಾಡಿಸಲು ಶುರುಮಾಡಿತು.
ರಾಜ್ಯಗಳಲ್ಲಿ ಬಿಜೆಪಿ ಆಡಳಿವು ಒಂದು ಹಂತ ಮುಟ್ಟಿದ ನಂತರ ಈ ಪ್ರಕ್ರಿಯೆ ಶುರುವಾಯಿತು.
ಕರ್ನಾಟಕದಲ್ಲಿ ಮುಂಚೆ ಬಿಎಸ್ ವೈ ಹೇಳಿದ್ದಕ್ಕೆಲ್ಲಾ ಹ್ಞೂಂ ಗುಡುತ್ತಿದ್ದ ಹೈಕಮಾಂಡ್ ನಿಧಾನವಾಗಿ ಭವಿಷ್ಯದಲ್ಲಿ ಪಕ್ಷ ಪ್ರಬಲಗೊಳಿಸುವ ಚಿಂತನೆಯಲ್ಲಿ ತೊಡಗಿತು.ಹೀಗಾಗಿ
ಪಿಕ್ ಅಂಡ್ ಚೂಸ್,
ಪರ್ಫಾಮೆನ್ಸ್ ಆಧಾರಿತ ಆಯ್ಕೆಗಳನ್ಮ ಮಾಡತೊಡಗಿತು.
ಈ ಪ್ರಕ್ರಿಯೆಗಳ ಫಲವೇ ಪ್ರಸ್ತುತ ಕರ್ನಾಟಕದಲ್ಲಿ ನಿಂತ ನೀರನ್ನ ಕಲಕಿದಂತಾಗಿದೆ.
ಗೆಲ್ಲುವ ಕುದುರೆಯನ್ನೇ ಮತ್ತೆ ಮತ್ತೆ ಆರಿಸಿ ಚುನಾವಣೆ ಟಿಕೇಟ್ ನೀಡುವ ಸಂಪ್ರದಾಯ ಮುರಿದು ಈಗ ಮುಂದೇನು? ಎಂಬ ಪ್ರಶ್ನೆ ಬಿಜೇಪಿಯನ್ನೇ ಕಾಡುತ್ತಿದೆ.
ಪಕ್ಷಾಂತರ ಪರ್ವವೂ ಈಗ ಬಿರುಸಾಗಿದೆ. ಅಲ್ಲಿ ಬಿಟ್ಟವರನ್ನ ಇಲ್ಲಿಗೆ.ಇಲ್ಲಿ ಬಿಟ್ಟವರನ್ನ ಅಲ್ಲಿಗೆ ಸೇರಿಸಿಕೊಳ್ಳುವ ಸಮಯಾವಧಾನ ಪ್ರಸಂಗಕ್ಕೆ ನಾವೆಲ್ಲಾ ಸಾಕ್ಷಿಯಾಗಿದ್ದೇವೆ.
ಬೊಮ್ಮಾಯಿ ಅವರು
ಹಿರಿಯರ ಸಂಖ್ಯೆ ಕಡಿಮೆಮಾಡಿ ಕಿರಿಯ ಪೀಳಿಗೆಗೆ ಮಣೆ ಹಾಕುವ ಹೈಕಮಾಂಡ್ ಪ್ರಯತ್ನವನ್ನ ಶೆಟ್ಟರ್ ಅರ್ಥಮಾಡಿಕೊಳ್ಳಲಾರದೇ ಹೋದರಲ್ಲ ಎಂದು ಬೇಸರಪಟ್ಟಿದ್ದಾರೆ.
ಪಕ್ಷ ಕಟ್ಟಿದವರಲ್ಲಿ ಶೆಟ್ಟರ್ ನೀಡಿದ ಕೊಡುಗೆ ಬಗ್ಗೆ ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಆದರೇನು ಈಗ ಟಿಕೇಟಿಗಾಗಿ ರೈಲು ಹುಡುಕುವ ಸಮಯ.
ಆದ್ದರಿಂದ ಯಾವ ಪಕ್ಷದ ಡಬ್ಬಿಯೋ ಹತ್ತಿ ಪ್ರಯಾಣ ಮಾಡಿದರಾಯಿತು ಅನ್ನುವ ಮನಸ್ಥಿತಿ
ಶೆಟ್ಟರ್ ಮತ್ತು ಸವದಿಯವರನ್ನ ನೋಡಿದರೆ ತಿಳಿಯುತ್ತದೆ.