Environment Department ಅಭಿವೃದ್ಧಿ ನೆಪದಲ್ಲಿ ಪರಿಸರ ವಿನಾಶ ಆಗುವ ಜತೆಯಲ್ಲಿ ಜಾಗತಿಕ ತಾಪಮಾನದ ಮೇಲೆ ಪರಿಣಾ ಬೀರುತ್ತಿದೆ. ಅತಿ ಹೆಚ್ಚು ಕಾರ್ಖಾನೆಗಳಿಂದ ಪರಿಸರ ವಿನಾಶ ಅಗುತ್ತಿದೆ ಎಂದು ಪರಿಸರವಾದಿ ಡಾ. ಎಲ್.ಕೆ.ಶ್ರೀಪತಿ ಹೇಳಿದರು.
ಶಿವಮೊಗ್ಗ ರಾಜೇಂದ್ರನಗರದ ಸಭಾಂಗಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಾಗತಿಕ ದುಷ್ಪರಿಣಾಮಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಅತಿಯಾದ ಇಂಧನ ಬಳಕೆಯಿಂದ ಹಾಗೂ ಮರ ಗಿಡಗಳ ನಾಶದಿಂದ ಜಾಗತಿಕ ತಾಪಮಾನ ಏರಿಕೆ ಆಗುತ್ತಿದೆ. ಇದರಿಂದ ಬರುವ ದಿನಗಳಲ್ಲಿ ಬದುಕುವುದೇ ಕಷ್ಟಕರವಾಗಲಿದೆ ಎಂದು ತಿಳಿಸಿದರು.
Environment Department ಜಾಗತಿಕ ತಾಪಮಾನ ಏರಿಕೆಯಿಂದ ಭೂಮಿ ಮೇಲೆ ದುಷ್ಪರಿಣಾಮ ಉಂಟಾಗುತ್ತಿದ್ದು, ಮನುಷ್ಯನಿಗೂ ತೊಂದರೆ ಆಗುತ್ತದೆ. ಮನುಷ್ಯನ ಜೀವಿತ ಅವಧಿಯು ಕಡಿಮೆ ಆಗುತ್ತದೆ. ಆರ್ಥಿಕವಾಗಿ ತುಂಬಾ ನಷ್ಟ ಎದುರಿಸಬೇಕಾಗುತ್ತದೆ. ಗಿಡಗಳನ್ನು ನೆಡುವುದರ ಮೂಲಕ ಪರಿಸರ ಸಂಪನ್ಮೂಲ ಕಾಪಾಡಿಕೊಳ್ಳಬೇಕಿದೆ. ಎಲ್ಲರೂ ಪರಿಸರ ಸಂರಕ್ಷಣೆ ಬಗ್ಗೆ ಆಲೋಚಿಸಬೇಕು ಎಂದರು.
ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷೆ ಸುಮತಿ ಕುಮಾರಸ್ವಾಮಿ ಮಾತನಾಡಿ, ಪ್ರತಿಯೊಬ್ಬರು ಪರಿಸರ ಕಾಳಜಿ ವಹಿಸುವುದರ ಜತೆಯಲ್ಲಿ ಇಂಧನ ಕಡಿಮೆ ಬಳಕೆ ಮಾಡಬೇಕು. ಸೌರವಿದ್ಯುತ್, ಬಯೋಡಿಸೆಲ್ ಬಳಕೆ ಹೆಚ್ಚು ಮಾಡಬೇಕು. ಉತ್ತಮ ಪರಿಸರ ಕಾಪಾಡಿಕೊಳ್ಳುವಲ್ಲಿ ಎಲ್ಲರ ಪ್ರಯತ್ನ ಮುಖ್ಯ ಎಂದು ತಿಳಿಸಿದರು.
ಡಾ. ಎಲ್.ಕೆ.ಶ್ರೀಪತಿ ಅವರಿಗೆ ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಸನ್ಮಾನಿಸಲಾಯಿತು. ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್, ಚಂದ್ರಹಾಸ ಪಿ ರಾಯ್ಕರ್, ಡಾ. ಪರಮೇಶ್ವರ ಶಿಗ್ಗಾಂವ್, ಚಂದ್ರಶೇಖರಯ್ಯ, ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಕುಮಾರಸ್ವಾಮಿ, ಮಂಜುನಾಥ್, ಸತೀಶ್ ಚಂದ್ರ, ಡಾ. ಅರುಣ್, ಕೆ.ಜಿ.ರಾಮಚಂದ್ರ, ಅನೂಷ್‌ಗೌಡ, ಗಣೇಶ್, ಕೇಶವಪ್ಪ, ಕೃಷ್ಣಮೂರ್ತಿ, ಬಿಂದು ವಿಜಯಕುಮಾರ್, ಕಿಶೋರ್, ರೋಟರಿ ಸದಸ್ಯರು ಉಪಸ್ಥಿತರಿದ್ದರು.