Summer Season ಅಬ್ಬಾ!!ಏನ್ ಬಿಸಿಲು ಮರ್ರೆ. ಬೆಳಿಗ್ಗೆ ಎದ್ದ ಕೂಡಲೇ ತಣ್ಣನೇ ಗಾಳಿಬೀಸುವ ಸಮಯ. ಬಿಸಿ ಬಿಸಿ ತಿಂಡಿ-ಊಟ ತಿನ್ನೋಣ ಅನ್ಕೊಂಡ್ರೆ ಅಲ್ಲೂ ಸಹ ಧಗೆಯಿಂದ ಹೊರಹೊಮ್ಮುವಂತಹ ಹೊಗೆ.
ದೈನಂದಿನ ದಿನ ಚೆನ್ನಾಗಿರ್ಲಿ ಅಂತ ಬಿಸಿ ನೀರು ಸ್ನಾನ ಮಾಡೋಣ ಅನ್ಕೊಂಡ್ರೆ. ರಣ ಹಬೆಯಂತೆ ನೆನಪಾಗುವ ಬಿಸಿಲಿನ ಕಿರಣಾವೃತ.
-ಶಿವಾ!ಎಷ್ಟೇ ತೆಳುವಾದ ವಸ್ತ್ರವನ್ನು ಉಟ್ಟರೂ ಅಸ್ವಸ್ಥರಾಗಿ ಸೊರಗಿಹೋಗುವೆವು. ಹೊರಗೊಂದು ಹೆಜ್ಜೆ ಇಟ್ಟರೆ ಮುಗಿದೇ ಹೋಯಿತು.
ಮುಖದಲ್ಲಿರುವ ಬಣ್ಣ ಮಾಸಿ. ಕಂಠಗಳು ಒಣಗಿ ಗದ್ಗದಗೊಂಡು ಯಾರಿಗ್ ಬೇಕು ಈ ಬಿಸಿಲು ಎಂದು ಶಾಪಹಾಕುವ ಹೊತ್ತಿದು.
ಅಂದುಕೊಂಡಾಗ ತಿನ್ನಲು ಆಗದೆ ಇರುವ ಪಾನಿ -ಪೂರಿಗಳು, ಗೋಬಿ ಪಿಜ್ಜಾ ಬರ್ಗರ್ ಗಳು. ಯಾರಿಗೂ ಹೆದರದ ಹೊತ್ತಿನಲ್ಲಿ ರವಿರಾಯನಿಗೆ ಹೆದರುವಂತಹ ಪರಿಸ್ಥಿತಿ.
ಧಗೆಗೆ ಹೆದರಿ ಹಣ್ಣು -ಹಂಪಲು, ಪಾನೀಯ, ಮಜ್ಜಿಗೆ, ನೀರು ಕುಡಿದು ಬದುಕನ್ನು ಸಾಗಿಸಲೇ ಬೇಕಾದ ಮನಸ್ಥಿತಿ.
Summer Season ಬಿಡಪ್ಪ ಹೋಗ್ಲಿ ಸಂಜೆ ಹೊತ್ತಾಯ್ತು ಅಂತ ತಣ್ಣನೆ ಗಾಳಿ ತಗೋಳೋಕೆ ಹೊರಗ್ ಬಂದ್ರೆ ಆ ಪರಿಸರಕ್ಕೂ ಒಂದಿಷ್ಟು ಕನಿಕರವಿಲ್ಲ ಈ ಮನುಷ್ಯನ ಮೇಲೆ. ಒಂದ್ ಮರ -ಗಿಡನು ಅಲ್ಲಾಡದೆಯೇ
ಸ್ತಬ್ಧವಾಗಿಯೇ ಉಳಿದು ಬಿಟ್ಟಿವೆ. ಅಲ್ಲೂ ಇಲ್ಲ ಒಂದು ಹಿತವಾದ ತಂಗಾಳಿ.
ಆಧುನಿಕರಣದ ಬೆಳವಣಿಗೆಗಾಗಿ ಮಾನವನ ಹಠವೋ. ಅಥವಾ ನಮ್ಮೆಲರ ಮೇಲೆ ನಿಸರ್ಗದ ಒಂದಿಷ್ಟು ಕೋಪವೋ ಕಾಣಸಿಗುತ್ತಿಲ್ಲ.
ರಸ್ತೆ ಮೇಲೆ ನಡೆದುಕೊಂಡು ಹೋಗಬೇಕಾದರೆ ಅನಿರೀಕ್ಷಿತವಾಗಿ ಅದ್ಭುತವಾಗಿ ಸಿಗುವ ಅಲ್ಲೊಂದು ಇಲ್ಲೊಂದು ಮರದ ಕೆಳಗೆ ನೆರಳಿಗಾಗಿ ಹೋದರೆ ಒಂದು ದಿನ.
ಅದೇ ಸ್ಥಳಕ್ಕೆ ಮತ್ತೊಂದು ದಿನ ಹೋದರೆ ಮರ-ಗಿಡಗಳು ಮಾಯವಾಗುತ್ತಿವೆ. ಮುಂದಿನ ಪೀಳಿಗೆಗೆ ಅಪಾಯಕ್ಕೆ ನಾಂದಿಯಾಯಿತು. ಮಕ್ಕಳ ಮೇಲೆ ವೃದ್ಧ ಜೀವಿಗಳ ಮೇಲೆ ಈ ಕಾಲವು ಅತೀ ಹೆಚ್ಚಾಗಿ ತನ್ನ ಪ್ರಭಾವ ಬೀರುತ್ತಿದೆ.
ಗಾಳಿಯ ಆಸರೆಯನ್ನೆ ಮರೆತು ನಮ್ಮ ಜೀವನ ಶೈಲಿಯನ್ನು. ಎಸಿ ಫ್ಯಾನ್ ಎಂಬ ಉಪಕರಣಕ್ಕೆ ಅವಲಂಬಿತವಾಗಿ ಮಾಡುತ್ತಿವೆ.
ನಗರ ಪ್ರದೇಶದಲ್ಲೂ ಸಹ ಹಿಂದಿನ ಕಾಲದ ಸಂಸ್ಕೃತಿಯ ಉಪಹಾರ ಕ್ರಮಗಳನ್ನು ಮರುಕಳಿಸುತ್ತಿವೆ. ಗಂಜಿ ಮಸಾಲಾ ಮಜ್ಜಿಗೆಗಳಂತವುಗಳನ್ನು ಮಾರಾಟದಲ್ಲಿ ಸಹಜವಾಗಿ ದೊರೆಯುತ್ತಿವೆ. ಆಹಾರ ಸಮತೋಲನ ತರಲು ಪ್ರಯತ್ನಿಸುತ್ತಿವೆ.
ಹೌದು-ಮುಂದುವರೆಯುತ್ತಿರವ ದೇಶದಲ್ಲಿರುವ ನಾವು ಸತ್ಪ್ರಜೆಗಳು. ಬೆಳವಣಿಗೆ ಬಯಸುತ್ತಿರುವುದು ನಿಜ. ಆದರೆ ಮುಂದಿನ ಪೀಳಿಗೆಗೆ ಹಾನಿಯಾಗದಂತೆ ನೋಡಿಕೊಳ್ಳುವುದು ಸಹಜ. ಇದರೊಂದಿಗೆ ಪರಿಸರದ ಉಳಿವಿಗಾಗಿ ಕೈ ಜೋಡಿಸಿದರೆ. ಜೇವಿಗಳ ಉಳಿವಿಗೆ ಅತೀ ಸಹಕಾರಿ.
ಕಡಿಮೆಯಾಗುವವು ಅಪಾಯಕಾರಿ.
ಭಾರ್ಗವಿ. ಜಿ. ಆರ್. ಪತ್ರಿಕೋಧ್ಯಮ ವಿದ್ಯಾರ್ಥಿ
ಕಟೀಲ್ ಅಶೋಕ್ ಪೈ ಮೆಮೋರಿಯಲ್ ಕಾಲೇಜ್. ಶಿವಮೊಗ್ಗ. ಪತ್ರಿಕೋಧ್ಯಮ ವಿದ್ಯಾರ್ಥಿ.