Sunday, December 7, 2025
Sunday, December 7, 2025

Navodaya School Shivamogga ನವೋದಯ ಶಾಲೆಯಲ್ಲಿನ ಹುಂಚ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ಉಚಿತ ನೀಡಿಕೆ- ಪ್ರಕಾಶ್ ಜೊಯಿಸ್

Date:

Navodaya School Shivamogga ಶಿವಮೊಗ್ಗದ ಹುಂಚ ಗ್ರಾಮದಲ್ಲಿ ನಡೆಯುತ್ತಿರುವ ನವೋದಯ ಮತ್ತು ಮೊರಾರ್ಜಿ ಶಿಬಿರದ 45 ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸದ ಅಂಗವಾಗಿ ಗಾಜನೂರು ನವೋದಯ ಶಾಲೆಗೆ ಭೇಟಿ ನೀಡಿದರು.

ಶಿಬಿರದ ಮಕ್ಕಳು ನವೋದಯ ಶಾಲೆಯ ಸುಸಜ್ಜಿತ ಕಲಿಕಾ ಕೊಠಡಿಗಳು, ಗ್ರಂಥಾಲಯ, ಅಟಲ್ ತಿಂಕರಿಂಗ್ ಲ್ಯಾಬ್, ಕವಿ ವನ, ಕ್ರೀಡಾಂಗಣ, ಊಟದ ಹಾಲ್ ಸೇರಿದಂತೆ ನವೋದಯ ಶಾಲೆಯ ಕ್ಯಾಂಪಸ್ ನೋಡಿ ಆನಂದಿಸಿದರು.

ಈ ಸಂದರ್ಭದಲ್ಲಿ ನವೋದಯ ಶಾಲೆಯ ಪ್ರಸ್ತುತ 7ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳು, ಹುಂಚ ಶಿಬಿರದ ಮಕ್ಕಳ ಜೊತೆ ತಮ್ಮ ನವೋದಯ ಪರೀಕ್ಷೆಯ ಅನುಭವ, ಪ್ರವೇಶ ಪರೀಕ್ಷೆಯ ತೆಯ್ಯಾರಿ, ಸಮಯ ನಿರ್ವಹಣೆ ಮತ್ತು ನವೋದಯ ಶಾಲೆಯ ದಿನಚರಿ ಹಂಚಿಕೊಂಡರು.

Navodaya School Shivamogga ಜವಾಹರ ನವೋದಯ ಶಾಲೆಯ ಪ್ರಾಂಶುಪಾಲರಾದ
ಶ್ರೀಮತಿ. ವಲ್ಲಯಾಮೈ ಮಕ್ಕಳನ್ನು ಕುರಿತು ಮಾತನಾಡಿ “ಜವಾಹರ ನವೋದಯ ವಿದ್ಯಾಲಯ, ಭಾರತದ ಕೇಂದ್ರ ಸರ್ಕಾರದ ವತಿಯಿಂದ ನಡೆಸಲಾಗುತ್ತಿರುವ ಉಚಿತ ವಸತಿ ಶಾಲೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವರ ಆರ್ಥಿಕ ಅಥವಾ ಸಾಮಾಜಿಕ ಪರಿಸ್ಥಿತಿ ಲೆಕ್ಕಿಸದೆ, ಅವರಿಗೆ ಉತ್ತಮವಾದ ಆಧುನಿಕ ವಿದ್ಯಾಭ್ಯಾಸದ ಅವಕಾಶ ಕಲ್ಪಿಸಿಕೊಡುವುದು ಇದರ ಉದ್ದೇಶ. ನವೋದಯ ಪ್ರವೇಶ ಪರೀಕ್ಷೆಗೆ ಅಣಿಯಾಗಿರುವ  ಶಿಬಿರದ ಎಲ್ಲಾ ಮಕ್ಕಳಿಗೆ, ಶಿಕ್ಷಣದ ಮಹತ್ವ ತಿಳಿಸಿ, ನವೋದಯ ಪ್ರವೇಶ ಪರೀಕ್ಷೆಯನ್ನು ಶಾಂತಚಿತ್ತರಾಗಿ ಏಕಾಗ್ರತೆಯಿಂದ ಬರೆದು, ನವೋದಯ ಶಾಲೆಗೆ ಉತ್ತಿರ್ಣರಾಗಿ” ಎಂದು ಶುಭ ಹಾರೈಸಿದರು.

ಶಿಬಿರದ ರೂವಾರಿ ಮತ್ತು ನವೋದಯ ಶಾಲೆಯ 8ನೇ ಬ್ಯಾಚ್ ವಿದ್ಯಾರ್ಥಿಯಾದ ಪ್ರಕಾಶ್ ಜೋಯ್ಸ್ – ಸೀನಿಯರ್ ಮ್ಯಾನೇಜರ್ ಕಾಗ್ನಿಜಂಟ್ ಮಾತನಾಡಿ “ಹುಂಚ ವ್ಯಾಪ್ತಿಯ (ಪರೀಕ್ಷೆಗೆ ದಾಖಲಿಸಿದ) ವಿದ್ಯಾರ್ಥಿಗಳಿಗೆ ಉಚಿತವಾಗಿ ನವೋದಯ ಮತ್ತು ಮೊರಾರ್ಜಿ ಶಾಲೆಯ ಪರಿಚಯ, ಆಯ್ಕೆ ಪ್ರಕ್ರಿಯೆ ಮಾಹಿತಿ, ಕೋಚಿಂಗ್, ಮಾದರಿ ಪರೀಕ್ಷೆ, ಕಲಿಕಾ ಸಾಮಗ್ರಿಗಳು, ಸಮಯ ನಿರ್ವಹಣೆ ಮತ್ತು ಇತರೆ ಉಪಯುಕ್ತ ಮಾಹಿತಿಗಳನ್ನು ಉಚಿತವಾಗಿ ಕೊಡಲಾಗುವುದು” ಎಂದು ನುಡಿದರು.

ಈ ಸಂದರ್ಭದಲ್ಲಿ ಶಿಬಿರದ ಶಿಕ್ಷಕರ ವೃಂದದ ಶಿವಕುಮಾರ್, ಅಕ್ಷತ, ಸವಿತಾ ಹಾಗೂ ಸಂಚಾಲಕರಾದ ಅಭಿಷೇಕ್, ಸಂಜಯ್.. ಜೊತೆಗೆ ನವೋದಯ ಶಾಲೆಯ ಹಳೆ ವಿದ್ಯಾರ್ಥಿಗಳು ಹಾಗೂ ಶಿಬಿರದ ಮಾರ್ಗದರ್ಶಕರಾದ ನವೀನ್ ಕುಮಾರ್ ಎಂ ಪಿ – ಪ್ರಾಂಶುಪಾಲರು, ಸುನಿಲ್ ಕುಮಾರ್ ಕೆ ಪಿ – ವೈದ್ಯರು ಮ್ಯಾಕ್ಸ್ ಆಸ್ಪತ್ರೆ, ಸುನಿಲ್ ಕುಮಾರ್ ಕೆ ಎಂ – ಮುಖ್ಯ ಪಶು ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

ಹುಂಚ ಗ್ರಾಮ ಪಂಚಾಯತ್ ಹಾಗೂ ಸುತ್ತಮುತ್ತಲಿನ ವ್ಯಾಪ್ತಿಯ ಮಕ್ಕಳಿಗೆ ಅನುಕೂಲ ಆಗುವಂತೆ ಹುಂಚದಲ್ಲಿಯೇ, ನುರಿತ ಶಿಕ್ಷಕರಿಂದ ಉಚಿತ ತರಬೇತಿ ಶಿಬಿರ ಹಮ್ಮಿಕೊಂಡಿದ್ದು. ಪ್ರಥಮ ವರ್ಷದ ಶಿಭಿರದಲ್ಲಿ 27 ಮಕ್ಕಳು, 12 ವಿವಿಧ ಶಾಲೆಗಳಿಂದ ಭಾಗವಹಿಸಿ, 8 ಮಕ್ಕಳು ಮೊರಾರ್ಜಿ ಶಾಲೆಗೆ ತೇರ್ಗಡೆ ಆಗಿರುತ್ತಾರೆ. ಪ್ರಸಕ್ತ ಸಾಲಿನಲ್ಲಿ 17 ಶಾಲೆಗಳಿಂದ ಒಟ್ಟು 49 ಮಕ್ಕಳಿದ್ದು ಎಲ್ಲಾ ಮಕ್ಕಳು ನವೋದಯ ಪ್ರವೇಶ ಪರೀಕ್ಷೆಗೆ ಉತ್ತಮವಾಗಿ ತೆಯ್ಯಾರಿ ನಡೆಸಿದ್ದಾರೆ..

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...

DC Shivamogga ಕೆಎಸ್ಎಫ್ ಸಿ ಎಸ್ ಸಿ ಮಳಿಗೆಗಳಲ್ಲಿ ಸಗಟು ಭತ್ತ ಖರೀದಿ ವ್ಯವಸ್ಥೆ- ಗುರುದತ್ತ ಹೆಗಡೆ

DC Shivamogga 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ...