Shivamogga Police ಮತದಾನವನ್ನು ಪ್ರತಿಯೊಬ್ಬರೂ ಪ್ರಜಾಪ್ರಭುತ್ವದ ಹಬ್ಬದಂತೆ ಆಚರಿಸಬೇಕು ಎಂದು ಸಾಗರದ ಪೊಲೀಸ್ ಉಪ ಅಧೀಕ್ಷಕ ರೋಹನ್ ಜಗದೀಶ್ ಸಲಹೆ ನೀಡಿದರು.
ಸಾಗರದ ಸಾಗರ್ ಹೋಟೆಲ್ ವೃತ್ತದಲ್ಲಿ ಪ್ರೆಸ್ ಟ್ರಸ್ಟ್ ಆಫ್ ಸಾಗರ್ ಮತ್ತು ತಾಲ್ಲೂಕು ಪತ್ರಕರ್ತರ ಸಂಘದ ವತಿಯಿಂದ ಮತದಾನ ಜಾಗೃತಿ ವiತ್ತು ಅರಿವು ಸಮಿತಿ ಸಹಯೋಗದಲ್ಲಿ ಏರ್ಪಡಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಎಲ್ಲರೂ ಕುಟುಂಬ ಸಮೇತ ಬಂದು ಕಡ್ಡಾಯವಾಗಿ ಮತದಾನ ಮಾಡುವುದರಿಂದ ಪ್ರಜಾಪ್ರಭುತ್ವದ ಬೇರುಗಳು ಗಟ್ಟಿಗೊಳ್ಳುತ್ತವೆ ಎಂದರು.
ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಮತದಾನದ ಹಕ್ಕನ್ನು ಚಲಾಯಿಸಬೇಕು. ಇದು ನಮ್ಮ ಕರ್ತವ್ಯದ ಭಾಗವೂ ಹೌದು. ಒಂದು ರಾಷ್ರ್ಟದ ಪ್ರಗತಿಗೆ ಮತದಾನವೂ ಪ್ರೇರಣೆಯಾಗಿದೆ. ನಮ್ಮ ಮತ ನಮ್ಮ ಹಕ್ಕು ಎಂದರು.
Shivamogga Police ಸಂಘದ ಅಧ್ಯಕ್ಷ ರಮೇಶ್ ಹೆಗಡೆ ಗುಂಡೂಮನೆ ಮಾತನಾಡಿ, ಹಕ್ಕು ಕೇಳುವ ನಾವು ಕರ್ತವ್ಯವನ್ನು ಮರೆಯಬಾರದು. ಕಡ್ಡಾಯವಾಗಿ ಮತದಾನ ಮಾಡಬೇಕೆಂಬ ಅರಿವು ಗ್ರಾಮೀಣ ಭಾಗದಲ್ಲಿ ಕಾಣಬಹುದು. ಆದರೆ ನಗರ ಪ್ರದೇಶಗಳಲ್ಲಿ ಕಡಿಮೆ ಮತದಾನವಾಗುತ್ತಿರುವುದು ವಿದ್ಯಾವಂತರೇ ಮತದಾನಕ್ಕೆ ಬಾರದಿರುವುದು ವಿಷಾದನೀಯ. ಮತದಾನ ಮಾಡುವಲ್ಲಿ ನಮ್ಮ ಬದ್ಧತೆ ತೋರಬೇಕು ಎಂದರು.
ಶಿಕ್ಷಕ, ಲೇಖಕ ಪಾಲಾಕ್ಷಪ್ಪ ಎಸ್.ಎನ್. ಅವರು ಮತದಾನದ ಜಾಗೃತಿ ಕುರಿತಂತೆ ಕವನವೊಂದನ್ನು ವಾಚಿಸಿದರು.
ಪ್ರೆಸ್ ಟ್ರಸ್ಟ್ ಆಫ್ ಸಾಗರ್ ಅಧ್ಯಕ್ಷ ಎಚ್.ವಿ.ರಾಮಚಂದ್ರರಾವ್, ಕಾರ್ಯದರ್ಶಿ ಎಸ್.ವಿ.ಹಿತಕರ ಜೈನ್, ಟ್ರಸ್ಟಿ ಕೆ.ಎನ್.ವೆಂಕಟಗಿರಿ, ಪತ್ರಕರ್ತರ ಸಂಘದ ಕಾರ್ಯದರ್ಶಿ ಗಣಪತಿ ಶಿರಳಗಿ, ಖಜಾಂಚಿ ರಮೇಶ್ ಎನ್., ಸದಸ್ಯರಾದ ಶೈಲೇಂದ್ರ, ಧರ್ಮರಾಜ್, ಶ್ರೀಧರ ಭಾಗ್ವತ್, ವಿಜಯೇಂದ್ರ ಶ್ಯಾನಭಾಗ್, ಅಂತೋನಿ ನಜರತ್, ರವಿ, ಪಂಚಮಿ ಹಾಗೂ ಮತದಾನ ಜಾಗೃತಿ ಮತ್ತು ಅರಿವು ಸಮಿತಿಯ ವೆಂಕಟೇಶ್, ಗಂಗಾಧರ ಮತ್ತಿತರರು ಹಾಜರಿದ್ದರು.
ಮತದಾನ ಜಾಗೃತಿ ಅಂಗವಾಗಿ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು.