Cast Reservation ಇತ್ತೀಚೆಗೆ ರಾಜ್ಯ ಸರ್ಕಾರದಿಂದ ಕೈಗೊಂಡಿರುವ ಒಳ ಮೀಸಲಾತಿ ವರ್ಗೀಕರಣ ಕುರಿತ ತೀರ್ಮಾನದ ಬಗ್ಗೆ ಲಂಬಾಣಿ ತಾಂಡಾಗಳಲ್ಲಿ ಬೇರೆ ಬೇರೆ ರೀತಿಯ ಸುದ್ದಿಗಳು ಹಬ್ಬಿಸುತ್ತಿದ್ದು, ಜನರ ನೆಮ್ಮದಿ ಕೆಡುತ್ತಿದೆ. ಸರಿಯಾದ ಮಾಹಿತಿಯ ಕೊರತೆ ಮತ್ತು ಅಪಪ್ರಚಾರದ ಕಾರಣ ಕೆಲವು ಮುಖಂಡರ ವಿರುದ್ಧ ಸಮುದಾಯದ ಜನ ಆಕ್ರೋಶಿತರಾಗಿ ಕೆಲವು ಅಹಿತಕರ ಘಟನೆಗಳಿಗೆ ಕಾರಣವಾಗಿವೆ.
ಈ ಘಟನೆಗಳ ಬಗ್ಗೆ ಸಮುದಾಯದ ಮುಖಂಡರು ವಿಷಾದ ವ್ಯಕ್ತಪಡಿಸಿ ದಿನಾಂಕ:09-04-2023 ರಂದು ಬೆಳಿಗ್ಗೆ 11:00 ಘಂಟೆಗೆ ಶಿವಮೊಗ್ಗ ಬಂಜಾರ ಭವನದಲ್ಲಿ ಸಮುದಾಯದ ಮುಖಂಡರಾದ ಡಾ. ಸಣ್ಣರಾಮರವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಮೀಸಲಾತಿ ಸಂರಕ್ಷಣಾ ಒಕ್ಕೂಟದ ರಾಜ್ಯಾಧ್ಯಕ್ಷರಾದ ರಾಘವೇಂದ್ರ ನಾಯ್ಕರವರು ರಾಜ್ಯ ಸರ್ಕಾರ ಇತ್ತೀಚೆಗೆ ಕೈಗೊಂಡ ತೀರ್ಮಾನಗಳಲ್ಲಿ ಬಹುಪಾಲು ತೀರ್ಮಾನಗಳು ಸಮುದಾಯದ ಹಿತ ಕಾಪಾಡುವ ಅಂಶಗಳಿದ್ದು, ಅವುಗಳನ್ನು ತಾಂಡ ನಿವಾಸಿಗಳಿಗೆ ಮನವರಿಕೆ ಮಾಡಬೇಕಾಗಿದೆ.
Cast Reservation ಒಳ ಮೀಸಲಾತಿ ವರ್ಗೀಕರಣದ ವಿಚಾರದಲ್ಲಿ ಕೆಲವು ಸಮಸ್ಯೆಗಳಿದ್ದು, ಅವುಗಳನ್ನು ಚುನಾವಣೆಯ ನಂತರ ಸರ್ಕಾರದ ಗಮನ ಸೆಳೆದು, ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು.
ಸಭೆಯಲ್ಲಿ ಹಾಜರಿದ್ದ ಹಿರಿಯ ಮುಖಂಡರುಗಳಾದ ಡಾ|| ಸಣ್ಣರಾಮ ನಿವೃತ್ತ ಹಿರಿಯ ಅಧಿಕಾರಿಗಳಾದ ಬಿ.ಪಿ. ಕನಿರಾಂ, ಹೀರಾನಾಯ್ಕ, ಭೋಜ್ಯಾನಾಯ್ಕ, ತಾರ‍್ಯಾನಾಯ್ಕ, ಗಂಗಾನಾಯ್ಕಗೊಂದಿ, ಮೀಸಲಾತಿ ಸಂರಕ್ಷಣಾ ಒಕ್ಕೂಟದ ಜಿಲ್ಲಾಧ್ಯಕ್ಷ ಎಂ.ವೈ. ನಾನ್ಯಾನಾಯ್ಕ, ಜಿಲ್ಲಾ ಬಂಜಾರ ಸಂಘದ ನಿರ್ದೇಶಕರುಗಳಾದ ನಾಗೇಶನಾಯ್ಕ, ಗಿರಿಯಾನಾಯ್ಕ, ಆನಂದನಾಯ್ಕ, ಸಕ್ರ್ಯನಾಯ್ಕ, ಆಯನೂರು ಶಿವಾನಾಯ್ಕ ಸೇರಿದಂತೆ ಅನೇಕರು ಮಾತನಾಡಿ ಈ ಕೆಳಗಿನಂತೆ ನಿರ್ಣಯ ಕೈಗೊಳ್ಳಲಾಯಿತು.
ಸಭೆಯ ನಿರ್ಣಯಗಳು:
01.ಕರ್ನಾಟಕ ಸರ್ಕಾರದ ಮೀಸಲಾತಿ ವರ್ಗೀಕರಣದ ಆದೇಶವನ್ನು ಚುನಾವಣೆಯ ಅಸ್ತçವಾಗಿ ಸಮುದಾಯವು ಬಳಸಬಾರದೆಂದು ನಿರ್ಣಯಿಸಲಾಯಿತು.
02.ಸಮುದಾಯದ ಕೆಲವು ಸಂಘ-ಸಂಸ್ಥೆಯ ಪದಾಧಿಕಾರಿಗಳು ಹಾಗೂ ಮುಖಂಡರುಗಳು ರಾಜಕೀಯ ದುರುದ್ದೇಶದಿಂದ ಪ್ರಚೋದಿಸುವ, ಉದ್ವೇಗದ ಹೇಳಿಕೆಗಳಿಗೆ ಸಮುದಾಯದ ಬಂಧುಗಳು ಕಿವಿಗೊಡಬಾರದೆಂದು ಹಾಗೂ ಇಂತಹ ಮುಖಂಡರುಗಳಿಂದ ಸಮುದಾಯ ದೂರವಿರಬೇಕೆಂದು ತೀರ್ಮಾನಿಸಲಾಯಿತು.
- ಒಳ ಮೀಸಲಾತಿ ವರ್ಗಿಕರಣದ ಆದೇಶ ಹೊರತುಪಡಿಸಿ ಉಳಿದ ಅಂಶಗಳು ಸಮಾಜಕ್ಕೆ ಪೂರಕವಾಗಿರುವುದರಿಂದ ಒಳ ಮೀಸಲಾತಿ ವರ್ಗಿಕರಣ ವಿಚಾರವನ್ನು ಚುನಾವಣೆಯ ನಂತರ ಶಾಂತಿಯುತವಾಗಿ ಸರ್ಕಾರದೊಂದಿಗೆ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ತೀರ್ಮಾನಿಸಲಾಯಿತು.
04.ಯಾವುದೇ ಕಾರಣಕ್ಕೂ ಮೀಸಲಾತಿ ವಿಚಾರದಲ್ಲಿ ತಾಂಡದ ನಿವಾಸಿಗಳು ಚುನಾವಣೆ ಬಹಿಷ್ಕಾರ ಹಾಗೂ ಒಂದು ಪಕ್ಷವನ್ನು ಗುರಿಯಾಗಿಸಿಕೊಂಡು ಅವಹೇಳನ ಹಾಗೂ ಪ್ರಚೋದನಾಕಾರಿ ನಡೆಗಳನ್ನು ಮಾಡದಂತೆ ಸಂಯಮ ವಹಿಸಬೇಕೆಂದು ನಿರ್ಣಯಿಸಲಾಯಿತು