Sunday, December 14, 2025
Sunday, December 14, 2025

Dr. Gururaj Karjagi ಶಿಕ್ಷಕರು ವಿಷಯ ಪ್ರೀತಿ,ವೃತ್ತಿಗೌರವ ಮತ್ತು ಸ್ನೇಹಪರತೆ ಅಳವಡಿಸಿಕೊಳ್ಳಬೇಕು- ಡಾ.ಗುರುರಾಜ ಕರ್ಜಗಿ

Date:

Dr. Gururaj Karjagi ವಿಷಯ ಪ್ರೀತಿ, ವೃತ್ತಿ ಗೌರವ ಮತ್ತು ಸ್ನೇಹ ಮನೋಭಾವಗಳನ್ನು ಅಳವಡಿಸಿಕೊಂಡಲ್ಲಿ ಪ್ರತಿ ಶಿಕ್ಷಕರು ವಿದ್ಯಾರ್ಥಿಗಳ ಉತ್ತಮ ಭವಿಷ್ಯ ನಿರ್ಮಾಣ ಮಾಡುವಲ್ಲಿ ಸಫಲರಾಗಬಹುದು ಎಂದು ಬೆಂಗಳೂರಿನ ಅಕಾಡೆಮಿ ಆಫ್ ಕ್ರಿಯೆಟಿವ್ ಟೀಚಿಂಗ್ ಅಧ್ಯಕ್ಷರು ಮತ್ತು ಲೇಖಕರಾದ ಡಾ.ಗುರುರಾಜ ಕರ್ಜಗಿ ಹೇಳಿದರು.

ಅವರು, ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಪಿ.ಎಮ್.ಇ.ಬಿ ಘಟಕದ ವತಿಯಿಂದ ಜೀವ ವಿಜ್ಞಾನ ಕಟ್ಟಡ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ವೃತ್ತೇಜನ’ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಪ್ರೇರಣಾ ಭಾಷಣ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಒಬ್ಬ ಶಿಕ್ಷಕ ಜೀವನದ ಮೌಲ್ಯಗಳನ್ನು ಕೇವಲ ಪಾಠದ ಮೂಲಕ ಬೋಧಿಸಲು ಸಾಧ್ಯವಿಲ್ಲ. ವಿವರಣೆ ಮತ್ತು ಪ್ರದರ್ಶನ ಕಲೆಗಳ ಮೂಲಕ ವಿದ್ಯಾರ್ಥಿಗಳ ಮನಸ್ಸಿಗೆ ನಾಟುವಂತೆ ಬೋಧಿಸಿದಲ್ಲಿ ಅದು ಕೊನೆಯವರೆಗೂ ಅವರಲ್ಲಿ ಅಚ್ಚಳಿಯದೆ ಉಳಿಯುತ್ತದೆ.

ಸೃಜನಶೀಲ ಮತ್ತು ಕ್ರಿಯಾತ್ಮಕ ಪ್ರಯೋಗಗಳ ಮೂಲಕ ವಿದ್ಯಾರ್ಥಿಗಳಲ್ಲಿರುವ ಕೀಳರಿಮೆಯನ್ನು ತೊಡೆದುಹಾಕಿ ಅವರನ್ನು ಹೊಸ ಆವಿಷ್ಕಾರಗಳೆಡೆಗೆ ಕೊಂಡೊಯ್ಯಬಹುದು ಎಂದರು.

Dr. Gururaj Karjagi ವಿಶ್ವವಿದ್ಯಾಲಯಗಳಿಂದ ಹೊರಹೊಮ್ಮುವ ಸಂಶೋಧನೆಗಳು ಸಮಾಜಕ್ಕೆ ಕೊಡುಗೆ ನೀಡುವ ಮಾರ್ಗದಲ್ಲಿ ಸಾಗಬೇಕು. ಎಲ್ಲ ಉಪನ್ಯಾಸಕರುಗಳು ಕಾಲಕಾಲಕ್ಕೆ ಬದಲಾಗುವ ಪಠ್ಯಕ್ರಮದ ಅನುಸಾರವಾಗಿ ಬೋಧನಾ ಪರಿಕರಗಳನ್ನು ಪರಿಷ್ಕರಣೆಗೊಳಿಸಬೇಕು ಆಗ ಮಾತ್ರ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ಒದಗಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಆತಿಥಿಯಾಗಿ ಆಗಮಿಸಿದ್ದ ಮಹಾಬಲೇಶ್ವರ ಸನ್‍ರೈಸ್ ಕ್ಯಾಂಡಲ್ಸ್ ಸಂಸ್ಥಾಪಕರಾದ ಡಾ.ಭಾವೇಶ್ ಭಾಟಿಯಾ ಅವರು ಮಾತನಾಡಿ, ಕೇವಲ 5 ಸಾವಿರ ರೂ. ದಿಂದ ಆರಂಭವಾದ ಮೊಂಬತ್ತಿ ತಯಾರಿಕೆಯ ಕಸುಬು ಇಂದು 10 ಸಾವಿರ ವಿಕಲಾಂಗ ವ್ಯಕ್ತಿಗಳಿಗೆ ಜೀವನ ಕಟ್ಟಿಕೊಟ್ಟಿದೆ.

ವಿಶ್ವದ 70 ರಾಷ್ಟ್ರಗಳಿಗೆ ಈ ಕ್ಯಾಂಡಲ್‍ಗಳು ರವಾನೆಯಾಗುತ್ತವೆ. ಕಠಿಣ ಪರಿಶ್ರಮ, ತನು, ಮನ, ಶ್ರದ್ಧೆಯಿಂದ ಎಂಥಹದೆ ಕಷ್ಟದ ಹಾದಿಯನ್ನು ಸವೆಸಿ ಯಶಸ್ಸು ಸಾಧಿಸಬಹುದು ಎಂದರು.
ಅಂಧರಾದರು ತಮ್ಮ ಸಾಧನೆಗೆ ದಾರಿದೀಪವಾದ ಕಥೆಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.

ಅಂತಾರಾಷ್ಟ್ರೀಯ ಪ್ಯಾರಾಲಂಪಿಕ್ಸ್ ಕ್ರೀಡೆಗಳಲ್ಲಿ ಸಕ್ರೀಯರಾಗಿರುವ ಭಾಟಿಯಾರವರು 117ಕ್ಕೂ ಹೆಚ್ಚು ಪದಕಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ವಿಎಸ್‍ಕೆ ವಿವಿಯ ಕುಲಪತಿಗಳಾದ ಪ್ರೊ.ಸಿದ್ದು.ಪಿ ಆಲಗೂರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸದಾ ಹೊಸ ಪ್ರಯೋಗಗಳ ಮೂಲಕ ಉಪನ್ಯಾಸಕರುಗಳು ಮತ್ತು ವಿದ್ಯಾರ್ಥಿಗಳನ್ನು ವಿಶ್ವವಿದ್ಯಾಲಯವು ಪೋಷಿಸುತ್ತಿದೆ. ಪ್ರಾಮಾಣಿಕ ಪ್ರಯತ್ನವೇ ಎಲ್ಲ ರಂಗಗಳಲ್ಲಿನ ಸಾಧನೆಗೆ ಮೊದಲ ಮೆಟ್ಟಿಲು. ಮುಂಬರುವ ದಿನಗಳಲ್ಲಿ ವಿಶ್ವವಿದ್ಯಾಲಯದ ಮತ್ತಷ್ಟು ಶಿಕ್ಷಕರು ಗುರುತರ ಸಾಧನೆಗೈದು ವೃತ್ತೇಜನ ಕಾರ್ಯಕ್ರಮದ ರೂವಾರಿಗಳಾಗಬೇಕು ಎಂದು ಕರೆ ನೀಡಿದರು.

ಉತ್ತಮ ಸಂಶೋಧನೆ ಮತ್ತು ಬೋಧನಾ ಉತ್ಕ್ರಷ್ಟತೆ ಮೆರೆದ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ 8 ಉಪನ್ಯಾಸಕರುಗಳನ್ನು ನಗದು ಪುರಸ್ಕಾರ ಹಾಗೂ ಪ್ರಶಂಸಾ ಪತ್ರ ವಿತರಿಸುವ ಮೂಲಕ ಗೌರವಿಸಲಾಯಿತು.

ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಎಸ್.ಸಿ.ಪಾಟೀಲ, ಕುಲಸಚಿವ (ಮೌಲ್ಯಮಾಪನ) ಪ್ರೊ. ರಮೇಶ್ ಓಲೇಕಾರ, ವಿತ್ತಾಧಿಕಾರಿ ಖಾಜಾ ಮೈನುದ್ದೀನ್.ಎಂ.ಡಿ, ಪ್ರೊ.ವಿಜಯಕುಮಾರ ಮಲಶೆಟ್ಟಿ ಹಾಗೂ ವಿದ್ಯಾರ್ಥಿ ಕಲ್ಯಾಣ ಘಟಕ ನಿರ್ದೇಶಕ ಪ್ರೊ.ಜಿ.ಪಿ.ದಿನೇಶ್, ಡಾ.ಶಶಿಧರ್, ಡಾ.ನಾಗಭೂಷಣ್.ಸಿ.ಎಂ ಸೇರಿದಂತೆ ವಿವಿಧ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...