Bapuji Academy of Management and Research ಕಾರ್ಪೊರೇಟ್ ರಂಗ ಹಾಗೂ ಪರಿಸರ ಪರಸ್ಪರ ವಿರೋಧಿಗಳು ಎಂಬ ಭಾವನೆ ಇದೆ, ಪ್ರಕೃತಿಯ ಶೋಷಣೆಯಿಂದಲೇ ಸಂಪತ್ತು ಗಳಿಸಲು ಸಾಧ್ಯವೆಂಬ ನಂಬಿಕೆ ದೂರಾಗಬೇಕು ಎಂದು ಮಂಗಳೂರಿನ ವೃಕ್ಷಾಲಯದ ಸ್ಥಾಪಕ ವಸಂತ ಕೇಶವ ಕಜೆ ಅಭಿಪ್ರಾಯಪಟ್ಟರು.
ಬಾಪೂಜಿ ಅಕಾಡೆಮಿ ಆಫ್ ಮ್ಯಾನೇಜ್ಮೆಂಟ್ ಮತ್ತು ರಿಸರ್ಚ್ ನ ಪದವಿ ಪ್ರದಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಪದವಿ ಪ್ರದಾನ ಮಾಡಿ ಮಾತನಾಡುತ್ತಾ ಕಾರ್ಪೊರೇಟ್ ರಂಗದ ಉದ್ಯೋಗಿಗಳು ಮೂಲ ವಿಜ್ಞಾನದ ಯಾವುದಾದರೂ ಒಂದು ವಿಭಾಗವನ್ನು ಆಯ್ದುಕೊಂಡು ಬಿಡುವಿನ ವೇಳೆಯಲ್ಲಿ ಆ ಕುರಿತು ಅಧ್ಯಯನ ನಡೆಸುತ್ತಿದ್ದಲ್ಲಿ ಬರುವ ಜ್ಞಾನದಿಂದ ವೃತ್ತಿಜೀವನದಲ್ಲಿ ಮಹತ್ತರ ತಿರುವನ್ನೇ ಪಡೆಯಬಹುದು, ಸಾಧ್ಯವಾದಷ್ಟು ಬಹುಭಾಷೆಗಳನ್ನು ಮತ್ತು ಯಾವುದಾದರೂ ಒಂದು ಪಾಶ್ಚಿಮಾತ್ಯ ಭಾಷೆಯನ್ನು ಕಲಿಯಬೇಕು, ಲಲಿತ ಕಲೆಗಳಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡು ಜೀವನಾನಂದವನ್ನು ಹೊಂದಬೇಕು ಎಂದರು.
Bapuji Academy of Management and Research ಅಧ್ಯಕ್ಷೀಯ ಸ್ಥಾನದಿಂದ ಮಾತನಾಡಿದ ಕಾಲೇಜಿನ ನಿರ್ದೇಶಕ ಡಾ.ಸ್ವಾಮಿ ತ್ರಿಭುವನಾನಂದ ಪ್ರತಿಯೊಬ್ಬರ ಆಲೋಚನಾ ವಿಧಾನದಲ್ಲಿ ಹಾಗೂ ಮನೋ ಭೂಮಿಕೆಯಲ್ಲಿ ಬದಲಾವಣೆ ಬಾರದೇ ಪ್ರಗತಿ ಸಾಧ್ಯವಿಲ್ಲ, ಪೋಷಕರು ತಾಳ್ಮೆಯಿಂದ ಮಕ್ಕಳನ್ನು ಬೆಳೆಸಿರುತ್ತಾರೆ, ಪೋಷಕರ ಸದ್ಗುಣಗಳನ್ನು ಮಕ್ಕಳೂ ರೂಢಿಸಿಕೊಳ್ಳಬೇಕು, ಹಣದ ಹಿಂದೆ ಹೋಗದೆ ಹಣವೇ ನಿಮ್ಮನ್ನು ಹಿಂಬಾಲಿಸುವಂತೆ ಮುನ್ನಡೆಯಿರಿ ಎಂದು ವಿದ್ಯಾರ್ಥಿಗಳಿಗೆ ಕರೆಕೊಟ್ಟರು.
ವಿಭಾಗ ಮುಖ್ಯಸ್ಥ ಡಾ.ಸುಜಿತ್ ಕುಮಾರ್ ಎಸ್.ಹೆಚ್. ಪದವೀಧರರಿಗೆ ಪ್ರಮಾಣವಚನ ಬೋಧಿಸಿದರು.ಫ್ರೊ. ವಿಜಯ್ ಕೆ.ಎಸ್. ವಂದನೆಗಳನ್ನು ಸಮರ್ಪಿಸಿದರು. 160 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
-ವರದಿ: ಎಚ್.ಬಿ.ಮಂಜುನಾಥ-