Voters Awareness ಮತದಾನದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಮತದಾನ ಜಾಗೃತಿ ಅಭಿಯಾನವನ್ನು ಬುಧವಾರದಿಂದ ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಮುಸ್ಲಿಂ ಜಮಾತ್ ಜಿಲ್ಲಾಧ್ಯಕ್ಷ ಮೊಹಮ್ಮದ್ ಶಾಹೀದ್ ರಜ್ವಿ ಹೇಳಿದರು.
ನಗರದ ಮುಸ್ಲಿಂ ಜಮಾಅತ್ ಕಚೇರಿಯಲ್ಲಿ ನಡೆದ ಮತದಾನ ಜಾಗೃತಿ ಕುರಿತ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪ್ರತಿ ಜಿಲ್ಲೆ, ತಾಲ್ಲೂಕು ಹೋಬಳಿ ಹಾಗೂ ಗ್ರಾಮಗಳಲ್ಲಿ ಅಭಿಯಾನವು ಚಾಲ್ತಿಯಲ್ಲಿರುತ್ತದೆ ಎಂದರು.
ಚುನಾವಣೆ ಸಮೀಪಿಸುತ್ತಿದ್ದಂತೆ ಕೆಲವು ವ್ಯಕ್ತಿಗಳು ಮುಸ್ಲಿಂ ಸಮುದಾಯ ಮುಖಂಡರೆಂದು ಹೇಳಿಕೊಂಡು ಸಮುದಾಯದಲ್ಲಿ ಗೊಂದಲ ಸೃಷ್ಟಿ ಮಾಡಿ ವದಂತಿಗಳನ್ನು ಹಬ್ಬಿಸುತ್ತಿದ್ದು, ಇಂತಹ ವ್ಯಕ್ತಿಗಳ ವದಂತಿಗಳಿಗೆ ಕಿವಿ ಕೊಡಬಾರದಾಗಿ ಸಮುದಾಯ ಬಂಧುಗಳಿಗೆ ಜಾಗೃತಿ ವಹಿಸಲಾಗುತ್ತಿದೆ ಎಂದು ತಿಳಿಸಿದರು.
Voters Awareness ಮುಸ್ಲೀಂ ಸಮುದಾಯವು ಯಾವುದೇ ಪ್ರತ್ಯಕ್ಷ ಪಕ್ಕಕ್ಕಾಗಲೀ, ವ್ಯಕ್ತಿಗಾಗಲೀ ಚುನಾವಣೆಯಲ್ಲಿ ಬೆಂಬಲಿಸಲು ಸಿದ್ದರಾಗಿಲ್ಲ. ಜೊತೆಗೆ ಪ್ರಚಾರ ಸೇರಿದಂತೆ ಬಹಿರಂಗವಾಗಿ ಬೆಂಬಲಿಸುವುದಿಲ್ಲ. ಸಮುದಾಯವು ಶಿಸ್ತು ಪಾಲನೆ ಯನ್ನು ಕಡ್ಡಾಯವಾಗಿ ಪಾಲಿಸುವುದು ಹಾಗೂ ಮತದಾನ ಅವರವರ ವೈಯಕ್ತಿಕ ವಿಚಾರವಾಗಿರುವುದರಿಂದ ಮತ ನೀಡಲು ಬಲವಂತವಾಗಿ ಹೇರುವುದು ನಿಷೇಧಿಸಲಾಗಿದೆ ಎಂದರು.
ಮತದಾನವು ಪ್ರತಿಯೊಬ್ಬರ ಭಾರತೀಯ ಪ್ರಜೆ ಜನ್ಮಸಿದ್ದ ಹಕ್ಕಾಗಿರುತ್ತದೆ. ಹಾಗಾಗಿ ಮತದಾನ ಹಕ್ಕನ್ನು ಚಲಾ ಯಿಸಲು ಕರ್ನಾಟಕ ಮುಸ್ಲೀಂ ಜಮಾತ್ ವತಿಯಿಂದ ಅನುವು ಮಾಡಿಕೊಡಲಾಗುವುದು. ಯಾವುದೇ ಪಕ್ಷ ಅಥವಾ ವ್ಯಕ್ತಿ ಸಮುದಾಯದ ಏಳಿಗೆಗೆ ಸಹಕರಿಸುವರು ಅಂತಹ ವ್ಯಕ್ತಿಗೆ ಆಯ್ಕೆಗೆ ಬೆಂಬಲಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಸ್ಲಿಂ ಜಮಾತ್ ರಾಜ್ಯ ಸದಸ್ಯ ಯೂಸೂಫ್ ಹಾಜಿ, ಜಿಲ್ಲಾ ಕಾರ್ಯದರ್ಶಿ ಅಲ್- ಹಾಜ್ ಫೈರೋಜ್ ಅಹ್ಮದ್ ರಜ್ವಿ, ತಾಲ್ಲೂಕು ಅಧ್ಯಕ್ಷ ಆರೀಫ್ ಆಲಿಖಾನ್ ಹಾಗೂ ಮುಖಂಡರು, ಉಲಮಾ, ಉಮರಾಗಳು ಉಪಸ್ಥಿತರಿದ್ದರು.