Supreme Court ತನ್ನ ರಾಜಕೀಯ ವಿರೋಧಿಗಳನ್ನ ಹಣಿಯಲು ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಸೇರಿದಂತೆ ಒಟ್ಟು 14 ವಿರೋಧ ಪಕ್ಷಿಗಳು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
Supreme Court ಯಾರೋ ನೊಂದ ವ್ಯಕ್ತಿ ಸಲ್ಲಿಸಿರುವ ಅರ್ಜಿ ಇದಲ್ಲ. ಇದು ರಾಜಕೀಯ ಪಕ್ಷಗಳು ಕೂಡಿರುವ ದಾವೆ. ಕೆಲ ಅಂಕಿ ಅಂಶಗಳು ಲಭ್ಯ ಇದ್ದ ಮಾತ್ರಕ್ಕೆ ಅವುಗಳ ಆಧಾರದ ಮೇಲೆ ತನಿಖೆ ನಿಲ್ಲಿಸಿ ಎಂದು ಹೇಳಲು ಆಗುತ್ತದೆಯೇ? ರಾಜಕೀಯ ನಾಯಕರು ಈ ದೇಶದ ನಾಗರಿಕರಲ್ಲವೇ. ನಾಗರಿಕರಾಗಿರುವ ನಾವೆಲ್ಲರೂ ಕಾನೂನಿಗೆ ಬದ್ಧರಾಗಿರಬೇಕಲ್ಲವೇ? ಎಂದು ನ್ಯಾಯ ಪೀಠವು ವಿಪಕ್ಷಗಳ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರನ್ನು ಪ್ರಶ್ನಿಸಿತು.
ಕಾನೂನಿನ ಎದುರು ಎಲ್ಲರೂ ಸಮಾನರು. ರಾಜಕಾರಣಿಗಳಿಗೆ ಸಾಮಾನ್ಯ ನಾಗರಿಕರಿಗಿಂತಲೂ ಹೆಚ್ಚಿನ ರಕ್ಷಣೆ ನೀಡಲಾಗದು. ಅಮೂರ್ತ ರೀತಿಯಲ್ಲಿ ಮಾರ್ಗ ಸೂಚಿಗಳನ್ನು ಪ್ರಕಟಿಸುವುದು ಅಪಾಯಕಾರಿ ಎಂದು ಮುಖ್ಯ ನ್ಯಾಯಮೂರ್ತಿ ಜೆ.ಬಿ.ಪಾರ್ದಿವಾಲಾ ಹಾಗೂ ಡಿ.ವೈ. ಚಂದ್ರಚೂಡ್ ಅವರನ್ನೊಳಗೊಂಡ ಪೀಠ ಅಭಿಪ್ರಾಯ ಪಟ್ಟಿದೆ.