Friday, November 22, 2024
Friday, November 22, 2024

Cricketer Salim Durani  ಸಲಾಂ ಸಲೀಂ ಭಾಯ್

Date:

Cricketer Salim Durani  ಭಾರತೀಯ ಕ್ರಿಕೆಟ್ ರಂಗದಲ್ಲಿ ತಾರೆಯಾಗಿ ಮೆರೆದ ಸಲೀಮ್ ದುರಾನಿ ನಿಧನರಾಗಿದ್ದಾರೆ.ಅವರಿಗೆ 88 ವರ್ಷ ವಯಸ್ಸಾಗಿತ್ತು.

ದುರಾನಿ, ಎಂದಾಕ್ಷಣ ಸಿಕ್ಸರ್ ನೆನಪಾಗುತ್ತವೆ.ಗವಾಸ್ಕರ್ ಅದನ್ನೇ ಸಾಂಕೇತಿಕವಾಗಿ ಹೇಳಿದ್ದರು.
ದುರಾನಿ ತಮ್ಮ ಆತ್ಮ ಚರಿತ್ರೆ ಬರೆದಿದ್ದರೆ ಅದರ
ಶೀರ್ಷಿಕೆಯನ್ನ “ಆಸ್ಕ್ ಫಾರ್ ಎ ಸಿಕ್ಸ್ ” ಎಂದು ನೀಡುತ್ತಿದ್ದರು.

Cricketer Salim Durani ಸಲೀಂ ದುರಾನಿ 29 ಟೆಸ್ಟ್
ಪಂದ್ಯಗಳನ್ನಾಡಿದ್ದಾರೆ.
ಬಿರುಸಿನ ಹೊಡೆತಗಳಿಗೆ ಹೆಸರಾಗಿದ್ದರು. 1960-70 ರ ದಶಕಗಳಲ್ಲಿ ಸಲೀಂ ಮುಂಚೂಣಿ ಬ್ಯಾಟ್ಸ್ ಮನ್.
ಆಫ್ಘನಿಸ್ತಾನ್ ನ ಕಾಬೂಲ್ ನಲ್ಲಿ ಜನನ( 11-12-1934)
ಮೊದಲ ಟೆಸ್ಟ್ ಆಸ್ಟ್ರೇಲಿಯ ವಿರುದ್ಧ
(1960.) ಕೊನೆಯ ಟೆಸ್ಟ್ ಪಂದ್ಯ ಇಂಗ್ಲೆಂಡ್ ವಿರುದ್ಧ ( 1973).

ಸಲೀಂ ಭಾಯ್ ಇಡೀ ಟೆಸ್ಟ್ ಕೆರೀರ್ ನಲ್ಲಿ ಗಳಿಸಿದ್ದು ಒಂದೇ ಶತಕ.ಆದರೆ
ಅವರ ಬಿಡಿಬಿಡಿ ರನ್ ಗಳಿಕೆಯಲ್ಲಿ
ಕ್ರಿಕೆಟ್ ಪ್ರೇಮಿಗಳು “ವಿ ವಾಂಟ್ ಸಿಕ್ಸರ್ “. ಅಂತ ಒಕ್ಕೊರಲಲ್ಲಿ ಕೂಗಿದ್ರೆ ಸಾಕು ಸಿಕ್ಸರ್ ಸಿಡಿಸುತ್ತಿದ್ದರು.

ಅವರು 29 ಟೆಸ್ಟ್ ಪಂದ್ಯಗಳಲ್ಲಿ 1202 ರನ್ ಕಲೆಹಾಕಿದ್ದಾರೆ. ಒಟ್ಟು 170 ಮೊದಲ ದರ್ಜೆಯ ಪಂದ್ಯಗಳನ್ನಾಡಿದ್ದಾರೆ. ಒಂದು ಶತಕ ಹಾಗೂ ಏಳುಬಾರಿ 50 ರನ್ ಗಳಿಸಿದ್ದಾರೆ. ಶತಕದಲ್ಲಿ ಗರಿಷ್ಟ 104 ರನ್ ಗಳು. 1962 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಶತಕ ಗಳಿಸಿದ್ದರು.
ದುರಾನಿ ಅವರನ್ನ ಕ್ರಿಕೆಟ್ ವೀಕ್ಷಕರು ಎಷ್ಟು ಹಚ್ಚಿಕೊಂಡಿದ್ದರೆಂದರೆ 1973 ರಲ್ಲಿ ಕಾನ್ಪುರದಲ್ಲಿ ನಡೆದ ಟೆಸ್ಟ್ ಗೆ ಅವರನ್ನ ಆಯ್ಕೆದಾರರು ಕೈಬಿಟ್ಟಿದ್ದರು. ತಕ್ಷಣ ಕ್ರಿಕೆಟ್ ಪ್ರೇಮಿಗಳು ” ನೋ ಸಲೀಂ ನೋ ಟೆಸ್ಟ್ ” ಎಂಬ ಫಲಕಗಳನ್ನ ಪ್ರದರ್ಶಿಸಿದ್ದರು.
ರಣಜಿ ಪ್ರಶಸ್ತಿ ಪಂದ್ಯಗಳಲ್ಲಿ ಸಲೀಂ
ರಾಜಸ್ತಾನ್,ಸೌರಾಷ್ಟ್ರ ತಂಡಗಳಲ್ಲಿ ಆಡುತ್ತಿದ್ದರು. ಅವರು ಬೌಲಿಂಗ್ ನಲ್ಲೂ ಮಿಂಚಿ ಆಲ್ ರೌಂಡರ್ ಎನಿಸಿಕೊಂಡಿದ್ದರು.74 ಟೆಸ್ಟ್ ವಿಕೆಟ್ ಗಳನ್ನ ಪಡೆದಿದ್ದಾರೆ.ಮೊದಲ ದರ್ಜೆಯ ಪಂದ್ಯಗಳಲ್ಲಿ 14 ಶತಕಗಳು ಮತ್ತು 45 ಅರ್ಧ ಶತಕಗಳನ್ನ ಬಾರಿಸಿದ್ದಾರೆ..

ಕ್ರೀಡಾಕ್ಷೇತ್ರದಲ್ಲಿ ಸ್ಥಾಪಿಸಿದ ಅರ್ಜುನ
ಪ್ರಶಸ್ತಿಯನ್ನ ಮೊದಲಿಗೆ ಪಡೆದ ಕ್ರಿಕೆಟಿಗ ಎಂಬ ಕೀರ್ತಿ ಸಲೀಂ ದುರಾನಿ ಅವರಿಗೆ ಸಲ್ಲುತ್ತದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ನೀಡುವ ಸಿ.ಕೆ.ನಾಯ್ಡು ಜೀವಮಾನ ಸಾಧನೆ ಪುರಸ್ಕಾರವನ್ನೂ ದುರಾನಿ ಪಡೆದಿದ್ದಾರೆ.( 2011).

ವರ್ಷದ ಆರಂಭದಲ್ಲಿ ತೊಡೆಯ ಮೂಳೆ ಸರ್ಜರಿಗೊಳಗಾಗಿದ್ದರು.
ವಯೋಮಾನವೂ ಕೂಡ ಜರ್ಜರಿತವಾಗುವಂತೆ ಮಾಡಿತ್ತು.
ಇನ್ನೂ ಒಂದು ಸಂಗತಿಯೆಂದರೆ
ಚರಿತ ಎಂಬ ಶೀರ್ಷಿಕೆಯ ಸಿನಿಮಾದಲ್ಲು ಅವರು ಅಭಿನಯಿಸಿದ್ದರು.ಪರ್ವಿನ್ ಬಾಬಿ ನಾಯಕಿಯಾಗಿದ್ದರು.( 1973)

ಸಲಾಂ ಸಲೀಂ ಭಾಯ್ ಎನ್ನೋಣ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Cooperation ಹಿರಿಯ ಸಹಕಾರಿ ಧುರೀಣ ಕೊಪ್ಪದ ಎಸ್.ಎನ್.ವಿಶ್ವನಾಥ್ ಗೆ ‘ ಸಹಕಾರಿ ರತ್ನ’ ಪ್ರಶಸ್ತಿ.

Department of Cooperation ಕರ್ನಾಟಕ ಸರ್ಕಾರದ ಕರ್ನಾಟಕ ಸಹಕಾರ ಮಹಾಮಂಡಲ ದ...

Kasturba Girls Junior College ಮಕ್ಕಳ ಪ್ರತಿಭೆ ಅನಾವರಣಗೊಳಿಸುವ ಪ್ರತಿಭಾ ಕಾರಂಜಿಗೆ ಇನ್ನಷ್ಟು ಶಕ್ತಿ ತುಂಬೋಣ- ಶಾಸಕ ಚನ್ನಬಸಪ್ಪ

Kasturba Girls Junior College ವೈವಿಧ್ಯತೆಯನ್ನು ಹೊಂದಿರುವ ನಮ್ಮ ರಾಷ್ಟ್ರದ ಸಂಸ್ಕೃತಿಯನ್ನು...