Hotel Owners Association karnataka ವಾಣಿಜ್ಯ ಬಳಕೆಯ ಅಡುಗೆ ಅನಿಲ, ಹಾಲು, ತುಪ್ಪ, ಬೆಣ್ಣೆ ಹಾಗೂ ಇತರೆ ಆಹಾರ ಪದಾರ್ಥಗಳ ಬೆಲೆ ಹೆಚ್ಚಳದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ತಿಂಡಿಗಳ ಬೆಲೆ ಹೆಚ್ಚಳ ಮಾಡಲು ಹೋಟೆಲ್ ಮಾಲೀಕರು ನಿರ್ಧರಿಸಿದ್ದಾರೆ.
ವಾಣಿಜ್ಯ ಬಳಕೆಯ ಅಡುಗೆ ಅನಿಲ ದರ ಕಳೆದ ತಿಂಗಳು 350 ರೂ. ಏರಿಕೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರು ದರ ಏರಿಕೆ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ದೋಸೆ, ಇಡ್ಲಿ ವಡೆ, ರೈಸ್ ಬಾತ್, ಕಾಫಿ ಟೀ, ದರವನ್ನು ಒಂದರಿಂದ ಎರಡು ರೂಪಾಯಿ ಏರಿಸಲು ಚಿಂತಿಸಲಾಗಿದೆ ಎಂದು ತಿಳಿದುಬಂದಿದೆ.
ಸಾಮಾನ್ಯವಾಗಿ ಪ್ರತಿ ವರ್ಷ ಹಣಕಾಸು ವರ್ಷದ ಆರಂಭದಲ್ಲಿ ದರ ಹೆಚ್ಚಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರ ಸಭೆ ನಡೆಸಲಾಗುವುದು. ನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಗಳಿಂದ ಹೋಟೆಲ್ ಉದ್ಯಮದ ಮೇಲೆ ಉಂಟಾಗುತ್ತಿರುವ ಲಾಭ ನಷ್ಟಗಳ ಬಗ್ಗೆ ಕುಲಂಕುಶವಾಗಿ ಚರ್ಚಿಸಲಾಗುವುದು. ದರ ಏರಿಕೆಯ ಅನಿವಾರ್ಯ ಕಂಡು ಬಂದರೆ ಹೆಚ್ಚಿಸಲಾಗುವುದು ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ಪಿ. ಸಿ. ರಾವ್ ಅವರು ತಿಳಿಸಿದ್ದಾರೆ.
Hotel Owners Association karnataka ಹೋಟೆಲ್ ಗಳು ದರ ಹೆಚ್ಚಿಸಿದರೆ ಗ್ರಾಹಕರ ಸಂಖ್ಯೆ ಕಡಿಮೆಯಾಗುವ ಆತಂಕದ ಹಿನ್ನೆಲೆಯಲ್ಲಿ ಊಟ ತಿಂಡಿಯ ಪ್ರಮಾಣವನ್ನೇ ಕಡಿಮೆ ಮಾಡಿವೆ. ದೋಸೆ ಇಡ್ಲಿ ವಡೆ ಗಾತ್ರವನ್ನು ಕುಗ್ಗಿಸಲಾಗಿದೆ.
ಉಕ್ರೇನ್ ರಷ್ಯಾ ಯುದ್ಧದಿಂದಾಗಿ ಅಡುಗೆಗೆ ಬಳಕೆಯಾಗುವ ಖಾದ್ಯ ತೈಲ, ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್ ನ ಬೆಲೆ ಹೆಚ್ಚಳದಿಂದಾಗಿ ಕಳೆದ ವರ್ಷದ ಏಪ್ರಿಲ್ ತಿಂಗಳಲ್ಲಿ ಹೋಟೆಲ್ಗಳಲ್ಲಿ ಊಟ ತಿಂಡಿ ದರದಲ್ಲಿ ಶೇ. 10 ರಷ್ಟು ಏರಿಕೆ ಮಾಡಲಾಗಿತ್ತು.
ನಂತರ ಹಾಲಿನ ದರ, ಇನ್ನಿತರ ವಸ್ತುಗಳ ದರ ಏರಿಕೆ ನೆಪದಲ್ಲಿ ನವೆಂಬರ್ ಡಿಸೆಂಬರ್ ನಲ್ಲಿ ಮತ್ತೆ ದರ ಹೆಚ್ಚಿಸಲಾಗಿತ್ತು . ಈಗ ಮತ್ತೆ ಬೆಲೆ ಏರಿಸಲು ಉದ್ದೇಶಿಸಲಾಗಿದೆ