Srisiddhaganga Shivakumar Swamiji ನಡೆದಾಡುವ ದೇವರು ಶ್ರೀಸಿದ್ಧಗಂಗಾ ಶಿವಕುಮಾರ ಸ್ವಾಮೀಜಿ ಅವರ 116ನೇ ಜನ್ಮ ದಿನಾಚರಣೆಯನ್ನು ಪಟ್ಟಣದ ಪ್ರಬೋದಿನಿ ವಿದ್ಯಾಕೇಂದ್ರ ಸಭಾಂಗಣದಲ್ಲಿ ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಬಸವ ಸಮಿತಿ ವತಿಯಿಂದ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಬಸವ ಸಮಿತಿ ಗೌರವಾಧ್ಯಕ್ಷ ಸತ್ಯನಾರಾಯಣ ಗುರುಗಳ ಆದರ್ಶಯುತ ಬದುಕು ನಮ್ಮ ಸಮಾಜಕ್ಕೆ ಮಹತ್ವ ಸಂದೇಶ ನೀಡಲಿದೆ. ಸದಾ ಕರ್ತವ್ಯ ಪ್ರಜ್ಞೆಯ ಬಗ್ಗೆ ಸಮಾಜವನ್ನು ಎಚ್ಚರಿಸುವ ಕಾರ್ಯದಲ್ಲಿ ನಿರಂತರಾಗಿದ್ದರು ಎಂದು ಹೇಳಿದರು.
Srisiddhaganga Shivakumar Swamiji ಶ್ರೀ ಶಿವಕುಮಾರ ಸ್ವಾಮೀಜಿಯವರ ಸಾನಿಧ್ಯದಲ್ಲಿ ಲಕ್ಷಾಂತರ ಮಕ್ಕಳಿಗೆ ವಿದ್ಯಾದಾನ ಮಾಡಿರುವ ಪರಿಣಾಮ ಅದೆಷ್ಟು ಮಂದಿ ವಿದ್ಯಾರ್ಥಿಗಳು ಪ್ರಪಂಚಾದ್ಯಂತ ಕಾರ್ಯನಿರ್ವಹಿಸುತ್ತಿದ್ದಾರೆ. ಬಡ ವರ್ಗದ ಮಕ್ಕಳಿಗೆ ಉಚಿತ ವಾಗಿ ಶಿಕ್ಷಣ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಿ ಉನ್ನತ ಸ್ಥಾನವನ್ನು ಗಳಿಸಿದ್ದಾರೆ ಎಂದು ತಿಳಿಸಿದರು.
ಕಳಸ ಪೊಲೀಸ್ ಠಾಣೆಯ ಸಹಾಯಕ ಸಬ್‌ಇನ್ಸಪೆಕ್ಟರ್ ಡಾ|| ಸಿ.ಆರ್.ಮೋಹನ್‌ಕುಮಾರ್ ಮಾತನಾಡಿ ಶಿವಕುಮಾರ ಸ್ವಾಮೀಜಿಯವರು ಸಕಲ ಜೀವ ರಾಶಿಗಳಿಗೂ ಲೇಸನ್ನೆ ಬಯಸಿದವರು. ಅವರ ಬದುಕು ಮತ್ತು ಸಾಧನೆಗಳು ನಮಗೆ ಪ್ರೇರಣೆಯಾಗಿವೆ. ಮಠ ಮಾನ್ಯಗಳು ಯಾವ ರೀತಿ ಸಾಮಾಜಿಕ ಚಟುವಟಿಕೆಗಳನ್ನು ಕೈ ಗೊಳ್ಳಬೇಕು ಎನ್ನುವುದನ್ನು ದೇಶಕ್ಕೆ ತಿಳಿಸಿಕೊಟ್ಟ ಶ್ರೇಯಸ್ಸು ಸಿದ್ದ ಸ್ವಾಮೀಜಿಗೆ ಸಲ್ಲಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಸವ ಸಮಿತಿ ಅಧ್ಯಕ್ಷ ಆನಂದ್ ಗುರೂಜೀ ಗುರುಗಳು ಭೌತಿಕ ಅನುಪಸ್ಥಿತಿಯಲ್ಲಿ ಅವರನ್ನು ಸ್ಮರಿಸುತ್ತಿದ್ದೇವೆ. ಎಲ್ಲಾ ಮಕ್ಕಳಭವಿಷ್ಯ ಉತ್ತಮವಾಗಿರಬೇಕೆಂದು ಬಯಸಿ ದ್ದರು ಗ್ರಾಮೀಣ ಬಡ ಮಕ್ಕಳ ಉದ್ದಾರಕ್ಕೆ ಶತಾಯುಷಿ ಜೀವನ ಬಹುಪಾಲು ಮೀಸಲಿರಿಸಿ ದೊಡ್ಡ ಪವಾಡವನ್ನೇ ಮಾಡುತ್ತಿದ್ದರು ಎಂದರು.
ಶಿಕ್ಷಕಿ ಸರಸ್ವತಿ ಪಾಂಡುರಂಗ ಮಾತನಾಡಿ ಗುರುಗಳು ಅದೆಷ್ಟೋ ಕೆಲಸವಿರಲಿ ಅಥವಾ ಎಂತಹ ಸಂದರ್ಭದಲ್ಲೂ ಅವರು ಜನರ ನಡುವೆ ಇರುತ್ತಿದ್ದರು. ವಿಶೇಷವಾಗಿ ಮಕ್ಕಳು ಕಂಡರೆ ಬಹಳ ಪ್ರೀತಿ ಹೊಂದಿದ್ದರು ಎಂದರು.
ಈ ಸಂದರ್ಭದಲ್ಲಿ ಮೂಡಿಗೆರೆ ತಾಲ್ಲೂಕು ವೀರಶೈವ ಲಿಂಗಾಯತ ಮಹಾಸಭಾ ನಿರ್ದೇಶಕ ಡಿ.ಕೆ.ರಾಜು, ಶಿಕ್ಷಕರಾದ ಸೀತಾರಾಮ್, ಶ್ರೀವತ್ಸ, ರೂಪ, ಜಯಲಕ್ಷ್ಮೀ ಭಾರತಿ, ಹರ್ಷಿತ, ಸುಮಾ, ನಳಿನಾ, ಮಾಲಾ ಜಿ ರಾವ್, ಕುಸುಮ, ಪವಿತ್ರ, ಚೈತ್ರ, ಗಮನ, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕ ಪುನೀತ್ ಕುಮಾರ್ ಕಾರ್ಯಕ್ರಮವನ್ನು ಸ್ವಾಗತಿಸಿ, ವಂದಿಸಿದರು.