Caste Category Reservation ಮುಸ್ಲಿಂ ಸಮುದಾಯಗಳಿಗೆ ನೀಡಿದ್ದ ಶೇ.4ರಷ್ಟು ಮೀಸಲಾತಿಯನ್ನು ರದ್ದುಪಡಿಸಿರುವ ಬಿಜೆಪಿ ನೇತೃತ್ವದ ರಾಜ್ಯಸರ್ಕಾರದ ನಡೆಯನ್ನು ಜಿಲ್ಲಾ ಹಜರತ್ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ತೀವ್ರವಾಗಿ ಖಂಡಿಸಿದೆ.
ಈ ಸಂಬಂಧ ವೇದಿಕೆಯ ಜಿಲ್ಲಾಧ್ಯಕ್ಷ ಜಂಶೀದ್‌ಖಾನ್ ಪತ್ರಿಕಾ ಹೇಳಿಕೆ ತಿಳಿಸಿರುವ ಅವರು ಮುಸ್ಲಿಂ ಸಮುದಾಯದ ಮೇಲೆ ಸರ್ಕಾರ ರಾಜಕೀಯ ದುರುದ್ದೇಶದಿಂದ ಹಕ್ಕು ಕಸಿದುಕೊಂಡು ಮೀಸಲಾತಿ ರದ್ದು ಮಾಡುವ ಬಗ್ಗೆ ಚರ್ಚಿಸದೇ, ಸಚಿವ ಸಂಫುಟದಲ್ಲಿ ಪರಿಶೀಲನೆ ಮಾಡದೇ ಹಿಂದುಳಿದ ವರ್ಗಗಳ ಆಯೋಗಕ್ಕೆ ವರದಿ ನೀಡದೇ ನಿರ್ಧಾರ ಕೈಗೊಂಡಿರುವುದು ಸರಿಯಾದ ವಿಷಯಲ್ಲ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತ ಅಧಿಕಾರ ವಹಿಸಿಕೊಂಡ ನಂತರ ಧರ್ಮ ಒಡೆಯುವ ಕೆಲಸವನ್ನು ಚುನಾವಣೆ ಲಾಭಕೋಸ್ಕರವಾಗಿ ಮಾಡುತ್ತಿದೆ. ಹಿಂದೂ, ಮುಸ್ಲಿಂ ಸೌಹಾರ್ದತೆ ಹಾಳುಮಾಡಿ ವಿವಿಧ ರೂಪದಲ್ಲಿ ಹಿಂಸೆ ನೀಡುತ್ತಾ ಬಂದಿದೆ.
Caste Category Reservation ಹಿಜಾಜ್, ಹಲಾಲ್, ಎನ್.ಆರ್.ಸಿ., ತ್ರಿವಳಿ ತಲಾಕ್ ಸೇರಿದಂತೆ ಮುಂತಾದ ವಿಚಾರಗಳನ್ನು ಮುಂದಿಟ್ಟು ಸಮುದಾಯವನ್ನು ಹಿಂಸಿಸುತ್ತಿದೆ ಎಂದು ದೂರಿದ್ದಾರೆ.
ಕೇವಲ ರಾಜಕೀಯಕ್ಕಾಗಿ ಅಮಾಯಕರಾದ ಮುಸ್ಲಿಂ ಅಪರಾಧಿ ಸ್ಥಾನದಲ್ಲಿಡುವುದು ಯಾವ ನ್ಯಾಯ. ಸಮಾಜ ಸುಧಾರಕ ಸ್ವಾಮೀಜಿಗಳು ಮಧ್ಯಪ್ರವೇಶಿಸಿ ರಾಜ್ಯ ಸರ್ಕಾರಕ್ಕೆ ಬುದ್ದಿ ಹೇಳುವ ಮೂಲಕ ಅವರು ಮಾಡುತ್ತಿರುವ ತಪ್ಪನ್ನು ತಿದ್ದಿಕೊಳ್ಳಬೇಕು ಎಂದು ಹೇಳಿಕೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.