Monday, February 2, 2026
Monday, February 2, 2026

Sandalwood Trees ಶ್ರೀಗಂಧಕ್ಕೆ ಮಾರಕವಾಗಿರುವುದು ಮನುಷ್ಯ ನಿರ್ಮಿತ ಕಳ್ಳತನ-ಡಾ.ಸುಂದರಗೌಡ

Date:

Sandalwood Trees  ಶ್ರೀಗಂಧವು ದೇಶದ ಅತ್ಯಮೂಲ್ಯ ವೃಕ್ಷಗಳಲ್ಲಿ ಒಂದು. ವೇದ ಪುರಾಣ ಕಾಲದಿಂದಲೂ ಗೌರವಿಸಲ್ಪಿಟ್ಟಿರುವ ವೃಕ್ಷವಾಗಿದೆ. ಇತ್ತೀಚೆಗೆ ನಾಗರೀಕ ಸಮಾಜವು ಸೂಕ್ತ ಸ್ಥಾನಮಾನ ನೀಡದೇ ಶ್ರೀಗಂಧವು ಅಳವಿನ ಹಂಚಿಗೆ ತಲುಪಿದೆ ಎಂದು ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಡಾ.ಕೆ.ಸುಂದರಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಅವರು ಪುರಾತನ ಕಾಲದಲ್ಲಿ ಯಥೆಚ್ಚವಾಗಿ ಬೆಳೆಯುತ್ತಿದ ಶ್ರೀಗಂಧಕ್ಕೆ 1899ರಲ್ಲಿ ಕಾಣಿಸಿಕೊಂಡ ಸ್ಪೆಕ್ ಎಂಬ ಮಾರಕ ರೋಗವು ಕೆಲವೇ ವರ್ಷಗಳಲ್ಲಿ ಅರಣ್ಯ ವನ್ನು ನಾಶಗೊಳಿಸಿತು. ಅದಲ್ಲದೇ ಇದೀಗ ರಾಜ್ಯದಲ್ಲಿ 15ವರ್ಷ ಮೇಲ್ಪಟ್ಟ ಶ್ರೀಗಂಧವನ್ನು ಕಾಣುವುದೇ ಅಸಾಧ್ಯ ವಾಗಿದೆ ಎಂದು ತಿಳಿಸಿದ್ದಾರೆ.

ಶ್ರೀಗಂಧ ಅಳಿವಿನ ಸಂಬಂಧಿಸಿದಂತೆ ಕೃಷ್ಣರಾಜ ಒಡೆಯರ್ ಅವರು ಈ ಕಾಯಿಲೆಗೆ ಪತ್ತೆಹಚ್ಚಿದವರಿಗೆ 10 ಸಾವಿರ ಉಡುಗೊರೆಯನ್ನು ಘೋಷಣೆ ಮಾಡಿದ್ದರು. ಆದರೆ ಅಲ್ಲಿಂದ ಇಲ್ಲಿಯವರೆಗೂ ಯಾವುದೇ ಸಂಶೋಧನೆ ಗಳು ನಡೆಯದಿಲ್ಲ. 125ವರ್ಷಗಳ ಕಾಲದಿಂದಲೂ ಶ್ರೀಗಂಧವನ್ನು ರಾಜ್ಯವು ಕಳೆದುಕೊಂಡಿರುವುದು ದೊಡ್ಡ ದುರಂತ ಎಂದು ಹೇಳಿದ್ದಾರೆ.

Sandalwood Trees ಪ್ರಪಂಚದಲ್ಲಿ ವೃಕ್ಷಗಳ ಬೆಳೆಸುವ ಮೂಲಕ ಅತಿಹೆಚ್ಚು ಹಸಿರು ಕ್ರಾಂತಿಯನ್ನು ಮಾಡಿದರೆ ಮಾತ್ರ ಈ ಸುಂದರ ಭೂಮಿ ಉಳಿಯಲು ಸಾಧ್ಯ. ಆಧುನಿಕತೆ ತಕ್ಕಂತೆ ಮಾನವ ಬದಲಾದರೆ ಪ್ರಕೃತಿ ತಮ್ಮ ವಾತಾವರಣವನ್ನು ಬದಲಿಸಿ ಸಂಪೂರ್ಣವಾಗಿ ಭೂಮಿಯು ನಾಶದ ಹಂಚಿಕೆ ತಲುಪಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಸ್ಪೆಕ್ ಕಾಯಿಲೆ ನಂತರ ಶ್ರೀಗಂಧಕ್ಕೆ ಮಾರಕವಾಗಿರುವುದು ಮಾನವ ನಿರ್ಮಿತ ಕಳ್ಳತನ. ರೈತ ಪೋಷಿಸಿ ರುವ ಶ್ರೀಗಂಧವನ್ನು ರೈತರು, ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಯ ನುರಿತ ಶ್ವಾನದಳದ ಸಹಕಾರ ದಿಂದ ತಡೆಗಟ್ಟಬೇಕು. ಶ್ರೀಗಂಧಕ್ಕೆ ಬ್ಯಾಂಕ್ ಸಾಲದ ಜೊತೆಗೆ ವಿಮೆಯನ್ನು ಸರ್ಕಾರವೇ ಭರಿಸಬೇಕು. ಮರವನ್ನು ಕಳ್ಳತನ ಮಾಡಿದವನ ಆಸ್ತಿಯನ್ನು ಮುಟ್ಟುಗೋಲು ಹಾಕುವ ಮುಖಾಂತರ ಶ್ರೀಗಂಧ ಬೆಳೆದ ರೈತರಿಗೆ ಪರಿಹಾರ ವನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...