Election Preparations in Shivamogga ಭಾರತೀಯ ಚುನಾವಣಾ ಆಯೋಗವು ರಾಜ್ಯ ವಿಧಾನಸಭಾ ಚುನಾವಣೆ ಘೋಷಿಸಿದೆ. ಇಂದಿನಿಂದಲೇ ಜಿಲ್ಲೆಯಲ್ಲಿ ಚುನಾವಣಾ ಮಾದರಿ ನೀತಿ ಸಂಹಿತಿಯನ್ನು ಕಟುನಿಟ್ಟಿನಿಂದ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ತಿಳಿಸಿದರು.
ಶಿವಮೊಗ್ಗ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ವಿಧಾನಸಭಾ ಚುನಾವಣೆ ಘೋಷಣೆ ಹಿನ್ನೆಲೆ ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 14,58,680 ಮತದಾರರು ನೋಂದಾಯಿಸಿಕೊಂಡಿದ್ದಾರೆ. 7,22,080 ಪುರುಷ, 7,36,574 ಮಹಿಳೆ, 14,773 ಪಿಡಬ್ಲ್ಯುಡಿ(ಪರ್ಸನ್ಸ್ ವಿತ್ ಡಿಸ್‍ಎಬಿಲಿಟಿ) 26 ಇತರೆ ಮತದಾರರಿದ್ದಾರೆ.
ಚುನಾವಣಾ ವೇಳಾಪಟ್ಟಿ : ದಿನಾಂಕ: 13-04-2023 ಚುನಾವಣಾ ಅಧಿಸೂಚನೆ ದಿನಾಂಕ. ದಿ: 20-04-2023 ಉಮೇದುವಾರಿಕೆ ಸಲ್ಲಿಕೆಗೆ ಕಡೆಯ ದಿನ. ದಿ: 21-04-2023 ಉಮೇದುವಾರಿಕೆ ಪರಿಶೀಲನೆ ದಿನ.
ದಿ: 24-04-2023 ಉಮೇದುವಾರಿಕೆ ಹಿಂಪಡೆಯಲು ಕಡೆಯ ದಿನ.
ದಿ: 10-05-2023 ಮತದಾನದ ದಿನ. ದಿ: 13-05-2023 ಮತ ಎಣಿಕೆ ದಿನ. ದಿ: 15-05-2023 ಮತದಾನ ಮುಕ್ತಾಯ ದಿನ.
ಮತಗಟ್ಟೆಗಳ:
ಶಿವಮೊಗ್ಗ ಗ್ರಾಮಾಂತರ -111 ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಹೆಚ್ ಎಸ್.ರುದ್ರಪ್ಪ ರಾಷ್ಟ್ರೀಯ ಪದವಿಪೂರ್ವ ಕಾಲೇಜು ಶಿವಮೊಗ್ಗ.
ಭದ್ರಾವತಿ-112 ಸಂಚಿ ಹೊನ್ನಮ್ಮ ಬಾಲಿಕ ಪಪೂ ಕಾಲೇಜು ಭದ್ರಾವತಿ.
ಶಿವಮೊಗ್ಗ-113 ಸಹ್ಯಾದ್ರಿ ವಾಣಿಜ್ಯ ಕಾಲೇಜ್ ಶಿವಮೊಗ್ಗ.
ತೀರ್ಥಹಳ್ಳಿ-114 ಯುಆರ್ ಅನಂತಮೂರ್ತಿ ಕಾಲೇಜು
ತೀರ್ಥಹಳ್ಳಿ. ಶಿಕಾರಿಪುರ-115 ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶಿಕಾರಿಪುರ.
ಸೊರಬ-116 ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೊರಬ.
ಸಾಗರ-117 ಸರ್ಕಾರಿ ಪದವಿಪೂರ್ವ ಕಾಲೇಜು ಸಾಗರ. ಮತ ಎಣಿಕೆ ಸಹ್ಯಾದ್ರಿ ಕಾಲೇಜಿನಲ್ಲಿ ನಡೆಯಲಿದೆ.
ಜಿಲ್ಲೆಯಲ್ಲಿ 2023 ರ ವಿಧಾನ ಸಭಾ ಚುನಾವಣೆಯನ್ನು ವಿದ್ಯುನ್ಮಾನ ಮತಯಂತ್ರ ಬಳಸಿ ನಿರ್ವಹಿಸಲಾಗುತ್ತಿದ್ದು, ಜಿಲ್ಲೆಯಲ್ಲಿ 3350 ಬ್ಯಾಲೆಟ್ ಯೂನಿಟ್‍ಗಳು, 2352 ಕಂಟ್ರೋಲ್ ಯುನಿಟ್ ಹಾಗೂ 2417 ವಿವಿ ಪ್ಯಾಟ್ ಲಭ್ಯವಿರುತ್ತದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ದಿನದಂದು ಚುನಾವಣಾ ಕಾರ್ಯ ನಿರ್ವಹಿಸಲು 8520 ಅಧಿಕಾರಿ/ಸಿಬ್ಬಂದಿಗಳ ಅವಶ್ಯಕತೆ ಇದೆ. ಈಗಾಗಲೇ 10700 ಸಿಬ್ಬಂದಿಗಳ ಮಾಹಿತಿ ಸಂಗ್ರಹಿಸಲಾಗಿದೆ.
ಉಮೇದುವಾರಿಕೆ ಸಲ್ಲಿಕೆಯ ಅವಧಿಯವರೆಗೆ ಅಂದರೆ ಏಪ್ರಿಲ್ 20 ರವರೆಗೆ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಬಹುದು ಹಾಗೂ ನಮೂನೆ 8 ರಲ್ಲಿ ತಿದ್ದುಪಡಿಗೆ ಅವಕಾಶವಿರುತ್ತದೆ.
Election Preparations in Shivamogga ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ 36 ಕಡೆ ಚೆಕ್‍ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ. 7 ಚೆಕ್‍ಪೋಸ್ಟ್ ಈಗಾಗಲೇ ಕಾರ್ಯ ನಿರ್ವಹಿಸುತ್ತಿವೆ. ಚುನಾವಣೆಗೆ 6 ಸಿಆರ್‍ಪಿಎಫ್ ತಂಡಗಳು ಬರಲಿವೆ. ಸ್ಟ್ರಾಂಗ್ ರೂಂ, ಮತ ಎಣಿಕೆ ಕೇಂದ್ರಗಳಿಗೆ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಕಳೆದ ತಿಂಗಳಿಂದ ಜಿಲ್ಲೆಯಲ್ಲಿ 55 ಜನರಿಗೆ ಗಡೀಪಾರು ಆದೇಶ ಮತ್ತು ಕಳೆದ 5-6 ತಿಂಗಳಿಂದ 6 ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಚುನಾವಣೆಗೆ ಅಗತ್ಯವಾದ ಎಲ್ಲ ರೀತಿಯ ಕ್ರಮಗಳನ್ನು ವಹಿಸಲಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಅಪರ ಜಿಲ್ಲಾಧಿಕಾರಿ ಎಸ್.ಎಸ್.ಬಿರಾದರ್ ಉಪಸ್ಥಿತರಿದ್ದರು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.