Sravanabelagola Jain Math ವಿಶ್ವ ವಿಖ್ಯಾತ ಶ್ರವಣಬೆಳಗೊಳ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ತಮ್ಮ ಸುದೀರ್ಘ ಧಾರ್ಮಿಕ ಪಯಣವನ್ನು ಮುಗಿಸಿದ್ದು ನೋವಿನ ಸಂಗತಿ.
ಅವರ ಅಗಲಿಕೆಯಿಂದ ಸಮಾಜಕ್ಕೆ ತುಂಬಾಲಾರದ ನಷ್ಟವಾಗಿದೆ ಎಂದು ಹೆಳಲು ತುಂಬಾ ದುಃಖವಾಗುತ್ತದೆ. ಅವರ ಧಾರ್ಮಿಕ ಕಾರ್ಯವು ಜಗಮೆಚ್ಚುವಂತಾಗಿತ್ತು. ಮೃದು ಮನಸ್ಸು ಸರಳ ವ್ಯಕ್ತಿತ್ವ ಸಹೃದಯತೆ ಸಕಲ ಜೀವಿಗಳಿಗೂ ಲೇಸನ್ನೂ ಬಯಸಿದ ಅಪರೂಪದ ಶ್ರೀಗಳಾಗಿದ್ದವರು. ಶ್ರೀಗಳ ನಡೆ ಹಾಗೂ ನುಡಿ ಜೀವ ಜಗತ್ತಿಗೆ ಸ್ಪೂರ್ತಿ ಹಾಗೂ ಪ್ರೇರಣೆಯಾಗಿದೆ.
ಶ್ರವಣಬೆಳಗೊಳ ಎಂದರೆ ಅದೊಂದು ದೊಡ್ಡ ಶಕ್ತಿ ಹಾಗೂ ಭಕ್ತಿಯ ಕ್ಷೇತ್ರ, ಜಗದ ಅತಿ ಎತ್ತರದ ಬಾಹುಬಲಿ ಮೂರ್ತಿ ಪ್ರಸ್ತುತ ಜಗಕ್ಕೆಲ್ಲ ಪ್ರೇರಣೆ. ಜಗತ್ತಿನ ಗಮನ ಸೆಳೆಯುವ ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ಮಹಾಮಸ್ತಕಾಭಿಷೆಕ ಪ್ರಾಚೀನ ಭವ್ಯ ಜೈನ ಪರಂಪರೆಯನ್ನು ಹೊಂದಿರುವ ಶ್ರೀಮಠವನ್ನು ಜಗದಗಲಕ್ಕೆ ಕೊಂಡಯ್ದವರು ಚಾರುಕೀರ್ತಿ ಸ್ವಾಮಿಗಳಾಗಿದ್ದರು.
ಇಲ್ಲಿ ನಡೆಯುವ ಕಾರ್ಯಕ್ರಮಗಳು ನಿತ್ಯ ನಿರಂತರ.
ಶ್ರೀಮಠಕ್ಕೆ ಈಗ ನೂತನ ಶ್ರೀಗಳ ಪಟ್ಟಾಭಿಷೇಕವಾಗಲಿದೆ. 2023 ಮಾರ್ಚ್ 27ರಂದು ಸೋಮವಾರ ಬೆಳಗ್ಗೆ 9 ಗಂಟೆಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪಟ್ಟಾಭಿಷೇಕ ನಡೆಯಲಿದೆ…
ಸಾಗರದ ಬಾಲಕನೊಬ್ಬ ಇಂತಹ ಕ್ಷೇತ್ರಕ್ಕೆ ಸ್ವಾಮಿಜಿಯಾಗುತ್ತಾರೆ ಎಂದರೆ ನಂಬಲು ಸಾಧ್ಯವಿಲ್ಲ..!!
ಸಾಗರದ ವಿನೋಬನಗರದ ನಿವಾಸಿ ಹಾಗೂ ನೆಹರೂ ಮೈದಾನದಲ್ಲಿರುವ ಜೈನ ಮಂದಿರದ ಪುರೋಹಿತರಾದ ಅಶೋಕ ಕುಮಾರ್ ಇಂದ್ರ ಹಾಗೂ ಅನಿತಾ ಅವರ ದಂಪತಿಗಳ 2ನೇ ಪುತ್ರರಾದ ಆಗಮ ಇವರಿಗೆ ಇತ್ತೀಚೆಗೆ ತಮ್ಮ 21ನೇ ವಯಸ್ಸಿನಲ್ಲಿಯೇ ವಿಚಾರ ಪಟ್ಟ ಕ್ಷುಲ್ಲಕ ಆಗಮ ಕೀರ್ತಿ ಸ್ವಾಮಿಯಾಗಿ ದೀಕ್ಷಿತರಾಗಿದ್ದು ಅವರ ಧಾರ್ಮಿಕ ಆಚರಣೆಯ ಪ್ರೇರಕವಾಗಿದೆ.
ಬಾಲ್ಯದಿಂದಲೇ ಧಾರ್ಮಿಕ ವಿಚಾರಗಳನ್ನು ಆಚರಿಸಿಕೊಂಡು ಬಂದಿದ್ದು, ಆರಂಭದ ಶಿಕ್ಷಣವನ್ನು ಸಾಗರದ ರೋಟರಿ ಶಾಲೆಯಲ್ಲಿ ಪೂರೈಸಿ ನಂತರ ಪ್ರೌಢಶಿಕ್ಷಣವನ್ನು ಎಂ.ಜಿ.ಎನ್ ಪೈ ಪ್ರೌಢಶಾಲೆಯಲ್ಲಿ ನಡೆಸಿ ನಂತರ ಉಜಿರೆಯಲ್ಲಿ ಪದವಿಪೂರ್ವ ಶಿಕ್ಷಣವನ್ನು ನಂತರ ಸಾಗರದ ಎಲ್.ಬಿ.ಕಾಲೇಜಿನಲ್ಲಿ ಬಿ.ಕಾಂ ಪದವಿ ಶಿಕ್ಷಣವನ್ನು ಪೂರೈಸಿರುವುದರ ಜೊತೆಗ ಕಂಪ್ಯೂಟರ್ ಶಿಕ್ಷಣವನ್ನು ಪಡೆದಿದ್ದಾರೆ.
ಅದರೊಂದಿಗೆ ಚಿತ್ರಕಲೆಯಲ್ಲಿ ಸೃಜನಶೀಲತೆಯನ್ನು ಮೆರೆದಿದ್ದು ನಾಡಿನ ಅನೇಕ ದೀಮಂತ ವ್ಯಕ್ತಿಗಳ ಚಿತ್ರಗಳನ್ನು ಬರೆದಿದ್ದು ಇವರ ವಿಶೇಷ ಗುಣವಾಗಿದೆ.
ಸುಮಾರು 8ಭಾರಿ ರಕ್ತದಾನ ಮಾಡಿದ್ದು ಇವರ ಸಾಮಾಜಿಕ ಕಾಳಜಿಯನ್ನು ಅಭಿವ್ಯಕ್ತಿಸುತ್ತದೆ
ಅತ್ಯಂತ ಬಡತನದಿಂದಲೇ ಬೆಳೆದುಬಂದ ಇವರು ತಮ್ಮ ತಂದೆ ಹಾಗೂ ತಾಯಿಯ ಟೈಲರಿಂಗ್ ಬದುಕಿನೊಂದಿಗೆ ಜೈನ ಬಸದಿಯಲ್ಲಿ ಪೂಜೆಯನ್ನು ಮಾಡುತ್ತ ಬದುಕನ್ನು ಕಟ್ಟಿಕೊಂಡಿರುವ ಕುಟುಂಬವಾಗಿದ್ದು, ಇದರೊಂದಿಗೆ ತನ್ನ ಸಹೋದರ ಆಗಮನೊಂದಿಗೆ ಸ್ವಯಂ ಉದ್ಯೋಗವನ್ನು ಆರಂಭಿಸಿ ಜನರಿಗೆ ಸೇವೆಯನ್ನು ನೀಡುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬಂದಿರುವುದು ಇವರಲ್ಲಿರುವ ವಿಶಿಷ್ಟವಾದ ಗುಣವಾಗಿದೆ.
ಯಾರ ಹಂಗಿನಲ್ಲೂ ಬದಕಬಾರದು ಎನ್ನುವ ಮನೋಭಾವನೆಯನ್ನು ಬೆಳಸಿಕೊಂಡು ತನ್ನ ಕಾಲ ಮೇಲೆ ತಾನೆ ನಿಲ್ಲಬೇಕು ಎನ್ನುವ ಆಕಾಂಕ್ಷೆಯನ್ನು ಹೊಂದಿದ್ದು ಅದರಲ್ಲಿ ತನ್ನ ಕಿರಿಯ ವಯಸ್ಸಿನಲ್ಲಿಯೇ ಸಾಗಿ ಬಂದಿದ್ದು ಹೆಚ್ಚು ಗಾರಿಕೆಯಲ್ಲವೇ. ಸಾಧಕರ ಹಾದಿಯ ಬಗ್ಗೆ ಓದಿಕೊಂಡಿದ್ದು ನಾನು ಸಹ ಅವರಂತಾಗಬೇಕು ಎನ್ನುವ ಹಂಬಲ ಇರಿಸಿಕೊಂಡದ್ದು ಸ್ವಾಭಿಮಾನ ಬದುಕು ಕಟ್ಟಿಕೊಳ್ಳಬೇಕು.
ಸಾವಿರಾರು ಜನರಿಗೆ ಆಶ್ರಯವಾಗಬೇಕು ಎನ್ನುವ ಛಲವೇ ಇಂದಿನ ಸಾಧನೆಗೆ ಸ್ಪೂರ್ತಿ. ಸಾಗರದ ಶರಾವತಿ ಹಿನ್ನೀರಿನ ಪ್ರದೇಶದಲ್ಲಿರುವ ಕರೂರಿನ ಪಂಚ ಕೂಟ ಬಸದಿಗೆ ಆದಿ ಕದಂಬರ ರಾಜ ಪುರೋಹಿತ ಕುಟುಂಬದಿಂದ ಬಂದಿರುವ ಇವರ ಅಜ್ಜ ಆದಪ್ಪ ಇಂದ್ರರು ಅತ್ಯಂತ ಜನಪ್ರಿಯವಾಗಿದ್ದು, ಇಂತಹ ಪರಂಪರೆಯಲ್ಲಿ ಬೆಳೆದು ಬಂದಿರುವ ಆಗಮ ಇಂದ್ರರಿಗೆ ಇದೆಲ್ಲ ಪ್ರೇರಣೆಯಿಂದಾಗಿ ವೈರಾಗ್ಯದತ್ತ ಸಾಗಲು ಮಾರ್ಗವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಇವರ ದೊಡ್ಡಪ್ಪ ಪಾರ್ಶ್ವನಾಥ ಇಂದ್ರರು ಸಹ ಕರೂರು ಸೀಮೆಯ ಪುರೋಹಿತರಾಗಿದ್ದು, ಹೀಗೆ ಅನೇಕರೊಂದಿಗೆ ಧಾರ್ಮಿಕ ಪೂಜಾ ವಿಧಿ ವಿಧಾನಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬಂದಿದ್ದು ತನ್ನ ತಂದೆ ಅಶೋಕ ಕುಮಾರ್ ಇಂದ್ರರು ಹಾಗೂ ಪಂಡಿತರಾದ ಮೋಹನ್ ಕುಮಾರ್ ಹಾಗೂ ಹಲವರೊಂದಿಗೆ ನಿರಂತರವಾಗಿ ಪೂಜಾ ಕಾರ್ಯಗಳಲ್ಲಿ ಅನೇಕ ಕಡೆಗಳಲ್ಲಿ ಭಾಗವಹಿಸಿ ನಿರ್ವಹಿಸಿದ್ದಾರೆ.
ತುಂಬಾ ಸರಳ ಮತ್ತು ಸಜ್ಜನಿಕೆಯ ಜೀವನವನ್ನು ರೂಡಿಸಿಕೊಂಡು ಬಂದಿದ್ದು ಯಾರನ್ನು ನೋಯಿಸದಂತೆ ತನ್ನ ಬದುಕನ್ನು ರೂಪಸಿಕೊಂಡು ಬಂದಿದ್ದು ಸದಾ ಹೊಸದನ್ನು ಯೋಚಿಸುತ್ತ ಬಂದಿದ್ದು, ಅತಿ ಎತ್ತರಕ್ಕೆ ಬೆಳೆಯಬೇಕು ಎನ್ನುವ ಹಂಬಲವನ್ನು ಹೊಂದಿದ್ದು ಅದರ ಫಲವೇ ಇಂದು ಆ ಎತ್ತರಕ್ಕೆ ಕೊಂಡಯ್ಯುದಿದ್ದು ಅದೆಂತಹ ಅನುಬಂದವಲ್ಲವೇ.
ಇಂತಹ ಅವಕಾಶ ಸಿಗುವುದು ಅತ್ಯಂತ ಕಠಿಣವಾದ ಸಂಗತಿಯಾಗಿದೆ. ಆದರೆ, ಆಗಮ ಇಂದ್ರರಿಗೆ ಕ್ಷುಲ್ಲಕ ಪಟ್ಟ ಸಿಕ್ಕಿರುವುದು ಹಾಗೂ ಆಗಮ ಕೀರ್ತಿ ಎನ್ನುವ ಸ್ವಾಮಿಜಿಯ ಪದನಾಮವಾಗಿರುವುದು ವಿಶೇಷವೇ ಎನ್ನಬಹುದು.
ನಾವು ನೋಡು ನೋಡುತ್ತಲೇ ಬೆಳೆದ ಬಾಲಕನೊಬ್ಬ ಇಂತಹ ಪದವಿಗೆ ಹೋಗಿದ್ದು ಹೇಳಿಕೊಳ್ಳಲಾರದಷ್ಟು ಸಂತಸವಾಗಿದೆ. ಲೌಕಿಕವಾದ ಎಂತಹ ಪದವಿಯನ್ನಾದರೂ ಪಡೆಯಬಹುದು ಆದರೇ ಇಂತಹ ಪದವಿ ಎಷ್ಟು ಜನರಿಗೆ ಮಾತ್ರ ದೊರಕುತ್ತದೆ ಹೇಳಿ…?
ನಾವು ಸುಖದ ಭೋಗದಲ್ಲಿಯೇ ಬದುಕುತ್ತಿರುವ ನಮಗೆ ಇಂತಹ ಬಾಲಕನೊಬ್ಬ ನಮಗೆ ದಾರಿ ದೀಪವಲ್ಲವೇ.ಇಂತಹ ಮಗನನ್ನು ಪಡೆದ ತಂದೆ ತಾಯಿಯರ ಜೀವನ ಅದೆಷ್ಟು ಸಾರ್ಥಕವಲ್ಲವೇ…
Sravanabelagola Jain Math ಅಶೋಕ ಇಂದ್ರ ಮತ್ತು ಅನಿತಾ ಅವರು ಅತ್ಯಂತ ಕಷ್ಟದಲ್ಲಿಯೇ ಬದುಕನ್ನು ಕಟ್ಟಿಕೊಂಡವರು.. ಯಾರ ಹತ್ತಿರವೂ ತಮ್ಮ ನೋವನ್ನು ಹೇಳಿಕೊಂಡವರಲ್ಲ…!! ನಗರ ಜೀವನವೆಂದರೆ ಅಷ್ಟೊಂದು ಸರಳವಲ್ಲ… ಹಗಲಿರಳನ್ನದೆ ತನ್ನ ಕಾರ್ಯವನ್ನು ನಿರ್ವಹಿಸುತ್ತ ಜೊತೆಗೆ ಬಸದಿಯನ್ನು ನೋಡಿಕೊಳ್ಳುತ್ತಾ ಬಂದವರಿಗೆ ಪೂಜೆಯನ್ನು ಮಾಡಿಕೊಡುತ್ತ.. ಕರೆದ ಮನೆಗಳಿಗೆ ಹೋಗಿ ಪೂಜೆ ಮೊದಲಾದ ಧಾರ್ಮಿಕ ಕಾರ್ಯಗಳನ್ನು ನಡೆಸಿಕೊಟ್ಟು ಬರುವಂತಹ ಅಪರೂಪದ ವ್ಯಕ್ತಿ. ಯಾವ ಫಲಾಪೇಕ್ಷೆ ಇಲ್ಲದೆ ತಮ್ಮ ಕುಟುಂಬದ ಪರಂಪರೆಯನ್ನು ನಡೆಸಿಕೊಂಡು ಬಂದಿದ್ದು ಇವರ ಹೆಗ್ಗಳಿಕೆಯಾಗಿದೆ.ಜೊತೆಯಲ್ಲಿ ಅಧ್ಯಯನ ಹಾಗೂ ಸಾಹಿತ್ಯ ಬರಹದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದು ಇವರ ಹಲವಾರು ಕೃತಿಗಳು ಕನ್ನಡ ಸಾಹಿತ್ಯ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿವೆ.
ಸಾಗರಕ್ಕೆ ತನ್ನದೆಯಾದ ಧಾರ್ಮಿಕ ಇತಿಹಾಸವಿದ್ದು ಅದರಲ್ಲೂ ಜೈನಧರ್ಮಿಯರಿಗೆ ವಿಶೇಷವಾದ ನೆಲೆವಿಡಾಗಿದೆ. ಸಾಗರ ನಗರದಲ್ಲಿ ನೂರು ಜೈನ ಕುಟುಂಬಗಳಿದ್ದು ಗ್ರಾಮೀಣ ಭಾಗದಲ್ಲಿ ಸಾಕಷ್ಟು ಜೈನ ಕುಟುಂಬಗಳಿದ್ದು ತಮ್ಮಷ್ಟಕ್ಕೆ ತಾವು ಜೀವವನ್ನು ಕಟ್ಟಿಕೊಂಡಿದ್ದು ಧಾರ್ಮಿಕ ಆಚರಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇಂತಹ ಸಾಗರದ ನೆಲೆಯಿಂದ ಈ ಹಿಂದೆ ಸೋಂದಾ ಮಠ, ಇಗಿನ ಚಾಮರಾಜ ನಗರದ ಕನಗಿರಿ ಮಠಕ್ಕೆ ಹಾಗೂ ಕಂಬದಹಳ್ಳಿ ಮಠಕ್ಕೆ ಸಾಗರ ತಾಲ್ಲೂಕಿನವರೆ ಪೀಠಾಧಿಪತಿಗಳಾಗಿದ್ದಾರೆ ಹಾಗೂ ಅನೇಕರು ದಿಗಂಬರ ಮುನಿಗಳು, ಬ್ರಹ್ಮಚಾರಿಗಳು ಹೀಗೆ ಅನೇಕ ಧಾರ್ಮಿಕ ಪದವಿಗಳಲ್ಲಿ ದ್ದಾರೆ ಎನ್ನುವ ಹೆಗ್ಗಳಿಕೆ ಸಾಗರಕ್ಕಿದೆ. ಅದರಲ್ಲೂ ಸಾಗರಕ್ಕೆ ಆಗಮ ಕೀರ್ತಿಗಳು ಶ್ರವಣಬೆಳಗೊಳದ ಸ್ವಾಮಿಗಳಾಗಿ ಪಟ್ಟಾಭಿಷೇಕದ ಕೀರ್ತಿ ಮತ್ತಷ್ಟು ಹೆಚ್ಚಿಸಿದೆ.
ಬರಹ ಕೃಪೆ:
ವಿ.ಟಿ.ಸ್ವಾಮಿ, ಕವಿತೋಟ
ಸಾಗರ
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.