Friday, November 22, 2024
Friday, November 22, 2024

Congress Party Ticket in Chikmagalur Constituency ಕಡೂರು ಕ್ಷೇತ್ರ ಮಹಡಿಮನೆ ಸತೀಶ್ ಗೆ ಚುನಾವಣಾ ಟಿಕೆಟ್ ನೀಡಲು ಆಗ್ರಹ

Date:

Congress Party Ticket in Chikmagalur Constituency ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಯಲುಸೀಮೆ ಹಾಗೂ ಕ್ಷೇತ್ರದ ನಂಟು ಹೊಂದಿರುವ ಮತ್ತು ಪಕ್ಷದಲ್ಲಿ ಪ್ರಾಮಾಣಿಕವಾಗಿ ಹಲವಾರು
ವರ್ಷಗಳು ಸೇವೆ ಸಲ್ಲಿಸಿರುವ ಮಹಡಿ ಮನೆ ಸತೀಶ್ ಅವರಿಗೆ ಪಕ್ಷದಿಂದ ಟಿಕೇಟ್ ಘೋಷಣೆ ಮಾಡದಿದ್ದಲ್ಲಿ ಸಖರಾಯಪಟ್ಟಣ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಸಾಮೂಹಿಕ ರಾಜೀನಾಮೆ ಸಲ್ಲಿಸಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಚಿಕ್ಕಮಗಳೂರು ತಾಲ್ಲೂಕಿನ ಸಖರಾಯಪಟ್ಟಣ ಹೋಬಳಿಯಲ್ಲಿ ಭಾನುವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಬಹುತೇಕ ಬ್ಲಾಕ್ ಕಾಂಗ್ರೆಸ್ ಮುಖಂಡರುಗಳು ಸಭೆ ನಡೆಸಿ ಮುಂದಿನ ಚುನಾವಣೆಯಲ್ಲಿ ಸತೀಶ್ ಅವರಿಗೆ ಟಿಕೇಟ್ ಘೋಷ ಣೆಯಾಗದಿದ್ದಲ್ಲಿ ಸಾಮೂಹಿಕ ರಾಜೀನಾಮೆ ಸಲ್ಲಿಸಿ ಚುನಾವಣೆಯಲ್ಲಿ ಮತ ಚಲಾಯಿಸದಂತೆ ನಿರ್ಣಯಿಸಲಾಗುತ್ತದೆ ಎಂದರು.

ಕ್ಷೇತ್ರದ ಮತದಾರರಲ್ಲಿ ಮಹಡಿಮನೆ ಸತೀಶ್ ಉತ್ತಮ ಒಡನಾಟ ಹೊಂದಿದ್ದು ಪ್ರತಿ ಗ್ರಾಮ ಪಂಚಾಯಿತಿ ಗಳಲ್ಲೂ ತೆರಳಿ ಸಭೆ, ಸಮಾರಂಭಗಳನ್ನು ಆಯೋಜಿಸುವ ಮೂಲಕ ಪಕ್ಷವನ್ನು ತಳಮಟ್ಟದಿಂದ ಗಟ್ಟಿಗೊಳಿಸಲು ಮುಂದಾಗಿದ್ದಾರೆ. ಇದೀಗ ಇತರೆ ಪಕ್ಷದಿಂದ ಬಂದಿರುವ ವ್ಯಕ್ತಿಗೆ ಹೈಕಮಾಂಡ್ ಮಣೆಹಾಕುವ ಕೆಲಸ ಮಾಡಿದರೆ ಮುಂದಿನ ದಿನಗಳಲ್ಲಿ ಹೋಬಳಿಯಲ್ಲಿ ಮತದಾರರನ್ನು ಕೈಬಿಟ್ಟಂತಾಗುತ್ತದೆ ಎಂದು ತಿಳಿಸಿದರು.

ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಟಿಕೇಟ್ ಕುರಿತು ಇಷ್ಟೆಲ್ಲಾ ಚರ್ಚೆಗಳಾಗುತ್ತಿರುವುದನ್ನು ಗಮನಿ ಸಿದರೆ ಸ್ಥಳೀಯ ಶಾಸಕರೇ ತಮ್ಮ ಸ್ವಪಕ್ಷದಿಂದ ರಾಜೀನಾಮೆ ಕೊಡಿಸಿ ಕಾಂಗ್ರೆಸ್ ಸೇರ್ಪಡೆಗೊಳಿಸುವ ಮೂಲಕ ಪಕ್ಷದ ಮುಖಂಡರುಗಳಲ್ಲಿ ಭಿನ್ನಾಭಿಪ್ರಾಯ ಮೂಡಿಸುತ್ತಿರುವುದು ಮೇಲ್ನೋಟಕ್ಕೆ ವ್ಯಕ್ತವಾಗುತ್ತಿದೆ. ಕೂಡಲೇ ಕೆಪಿಸಿಸಿ ಮುಖಂಡರುಗಳು ಕಡಿವಾಣ ಹಾಕಿ ನಿಸ್ವಾರ್ಥ ಸೇವೆ ಸಲ್ಲಿಸಿರುವ ಆಕಾಂಕ್ಷಿಗಳಿಗೆ ಟಿಕೇಟ್ ನೀಡಿ ಗೆಲುವಿಗೆ ಪೂರಕವಾಗಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದರು.

ಕೆಪಿಸಿಸಿ ಸಂಯೋಜಕ ಪವನ್ ಮಾತನಾಡಿ ಕ್ಷೇತ್ರದ ಅಭ್ಯರ್ಥಿ ಕುರಿತು ರಾಜ್ಯನಾಯಕರುಗಳು ಸರ್ವೆ ನಡೆ ಸಬೇಕು ಎಂದು ಹೇಳುತ್ತಿದ್ದಾರೆ. ಆದರೆ, ಕ್ಷೇತ್ರದ ಜನಬಳಕೆಯಲ್ಲಿ ಉತ್ತಮ ಬಾಂಧವ್ಯ ಹೊಂದಿರುವ ಸತೀಶ್ ಹಾಗೂ ಅರ್ಜಿ ಸಲ್ಲಿಸಿರುವವರಿಗಿಂತ ಬರ‍್ಯಾವ ಅಭ್ಯರ್ಥಿವಿರುವುದು ಸ್ಪಷ್ಟವಾಗಿ ಕಾಣಿಸುತ್ತಿಲ್ಲ. ಕೂಡಲೇ ರಾಜ್ಯ ನಾಯಕರು ವಲಸೆ ಬಂದಂತಹ ವ್ಯಕ್ತಿಗೆ ಮಣೆ ಹಾಕುವ ಕೆಲಸ ಮಾಡಬಾರದು ಎಂದು ತಿಳಿಸಿದರು.

Congress Party Ticket in Chikmagalur Constituency ಪ್ರಾಸ್ತಾವಿಕ ಮಾತನಾಡಿದ ಪಕ್ಷದ ಸ್ಥಳೀಯ ಮುಖಂಡ ಮಂಜುನಾಥ್ ಕಳೆದ ನಾಲ್ಕು ಬಾರಿಯಿಂದಲೇ ಕ್ಷೇತ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರದೇ ವಿಫಲವಾಗಿದೆ. ಜಿಲ್ಲಾ ಹಾಗೂ ರಾಜ್ಯ ಸಮಿತಿಯು ಅಭ್ಯರ್ಥಿ ಕುರಿತು ಸೂಕ್ತ ನಿರ್ಣಯ ಕೈಗೊಂಡು ಕ್ಷೇತ್ರದ ಅಭಿವೃದ್ದಿ ಕೆಲಸಗಳಿಗೆ ಸಮಪರ್ಕವಾಗಿರುವ ಮಹಡಿಮನೆ ಸತೀಶ್ ಅವರನ್ನು ಘೋಷಿಸಿ ಕಾಂಗ್ರೆಸ್ ಗೆಲುವಿಗೆ ಸಹಕರಿಸಬೇಕು ಎಂದರು.
ಮುಖಂಡ ಸಿಖಂಧರ್ ಮಾತನಾಡಿ ಜಾತಿ ಜಾತಿಗಳ ಮಧ್ಯೆ ವಿಷಬೀತ್ತುವ ಮತ್ತು ಕೋಮುವಾದಿ ವರ್ಗ ದಿಂದ ಬಂದಿರುವ ವ್ಯಕ್ತಿಗೆ ಯಾವುದೇ ಕಾರಣಕ್ಕೂ ಟಿಕೇಟ್ ನೀಡಬಾರದು.

ಸಖರಾಯಪಟ್ಟಣ, ಲಕ್ಯಾ ಹಾಗೂ ನಗರಮಟ್ಟದಲ್ಲಿ ಅತ್ಯಧಿಕ ಒಡನಾಟ ಹೊಂದಿರುವ ಮಹಡಿಮನೆ ಸತೀಶ್ ಅವರಿಗೆ ಪಕ್ಷದಿಂದ ಟಿಕೇಟ್ ನೀಡಿ ಗೆಲುವಿಗೆ ಮುಂದಾಗಬೇಕು ಎಂದು ಹೇಳಿದರು.

ಮುಖಂಡ ಕಾಂತರಾಜ್ ಮಾತನಾಡಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸಖರಾಯಪಟ್ಟಣ ಮುಖಂಡರುಗಳಿಂದ ಮಹಡಿಮನೆ ಸತೀಶ್ ಅವರಿಗೆ ಚುನಾವಣೆಗೆ ತಗುಲುವ ವೆಚ್ಚವನ್ನು ಕಾರ್ಯಕರ್ತರುಗಳೇ ಭರಿಸುವ ಮೂಲಕ ಗೆಲ್ಲಿಸಲು ಪ್ರತಿಯೊಬ್ಬರು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಿ.ಸಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಪಕ್ಷದ ಹಿರಿಯ ಮುಖಂಡ ಕಲ್ಮರುಡಪ್ಪ ಕ್ಷೇತ್ರದ ಜನಬಳಕೆಯಲ್ಲಿ ಉತ್ತಮ ಸಂಪರ್ಕ ಹೊಂದಿರುವ ಅವರು ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸೂಕ್ತ ಸಮಯದಲ್ಲಿ ಸ್ಪಂದಿಸುವ ಮೂಲಕ ಅವಿಭಾವ ಸಂಬಂಧ ಹೊಂದಿದ್ದು ಅವರಿಗೆ ಮುಂಬರುವ ಚುನಾವಣೆ ಯಲ್ಲಿ ಟಿಕೇಟ್ ಘೋಷಣೆ ಮಾಡಿ ಗೆಲುವಿನ ನಗೆ ಬೀರಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿ ಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ರುದ್ರಾಮೂರ್ತಿ, ಕೆಂಗೇಗೌಡ, ಅಮೀರ್‌ಜಾನ್, ನಯಾಜ್, ಸೌಂದರ್ಯ ಜಗದೀಶ್, ಮೋಹನ್‌ನಾಯಕ್, ಮಲ್ಲೇಗೌಡ, ಅಚ್ಯುತ್‌ರಾವ್, ಈಶ್ವರಪ್ಪ, ರಾಮಚಂದ್ರ, ತಿಮ್ಮೇಗೌಡ, ಹೇಮಾವತಿ, ಆದಿ, ಸಚ್ಚಿನ್, ಧನಂಜಯ್ ಹಾಗೂ ಗ್ರಾ.ಪಂ. ಸದಸ್ಯರುಗಳು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Cooperation ಹಿರಿಯ ಸಹಕಾರಿ ಧುರೀಣ ಕೊಪ್ಪದ ಎಸ್.ಎನ್.ವಿಶ್ವನಾಥ್ ಗೆ ‘ ಸಹಕಾರಿ ರತ್ನ’ ಪ್ರಶಸ್ತಿ.

Department of Cooperation ಕರ್ನಾಟಕ ಸರ್ಕಾರದ ಕರ್ನಾಟಕ ಸಹಕಾರ ಮಹಾಮಂಡಲ ದ...

Kasturba Girls Junior College ಮಕ್ಕಳ ಪ್ರತಿಭೆ ಅನಾವರಣಗೊಳಿಸುವ ಪ್ರತಿಭಾ ಕಾರಂಜಿಗೆ ಇನ್ನಷ್ಟು ಶಕ್ತಿ ತುಂಬೋಣ- ಶಾಸಕ ಚನ್ನಬಸಪ್ಪ

Kasturba Girls Junior College ವೈವಿಧ್ಯತೆಯನ್ನು ಹೊಂದಿರುವ ನಮ್ಮ ರಾಷ್ಟ್ರದ ಸಂಸ್ಕೃತಿಯನ್ನು...