Friday, November 22, 2024
Friday, November 22, 2024

Bellary Vijayanagar Koppal Zone Safety Day Celebration ಎಸ್ ಎಲ್ ಆರ್ ಕಾರ್ಖಾನೆ ಆತಿಥ್ಯದಲ್ಲಿ ವಿಜಯನಗರ ಕೊಪ್ಪಳ ವಲಯಮಟ್ಟದ ಸುರಕ್ಷಾ ದಿನಾಚರಣೆ

Date:

Bellary Vijayanagar Koppal Zone Safety Day Celebration ಪ್ರತಿ ವರ್ಷವೂ ಮಾರ್ಚ್‌ ತಿಂಗಳಲ್ಲಿ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ ಆಚರಣೆ ಮಾಡಲಾಗುತ್ತದೆ. ಸುರಕ್ಷತಾ ದಿನಾಚರಣೆ ಯ ನಂತರ ಬಳ್ಳಾರಿ ವಿಜಯನಗರ ಕೊಪ್ಪಳ ವಲಯ ಸುರಕ್ಷತಾ ದಿನಾಚರಣೆ ಸಮಿತಿಯ ವತಿಯಿಂದ ಸುರಕ್ಷತಾ ದಿನಾಚರಣೆ ಆಚರಣೆ ಮಾಡುವ ಪದ್ದತಿ 2002 ನೇ ಸಾಲಿನಿಂದ ನಡೆದುಕೊಂಡು ಬಂದಿದೆ.

ಅದರಂತೆ ಈ ವರ್ಷದ ಆಚರಣೆಯನ್ನು ಮಾರ್ಚ್ 24ರಂದು ಹೊಸಪೇಟೆಯ ಮಲ್ಲಿಗೆ ಹೋಟೆಲ್ ಆವರಣದಲ್ಲಿ ಆಚರಿಸಲಾಯಿತು.

‌2000 ರಿಂದ 2002 ರ ಮಧ್ಯದಲ್ಲಿ ಉತ್ತರ ಕರ್ನಾಟಕದ ಹಿಂದುಳಿದ ಪ್ರದೇಶವಾದ ಬಳ್ಳಾರಿ, ಕೊಪ್ಪಳ, ರಾಯಚೂರು ಮತ್ತು ಗುಲ್ಬರ್ಗ ಭಾಗದಲ್ಲಿ ಕೈಗಾರಿಕೆ ಗಳ ಅಭಿವೃದ್ಧಿ ಗಾಗಿ ಸರ್ಕಾರದಿಂದ ಅನೇಕ ಹೊಸ ಹೊಸ ಯೋಜನೆಯಡಿಯಲ್ಲಿ ವಿದ್ಯುತ್, ಉಕ್ಕು ಮತ್ತು ಕಬ್ಬಿಣ, ಸಕ್ಕರೆ, ಸಿಮೆಂಟ್ ವಲಯದಲ್ಲಿ ಸಣ್ಣ ಮತ್ತು ಮಧ್ಯಮ ವಲಯದ ಕಾರ್ಖಾನೆಗಳು ಪ್ರಾರಂಭವಾದವು. ಅವುಗಳಲ್ಲಿ ಮುಖ್ಯವಾಗಿ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ , ಜಿಂದಾಲ್ ಸ್ಟೀಲ್ ಲಿಮಿಟೆಡ್, , ಆರ್ ಟಿ .ಪಿ.ಎಸ್, ಕಲ್ಯಾಣಿ ಸ್ಟೀಲ್ಸ್ ಲಿಮಿಟೆಡ್ , ಎ.ಸಿ ಸಿ ಸಿಮೆಂಟ್ , ಎಂಎಸ್ ಪಿ.ಎಲ್ ಬಿ.ಎಂ.ಎಂ ಇಸ್ಪಾತ್, ಬಿಟಿಪಿಎಸ್, ಎಸ್ ಎಲ್ ಆರ್ ಅಂತಹ ಅನೇಕ ಕಾರ್ಖಾನೆಗಳು ಮತ್ತು ಸಣ್ಣ ಪುಟ್ಟ ಕಾರ್ಖಾನೆಗಳು ಹಂತಹಂತವಾಗಿ ಪ್ರಾರಂಭವಾಗಿ ಉತ್ಪಾದನೆ ಯನ್ನು ಮುಖ್ಯ ಗುರಿಯಾಗಿ ಮಾಡಿಕೊಂಡು ಕಾರ್ಖಾನೆ ಮಾಲಿಕರು ಕೆಲಸಗಾರರ ಸುರಕ್ಷತೆಗೆ ಹೆಚ್ಚಿನ ಗಮನ ಕೊಡದೆ ಉತ್ಪಾದನೆ ಯನ್ನು ಮಾಡುತ್ತಿದ್ದರು. ಆ ಸಮಯದಲ್ಲಿ ಕಾರ್ಖಾನೆಗಳಲ್ಲಿ ಮಾರಣಾಂತಿಕ ಅಪಘಾತಗಳು ಜೋತೆಗೆ ಅನೇಕ ದೂಡ್ಡ ಅಪಘಾತಗಳು ಸಂಭವಿಸಿದವು. ಅದು ಅಲ್ಲದೆ ಆಗ ಗುಲ್ಬರ್ಗ ದಲ್ಲಿ ಕಾರ್ಖಾನೆ ಮತ್ತು ಬಾಯ್ಲರ್ ವಿಭಾಗದ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದರು ಮತ್ತು ಪದೆ ಪದೆ ಅಧಿಕಾರಿಗಳು ಕಾರ್ಖಾಗಳಿಗೆ‌ ಭೇಟಿ ನೀಡಲು ಸಹ ಬೇಸರವಾಗುತ್ತಿತ್ತು. ಏಕೆಂದರೆ, ಆಗ ಈ ಭಾಗದ ರಸ್ತೆಗಳ ಪರಿಸ್ಥಿತಿಯು ಸಹ ಉತ್ತಮವಾಗಿ ಇರಲಿಲ್ಲಾ ಮತ್ತು ಅಧಿಕಾರಿಗಳ ಭೇಟಿಯು ಸಹ ಆಗುತ್ತಿರಲಿಲ್ಲಾ. ಈ ಒಂದು ಅಂಶವನ್ನು ಗಮನದಲ್ಲಿ ಇಟ್ಟು ಕೊಂಡು 2002 ನೇಯ ಸಾಲಿನಲ್ಲಿ ಕಾರ್ಖಾನೆ ಮತ್ತು ಬಾಯ್ಲರ್ ವಿಭಾಗದ ಅಧಿಕಾರಿಗಳಾದ ಶ್ರೀ ಡಿ ಸಿ ಜಗದೀಶ್ ಮತ್ತು ಶ್ರೀ ನವನಿತ್ ಮೋಹನ್ ಮತ್ತು ಮೇಲ್ವೀಚಾರಕರಾದ ಶ್ರೀಮತಿ ಭಾರತಿ ಎಂ ಕಾರ್ಖಾನೆಗಳ ಆಡಳಿತ ಮಂಡಳಿಯ ಸಹಾಕಾರದೊಂದಿಗೆ ಮಾತನಾಡಿ
“ಗುಲ್ಬರ್ಗ ರೀಜನಲ್ ಸೇಫ್ಟಿ ಕಮಿಟಿ” ಯನ್ನು ಪ್ರಾರಂಭಿಸಿದರು. ಮತ್ತು ಆ ಕಮೀಟಿಯಲ್ಲಿ ಈ ಕೆಳಕಂಡ ಅಂಶಗಳನ್ನು ಮಾತನಾಡಿ ಸೂಚನೆಯನ್ನು ಹೊರಡಿಸಿದರು.

Bellary Vijayanagar Koppal Zone Safety Day Celebration ಅದರಲ್ಲಿ ಮುಖ್ಯವಾಗಿ
1. ಅಪಘಾತಗಳ ಪ್ರಮಾಣವನ್ನು ಕಡಿಮೆ ಮಾಡಲು ಬೇಕಾದ ಅವ್ಯಕತೆಯನ್ನು ಅಧಿಕಾರಿಗಳಿಗೆ
ಒದಗಿಸುವುದು
2. ಕಾರ್ಖಾನೆಗಳಲ್ಲಿ ಸುರಕ್ಷತಾ ಅಧಿಕಾರಿಗಳನ್ನು ನೇಮಕ ಮಾಡುವುದು
3. ಸುರಕ್ಷತಾ ತರಭೇತಿ ನೀಡುವುದು
4. ಸುರಕ್ಷತಾ ಸಾಧನ ಸಾಮಾಗ್ರಿಗಳನ್ನು ಕಾಲ ಕಾಲಕ್ಕೆ ಕಾರ್ಮಿಕರಿಗೆ ಒದಗಿಸುವುದು.
5. ಸುರಕ್ಷತಾ ಆಡಿಟ್ ಮಾಡುವುದು
6. ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಕೈಗಾರಿಕೆಗಳಲ್ಲಿ ಹೆಚ್ಚು ಹೆಚ್ಚು ಸ್ಪರ್ಧೆಗಳನ್ನು
ಮೂಡಿಸುವುದು ಹೀಗೆ ಹಲವಾರು ಕಾರ್ಯಕ್ರಮ ಹಾಕಿಕೊಂಡು “ಗುಲ್ಬರ್ಗ ರೀಜನಲ್ ಸೇಫ್ಟಿ ಕಮಿಟಿ” ಪ್ರಾರಂಭಿಸಿದರು. ಆ ಸಮಿತಿಯ ಅಡಿಯಲ್ಲಿ 4 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ ಕಮಿಟಿಯು
ಗುಲ್ಬರ್ಗ ಮತ್ತು ಒಳ್ಳಾರಿ ಭಾಗದಲ್ಲಿ 2 ಸಮಿತಿಗಳಾಗಿ ಮಾಡಲಾಯಿತು.
1) ಗುಲ್ಬರ್ಗ ರೀಜನಲ್ ಸೇಫ್ಟಿ ಕಮಿಟಿ (ಗ್ರೀಸ್ಡ್)
2) ಬಳ್ಳಾರಿ -ಕೊಪ್ಪಳ ವಲಯ ಸುರಕ್ಷತಾ ಸಮಿತಿ ( ಬಿಕೆರೈಸ್)

ಕರ್ನಾಟಕ ಸರ್ಕಾರದ ಕಾರ್ಖಾನೆ ಮತ್ತು ಬಾಯ್ಲರ್ ವಿಭಾಗದ ಅಧಿಕಾರಿಗಳು ಮತ್ತು ಕಾರ್ಖಾನೆಗಳ ಅಧಿಕಾರಿಗಳ ಮುಂಚುಣಿಯಲ್ಲಿ ಪ್ರತಿ ವರುಷ ಒಂದೂಂದು ಕಾರ್ಖಾನೆಯು ಜವಾಬ್ದಾರಿ ತೆಗೆದುಕೊಂಡು ಈ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಭಾಗವಹಿಸಿ ಮಾರ್ಗದರ್ಶನ ನೀಡುತ್ತಿದೆ.
ಕಳೆದ 2 ವರ್ಷದ ಅನೇಕ ಬದಲಾವಣೆಯ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯು ಹೊಸದಾಗಿ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಬಳ್ಳಾರಿ ವಿಜಯನಗರ ಕೊಪ್ಪಳ ಸುರಕ್ಷತಾ ಸಮಿತಿ ಮಾರ್ಪಾಟು ನಂತರ ಈ ವರ್ಷ ಮೆ. ಎಸ್ ಎಲ್ ಆರ್ ಮೆಟಲಿಕ್ಸ್ ಲಿಮಿಟೆಡ್ ಆತಿಥ್ಯದಲ್ಲಿ 2022-23 ನೇ ಸಾಲಿನ ವಲಯ ಮಟ್ಟದ ಸುರಕ್ಷತಾ ದಿನಾಚರಣೆ ನಡೆಯುತ್ತಿದೆ.

ಈ ಸಂಧರ್ಭದಲ್ಲಿ ಆಗಿನಿಂದಲೂ ಇಲ್ಲಿಯವರೆಗೆ ಸತತವಾಗಿ ಈ ಸಮಿತಿಯಲ್ಲಿ ಅನೇಕ ಮಾರ್ಗದರ್ಶನ ನೀಡಿ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿ ಯೋಜನೆಗೆ ಯಶಸ್ವಿಯಾಗಲು ಕಾರಣಕರ್ತರು ಎಂದರೆ ಮಾನ್ಯ ಶ್ರೀ ಶ್ರೀನಿವಾಸ್, ನಿರ್ದೇಶಕರು, ಕಾರ್ಖಾನೆ ಮತ್ತು ಬಾಯ್ಲರ್ ಗಳ ಇಲಾಖೆ, ಕರ್ನಾಟಕ ಸರ್ಕಾರ ಇವರು ಈ ಭಾಗದಲ್ಲಿ ಹಿಂದೆ ಸತತವಾಗಿ ಸುಮಾರು 5 ರಿಂದ 6 ವರ್ಷಗಳ ಕಾಲ ಮಾಡಿದ ಕೆಲಸ, ಸುಧಾರಣೆ ಮತ್ತು ಜವಾಬ್ದಾರಿಯುತವಾದ ಕೆಲಸವನ್ನು ಇಂದಿಗೂ ಈ ಭಾಗದ ಕಾರ್ಖಾನೆಗಳ ಆಡಳಿತ ಮಂಡಳಿ ಮತ್ತು ಕೆಲಸಗಾರರಿಗೆ ಪೂರಕವಾಗಿದೆ ಇವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುರಕ್ಷತೆ, ಆರೋಗ್ಯ ವಿಭಾಗದಲ್ಲಿ ಹೆಸರುಗಳಿಸಿದ ಅಧಿಕಾರಿಗಳಿಗೆ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ನೀಡಿ ಅಭಿನಂದಿಸಿದರು.

ಯಶಸ್ವಿಯಾಗಿ ಸುಮಾರು 21 ವರ್ಷಗಳ ಕಾಲ ಈ ಸಮಿತಿಯು ಸುರಕ್ಷತಾ ದಿನಾಚರಣೆ ಆಚರಣೆ ಮಾಡುತ್ತಾ ಬಂದಿದೆ. ಇದಕ್ಕಾಗಿ ಇಲಾಖೆಯ ಅಧಿಕಾರಿ ವರ್ಗದವರರಿಗೆ ಸಮಿತಿಯ ಎಲ್ಲಾ ಸದಸ್ಯರಿಗೆ ಮತ್ತು ಕಾರ್ಖಾನೆಗಳ ಆಡಳಿತ ಮಂಡಳಿಗೆ ಧನ್ಯವಾದಗಳು. ಈಗ ಈ ಬಿಕೆವಿರೈಸ್ ಸಮಿತಿಯ ಕಾರ್ಖಾನೆಗಳ ಇಲಾಖೆಯಿಂದ ಈ ಸಮಿತಿಯ ಛೇರ್ಮನ್ ಸ್ಥಾನದಲ್ಲಿ ಇದ್ದು ಹುಬ್ಬಳ್ಳಿ ವಲಯದ ಜಂಟಿ ನಿರ್ದೇಶಕರಾದ ಶ್ರೀ ರವೀಂದ್ರನಾಥ್ ರಾಥೋಡ್ ರವರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ವಿವಿಧ ಕಾರ್ಖಾನೆಯ ಅಧಿಕಾರಿಗಳ ಪಾತ್ರ ಬಹಳ ದೊಡ್ಡ ಪ್ರಮಾಣದಲ್ಲಿ ಮುಂದುವರಸಿ ಈ ವರ್ಷವು ಅನೇಕ ತರಬೇತಿ ಕಾರ್ಯಕ್ರಮಗಳು, ಕಾರ್ಖಾನೆಗಳಿಗೆ ಅಧಿಕಾರಿಗಳ ಭೇಟಿ ಮತ್ತು ಸ್ಪರ್ಧೆಗಳನ್ನು ಆಯೋಜಿಸಿ ಕಾರ್ಮಿಕರು ಮತ್ತು ಉದ್ಯೋಗಿಗಳಿಗೆ ಉತ್ತೇಜನ ಮತ್ತು ಮಾರ್ಗದರ್ಶನ ನೀಡುವಂತ ಕಾರ್ಯಕ್ರಮಗಳನ್ನು ಹಾಕಿಕೊಂಡು ಬರಲಾಯಿತು. ಅದರಂತೆ ಎಲ್ಲಾ ಕಾರ್ಖಾನೆಗಳ ಆಡಳಿತ ಮಂಡಳಿಯು ಸಹ ಉತ್ಪಾದನೆ ಜೊತೆಗೆ ಕಾರ್ಮಿಕರ ಸುರಕ್ಷತೆ,ಆರೋಗ್ಯ ಮತ್ತು ಪರಿಸರಕ್ಕೆ ಹೆಚ್ಚಿನ ಮಹತ್ವನೀಡುತ್ತಾ ಬಂದ ಕಾರಣದಿಂದ ಇಂದು ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳದ ಎಲ್ಲಾ ಕಾರ್ಖಾನೆಯ ಅಪಘಾತ ಪ್ರಮಾಣ ಕಡಿಮೆಯಾಗಿದೆ ಮತ್ತು ಸುರಕ್ಷತೆಯಲ್ಲಿ ಹೆಚ್ಚಾಗಿ ತಿಳುವಳಿಕೆಯು ಬಂದಿದೆ.

2022-23 ನೇ ಸಾಲಿನಲ್ಲಿ *ಮೆ. ಎಸ್ ಎಲ್ ಆರ್ ಮೇಟಾಲಿಕ್ಸ್ ಲಿಮಿಟೆಡ್ ಆತಿಥ್ಯ ದಲ್ಲಿ ದಿನಾಂಕ 24-03-2023 ರಂದು ಸಾಯಂಕಾಲ ಹೊಸಪೇಟೆಯ ಮಲ್ಲಿಗೆ ಹೋಟಲ್ ಆವರಣದಲ್ಲಿ ಬಳ್ಳಾರಿ-ವಿಜಯನಗರ ಕೊಪ್ಪಳ ವಲಯದ ಮೂಲಕ 52 ನೇ ಸುರಕ್ಷತಾ ದಿನಾಚರಣೆಯ ಈ ವರ್ಷದ ಸಮಾರೋಪ ಸಮಾರಂಭ ಜರುಗಿತು.
ಕಾರ್ಯಕ್ರಮ ದಲ್ಲಿ ಮಾನ್ಯ ಶ್ರೀ ಶ್ರೀನಿವಾಸ್, ನಿರ್ದೇಶಕರು ಕಾರ್ಖಾನೆ ಮತ್ತು ಬಾಯ್ಲರ್ ಗಳ ಇಲಾಖೆ, ಕರ್ನಾಟಕ ಸರ್ಕಾರ, ಎಸ್ ಎಲ್ ಆರ್ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರು ಶ್ರೀ ರಾಜಕೂಮಾರ್ ಗೂಯಲ್ , ಕಾರ್ಯನಿರ್ವಾಹಕ ನಿರ್ದೇಶಕರು ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಶಾಖೆ ಕುಡುತಿನಿಯ ಶ್ರೀ ವೆಂಕಟಾಚಲಪತಿ ಮತ್ತು ಎಸ್ ಎಲ್ ಆರ್ ಕಾರ್ಖಾನೆಯ ನಿರ್ದೇಶಕರು (ಆಪರೇಷನ್‌‌) , ಶ್ರೀ ದೇವದುತ್ ಸಿನಾ , ದಾವಣಗೆರೆ ವಲಯದ ಉಪನಿರ್ದೇಶಕರು ಬಾಯ್ಲರ್ ವಿಭಾಗದ ಶ್ರೀ ಶ್ರೀನಿವಾಸ್, ಬಳ್ಳಾರಿ ವಿಭಾಗದ ಹಿರಿಯ ಸಹಾಯಕ ನಿರ್ದೇಶಕರು ಶ್ರೀ ವರುಣ್, ಸಹಾಯಕ ನಿರ್ದೇಶಕರು ಕೊಪ್ಪಳ ಮತ್ತು ರಾಯಚೂರು ವಿಭಾಗದ ಶ್ರೀ ವಿಜಯಕುಮಾರ್ ಇವರುಗಳ ಸಾನಿದ್ಯದಲ್ಲಿ ಸಮಾರೋಪ ಸಮಾರಂಭ ಜರುಗಿತು.

ಕಾರ್ಯಕ್ರಮ ಸುರಕ್ಷತಾ ಧ್ವಜಾರೋಹಣ ಮತ್ತು ಸುರಕ್ಷತಸ ಪ್ರತಿಜ್ಞೆ ಮಾಡುವುದರ ಮೋಲಕ ಪ್ರಾರಂಭವಾಯಿತು. ನಂತರ ವೇದಿಕೆ ಕಾರ್ಯಕ್ರಮದಲ್ಲಿ ಪ್ರಾರ್ಥನೆ ಮತ್ತು ದೀಪ ಹಚ್ಚುವುರ ಮೂಲಕ ಉದ್ಘಾಟನೆ ಮಾಡಲಾಯಿತು. ಕಾರ್ಯಕ್ರಮ ಪ್ರಾರಂಭದಲ್ಲಿ ಸುರಕ್ಷತಾ ನಾಟಕ ವಿಭಾಗದಲ್ಲಿ ಬಹುಮಾನಗಳಿಸಿದ ತಂಡದಿಂದ ನಾಟಕ ಪ್ರದರ್ಶನ ಮಾಡಿಸಲಾಯಿತು.

ಸುರಕ್ಷತಾ ವಿಭಾಗದಲ್ಲಿ ಸಾಧನೆ ಮಾಡಿದ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಡೆಪ್ಯೂಟಿ ಮ್ಯಾನೇಜರ್ ಎಂ.ಎಂ.ನಾಡಿಗೇರ್ ರವರಿಗೆ ಸುರಕ್ಷತಾ ಸೇವಾ ಪ್ರಶಸ್ತಿ-2023 ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಿರ್ಲೋಸ್ಕರ್ ಕಾರ್ಖಾನೆಯ ಡಾ.ಪ್ರವೀಣ್ ಕೂಮಾರ್, ,ಉತ್ತಮ ವೈದ್ಯಾಧಿಕಾರಿ ಪ್ರಶಸ್ತಿ, ಮತ್ತು ಸ್ಮಾಯರ್ ಕಾರ್ಖಾನೆಯ ಸುರಕ್ಷತಾ ಅಧಿಕಾರಿ ಶ್ರೀ ಮಾರುತಿ ಪ್ರಸಾದ್ ರವರಿಗೆ ಉತ್ತಮ ಸುರಕ್ಷತಾ ಅಧಿಕಾರಿ, ಸ್ಮಯರ್ ಕಾರ್ಖಾನೆ ಗೆ ಉತ್ತಮ ಸುರಕ್ಷತಾ ಕಾರ್ಖಾನೆ ಮತ್ತು ಜೆ ಎಸ್ ಡಬ್ಲ್ ಕಾರ್ಖಾನೆಯ ಶ್ರೀ ಪ್ರಸಾದ್ ಜಿ ಇವರಿಗೆ ಉತ್ತಮ ಸುರಕ್ಷ ಕಾರ್ಮಿಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

52ನೇ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ ಅಂಗವಾಗಿ ನಡೆಸಲಾದ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇಯತರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ಆಸೀನರಾದ ಎಲ್ಲಾ ಅತಿಥಿ ಮತ್ತು ಅಧ್ಯಕ್ಷ ರಿಂದ ಸುರಕ್ಷತಾ ಸುದಾರಣೆ,ಅಭಿವೃದ್ಧಿ, ಸರ್ಕಾರದ ಯೋಜನೆಗಳು ಮತ್ತು ಮುಂದಿನ ಬಿಕೆವಿರೈಸ್ ಯೋಜನೆಗಳ ಬಗ್ಗೆ ಅದ್ಯಕ್ಷರು ಮತ್ತು ಅತಿಥಿಗಳು ತಮ್ಮ ತಮ್ಮ ಭಾಷಣದಲ್ಲಿ ತಿಳಿಸಿದರು. ಕೊನೆಯಲ್ಲಿ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಸಮಾರಂಭ ಯಶಸ್ವಿಯಾಗಿ ಮುಕ್ತಾಯವಾಗಲು ಕಾರಣರಾದ ಬಳ್ಳಾರಿ ಕೊಪ್ಪಳ ವಿಜಯನಗರ ಜಿಲ್ಲೆಯ ಎಲ್ಲಾ ಕಾರ್ಖಾನೆಗಳ ಆಡಳಿತ ಮಂಡಳಿ ಮತ್ತು ಭಾಗವಹಿಸಿದ ಎಲ್ಲಾರಿಗೂ ಧನ್ಯವಾದಗಳನ್ನು ವಂದನೆಗಳನ್ನು ತಿಳಿಸಿ ಕಾರ್ಯಕ್ರಮ ಮುಕ್ತಾಯವಾಯಿತು.

ಅಚ್ಚುಮೆಚ್ಚಿನ ಮತ್ತು ಅಚ್ಚುಕಟ್ಟಾದ ಕಾರ್ಯಕ್ರಮ ಆಯೋಜಿಸಿದ ಮೆ ಎಸ್ ಎಲ್ ಆರ್ ಮೇಟಾಲಿಕ್ಸ್ ಕಾರ್ಖಾನೆಯ ಆಡಳಿತ ಮಂಡಳಿಗೆ ಬಿಕೆವಿರೈಸ್ ಸಮಿತಿಯಿಂದ ಧನ್ಯವಾದಗಳನ್ನು ತಿಳಿಸಲಾಯಿತು.

ಕಾರ್ಯಕ್ರಮದಲ್ಲಿ ನಿರೂಪಕರಾಗಿ ಕುಮಾರಿ ನಿಧಿ ಅಗರ್ವಾಲ್ ಮತ್ತು ಶ್ರಿ ಜಿ ಎಚ್ ರಮೇಶ್ ಮಾಡಿದರು, ಮುರುಳಿಧರ್ ನಾಡಿಗೇರ್ ಮತ್ತು ಶ್ರೀ ಮಾರುತಿ ಪ್ರಸಾದ್ ಸುರಕ್ಷತಾ ಪ್ರತಿಜ್ಞೆ ನೆಡೆಸಿಕೊಟ್ಟರು.

ಸುರಕ್ಷತಾ ಸೇವಾ ಪ್ರಶಸ್ತಿ ನೀಡಿ ಸನ್ಮಾನಿಸಿದ ಎಲ್ಲರಿಗೂ ಧನ್ಯವಾದಗಳು

ವರದಿ

ಮುರುಳಿಧರ್ ನಾಡಿಗೇರ್
ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ “ರಾಜ್ಯೋತ್ಸವ ಕವಿಗೋಷ್ಠಿ”

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ...

Mohare Hanumantharaya Award ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ‘ಕ್ರಾಂತಿ ದೀಪ ‘ಮಂಜುನಾಥ್ ಅವರಿಗೆ ಸನ್ಮಾನ

Mohare Hanumantharaya Award ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಮೊಹರೆ ಹಣಮಂತರಾಯ...

MESCOM ನವೆಂಬರ್ 23 .ಹೊಳಲೂರು ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಹೊಳಲೂರು ಗ್ರಾಮದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ...

Rotary Club Shimoga ಪ್ರೌಢಾವಸ್ಥೆಯು ದೇಹದಲ್ಲಿ ಅನೇಕ ಬದಲಾವಣೆ ತರುತ್ತದೆ.ಅದನ್ನ ಗಮನಿಸಬೇಕು- ಡಾ.ಮೋಕ್ಷಾ

Rotary Club Shimoga ರೋಟರಿ ಸಂಸ್ಥೆಯು ನಿಸ್ವಾರ್ಥವಾಗಿ ವಿಶ್ವದ ಎಲ್ಲ ಭಾಗಗಳಲ್ಲಿ...