Basavaraj Bommai ಪರಿಶಿಷ್ಟ ಜಾತಿ ಪಟ್ಟಿಯಲ್ಲಿದ್ದರೂ ಮೀಸಲಾತಿ ಸೌಲಭ್ಯದಿಂದ ವಂಚಿತರಾಗಿದ್ದ ಎಡಗೈ ಬಲಗೈ ಸಮುದಾಯದವರಿಗೆ ಒಳ ಮೀಸಲಾತಿ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ತಿಳಿಸಿದ್ದಾರೆ.ಮುಸ್ಲಿಮರಿಗೆ ಇದ್ದ ಶೇ. 4ರಷ್ಟು ಮೀಸಲಾತಿಯನ್ನು ತೆಗೆದುಕೊಂಡು ಅದನ್ನು ಲಿಂಗಾಯಿತ ಹಾಗೂ ಒಕ್ಕಲಿಗರಿಗೆ ತಲಾ ಶೇ.2 ರಷ್ಟು ಹಂಚುವ ನಿರ್ಣಯವನ್ನು ಬಿಜೆಪಿ ಸರ್ಕಾರ ಕೈಗೊಂಡಿದೆ.ಮಾರ್ಚ್ 24 ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯ ನಂತರ ಬಸವರಾಜ್ ಬೊಮ್ಮಾಯಿ ಅವರು ತಮ್ಮ ಸಚಿವ ಸಹೋದ್ಯೋಗಿಗಳ ಜೊತೆ ಸುದ್ದಿಗೋಷ್ಠಿ ನಡೆಸಿ ಸರ್ಕಾರದ ನಿರ್ಣಯಗಳನ್ನು ಪ್ರಕಟಿಸಿದ್ದಾರೆ.Basavaraj Bommai ಸರ್ಕಾರದ ನಿರ್ಣಯಕ್ಕೆ ಒಳ ಮೀಸಲಾತಿ ಹೋರಾಟಗಾರರು ಮತ್ತು ಒಳ ಮೀಸಲಾತಿ ನೀಡುವುದನ್ನ ವಿರೋಧಿಸುತ್ತಿರುವ ಒಳ ಮೀಸಲಾತಿ ಸಂರಕ್ಷಣಾ ಸಮಿತಿಯ ಎರಡು ಗುಂಪುಗಳು ಇದನ್ನ ವಿರೋಧಿಸಿದೆ.
ಪರಿಶಿಷ್ಟ ಜಾತಿ ಒಳ ಮೀಸಲಾತಿ ಹಾಗೂ ಶೇಕಡವಾರುಗಳನ್ನು ಪಟ್ಟಿ ಮಾಡುವುದಾದರೆ,
ಎಡಗೈ-6.0%
ಬಲಗೈ- -5.5%
ಲಂಬಾಣಿ, ಬೋವಿ, ಕೊರಮ, ಕೊರಚ- -4.5%
ಯಾವುದೇ ಗುಂಪಿಗೆ ಸೇರದ ಜಾತಿಗಳಿಗೆ-1.0%
ಪ್ರವರ್ಗ 2ಬಿ ಅಡಿ ಮುಸ್ಲಿಮರಿಗೆ ಶೇ. 4ರಷ್ಟು ಮೀಸಲಾತಿ ಇತ್ತು.
ಈ ಶೇಕಡವಾರಿನಲ್ಲಿ ತಲಾ ಶೇ.2ರಷ್ಟನ್ನು 2ಸಿ ಒಕ್ಕಲಿಗರಿಗೆ, ಮತ್ತು 2 ಡಿ ಲಿಂಗಾಯಿತ ಸಮುದಾಯಕ್ಕೆ ಹಂಚಲಾಗಿದೆ.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.