NSUI ತೀರ್ಥಹಳ್ಳಿಯ ಮುಗ್ಧ ಬಾಲಕಿಯ ನಂದಿತಾಳ ಅಸಹಜ ಸಾವಿನ ಕುರಿತು ಸಿಬಿಐ ತನಿಖೆಗೆ ವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ NSUI ಮನವಿ ಪತ್ರ ಸಲ್ಲಿಸಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರದ ಗೌರವಾನ್ವಿತ ಪ್ರಧಾನಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿಯವರಲ್ಲಿ ಶಿವಮೊಗ್ಗ ಜಿಲ್ಲಾ ಎನ್.ಎಸ್.ಐ.ಯು ವತಿಯಿಂದ ಒತ್ತಾಯಪೂರ್ವಕ ಮನವಿ ಮಾಡಿಕೊಂಡಿದೆ. 2013 ರಲ್ಲಿ ತೀರ್ಥಹಳ್ಳಿಯಲ್ಲಿ ಹಿಂದೂ ಸಮಾಜಕ್ಕೆ ಸೇರಿದ ವಿದ್ಯಾರ್ಥಿನಿ ಕುಮಾರಿ ನಂದಿತಾಳ ಅಸಹಜ ಸಾವಿಗೀಡಾಗಿದ್ದು,ಸದರಿ ಮೃತ ವಿದ್ಯಾರ್ಥಿನಿಯ ಅಸಹಜ ಸಾವಿನ ಕುರಿತು ಅಂದಿನ ಕಾಂಗ್ರೇಸ್ ನೇತೃತ್ವದ ರಾಜ್ಯಸರ್ಕಾರ ಸಿಒಡಿ ತನಿಖೆ ನಡೆಸಿತ್ತು. ಆದರೆ, ಸದರಿ ಸಿಐಡಿ ವರದಿಯ ಬಗ್ಗೆ ಬಿಜೆಪಿ ನಾಯಕರು ಆಕ್ಷೇಪಣೆ ಮಾಡಿದ್ದರು. ಸದರಿ ವಿದ್ಯಾರ್ಥಿ ನಂದಿತಾ ಮೃತಳಾದ ಸಂದರ್ಭದಲ್ಲಿ ರಾಜ್ಯಬಿಜೆಪಿ ಮುಖಂಡರಾದ ಬಿ.ಎಸ್. ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಈಗಿನ ಕರ್ನಾಟಕ ರಾಜ್ಯ ಗೃಹ ಸಚಿವರಾದ ಶ್ರೀ ಆರಗ ಜ್ಞಾನೇಂದ್ರ, ಇನ್ನಿತರರು ಮೇಲ್ಕಂಡ ವಿದ್ಯಾರ್ಥಿಯ ಅಸಹಜ ಸಾವಿಗೆ ಸಂಬಂಧಿಸಿದಂತೆ ಸಿಬಿಐ ತನಿಖೆಗಾಗಿ ಉಗ್ರ ಹೋರಾಟವನ್ನು ಮಾಡಿದ್ದರು.
ಅಲ್ಲದೆ ಅಂದಿನ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಇಂದಿನ ಕೇಂದ್ರ ಗೃಹ ಸಚಿವರು ಆಗಿರುವ ಶ್ರೀ ಅಮಿತಾ ಷಾ ರವರು 2014 ರ ಕರ್ನಾಟಕ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಕುಮಾರಿ ನಂದಿತಾಳ ಮನೆಗೆ ಭೇಟಿ ನೀಡಿ ಅಸಹಜ ಸಾವಿನ ಕುರಿತು ಸಿಬಿಐ ತನಿಖೆ ನಡೆಸಿ ಮುಗ್ಧ ಬಾಲಕಿಯ ಸಾವಿಗೆ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದ್ದರು.
NSUI ಆದರೆ,ಈಗಿನ ಬಿಜೆಪಿ ನೇತೃತ್ವದ ಕರ್ನಾಟಕ ಸರ್ಕಾರ ಹಾಗೂ ತಮ್ಮದೇ ಕೇಂದ್ರ ಬಿಜೆಪಿ ಸರ್ಕಾರ ಮೇಲ್ಕಂಡ ಮುಗ್ಧ ಬಾಲಕಿಯ ಅಸಹಜ ಸಾವಿನ ಕುರಿತು ಸಿಬಿಐ ತನಿಖೆ ನಡೆಸದೆ ಮುಗ್ಧ ಬಾಲಕಿಯ ಸಾವಿಗೆ ನ್ಯಾಯ ದೊರಕಿಸಲು ನಿರ್ಲಕ್ಷ್ಯತನ ತೋರಿರುತ್ತಾರೆ.
ಈ ಕಾರಣ, ತಾವುಗಳು ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭದಲ್ಲಾಗಲಿ ಅಥವಾ ದಾವಣಗೆರೆಯಲ್ಲಿ ನಡೆಯುವ ಬಿಜೆಪಿ ಪಕ್ಷದ “ವಿಜಯ ಸಂಕಲ್ಪ ಯಾತ್ರೆಯ ಮಹಾಸಂಗಮ” ಸಮಾರಂಭದಲ್ಲಿ ಮೇಲ್ಕಂಡ ಮುಗ್ಧ ಬಾಲಕಿಯ ನಂದಿತಾ ಸಾವಿನ ಕುರಿತು ಸಿಬಿಐ ತನಿಖೆಗೆ ಆದೇಶಿಸಿ ಬಾಲಕಿಯ ಸಾವಿಗೆ ನ್ಯಾಯಕೊಡಸಬೇಕಾಗಿ ಕೋರಿದೆ. ಇಲ್ಲವಾದಲ್ಲಿ ಮುಗ್ಧ ಬಾಲಕಿಯ ಶವದ ಮೇಲೆ ರಾಜಕಾರಣ ಮಾಡಿದ ಅಪಕೀರ್ತಿಗೆ ತಮ್ಮ ಪಕ್ಷ ಒಳಗಾಗಲಿದೆ ಎಂದು ಪತ್ರ ದಲ್ಲಿ ತಿಳಿಸಲಾಗಿದೆ.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.