Friday, November 22, 2024
Friday, November 22, 2024

Shimoga Rangayana ರಂಗಾಯಣದಲ್ಲಿ ಮಕ್ಕಳ ಬೇಸಿಗೆ ಶಿಬಿರ

Date:

Shimoga Rangayana ಶಿವಮೊಗ್ಗ ರಂಗಾಯಣವು ರಂಗಭೂಮಿ ತರಬೇತಿ ಕುರಿತು ಚಿಣ್ಣರೊಂದಿಗೆ ಶಿವಮೊಗ್ಗ ರಂಗಾಯಣ ಎಂಬ ಹೆಸರಿನಲ್ಲಿ ಮಕ್ಕಳ ಬೇಸಿಗೆ ಶಿಬಿರವನ್ನು ಶಿವಮೊಗ್ಗ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಏ.11 ರಿಂದ 30 ರವರೆಗೆ ಆಯೋಜಿಸಲಾಗಿದೆ.

ಮಕ್ಕಳಿಗೆ ರಂಗಭೂಮಿಯ ಕುರಿತು ಆಸಕ್ತಿ ಬೆಳೆಸುವಂತಹ ವಿವಿಧ ರೀತಿಯ ಪ್ರಕಾರಗಳನ್ನು ಶಿಬಿರದಲ್ಲಿ ಕಲಿಸಲಾಗುವುದು. ಶಿವಮೊಗ್ಗ ರಂಗಾಯಣವು ಆಯೋಜಿಸುತ್ತಿರುವ ಈ ಶಿಬಿರದಲ್ಲಿ ನಾಟಕ ಕಲೆ ಮತ್ತು ಇದಕ್ಕೆ ಸಂಬಂಧಿಸಿದ ಕಥೆ, ಚಿತ್ರಕಲೆ, ಸಂಭಾಷಣೆ, ಪಾತ್ರ ವೈವಿಧ್ಯತೆ, ನೃತ್ಯ, ಯಕ್ಷಗಾನ, ಕಳರಿ, ಮೈಮ್, ಮುಖವಾಡ ತಯಾರಿ, ಜಾನಪದ ನೃತ್ಯ, ಕರಕುಶಲ ವಸ್ತುಗಳನ್ನು ತಯಾರಿಸುವುದು ಹೀಗೆ ಹಲವು ಮಜಲುಗಳನ್ನು ಪ್ರಾಯೋಗಿಕವಾಗಿ ಅಭ್ಯಾಸ ಮಾಡಿಸುತ್ತ ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಪ್ರೋತ್ಸಾಹಿಸುತ್ತಾ ನಾಟಕಗಳಲ್ಲಿಯೂ ಅವರು ಸಂತೋಷದಿಂದ ತೊಡಗಿಸಿಕೊಳ್ಳುವಂತೆ ಮಾಡಲಾಗುವುದು.

Shimoga Rangayana ಇದಕ್ಕೆ ಪೂರಕವಾಗಿ ಇನ್ನಿತರ ಪ್ರಾಯೋಗಿಕ ಮತ್ತು ಸೈದ್ದಾಂತಿಕ ತರಬೇತಿಗಳನ್ನು ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ನಡೆಸಲಾಗುವುದು. ಮಕ್ಕಳಿಗೆ ಸಂಬಂಧಿಸಿದ ಜಗತ್ತಿನ ಶ್ರೇಷ್ಠ ಚಲನಚಿತ್ರಗಳನ್ನು ಸಹ ಶಿಬಿರದಲ್ಲಿ ಪ್ರದರ್ಶಿಸಲಾಗುವುದು.

ಶಿಬಿರವು ಏ.11 ರಿಂದ 30 ರವರೆಗೆ ನಡೆಯುವುದು. ಶಿಬಿರದ ಕೊನೆ ಎರಡು ದಿನಗಳು ಅಂದರೆ ಏ.29 ಮತ್ತು 30 ರಂದು ಶಿಬಿರದಲ್ಲಿ ಕಲಿಸಿದ ನಾಟಕಗಳನ್ನು, ಕಲೆಗಳನ್ನು ರಂಗಾಯಣದ ಚಿಣ್ಣರ ರಂಗೋತ್ಸವದಲ್ಲಿ ಪ್ರದರ್ಶಿಸಲಾಗುವುದು.
ಒಟ್ಟು 150 ಮಕ್ಕಳು ಈ ಶಿಬಿರದಲ್ಲಿ ಭಾಗವಹಿಸಲು ಅವಕಾಶವಿದೆ. ರಂಗಭೂಮಿಯಲ್ಲಿ ಮತ್ತು ಮಕ್ಕಳ ಶಿಬಿರಗಳನ್ನು ಸಂಘಟಿಸಿ ಅನುಭವವಿರುವ ಕರ್ನಾಟಕದ ಕ್ರಿಯಾಶೀಲ ರಂಗನಿರ್ದೇಶಕರು, ರಂಗಭೂಮಿಯ ನೇಪಥ್ಯ ಕೆಲಸಗಳಲ್ಲಿ ಪರಿಣ ತರಾಗಿರುವ ಸಾಧಕರು, ವಿವಿಧ ಕಲಾಕ್ಷೇತ್ರಗಳಲ್ಲಿ ಪರಿಣ ತಿ ಹೊದಿರುವ ರಾಜ್ಯದ ಕಲಾವಿದರುಗಳು ಮತ್ತು ಶಿವಮೊಗ್ಗ ರಂಗಾಯಣದ ಕಲಾವಿದರು ಈ ಶೀಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕೆಲಸ ನಿರ್ವಹಿಸಲಿದ್ದಾರೆ.

ಶಿಬಿರದಲ್ಲಿ ಭಾಗವಹಿಸುವ ಒಂದು ಮಗುವಿಗೆ ಪ್ರವೇಶ ಶುಲ್ಕ ರೂ.1,500 ಆಗಿರುತ್ತದೆ. ಅರ್ಜಿ ಶುಲ್ಕ ರೂ.10/- ಆಗಿರುತ್ತದೆ. 08 ರಿಂದ 15 ವರ್ಷ ವಯೋಮಾನದ ಮಕ್ಕಳು ಪಾಲ್ಗೊಳ್ಳಬಹುದು.

ಆಸಕ್ತರು ಅರ್ಜಿಯನ್ನು ಏ.01 ರಿಂದ ಶಿವಮೊಗ್ಗ ರಂಗಾಯಣ ಕಚೇರಿಯಲ್ಲಿ ಪಡೆದು ಏ.09 ರ ಸಂಜೆ 05 ಗಂಟೆಯೊಳಗೆ ಶಿವಮೊಗ್ಗ ರಂಗಾಯಣ ಕಚೇರಿ, ಸುವರ್ಣ ಸಂಸ್ಕೃತಿ ಭವನ, ಹೆಲಿಪ್ಯಾಡ್ ಹತ್ತಿರ, ಅಶೋಕನಗರ, ಶಿವಮೊಗ್ಗ ಇಲ್ಲಿಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣ ಸಂಖ್ಯೆ 08182-25653 ನ್ನು ಸಂಪರ್ಕಿಸಬಹುದೆಂದು ಶಿವಮೊಗ್ಗ ರಂಗಾಯಣ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ..

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Club Shimoga ಪ್ರೌಢಾವಸ್ಥೆಯು ದೇಹದಲ್ಲಿ ಅನೇಕ ಬದಲಾವಣೆ ತರುತ್ತದೆ.ಅದನ್ನ ಗಮನಿಸಬೇಕು- ಡಾ.ಮೋಕ್ಷಾ

Rotary Club Shimoga ರೋಟರಿ ಸಂಸ್ಥೆಯು ನಿಸ್ವಾರ್ಥವಾಗಿ ವಿಶ್ವದ ಎಲ್ಲ ಭಾಗಗಳಲ್ಲಿ...

M.B.Patil 2025 ಫೆಬ್ರವರಿ 11.ಜಾಗತಿಕ ಹೂಡಿಕೆದಾರರ ಸಮಾವೇಶ.ಪೂರ್ವಸಿದ್ಧತೆ- ಸಚಿವ ಎಂ.ಬಿ.ಪಾಟೀಲ್

M.B.Patil 2025ರ ಫೆಬ್ರವರಿ 11 ರಿಂದ 14ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ...