Ugadi ಯುಗಾದಿ ಮರಳಿ ಬರುತಿದೆ
“ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ”
ಯುಗಾದಿಯ ಬಗ್ಗೆ ಮೇಲಿನ ಪದಗಳನ್ನು ಕೇಳುವುದು ಮತ್ತು
ಹಾಡಿಕೊಳ್ಳುವುದೇ ಸಂತಸದ ಸಂಗತಿಯಾಗಿತ್ತು.
ಈ ಹಿಂದಿನ ಒಂದೆರಡು ವರ್ಷಗಳಲ್ಲಿ ಕೊರೋನ ಹಾವಳಿಯ ಭಯದಿಂದ ಮೇಲಿನ ಪದವನ್ನು ಬದಲಾಯಿಸಿ ಹಾಡಬೇಕಿದೆ.
“ಯುಗಯುಗಾದಿ ಕಳೆದರೂ ಎಚ್3ಎನ್2ವೈರಸ್
ಭಯ ತರುತಿದೆ ಹೊಸ ವರುಷಕೆ ಹೊಸ ಹೊಸ ವೈರಸ್ ಗಳ ಭಯ ಮನದಲಿ ಬರುತಿದೆ”
ಈಗ ಕೊರೋನ ಭಯ ಸ್ವಲ್ಪ ಕಡಿಮೆಯಾದಂತೆ
ಎನಿಸುತ್ತಿರುವಾಗಲೇ ಎಚ್3ಎನ್2ವೈರಸ್ ಕಾಲಿಡುತ್ತಿದೆ ಎಂಬ ಮಾಹಿತಿ ಕೇಳುತ್ತಿದ್ದೇವೆ.
Ugadi ವಸಂತ ಋತುವಿನ ಚೈತ್ರಮಾಸದ ಮೊದಲನೇ ದಿನವೇ ಹೊಸ ಸಂವತ್ಸರದಿಂದ ಆರಂಭವಾಗುವ “ಯುಗಾದಿ”ಹಬ್ಬ. ಹಿರಿಯ ಕವಿವರ್ಯರಾದ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ರಚಿಸಿ
ರುವ ಯುಗಾದಿ ಗೀತೆಯಲ್ಲಿ ಬೆಲ್ಲದ ಸವಿ-ಜೀವನದ ಸಿಹಿ ಕಹಿ ಅಡಗಿದೆ.
ಇಲ್ಲಿಯವರೆಗೂ ಕೊರೋನ ದಿಂದ ಸಂಕಟ ಪಟ್ಟ ಶುಭಕೃತ್ ನಾಮ ಸಂವತ್ಸರ ಶೋಭನಕೃತ್ ಸಂವತ್ಸರದ ಆಗಮನದಿಂದ ಹಿಂದೆ ಸರಿಯುತ್ತಿದೆ.
ಶೋಭನಕೃತ್ ನಾಮ ಸಂವತ್ಸರದ ಆರಂಭದಲ್ಲೇ ಕೊರೋನದ ಭೀತಿ ಸ್ವಲ್ಪ ಕಡಿಮೆಯಾದಂತೆನಿಸಿದೆ.
ಶಿಶಿರ ಋತುವಿನಲ್ಲಿ ಎಲೆಗಳು ಉದುರಿಹೋದ ಗಿಡಮರಗಳು ಚೈತ್ರಮಾಸದ ಆರಂಭದಲ್ಲೇ ಚಿಗುರುವುದಕ್ಕೆ ಪ್ರಾರಂಭವಾಗುತ್ತವೆ.
ಕೋಗಿಲೆಗಳ ಸುಶ್ರಾವ್ಯ ಕಂಠದಿಂದ ಕುಹೂ ಕುಹೂ
ರಾಗ ಧ್ವನಿ ಕೇಳಿಬರುತ್ತದೆ.
ವಸಂತ ಋತು ಬಂತೆಂದರೆ ಸಾಕು ಜಗಕೆಲ್ಲ ಬೆಳಕು
ನೀಡುವ ಸೂರ್ಯದೇವನೂ ತನ್ನ ಹೊಂಗಿರಣಗಳಿಂದ ನಮ್ಮ ಮೈ ಮನಗಳನ್ನು
ಹುರಿದುಂಬಿಸಿ ನವೋಲ್ಲಾಸ ಚೈತನ್ಯ ತುಂಬುತ್ತಾನೆ.
ಯುಗಾದಿ ಹಬ್ಬದಲ್ಲಿ ಬೇವು ಬೆಲ್ಲದ ಮಿಶ್ರಣವನ್ನು
ಸವಿಯುವುದು ವಾಡಿಕೆ.ಅಂದರೆ ಜೀವನದಲ್ಲಿ
ಬರುವ ಸುಖ ದುಃಖಗಳನ್ನು ಸಮ ಚಿತ್ತದಿಂದ
ಸ್ವೀಕರಿಸಬೇಕು ಎಂದರ್ಥ.
ಯುಗಾದಿ ಹಬ್ಬದಲ್ಲಿ ಬರೀ ಬೇವು ಬೆಲ್ಲವನ್ನು
ತಿನ್ನುವುದಷ್ಟೇ ಮುಖ್ಯವಲ್ಲ,ನಮ್ಮೊಳಗಿನ ಕಹಿಯನ್ನು ಸಂಪೂರ್ಣವಾಗಿ ಕಳೆದುಕೊಂಡು
ಪ್ರೀತಿ ವಿಶ್ವಾಸದ ಜೇನಿನಂತಹ ಸಿಹಿನುಡಿಗಳನ್ನಾಡುವುದೇ ಮುಖ್ಯವಾದ ಸಂಕಲ್ಪವಾಗಬೇಕು.
ಹಿರಿಯರನ್ನು ಗೌರವಿಸಬೇಕು,ಕಿರಿಯರನ್ನು ಪ್ರೀತಿಸಬೇಕು .
“ಉಂಡದ್ದೇ ಉಗಾದಿ,ಮಿಂದದ್ದೇದೀವಳಿಗೆ” ಎನ್ನುವ ನಾಣ್ಣುಡಿಯಂತೆ ಹಬ್ಬಗಳಂದು ಹಿತಮಿತವಾದ ಊಟವನ್ನು ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳೋಣ.
ಕುಟುಂಬದವರ ಜೊತೆ ಸೇರಿ ಸಂಭ್ರಮ ಪಟ್ಟರೆ
ಅದೇ ಹಬ್ಬದ ವೈಶಿಷ್ಟ್ಯವಾಗಿರುತ್ತದೆ.
ಮತ್ತೊಂದು ವಿಶೇಷವೆಂದರೆ ಹಬ್ಬದ ಆಚರಣೆಯ ಜೊತೆಯಲ್ಲೇ ಮುಖಕ್ಕೆ ಮಾಸ್ಕ್ ಹಾಕುವುದನ್ನು
ಮತ್ತು ಅಂತರವನ್ನು ಕಾಯ್ದುಕೊಳ್ಳುವುದನ್ನೂ ಬಿಡುವ ಹಾಗಿಲ್ಲ.ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಎನ್ನುವ ಹಾಗೆ ಆರೋಗ್ಯವನ್ನು ರಕ್ಷಿಸುವ ಕಡೆಗೆ ಗಮನ ಕೊಡಬೇಕು.
ಹಗಲಿರುಳೂಗಡಿಕಾಯುವ ನಮ್ಮಯೋಧರ ರಕ್ಷಣೆಗೆ ಮತ್ತುನಮಗೆ ಅನ್ನ ಕೊಡುವ ರೈತನ ಸುಕ್ಷೇಮಕ್ಕಾಗಿ ಪ್ರಾರ್ಥಿಸೋಣ.
ಮತ್ತೆಮತ್ತೆ ನನ್ನ ಕಿವಿಯಲ್ಲಿ ವರಕವಿ ದ.ರಾ.ಬೇಂದ್ರೆಯವರ ಯುಗಾದಿಯ ಕವನ ರಿಣಗುಡುತ್ತಿದೆ.
“ಯುಗಯುಗಾದಿ ಕಳೆದರೂ ಯುಗಾದಿ ಮರಳಿ
ಬರುತಿದೆ. ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ”
ಎಲ್ಲರಿಗೂ ಒಳಿತಾಗಬೇಕು,ಎಲ್ಲರೂ ಒಳ್ಳೆಯ
ಮನಸ್ಸಿನಿಂದ ಕೂಡಿದವರಾಗಬೇಕು.
ಎಲ್ಲರಿಗೂ ಹೊಸ ಯುಗಾದಿ ಶೋಭನಕೃತ್ ನಾಮ ಸಂವತ್ಸರದ ಶುಭಾಶಯಗಳು.
ಲೇಖಕ:ಎನ್.ಜಯಭೀಮ್ ಜೊಯ್ಸ್, ಶಿವಮೊಗ್ಗ
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.