Congress Meeting in Chikmagaluru ಚಿಕ್ಕಮಗಳೂರು, ನಗರದ ಸಹರಾ ಶಾದಿಮಹಲ್‌ನಲ್ಲಿ ಜಿಲ್ಲಾ ಮುಸ್ಲೀಂ ಒಕ್ಕೂಟದ ಸಹಯೋಗದೊಂದಿಗೆ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮುಸ್ಲೀಂ ಸಮುದಾಯ ಮುಖಂಡರುಗಳು ಕಾಂಗ್ರೆಸ್ ನಾಯಕರ ವಿರುದ್ಧ ಸೋಮವಾರ ಅಸಮಾಧಾನ ಹೊರಹಾಕಿದರು.
ಈ ವೇಳೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಕೆ.ಮಹಮ್ಮದ್ ಹಿಜಾಬ್, ಅಲಾಲ್ ಕಟ್, ಹಿಂದೂ ದೇವಾಲಯಗಳ ಜಾತ್ರೆಗಳಲ್ಲಿ ಮುಸ್ಲೀಂರಿಗೆ ವ್ಯಾಪಾರಕ್ಕೆ ಅವಕಾಶ ನೀಡದಿರುವ ಸಂಬಂಧವಾಗಿ ಜಿಲ್ಲಾ ಕಾಂಗ್ರೆಸ್ ನಾಯಕರು ನಿರೀಕ್ಷಿತ ಮಟ್ಟದಲ್ಲಿ ಸ್ಪಂದಿಸದಿರುವ ಕಾರಣ ಈ ಸಭೆ ನಡೆಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಾಡಿನಾದ್ಯಂತ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ, ಯುವಕರ ಹತ್ಯೆ ಮತ್ತು ಧಾರ್ಮಿಕ ಕೇಂದ್ರಗಳ ಮೇಲೆ ದಾಳಿಯ ವಿಚಾರಗಳು ಎಲ್ಲರಿಗೂ ತಿಳಿದಿರುವುದಾಗಿದೆ. ಆದರೆ ಇಂತಹ ಸಂದರ್ಭದಲ್ಲಿ ನಾವು ಸದಾ ಬೆಂಬಲಿ ಸುತ್ತಾ ಬರುತ್ತಿರುವ ಪಕ್ಷದ ಮುಖಂಡರು ಸೂಕ್ತ ರೀತಿಯಲ್ಲಿ ಜನಾಂಗಕ್ಕೆ ಸ್ಪಂದಿಸದಿರುವುದು ನೋವುಂಟು ಮಾಡಿದೆ ಎಂದು ಹೇಳಿದರು.
ಇಂತಹ ಘಟನೆಗಳು ಸಂಭವಿಸಿದಾಗ ನೊಂದಿರುವವರಿಗೆ ಸಮಾಜದ ಮುಂದೆ ನಿಂತು ಘಟನೆಯನ್ನು ಖಂ ಡಿಸುವುದು, ಪ್ರತಿಭಟಿಸುವುದರ ಮೂಲಕ ನಿಮ್ಮೊಂದಿಗೆ ನಾವಿದ್ದೇವೆ ಎಂಬುದನ್ನು ತೋರ್ಪಡಿಸಬೇಕು. ಆದರೆ ಇದ್ಯಾವ ಕೆಲಸಗಳು ಜಿಲ್ಲಾ ಕಾಂಗ್ರೆಸ್ ನಾಯಕರುಗಳು ನಡೆಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ ರಾಜ್ಯ ನಾಯಕರು ವಿರುದ್ಧ ಅವಹೇಳನಕಾರಿ ಹೇಳಿಕೆ ಅಥವಾ ಸಾಮಾಜಿಕ ಹೋರಾಟಗಳಲ್ಲಿ ನೂರಾರು ಸಂಖ್ಯೆಯಲ್ಲಿ ಅಲ್ಪಸಂಖ್ಯಾತ ಮುಖಂಡರುಗಳು ಜಾತಿ, ಧರ್ಮ ನೋಡದೇ ಹೋರಾಟಕ್ಕೆ ಮುಂದಾ ಗಲಾಗುತ್ತಿದೆ. ಅದೇ ಮುಸ್ಲೀಂ ಸಮುದಾಯದ ಪ್ರವಾದಿಯರು ಹಾಗೂ ಕುರಾನ್ ವಿರುದ್ಧ ಇಲ್ಲಸಲ್ಲದ ಹೇಳಿಕೆ ನೀಡಿದರೆ ಕೂಡಲೇ ಧಾವಿಸದೇ ಅಸಡ್ಡೆ ತೋರುತ್ತಿದ್ದಾರೆ ಎಂದರು.
ಬಾಬುಬುಡನ್‌ಗಿರಿ ವಿಚಾರದಲ್ಲಿ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಆರ್.ಎಸ್.ಎಸ್. ಏಜೆಂಟರಂತೆ ವರ್ತಿಸುತ್ತಿದ್ದಾರೆ.
ಗಿರಿಯ ಪೂಜೆಯ ವಿಚಾರದಲ್ಲಿ 2 ಸಮುದಾಯವನ್ನು ಸರಿಸಮಾನವಾಗಿ ತೆಗೆದುಕೊಂಡು ಅರ್ಚಕರನ್ನು ನೇಮಕ ಮಾಡಬೇಕು. ಆದರೆ ಎಂಟರ ಪೈಕಿಯಲ್ಲಿ ಓರ್ವ ಬಿಜೆಪಿ ಮುಸ್ಲೀಂ ವ್ಯಕ್ತಿಯನ್ನೇ ನೇಮಿಸಿ ಸಮುದಾಯವು ಆಚರಣೆ ನಡೆಸದಂತೆ ಅನ್ಯಾಯ ಮಾಡಲಾಗಿದೆ ಎಂದು ದೂರಿದರು.
ಸಿಡಿಎ ಮಾಜಿ ಅಧ್ಯಕ್ಷ ಅತೀಖ್ ಖೈಸರ್ ಮಾತನಾಡಿ ಪ್ರಸ್ತುತ ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೂ ಮುಸ್ಲಿಂ ಜನಾಂಗದ ಮೇಲೆ ದೌರ್ಜನ್ಯವು ನಡೆಯುತ್ತಿದೆ. ಈ ಬಗ್ಗೆ ಪ್ರತಿಯೊಬ್ಬರು ಎಚ್ಚೆತ್ತುಕೊಳ್ಳಬೇಕು. ಸಮಾಜ ದಲ್ಲಿ ನಮ್ಮ ಹಿರಿಯರು ಉಳಿಸಿರುವಂತಹ ಸಂಸ್ಕೃತಿಯನ್ನು ಎತ್ತಿ ಹಿಡಿಯಬೇಕು. ಅದೇ ರೀತಿ ಜಿಲ್ಲೆ ಹಾಗೂ ರಾಜ್ಯ ದಲ್ಲಿ ಸಂಪೂರ್ಣವಾಗಿ ಬಿಜೆಪಿಯನ್ನು ತೊಲಗಿಸಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಪಣ ತೊಡಬೇಕು ಎಂದರು.
ದೇಶದಲ್ಲಿ 30 ಕೋಟಿಯಷ್ಟು ಜನಸಂಖ್ಯೆಯನ್ನು ಹೊಂದಿರುವ ಮುಸ್ಲಿಂ ಸಮುದಾಯವು ಬಿಜೆಪಿಯ ದುರಾಡಳಿತದಿಂದ ಅನೇಕ ಸಮಸ್ಯೆಗಳನ್ನು ಎದುರಿಸಿದೆ. ಸ್ವಾತಂತ್ಯ ಪೂರ್ವದಲ್ಲಿ ದೇಶ ವಿಭಜನೆಯಾದಂತಹ ಸಂ ದರ್ಭದಲ್ಲಿ ಭಾರತೀಯ ಮುಸಲ್ಮಾನ್ ಬಾಂಧವರಿಗೆ ನೆರೆದೇಶಕ್ಕೆ ತೆರಳಲು ಅವಕಾಶವಿತ್ತು. ಆದರೆ ಭಾರತದಲ್ಲಿ ಮುಸ್ಲಿಂ ಜನಾಂಗದ ಇತಿಹಾಸವಿರುವ ಹಿನ್ನೆಲೆಯಲ್ಲಿ ಭಾರತದಲ್ಲೇ ನೆಲೆಕಂಡುಕೊಂಡು ಜೀವನ ನಡೆಸುತ್ತಿದ್ದಾರೆ ಎಂದರು.
ಮುಸ್ಲಿಂ ಜನಾಂಗದಲ್ಲಿ ಪುನರ್ಜನ್ಮ ಎಂಬುದು ಇರುವುದಿಲ್ಲ. ಇರುವುದಾದರೆ ಮುಂದಿನ ಜನ್ಮದಲ್ಲೂ ತಾವು ಮುಸ್ಲಿಂ ವ್ಯಕ್ತಿಯಾಗಿ ಹುಟ್ಟಿ ಹಾಗೂ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರನ್ನಾಗಿ ಕಾರ್ಯನಿರ್ವ ಹಿಸುವಂತೆ ಆಶಯ ವ್ಯಕ್ತಪಡಿಸಿದರು.
ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಜಿಲ್ಲಾಧ್ಯಕ್ಷ ರಾಮ್‌ದಾಸ್ ಮಾತನಾಡಿ ಕಾಂಗ್ರೆಸ್ ಪಕ್ಷಕ್ಕೂ ಮುಸ್ಲಿಂ ಸಮುದಾಯಕ್ಕೆ ಅವಿನಾಭವ ನಂಟಿದೆ. ಎಲ್ಲರೂ ಒಗ್ಗಟ್ಟಿನಿಂದ ನಡೆದರೆ ಮಾತ್ರ ಪಕ್ಷವನ್ನು ಸದೃಢಗೊಳಿ ಸಲು ಸಾಧ್ಯ. ಆ ನಿಟ್ಟಿನಲ್ಲಿ ಹಿರಿಯರೊಂದಿಗೆ ಮಾತನಾಡಿ ಯಾವುದೇ ಸಮಸ್ಯೆಗಳಿದ್ದರೂ ಸಹ ಬಗೆಹರಿಸಲಾಗುತ್ತದೆ ಎಂದು ತಿಳಿಸಿದರು.
Congress Meeting in Chikmagaluru ಈ ಸಂದರ್ಭದಲ್ಲಿ ಎಐಸಿಸಿ ಕೋಡಿನೇಟರ್ ಜಿಲಾನ್ ತಲ, ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಸಿರಾಜ್, ವಿಧಾನ ಪರಿಷತ್ ಮಾಜಿ ಸದಸ್ಯ ಎ.ವಿ. ಗಾಯತ್ರಿ ಶಾಂತೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಡಾ. ಡಿ.ಎಲ್.ವಿಜಯ್‌ಕುಮಾರ್, ಎಂ.ಎಲ್.ಮೂರ್ತಿ, ಜಿ.ಪಂ. ಮಾಜಿ ಅಧ್ಯಕ್ಷ ಎ.ಎನ್.ಮಹೇಶ್, ವಿಧಾನಸಭಾ ಆಕಾಂಕ್ಷಿಗಳಾದ ಬಿ.ಹೆಚ್.ಹರೀಶ್, ಹೆಚ್.ಡಿ. ತಮ್ಮಯ್ಯ, ಮಹಡಿಮನೆ ಸತೀಶ್, ಯುತ್ ಕಾಂಗ್ರೆಸ್ ಕಾರ್ಯದರ್ಶಿ ಶಹಬುದ್ದೀನ್, ಮುಖಂಡರುಗಳಾದ ಕೆ.ಎಸ್.ಶಾಂತೇಗೌಡ, ರಸೂಲ್‌ಖಾನ್, ಹಿರೇಮಗಳೂರು ರಾಮಚಂದ್ರ, ಬಾಬು, ಜಹೀರ್ ಅಹ್ಮದ್, ರಿಯಾಜ್ ಖಾನ್, ಜಂಶೀದ್ ಅಹ್ಮದ್, ಸಲೀಂ ಮತ್ತಿತತರು ಉಪಸ್ಥಿತರಿದ್ದರು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.