Dr. Dhananjaya Sarji ಡಬಲ್ ಎಂಜಿನ್ ಬಿಜೆಪಿ ಸರಕಾರ ಕೈಗೊಂಡ ಮಹತ್ತರವಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರತಿಯೊಬ್ಬರಿಗೂ ಮುಟ್ಟಿಸುವಂತಹ ಕೆಲಸವನ್ನು ನಾವೆಲ್ಲರೂ ಸೇರಿ ಮಾಡಬೇಕಿದೆ ಎಂದು ಬಿಜೆಪಿ ಪ್ರಣಾಳಿಕೆ ಸಲಹಾ ಅಭಿಯಾನ ಸಮಿತಿ ಜಿಲ್ಲಾಸಂಚಾಲಕರಾದ ಡಾ.ಧನಂಜಯ ಸರ್ಜಿ ಹೇಳಿದರು.
ನಗರದ ಸಾಗರ ರಸ್ತೆಯ ಹರ್ಷ ದಿ ಫರ್ನ್ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಅಟಲ್ ಬಿಹಾರಿ ವಾಜಪೇಯಿ ಅವರು ಅಷ್ಟೊಂದು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡರೂ ನಾವು ಸರಿಯಾಗಿ ಜನರಿಗೆ ಮುಟ್ಟಿಸುವ ಕೆಲಸವನ್ನು ಮಾಡಲಿಲ್ಲ. ಈಗ ಬಿಜೆಪಿ ಡಬಲ್ ಎಂಜಿನ್ ಸರಕಾರ ಕೈಗೊಂಡಂತಹ ಮಹತ್ತರ ಅಭಿವೃದ್ಧಿ ಕಾರ್ಯಗಳನ್ನು ಜನಸಾಮಾನ್ಯರಿಗೆ ತಿಳಿಸುವ ಮೂಲಕ ಪ್ರಣಾಳಿಕೆಗೆ ಸಲಹೆ ಪಡೆಯುವಂತಹ ಕೆಲಸವನ್ನು ಪಕ್ಷದ ಕಾರ್ಯಕರ್ತರು ಮಾಡಬೇಕು. ಬಿಜೆಪಿ ಪ್ರಬುದ್ಧರ ಪಕ್ಷ. ಕೊಠಡಿಯಲ್ಲಿ ಕುಳಿತು ಪ್ರಣಾಳಿಕೆ ಸಿದ್ಧಪಡಿಸುವಂತ ಪ್ರಬುದ್ಧತೆ ಇದೆ. ಆದರೆ, ಜನರ ಬೇಕು, ಬೇಡಗಳನ್ನು ತಿಳಿಯುವ ಸಲುವಾಗಿ ಜನರ ಹತ್ತಿರ ಹೋಗಿ ಸ್ಪಂದಿಸುತ್ತಿದೆ. ಇಂತಹ ಕೆಲಸ ಬಿಜೆಯಿಂದ ಮಾತ್ರ ಸಾಧ್ಯ ಎಂದು ನಾವು ಧೈರ್ಯವಾಗಿ ಹೇಳಬಹುದು ಎಂದರು.
Dr. Dhananjaya Sarji ಕೇಂದ್ರ ಸರಕಾರ 3 ಕೋಟಿ ನಿರ್ಮಿಸಿಕೊಟ್ಟಿದೆ. ರಾಜ್ಯದಲ್ಲಿ 7 ಲಕ್ಷ 50 ಸಾವಿರ ಮನೆಗಳ ನಿರ್ಮಾಣಕ್ಕೆ ಯೋಜನೆ ಸಿದ್ಧಗೊಂಡಿದೆ. ಈವರೆಗೂ ವಿದ್ಯುತ್ ಕಾಣದ 19 ಸಾವಿರ ಹಳ್ಳಿಗಳಿಗೆ ಬೆಳಕನ್ನು ನೀಡಿದೆ. ನಮ್ಮ ಜಿಲ್ಲೆಯ ಚಿತ್ರಶೆಟ್ಟಿದಹಳ್ಳಿ ಕೂಡ ಸೇರಿದೆ. 2014ಕ್ಕೆ ಮೊದಲು ಒಂದು 11.3 ಕಿ.ಮೀ. ಹೈವೇ ಆಗ್ತಿತ್ತು, ಇವತ್ತು ಒಂದು ದಿನಕ್ಕೆ 33.6 ಕಿ.ಮೀ ಹೈವೇ ಅಭಿವೃದ್ಧಿಯಾಗುತ್ತಿದೆ, ಸ್ವಾತಂತ್ರ್ಯ ಬಂದ ನಂತರ 65 ವರ್ಷಗಳಲ್ಲಿ 6750 ಕಿ.ಮೀ. ಹೈವೇ ಅಭಿವೃದ್ಧಿಯಾಗಿದ್ದರೆ, ಕೇವಲ 8 ವರ್ಷಗಳಲ್ಲಿ 13 ಸಾವಿರ ಐದುನೂರು ಕಿ.ಮೀ. ಹೈವೇ ಅಗಿದೆ. ಅಲ್ಲದೇ 8.50 ಕೋಟಿ ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಬಯಲು ಶೌಚಕ್ಕೆ ಕಡಿವಾಣ ಹಾಕಿದೆ. ಇದು ಅಭಿವೃದ್ಧಿಯ ವೇಗಕ್ಕೆ ಸಾಕ್ಷಿಯಾಗಿದೆ. ಈ ಎಲ್ಲ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ಮುಟ್ಟಿಸುವ ಕೆಲಸವಾಗಬೇಕಿದೆ ಎಂದರು.
ಇನ್ನು ರಾಜ್ಯದಲ್ಲಿ 2014 ಮೊದಲು 65 ವರ್ಷದಲ್ಲಿ ಏಳು ವಿಮಾನ ನಿಲ್ದಾಣಗಳು ಮಂಜೂರಾಗಿದ್ದರೆ, 2014 ರ ನಂತರ ಏಳು ವಿಮಾ ನಿಲ್ದಾಣಗಳು ಮಂಜೂರಾಗಿವೆ. ರೈಲ್ವೆಗೆ ಸಂಬಂಧಿಸಿದಂತೆ 2014 ಮೊದಲು 16 ಕಿ.ಮೀ. ಇದ್ದರೆ, ಕೇವಲ 8 ವರ್ಷದಲ್ಲಿ 1600 ಕಿ.ಮೀ. ಅಭಿವೃದ್ಧಿಯಾಗಿದೆ. ಕೇವಲ ಬೆಂಗಳೂರಿಗೆ ರೈಲ್ವೆಗೆ ಬಂದಂತಹ ಅನುದಾನ 65 ಸಾವಿರ ಕೋಟಿ ರೂ., ರಾಜ್ಯಕ್ಕೆ ರಸ್ತೆ ಅಭಿವೃದ್ಧಿಗೆ ಬಂದಂತಹ ಅನುದಾನ 1.15 ಲಕ್ಷ ಕೋಟಿ ರೂ., 2014 ಕ್ಕಿಂತ ಮೊದಲು ಕೇವಲ ಏಳು ಕಿ.ಮೀ.ಇದ್ದ ಮೆಟ್ರೋ ಈಗ 52 ಕಿ.ಮೀ.ಆಗಿದೆ, ಇನ್ನೂ ಮೂರು ವರ್ಷದಲ್ಲಿ 122 ಕಿ.ಮೀ.ಆಗಲಿದೆ. ಇದು ಡಬಲ್ ಎಂಜಿನ್ ಸರಕಾರ ಸಾಧನೆ. ಈ ಸಾಧನೆಗಳನ್ನು ಜನರಿಗೆ ತಿಳಿಸಬೇಕಿದೆ ಎಂದರು.
ಕೋವಿಡ್ ಸಂದರ್ಭ 1ಲಕ್ಷದ 92 ಸಾವಿರ ವಿಮಾನಗಳನ್ನು ಹಾರಾಟ ಮಾಡಿಸಿ, ಭಾರತದಿಂದ ಹೊರ ಹೋಗಿದ್ದ ಒಂದು ಕೋಟಿ 90 ಲಕ್ಷ ಜನರನ್ನು ಸುರಕ್ಷಿತವಾಗಿ ಕರೆ ತಂದವರು ಮೋದಿಜೀ ಅವರು. ಬೇರೆ ದೇಶಗಳಿಂದ ಕೋವಿಡ್ ವ್ಯಾಕ್ಸಿನ್ ಸಾಲವಾಗಿ ಪಡೆಯಲಾಗುತ್ತಿತ್ತು. ಅಂತಹ ಸಂದರ್ಭ 250 ಕೋಟಿ ಡೋಸ್‌ನ್ನು ಪ್ರತಿಯೊಬ್ಬರಿಗೂ ಉಚಿತವಾಗಿ ಕೊಟ್ಟು 100 ಬೇರೆ ದೇಶಗಳಿಗೆ ಉಚಿತವಾಗಿ ವ್ಯಾಕ್ಸಿನೇಷನ್ ನ್ನು ನೀಡುವ ಮೂಲಕ ಭಾರತಕ್ಕೆ ಶಕ್ತಿ ತುಂಬಿದ್ದು ಬಿಜೆಪಿ ಸರಕಾರ. ಮೊದಲು ವೈದ್ಯರು, ದಾದಿಯರಿಗೆ ವ್ಯಾಕ್ಸಿನ್ ನೀಡಿ ಜನ ಸೇವೆಗೆ ಅನುಕೂಲ ಮಾಡಿಕೊಟ್ಟಿದ್ದು ಹೆಮ್ಮೆಯ ಸಂಗತಿ ಎಂದರು.
ಬಿಜೆಪಿ ನಗರ ಅಧ್ಯಕ್ಷ ಎನ್.ಕೆ.ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಶಾಸಕರಾದ ಕೆ.ಎಸ್.ಈಶ್ವರಪ್ಪ, ವಿಧಾನ ಪರಿಷತ್ ಸದಸ್ಯರಾದ ಎಸ್.ರುದ್ರೇಗೌಡ್ರು, ಡಿ.ಎಸ್.ಅರುಣ್, ನಗರ ಚುನಾವಣಾ ಪ್ರಭಾರಿಗಳಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮುಖಂಡರಾದ ಕೆ.ಇ.ಕಾಂತೇಶ್, ಗಿರೀಶ್ ಪಟೇಲ್, ಎಸ್.ಎಸ್.ಜ್ಯೋತಿಪ್ರಕಾಶ್, ಮಹಾನಗರ ಪಾಲಿಕೆ ಮೇಯರ್ ಶಿವಕುಮಾರ್ ಹಾಜರಿದ್ದರು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
