K. S. Eshwarappa ಶಿವಮೊಗ್ಗದಲ್ಲಿ ಶಾಸಕ ಕೆ.ಎಸ್. ಈಶ್ವರಪ್ಪ ಅವರು,
ಶಿವಮೊಗ್ಗ ಡಿಸಿ ಕಚೇರಿ ಮೇಲೆ ಯುವಕನೊಬ್ಬ ಆಜಾನ್ ಕೂಗಿದ ವಿಚಾರ,
ಎಸ್.ಡಿ.ಪಿ.ಐ. ಕೋಮು ಸೌಹಾರ್ಧತೆಯನ್ನು ಹಾಳು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ.
ಇವರ ವಿರುದ್ಧ ಸರಿಯಾದ ಕ್ರಮ ತೆಗೆದುಕೊಳ್ಳಬೇಕು.
ನಾನು ಮುಖ್ಯಮಂತ್ರಿ ಅವರಲ್ಲಿ ಈ ಬಗ್ಗೆ ಮನವಿ ಮಾಡುತ್ತೇನೆ.
ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.
ಇದು ಸಂವಿಧಾನ ವಿರೋಧಿ ಕ್ರಮವಾಗಿದೆ.
ಆಜಾನ್ ಕೂಗಿವ ಬಗ್ಗೆ ಅಲ್ಲಿನ ಶಬ್ಧದ ಬಗ್ಗೆ ಕೋರ್ಟ್ ಹೇಳಿದೆ.
ಸುಪ್ರೀಂ ಕೋರ್ಟ್ ಬಹಳ ಸ್ಪಷ್ಟವಾಗಿ ಹೇಳಿದೆ.
ನಾನು ಕೊಡಗು, ಮಂಗಳೂರಿನಲ್ಲಿ ಆಜಾನ್ ಮೈಕ್ ನಲ್ಲಿ ಕೂಗಿರುವ ಬಗ್ಗೆ ಕೋರ್ಟ್ ವಿಚಾರ ಪ್ರಸ್ತಾಪ ಮಾಡಿದ್ದೇನೆ.
ಜಿಲ್ಲಾಧಿಕಾರಿ ಕಚೇರಿ ಮುಂದೆ ಆಜಾನ್ ಕೂಗಿರುವುದು ಅಕ್ಷಮ್ಯ ಅಪರಾಧ.
ಕೇವಲ CRPC 107 ಸೆಕ್ಷನ್ ಹಾಕಿ ಅವನನ್ನು ಬಿಡಬಾರದು.
ಕೇವಲ ಅವರನ್ನು ಬಿಟ್ಟರೆ ಸಾಲದು, ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.
ವಿಧಾನಸೌಧದಲ್ಲಿ ಕೂಗುತ್ತೇನೆ ಎಂದಿದ್ದು ಕೂಡ ರಾಷ್ಟ್ರದ್ರೋಹ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಪಿ.ಎಫ್.ಐ. ನಲ್ಲಾದರೂ ಇರಲಿ, ಎಸ್.ಡಿ.ಪಿ.ಐ. ಮತ್ತೊಂದು ಸಂಘಟನೆಯಲ್ಲಾದರಲ್ಲೂ ಇರಲಿ.
ಪೊಲೀಸರು ಈ ಬಗ್ಗೆ ಬಿಗಿ ಕ್ರಮ ತೆಗೆದುಕೊಳ್ಳಬೇಕು.
ಪೊಲೀಸರು ಅಲ್ಲಿದ್ದರೂ ಕ್ರಮ ತೆಗೆದುಕೊಳ್ಳದೇ ಇರುವುದು ಕೂಡ ನಾನು ಹೇಳುತ್ತೇನೆ.
ಅಲ್ಲಾಗೆ ಅಪಮಾನ ಮಾಡುತ್ತಿರುವವರೇ ಅವರು.
ಮೈಕ್ ನಲ್ಲಿ ಅಲ್ಲಾ ಎಂದು ಕೂಗಿ ಅಪಮಾನ ಮಾಡುತ್ತಿದ್ದಾರೆ.
ನಾಲ್ಕು, ನಾಲ್ಕು ಮೈಕ್ ಹಾಕಿಕೊಂಡು ಕೂಗುತ್ತಾರೆ.
ಕೇವಲ ಮೈಕ್ ನಲ್ಲಿ ಕೂಗಿದರೆ ಮಾತ್ರನಾ ಅಲ್ಲಾನಿಗೆ ತೃಪ್ತಿಯಾಗುತ್ತಾ ಎಂದು ಹೇಳಿದ್ದಾರೆ.
K. S Eshwarappa ಸುಪ್ರೀಂ ಕೋರ್ಟ್ ಆದೇಶ ಬಂದ ಸಂದರ್ಭದಲ್ಲಿ ಮಾತ್ರ ಬಿಗಿ ಕ್ರಮ ತೆಗೆದುಕೊಳ್ಳುತ್ತಾರೆ.
ಬಾಕಿ ಸಂದರ್ಭದಲ್ಲೂ ಬಿಗಿ ಕ್ರಮವಾಗಬೇಕು.
ಈ ಬಗ್ಗೆ ಕೇಂದ್ರ ಗೃಹ ಸಚಿವರಿಗೆ, ಪ್ರಧಾನಮಂತ್ರಿಗಳಿಗೆ, ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ.
ಬಾಕಿ ಸಂದರ್ಭದಲ್ಲೂ ಈ ಬಗ್ಗೆ ಬಿಗಿ ಕ್ರಮ ತೆಗೆದುಕೊಳ್ಳಬೇಕು.
ಎಲ್ಲಾ ಮುಸಲ್ಮಾನರೂ ಕೆಟ್ಟವರಲ್ಲ, ಒಳ್ಳೆಯ ಮುಸಲ್ಮಾನರೂ ಇದ್ದಾರೆ.
ಈ ಕೆಟ್ಟ ಮುಸಲ್ಮಾನರು, ಒಳ್ಳೆಯ ಮುಸಲ್ಮಾನರನ್ನು ಹಾಳು ಮಾಡುತ್ತಿದ್ದಾರೆ.
ಈ ಬಗ್ಗೆ ಒಳ್ಳೆಯ ಮುಸಲ್ಮಾನರು ಎಚ್ಚರದಿಂದಿರಬೇಕು ಎಂದು ಹೇಳಿದ್ದೇನೆ.
ಇದು ನಾನು ಹೇಳಿದ್ದು ತಪ್ಪಾ ಎಂದು ಹೇಳಿದ್ದಾರೆ.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.