Saturday, November 23, 2024
Saturday, November 23, 2024

Shree Kshetra Gramabivruddhi Yojane ಮಹಿಳೆಯರ ಶಿಸ್ತು ಮತ್ತು ಉತ್ತಮ ಸಂಸ್ಕೃತಿಯಿಂದ ಜಿಲ್ಲೆಯಲ್ಲಿ ಸ್ವಸಹಾಯ ಸಂಘ ಶಕ್ತಿಯುತ ಬೆಳೆದಿದೆ- ಡಾ.ಮಂಜುನಾಥ್

Date:

Shree Kshetra Gramabivruddhi Yojane  ಚಿಕ್ಕಮಗಳೂರು,ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಲು ಸ್ವಸಹಾಯ ಸಂಘವು ಹಲವು ಸಾಲ ಸೌಲಭ್ಯ ನೀಡಿದ್ದು ಇದರ ಸದುಪಯೋಗವನ್ನು ಪಡೆದುಕೊಂಡು ಸಶಕ್ತರಾಗಬೇಕು ಎಂದು ಶ್ರೀ ಕ್ಷೇತ್ರ ಧ.ಗ್ರಾ.ಯೋ. ಬಿ.ಸಿ. ಟ್ರಸ್ಟ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಲ್.ಹೆಚ್. ಮಂಜುನಾಥ್ ಹೇಳಿದರು.

ಚಿಕ್ಕಮಗಳೂರು ನಗರದ ಶ್ರೀ ಬೋಳರಾಮೇಶ್ವರ ದೇವಾಲಯದ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ. ಟ್ರಸ್ಟ್, ಸಾಮೂಹಿಕ ಶ್ರೀ ಸತ್ಯ ನಾರಾಯಣ ಪೂಜಾ ಸಮಿತಿ ಹಾಗೂ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಜಿಲ್ಲಾ ಜ್ಞಾನ ವಿಕಾಸ ಮಹಿಳಾ ಕೇಂದ್ರದ ಸಹಯೋಗದಲ್ಲಿ ಸಾಮೂಹಿಕ ಶ್ರೀ ಸತ್ಯ ನಾರಾಯಣಪೂಜೆ ಹಾಗೂ ತಾಲ್ಲೂಕು ಮಟ್ಟದ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾ ಟಿಸಿ ಅವರು ಮಾತನಾಡುತ್ತಿದ್ದರು.

ಗ್ರಾಮಾಭಿವೃದ್ದಿ ಯೋಜನೆಯು ಜಿಲ್ಲೆಯಲ್ಲಿ ಪ್ರಾರಂಭವಾಗಿ ಹದಿನಾರು ವರ್ಷಗಳು ಕಳೆದಿವೆ. ಪ್ರಾರಂಭ ದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಿ ಇದೀಗ ದೊಡ್ಡಮಟ್ಟದಲ್ಲಿ ಟ್ರಸ್ಟ್ ಬೆಳೆದಿದೆ. ಮಹಿಳೆಯರಿಗೆ ಐದು ಸಾವಿರದಿಂದ 5 ಲಕ್ಷದವರೆಗೂ ಸಾಲ ವಿತರಣೆ ಮಾಡುವ ಮೂಲಕ ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸದಲ್ಲಿ ಟ್ರಸ್ಟ್ ಮುಂದಾಗಿದೆ ಎಂದರು.
ಪ್ರತಿಯೊಂದು ಮಹಿಳೆಯರು ಸ್ವಸಹಾಯ ಸಂಘದಲ್ಲಿ ಶಿಸ್ತು ಹಾಗೂ ನಡವಳಿಕೆಯ ಸಂಸ್ಕೃತಿ ಯನ್ನು ಉತ್ತಮವಾಗಿ ನಿಭಾಯಿಸಿದ ಪರಿಣಾಮ ಸ್ವಸಹಾಯ ಸಂಘವು ಜಿಲ್ಲೆಯಲ್ಲಿ ಅತ್ಯಧಿಕ ಶಕ್ತಿಯುತವಾಗಿ ಬೆಳೆದಿದೆ. ಜೊತೆಗೆ ಮಹಿಳೆಯರ ಕೌಟುಂಬಿಕ ಜೀವನವು ಸುಖಮಯವಾಗಿರುವುದು ನಮ್ಮ ಮುಂದಿದೆ ಎಂದು ಹೇಳಿದರು.

ಇಂದಿನ ಆಧುನಿಕ ಯುಗದಲ್ಲಿ ಭಾರತೀಯ ಸಂಸ್ಕೃತಿಗಳು ಕಣ್ಮರೆಯಾಗುತ್ತಿವೆ. ವಿಚಿತ್ರ ಉಡುಪು ಗಳಿಂದ ನಮ್ಮ ಸಂಸ್ಕೃತಿಯನ್ನು ನಾವೇ ಉಳಿಸಲಾರದ ಸ್ಥಿತಿಗೆ ತಲುಪಿದ್ದೇವೆ. ಮುಂದಿನ ಪೀಳಿಗೆಗೆ ಭಾರತೀಯ ಸಂಸ್ಕೃತಿ ಯನ್ನು ಉಳಿಸಲು ಪ್ರತಿಯೊಬ್ಬರು ಕೈಜೋಡಿಸಬೇಕು. ಮಕ್ಕಳಿಗೆ ಬಾಲ್ಯದಿಂದಲೇ ನಾಡಿನ ಹಿರಿಮೆ ಹಾಗೂ ವೇಷ ಭೂಷಣಗಳನ್ನು ಅವರಲ್ಲಿ ಮನದಟ್ಟು ಮಾಡಲು ಪೋಷಕರು ಮುಂದಾಗಬೇಕು ಎಂದರು.

Shree Kshetra Gramabivruddhi Yojane  ಪ್ರಸ್ತುತ ಕಾಲದಲ್ಲಿ ಮಹಿಳೆಯರು ಅತಿಹೆಚ್ಚು ಧಾರವಾಹಿಗಳ ದಾಸರಾಗಿರುತ್ತಾರೆ. ಒಂದು ದಿನವು ವೀಕ್ಷಣೆ ಇಲ್ಲವಾದರೂ ಸಹ ಕಸಿಬಿಸಿಗೆ ಒಳಗಾಗುತ್ತಾರೆ. ಕೆಲವು ಧಾರವಾಹಿಗಳು ವಿಕೃತವಾಗುವುದರ ಜೊತೆಗೆ ನಮ್ಮ ಸಂಸ್ಕೃತಿಯನ್ನು ಮರೆಮಾಚುವ ಕಾರ್ಯದಲ್ಲಿ ತೊಡಗಿದೆ. ಆ ಹಿನ್ನೆಲೆಯಲ್ಲಿ ಮಹಿಳೆಯರು ಕಥೆ, ಕಾದಂಬ ರಿಗಳ ಒಳಗೊಂಡಿರುವ ಪುಸ್ತಕಗಳ ಅಧ್ಯಯನ ನಡೆಸಿದರೆ ಮಾನಸಿಕವಾಗಿ ನೆಮ್ಮದಿ ದೊರೆಯಲಿದೆ ಎಂದು ತಿಳಿಸಿದರು.

ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಉಪನ್ಯಾಸಕಿ ನಾಗಶ್ರೀ ತ್ಯಾಗರಾಜ್ ಮಾತನಾಡಿ ಸ್ವಸಹಾಯ ಸಂಘದಲ್ಲಿ ಮಹಿಳೆ ಯರು ಇಂದು ಭಾರತೀಯ ಸಂಸ್ಕೃತಿಯ ಬಿಂಬಿಸುವ ಉಡುಗೆಯನ್ನು ಧರಿಸಿರುವುದು ಖುಷಿಯ ಸಂಗತಿ. ಈ ಆಚಾರ-ವಿಚಾರಗಳನ್ನು ಮುಂದಿನ ಜನಾಂಗಕ್ಕೆ ಕೊಂಡೊಯ್ಯುವ ಮಹತ್ತರ ಜವಾಬ್ದಾರಿ ಮಹಿಳೆಯರ ಮೇಲಿದೆ. ಆ ನಿಟ್ಟಿನಲ್ಲಿ ಎಲ್ಲರೂ ಭಾರತೀಯ ಸಂಸ್ಕೃತಿಯನ್ನು ಬೆಳೆಸುವಲ್ಲಿ ಮುಂದಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಬೋಳರಾಮೇಶ್ವರ ದೇವಾಲಯ ಉಸ್ತುವಾರಿ ಸಮಿತಿ ಅಧ್ಯಕ್ಷ ಗಿರಿಜಾಶಂಕರ್ ಕೃಷಿ ಮೇಳ, ತರಬೇತಿ, ಮಾನವ ಸಂಪನ್ಮೂಲ ಬಳಕೆ ಮುಂತಾದವುಗಳು ಯೋಜನೆಯ ಚಿಂತನೆಯ ವಿಷಯವಾಗಿದೆ. ಮಾನವ ಸಂಪನ್ಮೂಲ ಅಭಿವೃದ್ದಿಗಾಗಿ ಗ್ರಾಮಾಭಿವೃದ್ದಿ ಯೋಜನೆ ದೊಡ್ಡ ಕಾರ್ಯಕರ್ತರ ಪಡೆಯನ್ನೇ ಹೊಂದಿದೆ ಎಂದು ತಿಳಿಸಿದರು.

ಗ್ರಾಮಾಭಿವೃದ್ದಿ ಯೋಜನೆಯ ಟ್ರಸ್ಟ್ನ ಜಿಲ್ಲಾ ನಿರ್ದೇಶಕ ಪ್ರಕಾಶ್ ರಾವ್ ಮಾತನಾಡಿ ತಾಲ್ಲೂಕಿನಲ್ಲಿ ಒಟ್ಟು3287  ಸ್ವಸಹಾಯ ಸಂಘಗಳನ್ನು ಸ್ಥಾಪನೆ ಮಾಡಿ 22,971ಸದಸ್ಯರನ್ನು ಸೇರ್ಪಡೆಗೊಳಿಸಲಾಗಿದೆ. ಜೊತೆಗೆ ಸಂಪೂರ್ಣ ಸುರಕ್ಷಾ ಹಾಗೂ ಆರೋಗ್ಯ ರಕ್ಷಣಾ ಕಾರ್ಯಕ್ರಮದಡಿ ಮಹಿಳೆಯರಿಗೆ ಆರ್ಥಿಕ ಸಹಾಯಧನ ವಿತರಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಬೆಳಿಗ್ಗೆ 7 ರಿಂದ ಶ್ರೀ ಸತ್ಯನಾರಾಯಣ ಸ್ವಾಮಿ ಜರುಗಿತು. ನಂತರ ತಾಲ್ಲೂಕು ಮಟ್ಟದ ಒಕ್ಕೂಟಗಳ ನೂತನ ಪದಗ್ರಹಣ ಕಾರ್ಯಕ್ರಮವು ನಡೆಯಿತು.

ಈ ಸಂದರ್ಭದಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಆನಂದ್, ಕರವೇ ಜಿಲ್ಲಾಧ್ಯಕ್ಷ ತೇಗೂರು ಜಗದೀಶ್, ಜನಜಾಗೃತಿ ವೇದಿಕೆ ಸ್ಥಾಪಕ ಪ್ರಶಾಂತ್ ರಾವ್, ಗ್ರಾಮಾಭಿವೃದ್ದಿ ಯೋಜನೆಯ ಪ್ರಾದೇಶಿಕ ನಿರ್ದೇಶಕಿ ಬಿ.ಗೀತಾ, ಯೋಜನಾಧಿಕಾರಿ ಗೊರಗಪ್ಪ ಪೂಜಾರಿ, ಹಿರೇಮಗಳುರು ಮೇಲ್ವಿಚಾರಕ ಚಂದನ್ ಮತ್ತಿತರರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ “ರಾಜ್ಯೋತ್ಸವ ಕವಿಗೋಷ್ಠಿ”

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ...

Mohare Hanumantharaya Award ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ‘ಕ್ರಾಂತಿ ದೀಪ ‘ಮಂಜುನಾಥ್ ಅವರಿಗೆ ಸನ್ಮಾನ

Mohare Hanumantharaya Award ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಮೊಹರೆ ಹಣಮಂತರಾಯ...

MESCOM ನವೆಂಬರ್ 23 .ಹೊಳಲೂರು ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಹೊಳಲೂರು ಗ್ರಾಮದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ...

Rotary Club Shimoga ಪ್ರೌಢಾವಸ್ಥೆಯು ದೇಹದಲ್ಲಿ ಅನೇಕ ಬದಲಾವಣೆ ತರುತ್ತದೆ.ಅದನ್ನ ಗಮನಿಸಬೇಕು- ಡಾ.ಮೋಕ್ಷಾ

Rotary Club Shimoga ರೋಟರಿ ಸಂಸ್ಥೆಯು ನಿಸ್ವಾರ್ಥವಾಗಿ ವಿಶ್ವದ ಎಲ್ಲ ಭಾಗಗಳಲ್ಲಿ...