Chitradurga ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲುಕಿನ ಪರಮೇನಹಳ್ಳಿ ಗ್ರಾಮದಲ್ಲಿ ಸ್ಥಾಪಿತವಾಗಿರುವ ಹೆಸರಾಂತ ಕಾರ್ಖಾನೆಗಳಲ್ಲಿ ಒಂದಾದ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಾರ್ಖಾನೆ 2020 ರಲ್ಲಿ ವಿ ಎಸ್ ಎಲ್ ಒಡೆತನದಿಂದ ಸ್ವಾಧೀನ ಪಡಿಸಿ ಕೊಂಡು ಕಾರ್ಖಾನೆ ಪುನಃ ಪ್ರಾರಂಭವಾಗಿ ಸುರಕ್ಷತೆ, ಆರೋಗ್ಯ ಮತ್ತು ಪರಿಸರಕ್ಕೆ ಹೆಚ್ಚಿನ ಗಮನ ಹರಿಸಿ,ಉತ್ಪಾದನೆ ಮಾಡುತ್ತ ಪ್ರತಿ ಹಂತದಲ್ಲಿ ಉನ್ನತ ಮಟ್ಟಕ್ಕೆ ಈ ಭಾಗದಲ್ಲಿ ಏರಲು ಪ್ರಯತ್ನಿಸುತ್ತಿದೆ.
ಪ್ರತಿ ವರ್ಷ ಮಾರ್ಚ್ 4 ರಿಂದ 10 ರ ವರೆಗೆ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ ಮತ್ತು ಸಪ್ತಾಹ ಆಚರಣೆ ಮಾಡುತ್ತಾ ಸುರಕ್ಷತೆ ಬಗ್ಗೆ ಅರಿವನ್ನು ಮೂಡಿಸುವಲ್ಲಿ ಮುಂದಾಗಿದೆ.
ಪ್ರತಿ ವರ್ಷದಂತೆ ಈ ಬಾರಿಯ ಸುರಕ್ಷತಾ ದಿನಾಚರಣೆಯನ್ನು ದಿನಾಂಕ 4-3-2023 ರಂದು ವಿವಿಧ ಕಾರ್ಯಕ್ರಮಗಳನ್ನು ಹಾಕಿಕೊಂಡು ಸುರಕ್ಷತಾ ಸಪ್ತಾಹ ಪ್ರಾರಂಭ ಮಾಡಲಾಯಿತು. ದಿನಕ್ಕೊಂದು ಕಾರ್ಯಕ್ರಮವನ್ನು ಹಾಕಿಕೊಂಡು ಉದ್ಯೋಗಗಳಿಗೆ ಬಹುಮಾನಗಳನ್ನು ನೀಡುವುದರ ಮೂಲಕ ಸುರಕ್ಷತಾ ಅರಿವಿನ ಸ್ಪೂರ್ತಿ ನೀಡಿರುತ್ತಾರೆ.
ದಿನಾಂಕ 4-03-2023 ರಂದು ಕಾರ್ಖಾನೆಯ ಆಡಳಿತ ಕಛೇರಿಯ ಮುಂಭಾಗ 52 ನೇ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ ಅಂಗವಾಗಿ ಸುರಕ್ಷತಾ ಧ್ವಜಾರೋಹಣ ಮತ್ತು ಸುರಕ್ಷತಾ ಪ್ರತಿಜ್ಞೆ ಪಡೆದು ಸುರಕ್ಷತಾ ಸಪ್ತಾಹ ಕಾರ್ಯಕ್ರಮ ಪ್ರಾರಂಭಿಸಲಾಯಿತು.
ದಿನಾಂಕ 16-3-2023 ಗುರುವಾರ ಸುರಕ್ಷತಾ ಸಪ್ತಾಹ ಅಂಗವಾಗಿ ವೇದಿಕೆಯ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪ್ರಾರಂಭದಲ್ಲಿ ದೀಪ ಹಚ್ಚುವುದರ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು.
Chitradurga ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಿಸಿದ್ದ ಶ್ರೀಮತಿ ಚೈತ್ರ, ಪೋಲಿಸ್ ಉಪ ಅಧೀಕ್ಷಕರು, ಹಿರಿಯೂರು , ಶ್ರೀ ಕಾಳಿಕೃಷ್ಣ ,ಪೋಲೀಸ್ ನಿರೀಕ್ಷಕರು,ಗ್ರಾಮಾಂತರ ಪೋಲಿಸ್ ಠಾಣೆ,ಹಿರಿಯೂರು, ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್
ಮಾನವ ಸಂಪನ್ಮೂಲ ಮತ್ತು ಸಾಮಾನ್ಯ ಆಡಳಿತ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಶ್ರೀ ಪಿ.ನಾರಾಯಣ, ಪರಮೇನಹಳ್ಳಿ ಬೀಡುಕಬ್ಬಿಣ ಘಟಕದ ಪ್ಲಾಂಟ್ ಹೆಡ್ ಶ್ರೀ ಚಂದ್ರಶೇಖರ್ ಚಾರಿ.ಕೆ ಇವರು ಭಾಗವಹಿಸಿದ್ದರು.
ಪ್ರಾರಂಭದಲ್ಲಿ ಸುರಕ್ಷತಾ ವಿಭಾಗದ ಡೆಪ್ಯೂಟಿ ಮ್ಯಾನೇಜರ್ ಶ್ರೀ ಅರಿಹಂತ್ ರವರು ಕಾರ್ಖಾನೆಯಲ್ಲಿ ಈಗಾಗಲೇ ಉತ್ತಮ ಸುರಕ್ಷತಾ ವಾತಾವರಣ ಮೂಡಿಸಲು ಉದ್ಯೋಗಿಗಳು , ಕಾರ್ಮಿಕರ ಸಹಕಾರದಿಂದ ಸುರಕ್ಷತಾ ವಾತವರಣವನ್ನು ಮಾಡಲಾಗುತ್ತಿದೆ. 2021 ನೇ ಸಾಲಿನಲ್ಲಿ ಎನ್ ಎಸ್ ಸಿ ಬೆಂಗಳೂರು ವತಿಯಿಂದ ಕಾರ್ಖಾನೆ ಗೆ ಉತ್ತಮ ಸುರಕ್ಷ ಪುರಸ್ಕಾರ ಪ್ರಶಸ್ತಿ ಬಂದಿರುತ್ತದೆ. ಅಪಘಾತ ರಹಿತ ಕಾರ್ಖಾನೆಯಾಗಲು ಎಲ್ಲರ ಸಹಕಾರದಿಂದ ಮಾತ್ರ ಸಾಧ್ಯವಾಗುತ್ತದೆ ಎಂದು ಸುರಕ್ಷತಾ ವಿಭಾಗದ ಅಧಿಕಾರಿಗಳು ಮನವಿ ಮಾಡಿದರು. ಸುರಕ್ಷತಾ ದಿನಾಚರಣೆ ಯನ್ನು ಆಚರಣೆ ಮಾಡುವ ಮುಖ್ಯ ಉದ್ದೇಶ ಜನಸಾಮಾನ್ಯರಿಗೆ ,ಕಾರ್ಮಿಕರಿಗೆ ಮತ್ತು ಉದ್ಯೋಗಿಗಳಿಗೆ ಸುರಕ್ಷತೆ ಬಗ್ಗೆ ಅರಿವನ್ನು ಮೂಡಿಸುವುದರ ಮೂಲಕ ಜಾಗೃತಿ ಮೂಡಿಸುವ ಒಂದು ಪ್ರಯತ್ನವಾಗಿದೆ ಮತ್ತು ಕಾರ್ಖಾನೆಗಳಲ್ಲಿ ಅಪಘಾತವನ್ನು ತಗ್ಗಿಸಿ, ಶೂನ್ಯ ಅಪಘಾತಕ್ಕೆ ತರುವ ಉದ್ದೇಶದಿಂದ ಕಂಪನಿಯ ಆವರಣದಲ್ಲಿ ದಿನಾಂಕ 4-3-2023 ರಿಂದ 10-3-2023 ರ ತನಕ ವಿಭಿನ್ನ ರೀತಿಯಲ್ಲಿ 52 ನೇ ರಾಷ್ಟ್ರೀಯ ಸುರಕ್ಷತಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಸುರಕ್ಷತಾ ಅಧಿಕಾರಿ ತಿಳಿಸಿದರು.
ಶ್ರೀ ಪಿ.ನಾರಾಯಣ ರವರು ತಮ್ಮ ಭಾಷಣದಲ್ಲಿ ಮಾತನಾಡುತ್ತಾ ಕಾರ್ಖಾನೆಯ ವತಿಯಿಂದ ಆಡಳಿತ ಮಂಡಳಿಯು ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಕಾರ್ಖಾನೆಯ ಒಳಭಾಗದಲ್ಲಿ ಸುರಕ್ಷತೆ, ಪರಿಸರ ಮತ್ತು ಆರೋಗ್ಯಕ್ಕಾಗಿ ಕೈಗೊಂಡ ಕೆಲಸದ ಬಗ್ಗೆ ವಿವರವಾಗಿ ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಿಸಿದ್ದ ಶ್ರೀಮತಿ ಚೈತ್ರ, ಪೋಲಿಸ್ ಉಪ ಅಧೀಕ್ಷಕರು, ಹಿರಿಯೂರು ಇವರು ಮೆ. ಟಾಟಾ ಕಾರ್ಖಾನೆಯ ಸಂಸ್ಥಾಪಕರಾದ ಶ್ರೀ ಟಾಟಾ ರವರು ಪ್ರಾರಂಭದಲ್ಲಿ ಕಾರ್ಖಾನೆಯನ್ನು ಸ್ಥಾಪನೆ ಮಾಡುವಾಗ ಪಟ್ಟ ಕಷ್ಟವನ್ನು ತುಂಬಾ ಚನ್ನಾಗಿ ತಮ್ಮ ಭಾಷಣದಲ್ಲಿ ಎಲ್ಲರಿಗೂ ತಿಳಿಸಿ ಶುಭಾಶಯ ಕೋರಿದರು.
ನಂತರ ಹಿರಿಯೂರು ಸರ್ಕಲ್ ಇನ್ಸ್ಪೆಕ್ಟರ್ ಶ್ರೀ ಕಾಳಿಕೃಷ್ಣರವರು ರಸ್ತೆ ಸುರಕ್ಷತೆ ಮತ್ತು ಕಾರ್ಖಾನೆಗಳ ಸುರಕ್ಷತೆ ಬಗ್ಗೆ ಮನವರಿಕರ ಮಾಡಿದರು.
ಕಾರ್ಯಕ್ರಮದ ಮಧ್ಯೆ ಅನೇಕ ವಿಭಾಗದ ಉದ್ಯೋಗಿ ಗಳಿಂದ ಸುರಕ್ಷತೆ ಕುರಿತು ಕಿರು ನಾಟಕ ಪ್ರದರ್ಶನ ಮಾಡಲಾಯಿತು.
ಸುರಕ್ಷತೆ, ಪರಿಸರದಲ್ಲಿ ಆಗಿರುವ ಬದಲಾವಣೆಗಳನ್ನು ವಿವರವಾಗಿ ತಿಳಿಸಿದರು.
ಪುನಃ ಹತ್ತಿರ ಸ್ಥಾಪಿತವಾಗಿರುವ ಐಎಸ್ಎಂಟಿ ಕಾರ್ಖಾನೆಯನ್ನು ಸಹ ಸ್ವಾಧೀನ ಪಡಿಸಿಕೂಳ್ಳಲಾಗಿದೆ . ಈಗ ನಮ್ಮ ಕಾರ್ಖಾನೆಯ ಜೊತೆ ಜೊತೆಗೆ ಆ ಕಾರ್ಖಾನೆಗಳ ಸುರಕ್ಷತೆಗೆ ಹೆಚ್ಚಿನ ಗಮನ ಹರಿಸಿ ಉತ್ಪಾದನೆಯನ್ನು ತೆಗೆಯಲಾಗುತ್ತಿದೆ. ಸೊಲ್ಲಾಪುರ, ಹಿರಿಯೂರು ಮತ್ತು ಕೊಪ್ಪಳ ಕಾರ್ಖಾನೆಗಳಲ್ಲಿ ಡಿ ಎಸ್ ಎಸ್ ಸೇಫ್ಟಿ ಸಿಸ್ಟಮ್ಸ್ ಅಳವಡಿಸಲಾಗುತ್ತಿದೆ. ಅವರ ಮಾರ್ಗದರ್ಶನದಲ್ಲಿ ಮುಂದುವರೆದು ಶೂನ್ಯ ಅಪಘಾತ ಸಾಧಿಸಲು ಪ್ರಯತ್ನ ನೆಡೆಯುತ್ತದೆ ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ತಿಳಿಸಿದರು.
ಸುರಕ್ಷತೆಗಾಗಿ ಮಾಡಲಾದ ಬದಲಾವಣೆಗಳ ಬಗ್ಗೆ ವಿವರವಾಗಿ ತಿಳಿಸಿದರು.
ದಿನದಿಂದ ದಿನಕ್ಕೆ ರಸ್ತೆಗಳು, ಲೈಟಿಂಗ್, ಹೌಸ್ ಕೀಪಿಂಗ್ ವ್ಯವಸ್ಥೆ ಪ್ರಗತಿಯಿಂದ ಸುರಕ್ಷತೆಗೆ ವರದಾನವಾಗಿದೆ ಮತ್ತು ವಿಭಾಗಗಳಲ್ಲಿ ಸುರಕ್ಷತೆಗಾಗಿ ಹೊಸ ಹೊಸ ಯಂತ್ರಗಳು ಮತ್ತು ಉಪಕರಣಗಳ ಅಳವಡಿಕೆ ಮಾಡಲಾಗಿದೆ ಎಂದು ಕಾರ್ಖಾನೆಗಳಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಸವಿಸ್ತಾರವಾಗಿ ಶ್ರೀ ಪಿ.ನಾರಾಯಣ ತಮ್ಮ ಭಾಷಣದಲ್ಲಿ ತಿಳಿಸಿ ಕಾರ್ಖಾನೆಯ ಅಧಿಕಾರಿಗಳಿಗೆ ಮತ್ತು ಕಾರ್ಮಿಕರಿಗೆ ಅಭಿನಂದನೆ ತಿಳಿಸಿ ಶುಭಾಷಯ ಕೋರಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ ಅಂಗವಾಗಿ ಆಯೋಜಿಸಲಾದ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ಮತ್ತು ಪ್ರಶಸ್ತಿಯನ್ನು ನೀಡಲಾಯಿತು.
ಹಿರಿಯ ಅಧಿಕಾರಿಗಳು, ಉದ್ಯೋಗಿಗಳು, ಕಾರ್ಮಿಕರು ಮತ್ತು ಗುತ್ತಿಗೆ ಕಾರ್ಮಿಕರು ಸಮಾರಂಭದಲ್ಲಿ ಭಾಗವಹಿಸಿದ್ದರು.
Chitradurga ಬನ್ನಿ ಕೈ ಜೋಡಿಸಿ ಮನೆಯಲ್ಲಿ ನಿಮಗಾಗಿ ಕಾಯುತ್ತಿದ್ದಾರೆ ಸುರಕ್ಷತೆ ಯಿಂದ ಕಾರ್ಯ ನಿರ್ವಹಿಸಿ, ಮನೆಗೆ ಹಿಂದಿರುಗಿ ಎಂಬ ಘೋಷಣೆಯೊಂದಿಗೆ ಆಯೋಜಿಸಿದ ಸಮಾರಂಭ ಮುಕ್ತಾಯವಾಯಿತು.
ವರದಿ ಕೃಪೆ:
ಮುರಳಿಧರ್ ನಾಡಿಗೇರ್
ಸುರಕ್ಷತಾ ವಿಭಾಗ
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
