women empowerment ಆಧುನಿಕ ಕಾಲದಲ್ಲಿ ಪುರುಷರಿಗಿಂತ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡುವ ಮೂಲಕ ಒಂದು ಹೆಜ್ಜೆ ಮುಂದಿದ್ದಾರೆ ಎಂದು ಕನಕ ಶ್ರೀ ಮಹಿಳಾ ಸಮಾಜದ ಉಪಾಧ್ಯಕ್ಷೆ ಸರೋಜಾ ಚಂದ್ರೇಗೌಡ ಹೇಳಿದರು.
ಚಿಕ್ಕಮಗಳೂರಿನ ಕನಕ ಭವನದಲ್ಲಿ ಕನಕ ಶ್ರೀ ಮಹಿಳಾ ಸಮಾಜದಿಂದ ಏರ್ಪಡಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ದೇಶದ ಕಾನೂನು ಮಹಿಳೆಯರಿಗೆ ವಿಶಿಷ್ಟ ಗೌರವ, ಸ್ಥಾನಮಾನ ಮತ್ತು ಸಮಾನ ಹಕ್ಕನ್ನು ನೀಡಿದೆ. ಮಹಿಳೆಯರು ಇಂದು ತಂತ್ರಜ್ಞಾನದ ಬೆಳವಣ ಗೆ ಹಾಗೂ ಇನ್ನಿತರ ಯಾವುದೇ ಕ್ಷೆತ್ರದಲ್ಲಾದರೂ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದರು.
women empowerment ಮಹಿಳೆ ಪುರುಷರಿಗಿಂತ ಹೆಚ್ಚು ಶಕ್ತಿವಂತಳು, ಇಡೀ ಕುಟುಂಬವನ್ನು ತಿದ್ದಿತೀಡಿ ದಾರಿಗೆ ತರುವ ಸಾಮರ್ಥ್ಯ ಮತ್ತು ಹೊಣೆಗಾರಿಕೆ ಉಳ್ಳುವರು. ಇಂತಹ ಮಹಿಳೆಯನ್ನು ನಾವೆಲ್ಲರೂ ಸದಾ ಗೌರವಿಸಬೇಕು ಎಂದು ಕಿವಿಮಾತು ಹೇಳಿದರು.
ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘದ ರಾಜ್ಯಾಧ್ಯಕ್ಷೆ ಸರೋಜಾ ಬಸವರಾಜ್ ಮಾತನಾಡಿ ಪ್ರಸ್ತುತ ಎಲ್ಲಾ ಕ್ಷೇತ್ರದಲ್ಲಿ ಮಹಿಳೆ ಪುರುಷರಿಗೆ ಸರಿಸಮಾನವಾಗಿ ಸ್ಪರ್ಧಿಯಾಗಿ ಹೊರಹೊಮ್ಮುತ್ತಿದ್ದಾಳೆ. ಒಂದು ಉತ್ತಮ ಕುಟುಂಬದ ಹಿಂದೆ ಹೆಣ್ಣಿನ ಪಾತ್ರ ಮಹತ್ವದ್ದಾಗಿದೆ. ಮೇಲು-ಕೀಳು ಎನ್ನದೇ ಹೊಂದಾಣ ಕೆಯಿಂದ ನಡೆದರೆ ಸಾಮರಸ್ಯ ಸಾಧ್ಯವಾಗಲಿದೆ ಎಂದರು.
ಇದೇ ವೇಳೆ ಎಸ್.ಎಸ್.ಎಲ್.ಸಿ ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ಕನಕ ಶ್ರೀ ಮಹಿಳಾ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಸ್ಥಾನ ಗಳಿಸಿದವರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಈ ಸಂರ್ಭದಲ್ಲಿ ಸಮಾಜದ ಮಾಜಿ ಅಧ್ಯಕ್ಷೆ ಜಯಮ್ಮ ಪುಷ್ಪನೇಗೌಡ, ನಗರಸಭೆ ಸದಸ್ಯೆ ಇಂದಿರಾ ಶಂಕರ್ ಹಾಗೂ ಕನಕಶ್ರೀ ಮಹಿಳಾ ಸಮಾಜದ ನಿರ್ದೇಶಕರು, ಸದಸ್ಯರುಗಳು ಉಪಸ್ಥಿತರಿದ್ದರು.
ವನಜಾಕ್ಷಿ ಗೋಪಾಲ ಗೌಡ ನಿರೂಪಿಸಿದರು. ಕನಕ ಶ್ರೀ ಮಹಿಳಾ ಸಮಾಜದವರು ಪ್ರಾರ್ಥಿಸಿದರು. ಅನ್ನಪೂರ್ಣಗೋಪಾಲಗೌಡ ಸ್ವಾಗತಿಸಿದರು. ಶಾರದಾ ಮಾಸ್ತೇಗೌಡ ವಂದಿಸಿದರು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.