K. S. Eshwarappa ಶಿವಮೊಗ್ಗದ ಮುಸಲ್ಮಾನರು ಗಲಾಟೆ ಮಾಡೋರಲ್ಲ ನನಗೆ ನೂರಕ್ಕೆ ನೂರು ಗೊತ್ತು. ಹಿಂದುಗಳಲ್ಲಿಯೂ ಕೆಲ ತಲೆ ಹರಟೆಗಳಿದ್ದಾರೆ. ನಾನು ಇಲ್ಲ ಅಂದಿಲ್ಲ. ಮುಸ್ಲಿಮರಲ್ಲಿಯೂ ತಲೆಹರಟೆಗಳಿದ್ದಾರೆ. ಅವರೊಂದು ನಾಲ್ಕು ಜನ ಇವರೊಂದು ನಾಲ್ಕು ಜನ ಸೇರ್ಕೊಂಡು ತಲೆ ಹರಟೆ ಕೆಲಸ ಮಾಡಿದಾಗ ಗಲಾಟೆಗಳು ಸೃಷ್ಟಿಯಾಗುತ್ತದೆ ಎಂದು ಶಿವಮೊಗ್ಗ ಶಾಸಕ ಕೆ ಎಸ್ ಈಶ್ವರಪ್ಪ ಅವರು ಹೇಳಿರುವ ವಿಡಿಯೋ ಎಲ್ಲೆಡೆ ಸಾಕಷ್ಟು ಸದ್ದು ಮಾಡುತ್ತಿದೆ.
ಶಿವಮೊಗ್ಗ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಮೊಹಮ್ಮದ್ ಶಫಿ ಎಂಬುವರ ಫೇಸ್ಬುಕ್ನಲ್ಲಿ ಈ ವಿಡಿಯೋ ಮೊದಲು ಪ್ರಕಟವಾಗಿದೆ. ಆನಂತರದಲ್ಲಿ ಸೋಶಿಯಲ್ ಮೀಡಿಯಾ ಗಳಲ್ಲಿ ಪರ, ವಿರೋಧ ಚರ್ಚೆಗಳು ಸೃಷ್ಟಿಯಾಗುತ್ತಿದೆ.
K. S. Eshwarappa ಶಿವಮೊಗ್ಗ ಶಾಸಕ ಕೆಎಸ್ ಈಶ್ವರಪ್ಪ ಅವರು
ಮುಸ್ಲಿಮರಲ್ಲಿ ಕೆಲ ತಲೆ ಹರಟೆಗಳಿದ್ದಾರೆ. ಹಿಂದುಗಳಲ್ಲಿ ಕೆಲ ತಲೆ ಹರಟೆಗಳಿದ್ದಾರೆ. ನಾಲ್ಕು ಜನ ಸೇರಿಕೊಂಡು ತಲೆ ಹರಟೆ ಕೆಲಸ ಮಾಡಿದಾಗ ಗಲಾಟೆ ಸೃಷ್ಟಿಯಾಗುತ್ತದೆ. ಇಲ್ಲಾಂದ್ರೆ ಎಲ್ಲದು ತಣ್ಣಗೆ ಇರುತ್ತದೆ. ನಾನು ಏನು ಹೇಳಲು ಹೊರಟಿದ್ದೇನೆ. ನಾನು ತಪ್ಪು ಮಾಡಿದ್ರೆ ಇಲ್ಲಿಯೇ ಸಭೆಯಲ್ಲಿ ಹೇಳಿ, ಸಮಾಜದಲ್ಲಿ ಅಣ್ಣತಮ್ಮಂದಿರಂತೆ ಇರುತ್ತೇವೆ. ನಾನು ಯಾವ ವಿಚಾರಕ್ಕೆ ಗಲಾಟೆ ಮಾಡುತ್ತೇನೆ ಎಂದರೆ ಉದಾಹರಣೆ ಹೇಳುವುದಾದರೆ, ಶಿವಪ್ಪ ನಾಯಕ ಸರ್ಕಲ್ ನಲ್ಲಿ ಎಸ್ ಡಿ ಪಿ ಐ ನವರು ಒಂದು ಸಮ್ಮೇಳನ ಮಾಡಿದ್ರು. ಆ ಸಮ್ಮೇಳನದಲ್ಲಿ ಯಾರೋ ಒಬ್ಬ ಹಿಂದುಸ್ತಾನ್ ಮುರದಬಾದ್ ಎಂದು ಕೂಗಿದ. ಯಾರಾದರೂ ಇದನ್ನು ಕೇಳಿ ಸುಮ್ಮನಿರುತ್ತಾರ? ನಾನು ಬಾಯಿ ಬಿಟ್ಟು ಹೇಳುತ್ತೇನೆ. ಆದರೆ ನಾನು ಸುಮ್ಮನಿರಲಿಲ್ಲ. ಮತ್ತೆ ಅಂದು ವಾಪಸ್ ಹೋಗುತ್ತಾ ಗಾಜನೂರು ಹತ್ರ ತಳವಾರ್ ಬೀಸಿದ್ರು. ಯಾರು? ಅಂದ್ರೆ ಶಿವಮೊಗ್ಗದವರಲ್ಲ. ಯಾರು ಒಬ್ಬ ಸತ್ತ ಇದಕ್ಕೆ ಮುಸಲ್ಮಾನರು ಕಾರಣನಾ? ಎಂದು ಹೇಳಿದ್ದಾರೆ.
ಸುಮ್ ಸುಮ್ನೆ ನಮ್ಮ ನಿಮ್ಮ ಮಕ್ಕಳನ್ನ ಹೊಡಿದ್ರೆ ಸುಮ್ಮನಿರುವುದಕ್ಕೆ ಆಗುತ್ತಾ? ಖಂಡಿಸ ಬೇಕಾ ಅಥವಾ ಬೇಡ್ವಾ? ನಾನಂತೂ ಖಂಡಿಸುತ್ತೇನೆ. ಎಲ್ಲ ಮುಸಲ್ಮಾನರ ಬಗ್ಗೆ ನಾವು ಹೇಳೋದಿಲ್ಲ. ಗುಂಡಾಗಿರಿ ಮಾಡಿ ತೊಂದರೆ ಕೊಡುವವರ ಬಗ್ಗೆ ನಾನು ಖಂಡಿಸುತ್ತೇನೆ ಎಂದಿದ್ದಾರೆ.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.