Sri Adichunchanagiri Samudaya Bhavan ಶಿವಮೊಗ್ಗ : ಪ್ರತಿಯೊಬ್ಬ ವಿದ್ಯಾರ್ಥಿ ಜೀವನದಲ್ಲಿ ಪರೀಕ್ಷೆಗಳನ್ನು ಗೆದ್ದರೆ ಸಾಧನೆಯ ಶಿಖರವನ್ನು ಏರಬಹುದು ಎಂದು ಖ್ಯಾತ ವಾಗ್ಮೀ ಅಕ್ಷಯ ಗೋಖಲೆ ಹೇಳಿದರು.
ಶಿವಮೊಗ್ಗನಗರದ ಆದಿಚುಂಚನಗಿರಿ ಸಂಯುಕ್ತ ಆಂಗ್ಲಮಾಧ್ಯಮ ಪ್ರೌಢಶಾಲೆಯ ವತಿಯಿಂದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಕಲಿಕಾ ಕೌಶಲ್ಯ ಕಾರ‍್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಪರೀಕ್ಷೆಗಳನ್ನು ಎದುರಿಸುವುದೇ ಒಂದು ಕೌಶಲ್ಯ ಎಂದರು.
ಬದುಕನ್ನು ನೋಡುವ ರೀತಿ ಬಹಳ ಮುಖ್ಯವಾಗಿರುತ್ತದೆ. ನಮ್ಮ ಆಲೋಚನಾ ಶಕ್ತಿ ಬದುಕನ್ನು ರೂಪಿಸುತ್ತದೆ. ನಮ್ಮ ಆಲೋಚನೆ ಉತ್ತಮ ರೀತಿಯಲ್ಲಿ ಇದ್ದರೆ ನಮ್ಮ ಬದುಕು ಸಹ ಅದೇ ದಾರಿಯಲ್ಲಿ ಸಾಗುತ್ತದೆ. ನಮ್ಮ ಯೋಚನೆ ಹಾಗೂ ಜೀವನದ ಮಾರ್ಗ ದುಮಾರ್ಗದಲ್ಲಿ ಸಾಗಿದರೆ ಬದುಕು ದುಸ್ಥರವಾಗುತ್ತದೆ ಎಂದು ಒಂದು ಕಥೆಯ ಮೂಲಕ ವಿದ್ಯಾರ್ಥಿಗಳಿಗೆ ಮನ ಮುಟ್ಟುವ ರೀತಿಯಲ್ಲಿ ಹೇಳಿದರು.
ಮೊಬೈಲ್ ಬಳಕೆ ಅತಿಯಾದರೆ ಅದು ನಮ್ಮ ಜೀವನವನ್ನೇ ಹಾಳು ಮಾಡುತ್ತದೆ. ಅದನ್ನು ಹಿತಮಿತವಾಗಿ ಬಳಸಿದರೆ ನಮ್ಮ ಜೀವನಕ್ಕೆ ಸಹಾಯ ಮಾಡುತ್ತದೆ. ಆದರೆ ವಿದ್ಯಾರ್ಥಿಗಳಾದ ನಿಮಗೆ ಅದರಲ್ಲಿ ಕೆಟ್ಟದ್ದನ್ನು ಬಳಸಿಕೊಳ್ಳುವ ಮನಸ್ಥಿತಿಯೇ ಹೆಚ್ಚಾಗಿರುತ್ತದೆ. ಆದ್ದರಿಂದ ಪರೀಕ್ಷೆ ಮುಗಿಯುವ ತನಕ ಮೊಬೈಲನ್ನು ಮುಟ್ಟದೇ ಪುಸ್ತಕದ ಮೊರೆ ಹೋಗಿ ಅದು ನಿಮ್ಮ ಭವಿಷ್ಯವನ್ನು ರೂಪಿಸುತ್ತದೆ ಎಂದ ಅವರು, ಪರೀಕ್ಷೆಗೆ ಕೆಲವೇ ದಿನಗಳು ಇರುವ ಈ ಸಂದರ್ಭದಲ್ಲಿ ಪ್ರತಿ ನಿಮಿಷವನ್ನೂ ಕೂಡ ವ್ಯಯಮಾಡದೇ ಸದುಪಯೋಗ ಪಡಿಸಿಕೊಂಡು ಅಭ್ಯಾಸ ಮಾಡಿದ್ದೇ ಆದರೆ ಪರೀಕ್ಷೆಯಲ್ಲಿ ನಿಮ್ಮ ನಿರೀಕ್ಷೆಯ ಗೋಲನ್ನು ಮುಟ್ಟಲು ಸಾಧ್ಯವಾಗುತ್ತದೆ ಎಂದರು.
ನಿಮ್ಮ ತಂದೆ ತಾಯಿಗಳು ಶ್ರಮಪಟ್ಟು ಬಿಜಿಎಸ್‌ನಂತಹ ಹೆಸರಾಂತ ವಿದ್ಯಾ ಸಂಸ್ಥೆಯಲ್ಲಿ ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಬೇಕೆಂದು ನಿಮ್ಮನ್ನು ಇಲ್ಲಿಗೆ ಸೇರಿಸಿದ್ದಾರೆ. ಅವರು ಎಂದೂ ಸಹ ತಾವುಪಟ್ಟ ಶ್ರಮವನ್ನು ನಿಮ್ಮ ಬಳಿ ಹೇಳಿಕೊಳ್ಳುವುದಿಲ್ಲ. ನನ್ನ ಮಗ ಅಥವಾ ಮಗಳು ಉತ್ತಮ ಶಿಕ್ಷಣವನ್ನು ಪಡೆದು ಈ ಸಮಾಜದ ಆಸ್ತಿಯಾಗಬೇಕೆಂದು ಬಯಸುತ್ತಾರೆ ಹೊರತು. ನಮ್ಮನ್ನು ಸಲಹುವಂತೆ ಎಂದೂ ಬಯಸುವುದಿಲ್ಲ. ಇದರ ಅರಿವು ಮಕ್ಕಳಾದ ನಿಮಗೆ ಇರುವುದಿಲ್ಲ. ಆದ್ದರಿಂದ ನೀವುಗಳು ನಿಮ್ಮ ತಂದೆ ತಾಯಿಗಳ ಶ್ರಮವನ್ನು ಅರಿತು, ಶಿಕ್ಷಕರ ಪ್ರೋತ್ಸಾಹವನ್ನು ಪಡೆದು ಪರೀಕ್ಷೆಗೆ ತಯಾರಿ ನಡೆಸಿ ಎಂದು ಕಿವಿ ಮಾತು ಹೇಳಿದರು.
Sri Adichunchanagiri Samudaya Bhavan ಮತ್ತೋರ್ವ ಸಂಪನ್ಮೂಲ ವ್ಯಕ್ತಿಗಳಾಗಿದ್ದ ಬಿಜಿಎಸ್ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲೆ ಡಾ. ಅಮುದಾ ಮುನಿರಾಜು ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷದ ಆರಂಭದಿಂದಲೇ ಅಭ್ಯಾಸದಲ್ಲಿ ನಿರತರಾಗಬೇಕು. ಅಂದಿನ ಪಾಠವನ್ನು ಅಂದೇ ಕಲಿಯಬೇಕು. ಆಗ ಪರೀಕ್ಷಾ ಸಮಯದಲ್ಲಿ ಒತ್ತಡವಾಗುವುದಿಲ್ಲ ಎಂದು ಹೇಳಿದರು.
ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಶಿಕ್ಷಣ ಸಂಸ್ಥೆಯ ನಿರ್ದೇಶಕ ಡಿ.ವಿ. ಸತೀಶ್, ಪ್ರಾಂಶುಪಾಲೆ ಎಸ್.ಆರ್.ಹೇಮಾ, ಗುರುಪುರ ಬಿಜಿಎಸ್ ಶಾಲಾ-ಕಾಲೇಜಿನ ಪ್ರಾಂಶುಪಾಲರಾದ ಸುರೇಶ್ ಎಸ್.ಹೆಚ್. ವ್ಯವಸ್ಥಾಪಕರಾದ ಅಮಿಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.