Friday, September 27, 2024
Friday, September 27, 2024

Raghavendra Tirtha ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳು ಜಾತಿ ಮತ ಮೀರಿ ಭಕ್ತರನ್ನ ಅನುಗ್ರಹಿಸುತ್ತಿದ್ದಾರೆ- ಶ್ರೀ ಸುಬುಧೇಂದ್ರ ತೀರ್ಥರು

Date:

Raghavendra Tirtha ಕಲ್ಪವೃಕ್ಷ ಎಂದರೆ ಒಂದು ಕಡೆ ಇದ್ದು ನಮಗೆ ಬೇಕಾದ್ದನ್ನ ನೀಡುವ ಅನುಪಮ ಶಕ್ತಿಯುಳ್ಳದ್ದು. ಕಾಮಧೇನು ಅಷ್ಟೆ ಬಯಸಿದ್ದನ್ನು
ಕೊಡುವಂಥದ್ದು.

ಕಲಿಯುಗದಲ್ಲಿ
ಶ್ರೀರಾಘವೇಂದ್ರ ಸ್ವಾಮಿಗಳನ್ನ ಕಲ್ಪವೃಕ್ಷ ಮತ್ತು ಕಾಮದೇನು ಅಂತ
ಕರೆಯಲಾಗುತ್ತದೆ. ರಾಯರು ಜಾತಿಮತ ಪಂಥ ಮೀರಿ ಎಲ್ಲ ಭಕ್ತರನ್ನೂ ಅನುಗ್ರಹಿಸಿತ್ತಾರೆ ಎಂದು
ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ನುಡಿದ್ದಿದ್ದಾರೆ.

ಶ್ರೀಪಾದಂಗಳವರು ಶಿವಮೊಗ್ಗ ಬೊಮ್ಮನಕಟ್ಟೆ ಬಡಾವಣೆಯಲ್ಲಿ‌
ಕಟ್ಟಿರುವ ನೂತನ ಮಂದಿರದಲ್ಲಿ
ಶ್ರೀರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನ ಪ್ರತಿಷ್ಠಾಪನಾ ಮುನ್ನಾದಿನ ಆಶೀರ್ವಚನ ನೀಡಿದರು.

ನೆರೆ ರಾಜ್ಯದಲ್ಲಿದ್ದರೂ ಕರ್ನಾಟಕ ಸರ್ಕಾರವು ಮಂತ್ರಾಲಯದ ಅಭಿವೃದ್ಧಿಗೆ ಪರೋಕ್ಷ ನೆರವು ನೀಡುತ್ತಿದೆ. ಶ್ರೀ ಯಡಿಯೂರಪ್ಪ ನವರು ಮುಖ್ಯಮಂತ್ರಿಗಳಾಗಿದ್ದಾಗಿನ ಅವಧಿಯಲ್ಲಿ ಹನ್ನೆರಡು ಕೋಟಿ ರೂಪಾಯಿಗಳ ನೆರವು ನೀಡಿದ್ದನ್ನ
ಶ್ರೀಗಳು ಸ್ಮರಿಸಿದರು.

ಪ್ರಸ್ತುತ ಶಿವಮೊಗ್ಗದಲ್ಲಿ ಶ್ರೀರಾಯರ ಮಠ ನಿರ್ಮಾಣ
ಈಗ್ಯೆ ಹಿಂದಿನ ಯತಿವರ್ಯರೂ ಮತ್ತು ತಮಗೆ ಪೀಠ ನೀಡಿದ ಹಿರಿಯ ಗುರುಗಳೂ ಆಗಿದ್ದ ಶ್ರೀ ಸುಯತೀಂದ್ರ ತೀರ್ಥರ ಅಪೇಕ್ಷೆಯಾಗಿತ್ತು. ಜನನಾಯಕ ಈಶ್ವರಪ್ಪನವರಲ್ಲಿ ಹಿರಿಯ ಗುರುಗಳೇ ತಮ್ಮ ಇಚ್ವಚೆ ವ್ಯಕ್ತಪಡಿಸಿದ್ದರು.ಯೋಗಾಯೋಗ ಕೂಡಿ ಈಗ ಬೊಮ್ಮನಕಟ್ಟೆಯಲ್ಲಿ ಭವ್ಯ ಮಠ ನಿರ್ಮಾಣವಾಗಿದೆ.

ಶಾಸಕ ಈಶ್ವರಪ್ಪನವರದ್ದು ಮಠ ನಿರ್ಮಾಣಕಾರ್ಯದಲ್ಲಿ ಗಣನೀಯ ಕೊಡುಗೆ ಇದೆ. ಜೊತೆಗೆ ಅಸಂಖ್ಯ ಭಕ್ತರೂ ಕೂಡ ರಜತ ಕವಚ, ಪೂಜಾ ಪರಿಕರಗಳು ಹೀಗೆ ಅನೇಕರಿಂದ ಇಲ್ಲಿನ ಭವ್ಯ ಮಠ ತಲೆಯೆತ್ತಿ ನಿಂತಿದೆ. ಶಿವಮೊಗ್ಗದ ಎಲ್ಲ ಸಮಾಜ ಬಾಂಧವರು ಇಂದಿನ ಸಮಾರಂಭದಲ್ಲಿ ಉಪಸ್ಥಿತರಿರುವುದು ತಮಗೆ ಸಂತೋಷ ತಂದಿದೆ. ಹಿಂದೂ ಸಮಾಜ ಹೀಗೆ ಒಗ್ಗಟ್ಟಿನಿಂದ ಮುಂದುವರೆಯಬೇಕಿದೆ ಎಂದು ಶ್ರೀ ಸುಬುಧೇಂದ್ರ ತೀರ್ಥರು ಅಭಿಪ್ರಾಯ ಪಟ್ಟರು.

ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ‌‌ ಕೆ.ಎಸ್. ಈಶರಪ್ಪನವರು ಮಾತನಾಡಿ
ಹಿಂದೂ ಸಮಾಜದ ಏಕತೆಗೆ ಶ್ರಮಿಸುತ್ತಿರುವ ಮಂತ್ರಾಲಯದ ಇಂದಿನ ಶ್ರೀಸುಬುಧೇಂದ್ರ ಸ್ವಾಮಿಗಳು ಬೇರೆಯವರಿಗೆ ಮಾದರಿಯಾಗಿದ್ದಾರೆ. ಹಿಂದೆ ಶಂಕುಸ್ಥಾಪನೆಗೆ ಬಂದಾಗ ಶಿವಮೊಗ್ಗದ ಹರಿಜನ ಕೇರಿಗೆ ಮೊದಲು ಭೇಟಿ ನೀಡಿದ್ದರು.‌

ಇಡೀ ಕೇರಿಕೇರಿಯೇ ರಂಗೋಲಿಯಿಂದ ತುಂಬಿತ್ತು. ಅಲ್ಲಿ ಜನ ಅಷ್ಟು ಸಂಭ್ರಮ ಪಟ್ಟರು.ಅಲ್ಲಿನ
ವೃದ್ಧೆಯೊಬ್ಬರು ತುಳಸಿಮಾಲೆಯನ್ನ
ಗುರುಗಳ ಪಾದಕ್ಕೆ ಅರ್ಪಿಸಿ ಗುರುಗಳನ್ನು ಬಾಚಿತಬ್ಬಿಕೊಂಡರು ಎಂದು. ಆ ಭಕ್ತೆಯ ಭಕ್ತಿ ಪರಾಕಾಷ್ಠೆಯನ್ನ ತಾವು ಕಣ್ಣಾರೆ
ಕಂಡಿದ್ದನ್ನ ವರ್ಣಿಸಿದರು.

ಶಾಸಕ ಈಶ್ವರಪ್ಪನವರು ಪ್ರಸ್ತುತ ಬೊಮ್ಮನಕಟ್ಟೆ ಪ್ರದೇಶಕ್ಕೆ ಇನ್ನುಮುಂದೆ ಶ್ರೀರಾಘವೇಂದ್ರ ನಗರ ಎಂದು ನಾಮಕರಣ ಮಾಡಲು ಸೂಕ್ತ ಕ್ರಮಕೈಗೊಳ್ಳವುದಾಗಿ ತಿಳಿಸಿದರು.

ನಿಕಟಪೂರ್ವ ಮುಖ್ಯಮಂತ್ರಿ ಬಿ .ಎಸ್.ಯಡಿಯೂರಪ್ಪನವರು
ಮಾತನಾಡಿ ಶ್ರೀರಾಯರ ಮಹಿಮೆ ಮತ್ತು ಪವಾಡಗಳನ್ನ ಕೊಂಡಾಡಿದರು.

Raghavendra Tirtha ಸಾರ್ವಜನಿಕ ಸಮಾರಂಭದಲ್ಲಿ ನಾಗರಿಕರ ಪರವಾಗಿ ಶ್ರೀ ಸುಬುಧೇಂದ್ರ ತೀರ್ಥರಿಗೆ ಗೌರವ ಅರ್ಪಿಸಲಾಯಿತು.
ಮೊದಲಿಗೆ ಶ್ರೀಗಳ ಪುರಪ್ರವೇಶ ಶೋಭಾಯಾತ್ರೆ ವೈಭವಯುತವಾಗಿತ್ತು.
ವಿನೋಬಾನಗರದ ಆಂಜನೇಯ ದ್ವಾರದಿಂದ ಬೊಮ್ಮನಕಟ್ಟೆಯ ವರೆಗೆ ವಿದ್ಯುದ್ದೀಪಾಲಂಕೃತ ರಥದಲ್ಲಿ ಶ್ರೀಸುಬುಧೇಂದ್ರ ತೀರ್ಥರನ್ನ ಕರೆತರಲಾಯಿತು. ಶಿವಮೊಗ್ಗ ಮತ್ತು ಸುತ್ತಲ ಪ್ರದೇಶದ ಸಾವಿರಾರು ಭಕ್ರರು ಭಜನೆ,ಸ್ತೋತ್ರ, ಗಾಯನಗಳಿಂದ ಶೋಭಾಯಾತ್ರೆಗೆ ಮೆರುಗು ತುಂಬಿದರು.

ಕೆ. ಈ ಕಾಂತೇಶ್ ಅವರು ಎಲ್ಲರಿಗೂ ಸ್ವಾಗತ ಕೋರಿದರು. ಶ್ರೀಗಂಧ ಸಂಸ್ಥೆಯ ಶ್ರೀನಾಥ್ ನಗರ ಗದ್ದೆ ಕಾರ್ಯಕ್ರಮವನ್ನು ನಿರೂಪಿಸಿದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Fisheries ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ಅರ್ಜಿ ಆಹ್ವಾನ

Department of Fisheries ಮೀನುಗಾರಿಕೆ ಇಲಾಖೆಯು 2022-23 ರಿಂದ 2024-25 ನೇ...

National Open Athletic Championship ಬಿಹಾರದ ಓಪನ್ ಅಥ್ಲೇಟಿಕ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟು

National Open Athletic Championship ಬಿಹಾರದ ಪಾಟ್ನದಲ್ಲಿ ಸೆ. 28 ರಿಂದ...

Bhadravati Police ಅನಾಮಧೇಯ ಗಂಡಸ್ಸಿನ ಶವ ಪತ್ತೆ

Bhadravati Police ಭದ್ರಾವತಿ ಶಿವಪುರ ಗ್ರಾಮದಲ್ಲಿ ಭದ್ರಾ ಬಲದಂಡೆ ನಾಲೆಯಲ್ಲಿ ಸುಮಾರು...

Chamber Of Commerce Shivamogga ರೈಲ್ವೆ ಸೌಕರ್ಯಗಳನ್ನು ಒದಗಿಸುವಂತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮನವಿ

Chamber Of Commerce Shivamogga ಶಿವಮೊಗ್ಗ ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ...