Klive Article ಭೂವರಾಹ (ವಾದಿರಾಜರ ಜನ್ಮನಾಮ)ಹುಟ್ಟಿದ್ದು ಭೂವರಾಹದೇವರ ಅನುಗ್ರಹದಿಂದ.
ಸಂತಾನವಿಲ್ಲದ ಹೂವಿನಕೆರೆಯಲ್ಲಿದ್ದ ಶ್ರೀರಾಮಾಚಾರ್ಯರು ಮತ್ತುಗೌರಿದೇವಿ ದಂಪತಿಗಳು ಕುಂಭಾಶಿಯಲ್ಲಿ ಚಾತುರ್ಮಾಸ ವ್ರತಕ್ಕೆ ಕುಳಿತಿದ್ದ ಯತಿಗಳಾದ ಶ್ರಿವಾಗೀಶತೀರ್ಥರ ದರ್ಶನಮಾಡಿ ಅವರ ಆಶೀರ್ವಾದ
ಪಡೆದು ಭೂವರಾಹ ದೇವರ ಅನುಗ್ರಹದಿಂದ ಪುತ್ರಸಂತಾನ ವಾಗುತ್ತದೆ.
ಮಗು ಹುಟ್ಟುವ ಮೊದಲೇಶ್ರೀವಾಗೀಶತೀರ್ಥರಿಗೂ ಮತ್ತು ರಾಮಾಚಾರ್ಯ ದಂಪತಿಗಳಿಗೂ ಒಪ್ಪಂದವಾಗಿರುತ್ತದೆ.ಏನೆಂದರೆ ಮಗು ಮನೆಯ ಹೊರಗೆ ಹುಟ್ಟಿದರೆ ಮಠದ ಆಸ್ತಿ,ಎಂದರೆ ಮಗುವನ್ನು ಭೂವರಾಹದೇವರ ಸೇವೆಗಾಗಿ ಮಠಕ್ಕೆ ಕೊಡಬೇಕು.ಮನೆಯ ಒಳಗೆ ಹುಟ್ಟಿದರೆ ತಂದೆತಾಯಿಗಳ ಆಸ್ತಿ ಎಂದು.
ಮನುಷ್ಯ ಬಯಸುವುದು ಒಂದಾದರೆ ದೈವೇಚ್ಛೆಯೇ ಬೇರೆಯಾಗಿರುತ್ತೆ.
ಒಂದು ದಿನ ಸಾಧನೆ ದ್ವಾದಶಿ ಬೆಳಿಗ್ಗೆಯೇ ಪಾರಣೆ
ಬಂದಿರುತ್ತೆ.ರಾಮಾಚಾರ್ಯರು ದೇವರಪೂಜೆ
ಮುಗಿಸಿ ಊಟಕ್ಕೆ ಕುಳಿತಿರುತ್ತಾರೆ.ಪತ್ನಿ ಗೌರೀದೇವಿ
ಯಜಮಾನರಿಗೆ ಬಡಿಸುತ್ತಿದ್ದಾರೆ.ಆಗ ಅವರ ಮನೆಯ ಪಕ್ಕದಲ್ಲಿದ್ದ ಗದ್ದೆಗೆ ನಾಲ್ಕಾರು ದನಗಳು
ಬೆಳೆದ ಪೈರನ್ನು ತಿನ್ನಲು ಬಂದಿರುತ್ತವೆ.ಇದನ್ನು
ನೋಡಿದ ತುಂಬು ಗರ್ಭಿಣಿ ಗೌರೀದೇವಿಯವರು
ಗದ್ದೆಗೆ ನುಗ್ಗಿದ ದನ ಓಡಿಸಲು ಹೊರಗೆ ಬರುತ್ತಾರೆ.
ದನ ಓಡಿಸಲಿಕ್ಕೆ ಬಂದವರಿಗೆ ಗದ್ದೆಯಲ್ಲೇ ಪ್ರಸವ ವೇದನೆ ಶುರುವಾಗಿ ಅಲ್ಲೇ ಒಂದು ಮರದ ಕೆಳಗೆ
ಮುದ್ದಾದ ಗಂಡುಮಗುವಿನ ಜನನವಾಗುತ್ತೆ.
ಒಪ್ಪಂದದ ಪ್ರಕಾರ ತಂದೆತಾಯಿಯರು ಮಗುವನ್ನು ತಂದು ಮಠದಲ್ಲಿ ಶ್ರೀಗಳವರಿಗೆ ಒಪ್ಪಿಸುತ್ತಾರೆ.
ಶ್ರೀಗಳವರು ಮಗುವಿಗೆ ಆಶೀರ್ವಾದಮಾಡಿ
ಭೂವರಾಹ ನೆಂದು ನಾಮಕರಣ ವಾಗುತ್ತದೆ.
ಮುಂದೆ ಬಾಲಕ ಭೂವರಾಹನಿಗೆ ಕಾಲಕಾಲಕ್ಕೆ
ಚೌಲ,ಉಪನಯನ ಸಂಸ್ಕಾರಗಳು ನಡೆದವು.
ಶ್ರೀವಾಗೀಶತೀರ್ಥರಿಂದ ಹಯಗ್ರೀವ ಮಂತ್ರೋಪದೇಶವನ್ನು ಪಡೆದು ಕಠಿಣ ತಪಶ್ಚರ್ಯದಿಂದ ಸಿದ್ಧಿಯನ್ನು ಪಡೆಯುತ್ತಾನೆ.
ಬಾಲಕನಾಗಿರುವಾಗಲೇ ವೈರಾಗ್ಯದ ಕಡೆಗೆ ಒಲವು
ಹೊಂದಿರುತ್ತಾನೆ ಭೂವರಾಹ.
ಶ್ರೀವಾಗೀಶತೀರ್ಥರುತಮ್ಮಉತ್ತರಾಧಿಕಾರಿ
ಯಾಗಲು ಭೂವರಾಹ ನೇ ಸೂಕ್ತ ವ್ಯಕ್ತಿ ಎಂದು ತೀರ್ಮಾನಿಸಿ ಭೂವರಾಹನಿಗೆ ಸನ್ಯಾಸ ದೀಕ್ಷೆ ಬೋಧಿಸಿ “ವಾದಿರಾಜತೀರ್ಥ”ರೆಂದು ನಾಮಕರಣ ಮಾಡುತ್ತಾರೆ.ಗುರುಗಳಾದ ಶ್ರೀವಾಗೀಶತೀರ್ಥರು
ಬೃಂದಾವನಸ್ಥರಾದ ಮೇಲೆ ವಾದಿರಾಜರು ವೇದಾಂತ ಶಾಸ್ತ್ರ ಅಧ್ಯಯನಕ್ಕಾಗಿ ಶ್ರೀವ್ಯಾಸರಾಯ ಗುರುಗಳ ಬಳಿಗೆ ಬರುತ್ತಾರೆ.
ಇಲ್ಲಿ ಇವರಿಗೆ ಶ್ರೀವಿಜಯೀಂದ್ರತೀರ್ಥರು ಸಹಪಾಠಿಯಾಗಿ ಸಿಗುತ್ತಾರೆ.ವಿಜಯನಗರದ ಅರಸನಾಗಿದ್ದ ಕೃಷ್ಣದೇವರಾಯ ಇವರ ಪಾಂಡಿತ್ಯಕ್ಕೆ ಗೌರವಿಸಿ “ಪ್ರಸಂಗಾ
ಭರಣ ತೀರ್ಥ”ರು ಎಂಬ ಬಿರುದನ್ನು ನೀಡಿ ಸನ್ಮಾನಿಸುತ್ತಾನೆ.
ವ್ಯಾಸರಾಯ ಗುರುಗಳಿಂದ ವಿದ್ಯಾಭ್ಯಾಸ ಮುಗಿಸಿ
ಹೊರಡುವಾಗ ಗುರುಗಳಿಂದ ವ್ಯಾಸಮುಷ್ಟಿಯನ್ನು
ಪಾರಿತೋಷಕವಾಗಿ ಪಡೆದು ಉಡುಪಿಗೆ ಮರಳುತ್ತಾರೆ.
ಉಡುಪಿಯಲ್ಲಿ ಮಧ್ವಾಚಾರ್ಯರು ಪ್ರತಿಷ್ಠಾಪಿಸಿದ ಶ್ರೀಕೃಷ್ಣನ ಪೂಜೆಯನ್ನು 2 ತಿಂಗಳಿಂದ ಎರಡುವರ್ಷಕ್ಕೆ ವಿಸ್ತರಿಸಿದರು.
ಶ್ರೀವಾದಿರಾಜರು ತಾವು ರಚಿಸಿದ ಅಸಂಖ್ಯಾತ
ಕೀರ್ತನೆಗಳಷ್ಟೇ ಅಲ್ಲದೆ ಸಾಹಿತ್ಯರಚನೆಯಲ್ಲಿಯೂ
ಪ್ರಸಿದ್ಧರಾಗಿದ್ದಾರೆ.ಇಡೀ ಭರತ ಖಂಡವನ್ನು 4
ಬಾರಿ ಸಂಚರಿಸಿ ಪ್ರಪ್ರಥಮ ಪ್ರವಾಸ ಸಾಹಿತ್ಯ
ವೆನ್ನ ಬಹುದಾದ ತೀರ್ಥಪ್ರಬಂಧ ಎನ್ನುವ ಕೃತಿ
ರಚಿಸಿದರು.ರುಕ್ಮಿಣೀಶವಿಜಯ,ಸ್ವಪ್ನವೃಂದಾವನಾಖ್ಯಾನ,ಯುಕ್ತಿ ಮಲ್ಲಿಕ ಎನ್ನುವ ಕೃತಿಗಳನ್ನು ರಚಿಸಿದ್ದಾರೆ.ಲಕ್ಷ್ಮೀಶೋಭಾನೆ ಎನ್ನುವ ಪದ್ಯದ ಧಾಟಿಯಲ್ಲಿರುವ ಕೃತಿ ಮೇರು ಕೃತಿಯಾಗಿದೆ.
ಶ್ರೀವಾದಿರಾಜ ಸ್ವಾಮಿಗಳವರು ಒಂದು ಸಾರಿ ತಿರುಪತಿಗೆ ಶ್ರೀನಿವಾಸನ ದರ್ಶನಕ್ಕೆಂದು ಶಿಷ್ಯರೊಟ್ಟಿಗೆ ಹೋಗುತ್ತಾರೆ.ಅವರಿಗೆ ಸ್ವಾಮಿಯ ಬೆಟ್ಟಹತ್ತಲು ಹೋದಾಗ ಬೆಟ್ಟವು ಸಾಲಿಗ್ರಾಮ ಶಿಲೆಯಂತೆ ಕಂಡು ಪಾದದಿಂದ ಹತ್ತದೇ ತಮ್ಮ ಮೊಳಕಾಲುಗಳಿಂದ ಬೆಟ್ಟವನ್ನು ಹತ್ತಿ ಶ್ರೀನಿವಾಸದೇವರದರ್ಶನಮಾಡುತ್ತಾರೆ.ಶ್ರೀನಿವಾಸದೇವರಿಗೆ ಸಾಲಿಗ್ರಾಮದ ಹಾರವನ್ನು ಅರ್ಪಿಸಿ ಅನುಗ್ರಹ ಪಡೆಯುತ್ತಾರೆ.
ಐದು ಬಾರಿ ಪರ್ಯಾಯ ಪೀಠವನ್ನಲಂಕರಿಸಿದ
ಯತಿವರೇಣ್ಯರು.120 ವರ್ಷಗಳ ಕಾಲ ತುಂಬು
Klive Article ಸಾರ್ಥಕ ಜೀವನ ನಡೆಸಿದ ಮಹಾನುಭಾವರು.
ಇವರು ಪೂಜಿಸಿದ ಶ್ರೀರಮಾತ್ರಿವಿಕ್ರಮ ದೇವರ
ಸನ್ನಿಧಿ,ಮತ್ತು ಇವರ ಶಿಷ್ಯರಾದ ಶ್ರೀಭೂತರಾಜರ
ದಿವ್ಯಸನ್ನಿಧಾನವೂ ಸೋಂದಾಕ್ಷೇತ್ರದಲ್ಲಿ ಇರುತ್ತದೆ.
ಶ್ರೀವಾದಿರಾಜರು ಸಶರೀರರಾಗಿ ಕ್ರಿಶ 1600 ಫಾಲ್ಗುಣ ಬಹುಳ ತೃತೀಯ ದಂದು ಸೋಂದಾ ಕ್ಷೇತ್ರದಲ್ಲಿ ಬೃಂದಾವನ ಪ್ರವೇಶಮಾಡಿದರು.
ಶ್ರೀಗಳವರ ಆರಾಧನೆಯಂದು ಭಕ್ತಿಯಿಂದ ಅವರ ಸ್ಮರಣೆಮಾಡಿ ನಮನಗಳನ್ನು ಸಲ್ಲಿಸಿ ಧನ್ಯರಾಗೋಣ.
ಲೇ: ಎನ್.ಜಯಭೀಮ ಜೊಯಿಸ್. ಶಿವಮೊಗ್ಗ
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.