World Kidney Day ವ್ಯಕ್ತಿಯೊಬ್ಬನ ಒಟ್ಟಾರೆ ಆರೋಗ್ಯದಲ್ಲಿ ಆತನ ಕಿಡ್ನಿ ಪಾತ್ರ ಅತ್ಯಂತ ಪ್ರಮುಖವಾದದ್ದು. ಕಿಡ್ನಿ ಅಂದರೆ ಮೂತ್ರಪಿಂಡ.
ಕಿಡ್ನಿ ನಮ್ಮ ದೇಹದಲ್ಲಿರುವ ರಕ್ತವನ್ನು ಶುದ್ಧ ಮಾಡುವಂತಹ ಕೆಲಸ ಮಾಡುತ್ತದೆ. ಕಿಡ್ನಿಯ ಕಾರ್ಯಗಳಲ್ಲಿ ಸ್ವಲ್ಪ ಲೋಪ ದೋಷಗಳಾದರೂ, ಸಹಾ ಮನುಷ್ಯನಲ್ಲಿ ಅನೇಕ ಆರೋಗ್ಯ ಸಮಸ್ಯೆ ಕಾಣಿಸಲಾರಂಭಿಸುತ್ತದೆ.
ಆದ್ದರಿಂದ ಕಿಡ್ನಿಯ ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿ. ಇತ್ತೀಚಿನ ದಿನಗಳಲ್ಲಿ ಕಿಡ್ನಿ ಆರೋಗ್ಯ, ನಮ್ಮ ಜೀವನ ಶೈಲಿ ಪದ್ಧತಿಗಳಿಂದ ಹಾಳಾಗುತ್ತಿದೆ.
ಕಿಡ್ನಿ ಸಮಸ್ಯೆ ಏಕೆ ಉಂಟಾಗುತ್ತದೆ ಎಂಬ ಪ್ರಶ್ನೆಗೆ ಸರಳವಾಗಿ ಉತ್ತರಿಸುವುದಾದರೆ…
ನಮ್ಮ ಜೀವನ ಶೈಲಿ ಪದ್ಧತಿ.
ನಮ್ಮ ದೇಹದಲ್ಲಿ ಮೆದುಳು, ಹೃದಯ ಈ ಅಂಗಗಳು ಹೇಗೆ ಮುಖ್ಯವೋ ಕಿಡ್ನಿಯು ಕೂಡ ಪ್ರಮುಖವಾದಂತಹ ದೇಹದ ಒಂದು ಅಂಗ. ಕಿಡ್ನಿಯನ್ನು ಆರೋಗ್ಯವಾಗಿ ಇಡುವುದು ನಮ್ಮ ಜವಾಬ್ದಾರಿ.
ಮನುಷ್ಯನ ದೇಹದಲ್ಲಿ ಎರಡು ಕಿಡ್ನಿಗಳಿರುತ್ತವೆ. ಇವೆರಡು ದಿನವಿಡೀ ಕೆಲಸ ಮಾಡುತ್ತಿರುತ್ತವೆ. ಕಿಡ್ನಿ ನಮ್ಮ ದೇಹದ ಫಿಲ್ಟರ್ ಇದ್ದಂತೆ. ನಮ್ಮ ಶರೀರದ ಕೆಲಸಗಳಿಗೆ ಪೂರಕವಾದ ರಾಸಾಯನಿಕಗಳನ್ನ ಬಳಸಿಕೊಂಡು ಬೇಡವಾದ ವಸ್ತುಗಳನ್ನು ದೇಹದಿಂದ ಹೊರ ತಳ್ಳುವ ಕೆಲಸ ಕಿಡ್ನಿ ನಿರಂತರವಾಗಿ ಮಾಡ್ತಾ ಇರುತ್ತವೆ. ಹಾಗಾದ್ರೆ ಈ ಕಿಡ್ನಿಯ ತೂಕವೆಷ್ಟು ಎಂದು ನೋಡೋದಾದ್ರೆ… ಕೇವಲ 150 ಗ್ರಾಂ. ಇದರ ಗಾತ್ರ ಚಿಕ್ಕದಾದರೂ ಮಾಡುವ ಕೆಲಸ ಮಾತ್ರ ಊಹೆಗೂ ಮೀರಿದ್ದು. ಹೃದಯದ ಶ್ರೀ ಪ್ರಮುಖವಾದ ಇನ್ನೊಂದು ಅಂಗವೆಂದರೆ ಅದು ಕಿಡ್ನಿ. ಕಿಡ್ನಿಯ ಕೆಲಸದಲ್ಲಿ ಸ್ವಲ್ಪ ಏರುಪೇರುಗಳಾದರೂ ಸಹ ದೇಹದ ಎಲ್ಲಾ ಆಂತರಿಕ ವ್ಯವಸ್ಥೆಗಳು ಅಲ್ಲೋಲಕಲ್ಲೋಲವಾಗುತ್ತದೆ.
ಕಿಡ್ನಿ ಸಂಬಂಧಿ ರೋಗಗಳ ಲಕ್ಷಣಗಳನ್ನು ತಿಳಿದುಕೊಳ್ಳುವುದಾದರೆ, ಕಿಡ್ನಿ ಸರಿಯಾಗಿ ಕಾರ್ಯ ನಿರ್ವಹಿಸದೆ ಇದ್ದಾಗ ದೇಹದಲ್ಲಿ ಕಲ್ಮಶಗಳು ಹೆಚ್ಚಾಗಿ ವಿಪರೀತ ಸುಸ್ತು, ಹಸಿವಾಗದಿರುವುದು, ಕೆಲಸದಲ್ಲಿ ಏಕಾಗ್ರತೆ ಇಲ್ಲದಿರುವುದು, ಮೊಣಕಾಲುಗಳು ಊದುಕೊಳ್ಳುವುದು. ರಾತ್ರಿ ಹೊತ್ತು ಹೆಚ್ಚು ಮೂತ್ರ ಬರುವುದು. ಕಾಣಿಸಿಕೊಳ್ಳುವುದು. ನಿದ್ರಾ ಹೀನತೆ ಇನ್ನು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ.
ಕಿಡ್ನಿ, ಆರೋಗ್ಯವಾಗಿರಲು ಈ ಟಿಪ್ಸ್ ಗಳನ್ನ ಪಾಲಿಸಿದರೆ ಒಳಿತು ಎಂದು ಅನೇಕ ವೈದ್ಯರು ತಿಳಿಸಿದ್ದಾರೆ.
ನಮ್ಮ ಒತ್ತಡದ ವೃತ್ತಿ ಜೀವನದಲ್ಲಿ ನಾವು ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಕಡಿಮೆ. ಹೀಗಿರುವಾಗ ಕೆಲವೊಂದು ಕಿಡ್ನಿ ಆರೋಗ್ಯ ಕಾಪಾಡಲು ಸರಳ ಟಿಪ್ಸ್ ಗಳು ಇಲ್ಲಿವೆ…
* ನೀರನ್ನು ಹೆಚ್ಚು ಕುಡಿಯಬೇಕು. ದಿನಕ್ಕೆ ಮೂರರಿಂದ ನಾಲ್ಕು ಲೀಟರ್ ನೀರನ್ನು ಸೇವಿಸಿದ್ದಲ್ಲಿ ಕಿಡ್ನಿಯಲ್ಲಿನ ಲವಣಾಂಶ ಮತ್ತು ವಿಷಕಾರಕ ತ್ಯಾಜ್ಯಗಳು ಸೊಸಿ ಹೋಗುತ್ತದೆ. ಕಿಡ್ನಿಯಲ್ಲಿ ನೀರಿನ ಅಂಶ ಕಡಿಮೆಯಾದಂತೆ ಕಿಡ್ನಿಯಲ್ಲಿ ಕಲ್ಲುಗಳು ಮತ್ತು ರೋಗ ಬರುವ ಸಾಧ್ಯತೆಗಳಿರುತ್ತದೆ.
*ಯಾವುದೇ ದುಶ್ಚಟಗಳಿಗೆ ಬಲಿಯಾಗಬಾರದು. (ಧೂಮಪಾನ, ಮಧ್ಯಪಾನ)
*ಅತಿಯಾದ ನೋವು ನಿವಾರಕ ಮಾತ್ರೆಗಳನ್ನು ಸೇವಿಸಬಾರದು. ವೈದ್ಯರ ಸಲಹೆ ಇಲ್ಲದೆ ಔಷಧಿಗಳನ್ನು ಸೇವಿಸಬಾರದು.
* ನಮ್ಮ ಆಹಾರದ ಪದ್ಧತಿಯಲ್ಲಿ ಪೌಷ್ಟಿಕ ಆಹಾರದ ಸೇವನೆ.
*ನಿರಂತರವಾಗಿ ಕಾಲಕಾಲಕ್ಕೆ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯವಶ್ಯಕ.
*ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿರಿಸಿಕೊಂಡು ಡಯಾಬಿಟಿಸ್ ನಿಂದ ಮುಕ್ತವಾದಲ್ಲಿ ಕಿಡ್ನಿಯ ಸಮಸ್ಯೆಗಳು ಕಡಿಮೆಯಾಗುತ್ತದೆ.
*ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳುವಂಥ ಯೋಗವನ್ನು ಮಾಡಬೇಕು
ಈ ಟಿಪ್ಸ್ ಗಳು ನಮ್ಮ ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳಲು ಸುಲಭ ಮಾರ್ಗ.
World Kidney Day ಕಿಡ್ನಿಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಮನುಷ್ಯನ ಸಾವಿಗೆ ಇದು ಕಾರಣವಾಗುತ್ತೆ. ಆದ್ದರಿಂದ ಜನರಿಗೆ ಕಿಡ್ನಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಮಾರ್ಚ್ 9 ರಂದು “ವಿಶ್ವ ಕಿಡ್ನಿ ದಿನ” ಎಂದು ಆಚರಿಸಲಾಗುತ್ತದೆ.
ವಿಶ್ವ ಕಿಡ್ನಿ ದಿನ ಎಂಬುದು ಒಂದು ಜಾಗತಿಕ ಆರೋಗ್ಯ ಅಭಿಯಾನವಾಗಿದೆ. ಇದರಿಂದ ಜನರಿಗೆ ಕಿಡ್ನಿಯ ಮಹತ್ವವನ್ನು ತಿಳಿಸುವುದು ಇದರ ಧ್ಯೇಯವಾಗಿದೆ…
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.