Shivamogga ಜಾಗತಿಕ ಯೋಗಕ್ಷೇಮಕ್ಕೆ ವಿಜ್ಞಾನದ ಅವಶ್ಯಕತೆ, ವೈಜ್ಞಾನಿಕ ಮನೋಭಾವದ ಪ್ರಾಮುಖ್ಯತೆ ಅರಿತು, ವೈಜ್ಞಾನಿಕವಾಗಿ ವಿಧ್ಯಾರ್ಥಿಗಳು ಯೋಚಿಸಿದಾಗ ಮಾತ್ರ ದೇಶದ ಮುನ್ನಡೆ ಸಾಧ್ಯ ಎಂದು ಜಿ.ಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ್ ತೊದಲಬಾಗಿ ತಿಳಿಸಿದರು.
ಭಾರತೀಯ ನೊಬಲ್ ಪ್ರಶಸ್ತಿ ವಿಜೇತರಾದ ಭೌತಶಾಸ್ತ್ರಜ್ಞ ಸರ್ ಸಿ.ವಿ. ರಾಮನ್ ಇವರ ರಾಮನ್ ಪರಿಣಾಮದ ಅವಿಷ್ಕಾರವನ್ನು ಗುರುತಿಸಲು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಬೆಂಗಳೂರು, ನ್ಯಾಷನಲ್ ಕೌನ್ಸಿಲ್ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ ಕಮ್ಯುನಿಕೇಷನ್ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಭಾರತ ಸರ್ಕಾರದ ಬೆಂಬಲ ಹಾಗೂ ಜಿಲ್ಲಾ ಪಂಚಾಯತ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ಮಾರ್ಚ್ 8 ರಂದು ವಿನೋಭನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ಮಾತನಾಡಿ, ಸಿ.ವಿ. ರಾಮನ್ ರವರ ಬದುಕು, ಅವರ ಅವಿಷ್ಕಾರ ರಾಮನ್ ಪರಿಣಾಮ, ಬಣ್ಣಗಳ ಚದುರುವಿಕೆ ಹೇಗೆ ದಿನನಿತ್ಯದ ಬದುಕಿನಲ್ಲಿ ಕಾಣಬಹುದಾಗಿದೆ ಎಂಬ ವಿಷಯವನ್ನು ಸುವಿಸ್ತಾರವಾಗಿ ತಿಳಿಸಿದರು.
Shivamogga ವಿನೋಭನಗರದ ಫ್ರೌಢಶಾಲಾ ಮುಖ್ಯೋಪಾದ್ಯಾಯರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಎನ್‍ಡಿಆರ್‍ಎಂಎಸ್ ಅಧಿಕಾರಿಗಳು, ಶಾಲೆಯ ಮುಖ್ಯೋಪಾಧ್ಯಾಯರು ಭಾಗವಹಿಸಿದ್ದರು, ಸಂಪನ್ಮೂಲ ವ್ಯಕ್ತಿಗಳು ವಿಜ್ಞಾನದದ ಶಾಲಾ ಪಠ್ಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು-ಶಾಲಾ ಶಿಕ್ಷಕ ವೃಂದದವರು ಸೇರಿದಂತೆ ನೂರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು ಹಾಗೂ ಮಕ್ಕಳಿಗಾಗಿ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ನೀಡಲಾಯ್ತು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರು ಭಾಗವಹಿಸಿದ್ದರು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.