Monday, March 23, 2026
Monday, March 23, 2026

Social Service ಸಮಾಜ ಸೇವೆಯಲ್ಲಿನ ವೈದ್ಯರನ್ನ ಗುರುತಿಸಿ ಗೌರವ ಅರ್ಪಿಸುವುದು ಸಂಘಸಂಸ್ಥೆಗಳ ಹೊಣೆ

Date:

Shivamogga : ಸಮಾಜದಲ್ಲಿ ವೈದ್ಯರ ಸೇವೆ ತುಂಬಾ ಮಹತ್ತರವಾಗಿದೆ. ನಿರಂತರವಾಗಿ ಸಮಾಜಮುಖಿಯಾಗಿ ಕರ್ತವ್ಯ ನಿರ್ವಹಿಸುವ ವೈದ್ಯರ ಗುರುತಿಸಿ ಗೌರವಿಸುವುದು ಸಂಘ ಸಂಸ್ಥೆಗಳ ಜವಾಬ್ದಾರಿ ಎಂದು ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷೆ ಸುಷ್ಮಾ ಹಿರೇಮಠ್ ಹೇಳಿದರು.

ಅಂತರಾಷ್ಟ್ರೀಯ ದಂತ ವೈದ್ಯರ ದಿನಾಚರಣೆ ಪ್ರಯುಕ್ತ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಸಂಸ್ಥೆ ವತಿಯಿಂದ ಭಾರತೀಯ ದಂತ ವೈದ್ಯಕೀಯ ಸಂಘದ ರಾಜ್ಯ ನಿಯೋಜಿತ ಅಧ್ಯಕ್ಷ ಡಾ. ಭರತ್ ಅವರಿಗೆ ಸನ್ಮಾನಿಸಿ ಮಾತನಾಡಿದರು.

ವೈದ್ಯರು ವೃತ್ತಿಯ ಜೊತೆಯಲ್ಲಿ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದ್ದು, ಸಾರ್ವಜನಿಕರ ಆರೋಗ್ಯ ಶಿಬಿರಗಳಲ್ಲಿ ಸೇವೆ ಒದಗಿಸುತ್ತಾರೆ. ಸಾರ್ವಜನಿಕರ ಸೇವೆಯಲ್ಲಿ ಗುರುತಿಸಿಕೊಂಡಿರುವ ವೈದ್ಯರ ಸೇವೆ ಗುರುತಿಸಿ ಜೆಸಿಐ ಗೌರವಿಸುವ ಕೆಲಸ ನಡೆಸುತ್ತಿದೆ ಎಂದು ತಿಳಿಸಿದರು.

Shivamogga  ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್ ಮಾತನಾಡಿ, ಅಂತರಾಷ್ಟ್ರೀಯ ದಂತ ವೈದ್ಯರ ದಿನಾಚರಣೆಯ ಮಹತ್ವ ತಿಳಿಸಿದರು. ತುರ್ತು ಸಂದರ್ಭದಲ್ಲಿ ಜೀವ ಉಳಿಸುವ ಮಹತ್ತರ ಕಾರ್ಯದಲ್ಲಿ ವೈದ್ಯರು ಕೆಲಸ ಮಾಡುತ್ತಿದ್ದು, ಸಮಾಜಕ್ಕೆ ವೈದ್ಯರ ಕೊಡುಗೆ ಅಪಾರ ಎಂದು ಹೇಳಿದರು.
ಇದೇ ಸಂದರ್ಭದಲಿ ಭಾರತ ದಂತ ವೈದ್ಯಕೀಯ ಸಂಘದ ರಾಜ್ಯ ನಿಯೋಜಿತ ಅಧ್ಯಕ್ಷ ಡಾ. ಭರತ್ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ತರ ಅಭಿವೃದ್ಧಿ ಆಗಿದ್ದು, ತಂತ್ರಜ್ಞಾನದ ನೆರವಿನಿಂದ ಪರಿಣಾಮಕಾರಿ ವೈದ್ಯಕೀಯ ಸೇವೆ ನೀಡಲು ಸಾಧ್ಯವಾಗುತ್ತಿದೆ. ಉತ್ತಮ ಆರೋಗ್ಯ ಸೇವೆ ಜನರಿಗೆ ನೀಡಬಹುದಾಗಿದೆ ಎಂದು ತಿಳಿಸಿದರು.

ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಕಾರ್ಯದರ್ಶಿ ಡಾ. ಲಲಿತಾ, ಜೆಸಿಐ ಸಂತೋಷ್, ಕಿಶೋರ್, ಸತೀಶ್‌ಚಂದ್ರ ಹಾಗೂ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sagara News ಸಾಗರದಲ್ಲಿ “ಕ್ಯಾಂಪಸ್ ಕಟ್ಟೆ”.ಸಾಧಕಿಯರ ಬಗ್ಗೆ ವಿದ್ಯಾರ್ಥಿನಿಯರಿಂದ ಪರಿಚಯ.

Sagara News ಮಹಿಳಾ ಸಬಲೀಕರಣ ಪ್ರಾಮುಖ್ಯತೆ ಪಡೆಯುತ್ತಿರುವ ಅದೂ ಮಹಿಳಾ ದಿನಾಚರಣೆಯ...

Bakkeshwara Swamy Rathotsava ದಾವಣಗೆರೆ ಹೃದಯಭಾಗದ ರಾಜಬೀದಿಯ ಏಕೈಕವಾದ ಶ್ರೀಬಕ್ಕೇಶ್ವರ ಮಹಾರಥೋತ್ಸವ. ...

Bakkeshwara Swamy Rathotsava ದಾವಣಗೆರೆಯು ಅನಾದಿಕಾಲದಿಂದಲೂ ವ್ಯಾಪಾರೋದ್ಯಮಕ್ಕೆ ಪ್ರಸಿದ್ಧವಾದ ಕೇಂದ್ರವಾಗಿದ್ದು 1801...

KFD ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಮಂಗನ ಕಾಯಿಲೆಗೆ ಈ ವರ್ಷಎರಡನೇ ಬಲಿ.

KFD ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತಟ್ಟಿಕೇವಿಯಲ್ಲಿ ಮಂಗನ ಕಾಯಿಲೆಗೆ ಈ...

Cheetah Attack ಮುತ್ತಗಿ ಗ್ರಾಮದ ರೈತನ ಮೇಲೆ ಚಿರತೆ ಹಠಾತ್ ದಾಳಿ. ಮೆಗ್ಗಾನ್ ಆಸ್ಪತ್ರೆಗೆ ರೈತ ದಾಖಲು.

Cheetah Attack ಶಿಕಾರಿಪುರ ತಾಲ್ಲೂಕಿನ ತಡಸನಹಳ್ಳಿ, ಅಡಗಂಟಿ, ಮುತ್ತಗಿ ಗ್ರಾಮದ ರೈತರ...