Sarji Hospital Shivamogga ಇಂದಿಗೂ ಆಚಾರ- ವಿಚಾರ, ಸಂಸ್ಕಾರ- ಸಂಸ್ಕೃತಿ ಉಳಿದಿದೆಯೆಂದರೆ ದೇವರು- ಧರ್ಮ ಹಾಗೂ ಮಠ- ಮಂದಿರಗಳಿಂದ ಎಂದು ಸರ್ಜಿ ಫೌಂಡೇಶನ್ನಿನ ಮ್ಯಾನೇಜಿಂಗ್ ಟ್ರಸ್ಟಿ ಡಾ.ಧನಂಜಯ ಸರ್ಜಿ ಅಭಿಪ್ರಾಯಪಟ್ಟರು.
ಕೃಷಿ ನಗರದ ಶ್ರೀ ಶಕ್ತಿ ಗಣಪತಿ ದೇವಸ್ಥಾನದ 20 ನೇ ವಾರ್ಷಿಕೋತ್ಸವ ಅಂಗವಾಗಿ ಶನಿವಾರ ದೇವಸ್ಥಾನದ ಆವರಣದಲ್ಲಿ ಅವರು ಮುಖ್ಯಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಸತ್ಯಯುಗ, ತ್ರೇತ್ರಾಯುಗ, ದ್ವಾಪಾರಯುಗ ಹಾಗೂ ಕಲಿಯುಗ ಒಟ್ಟು 4 ಯುಗ. ಸತ್ಯಯುಗದಲ್ಲಿ ದೇವತೆಗಳು, ಮಾನವರು, ರಾಕ್ಷಸರು, ಬೇರೆ ಬೇರೆ ಲೋಕಗಳಲ್ಲಿದ್ದರಂತೆ, ಅದೇ ತ್ರೇತ್ರಾಯುಗದಲ್ಲಿ ಒಳ್ಳೆಯ ಮತ್ತು ಕೆಟ್ಟವರು ಬೇರೆ ಬೇರೆಡೆ ಇದ್ದರಂತೆ, ದ್ವಾಪಾರ ಯುಗದಲ್ಲಿ ಆ ಒಳ್ಳೆತನ ಮತ್ತು ಕೆಟ್ಟತನ ಅಣ್ಣ ತಮ್ಮಂದಿರಲ್ಲಿತ್ತಂತೆ, ಅದೇ ಕಲಿಯುಗದಲ್ಲಿ ಒಳ್ಳೆತನ ಮತ್ತು ಕೆಟ್ಟತನ ನಮ್ಮಲ್ಲಿಯೇ ಇದೆ. ಇದೇ ಕಲಿಯುಗ. ಈ ಯುಗದಲ್ಲಿ ಆಚಾರ- ವಿಚಾರ, ಸಂಸ್ಕಾರ-ಸಂಸ್ಕೃತಿ ಧರ್ಮ ಮತ್ತು ದೇವರಿಂದ ಎಂದರು.
ನಮ್ಮೊಳಗಿನ ಚಿಂತೆ, ಸಮಸ್ಯೆಗಳನ್ನು ಭಗವಂತನಲ್ಲಿ ನಿವೇದನೆ ಮಾಡಿಕೊಂಡಾಗ ನೆಮ್ಮದಿ ದೊರೆಯುತ್ತದೆ. ದೇವಸ್ಥಾನ ವಾರ್ಷಿಕೋತ್ಸವ ಆಚರಣೆ ನಿಜಕ್ಕೂ ಸಂತಸದ ವಿಚಾರ. ಅದರಲ್ಲೂ ದೇವಸ್ಥಾನಗಳಿಗೆ ವರ್ಷ ಹೆಚ್ಚಾದಷ್ಟು ಅದರ ಶಕ್ತಿ ಇನ್ನೂ ಹೆಚ್ಚಾಗುತ್ತದೆ ಎಂಬುದು ಎಲ್ಲರ ನಂಬಿಕೆ. ಅಲ್ಲದೇ ಯಾವುದೇ ಸಂಘ, ಸಂಸ್ಥೆ, ಸಂಘಟನೆಗಳನ್ನು ಸ್ಥಾಪಿಸಿ ಸರಿದೂಗಿಸಿಕೊಂಡು ಅಷ್ಟು ಸುಲಭದ ಮಾತಲ್ಲ. ಇದೇ ನಿಟ್ಟಿನಲ್ಲಿ ಈ ಆಡಳಿತ ಮಂಡಳಿ ಸಾರ್ಥಕ 20 ವರ್ಷ ಪೂರೈಸಿರುವುದು ಅಭಿನಂದನೀಯ ಎಂದರು.
Sarji Hospital Shivamogga ಬಸವ ಕೇಂದ್ರದ ಶ್ರೀ ಬಸವ ಮರುಳ ಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯರಾದ ಎಸ್.ರುದ್ರೇಗೌಡ್ರು, ಆಯನೂರು ಮಂಜುನಾಥ್, ರಾಷ್ಟ್ರೀಯ ಹಿಂದೂಪರ ಚಿಂತಕರು, ಸಾಮಾಜಿಕ ಹೋರಾಟಗಾರ್ತಿ ಚೈತ್ರ ಕುಂದಾಪುರ,ಬಿಜೆಪಿ ಮುಖಂಡರಾದ ಕೆ.ಇ.ಕಾಂತೇಶ್, ಮಹಾನಗರ ಪಾಲಿಕೆ ಸದಸ್ಯರಾದ ಧೀರರಾಜ್ ಹೊನ್ನವಿಲೆ, ಯುವ ಮುಖಂಡ ಬಳ್ಳೆಕೆರೆ ಸಂತೋಷ್, ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಅರವಿಂದ್ ಟಿ.ಡಿ., ಈ ಸಂದರ್ಭ ದೇವಸ್ಥಾನ ಸಮಿತಿಯ ಕಾರ್ಯಕಾರಿ ಮಂಡಳಿಯ ಗೌರವಾಧ್ಯಕ್ಷರಾದ ಎಚ್. ಸುಮತೀಂದ್ರಾಚಾರ್, ಉಪಾಧ್ಯಕ್ಷರಾದ ಎಚ್.ಬಿ.ಶಶಿಕುಮಾರ್, ಕಾರ್ಯದರ್ಶಿ ಷಣ್ಮುಖಪ್ಪ, ಸಹ ಕಾರ್ಯದರ್ಶಿ ಜಿ.ಎಸ್.ಗಣಪತಿ, ಖಜಾಂಚಿ ಎಸ್.ವಿ.ಗಜೇಂದ್ರ ಮತ್ತಿತರರು ಹಾಜರಿದ್ದರು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.