Saturday, September 28, 2024
Saturday, September 28, 2024

Traffic Rules ಶಾಲಾ ಕಾಲೇಜುಗಳ ಸನಿಹ ಸಂಚಾರ ನಿಯಮ ಉಲ್ಲಂಘನೆ ತಡೆಗೆ ಕ್ರಮ- ಜಿ.ಕೆ.ಮಿಥುನ್ ಕುಮಾರ್

Date:

Traffic Rules ಸೊರಬ ಪೊಲೀಸ್ ಠಾಣಾ ವ್ಯಾಪ್ತಿಯ ಸೊರಬ ಟೌನ್ ರಂಗನಾಥ ಸ್ವಾಮಿ ದೇವಸ್ಥಾನದ ಸಭಾಭವನದಲ್ಲಿ ಸೊರಬ ಮತ್ತು ಆನವಟ್ಟಿ ಪೊಲೀಸ್ ಠಾಣಾ ವತಿಯಿಂದ ಜನಸಂಪರ್ಕ ಸಭೆಯನ್ನು ಆಯೋಜಿಸಲಾಗಿತ್ತು.

ಶ್ರೀ ಮಿಥುನ್ ಕುಮಾರ್ ಜಿ. ಕೆ, ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರು ಸದರಿ ಸಭೆಗೆ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದರು.

ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಈ ಕೆಳಕಂಡ ಸಲಹೆ ಮತ್ತು ಸೂಚನೆಗಳನ್ನು ನೀಡಿದರು.

1) ರಸ್ತೆ ಸುರಕ್ಷತೆ ಮತ್ತು ಸಂಚಾರಿ ನಿಯಮಗಳ ಪಾಲನೆಯ ಕುರಿತಂತೆ ಮಾಹಿತಿಯನ್ನು ನೀಡಬೇಕು. ಶಾಲಾ ಕಾಲೇಜುಗಳು ಹತ್ತಿರ ಸಂಚಾರ ನಿಯಮ ಉಲ್ಲಂಘನೆ ತಡೆಯಲು, ಪೊಲೀಸ್ ಇಲಾಖೆಯಿಂದ ಹೆಚ್ಚಿನ ಆಧ್ಯತೆಯನ್ನು ನೀಡಬೇಕು.

ಅತಿವೇಗ ಮತ್ತು ಅಜಾಗರೂಕತೆಯ ವಾಹನ ಚಾಲನೆ ಮಾಡುವವರ ವಿರುದ್ಧ / ಅಪ್ರಾಪ್ತ ವಯಸ್ಸಿನ ಮಕ್ಕಳು ವಾಹನಗಳನ್ನು ಚಾಲನೆ ಮಾಡುವುದು / ದ್ವಿ ಚಕ್ರ ವಾಹನಗಳಲ್ಲಿ ತ್ರಿಬ್ಬಲ್ ರೈಡಿಂಗ್ ಮಾಡುವವರ ವಿರುದ್ಧ ಐಎಂವಿ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿ ಕಾನೂನು ರೀತ್ಯಾಕ್ರಮ ಕೈಗೊಳ್ಳಲಾಗುತ್ತದೆ.

2) ಶಾಲಾ ಕಾಲೇಜುಗಳು ಪ್ರಾರಂಭ ವಾಗುವ ಮತ್ತು ಮುಕ್ತಾಯವಾಗುವ ಸಮಯದಲ್ಲಿ ಶಾಲಾ ಕಾಲೇಜುಗಳ ಹತ್ತಿರ ERSS -112 ವಾಹನ ಮತ್ತು ಪೊಲೀಸ್ ಗಸ್ತು ನೇಮಿಸಲಾಗುತ್ತದೆ.

3) ಸೊರಬ ಟೌನ್ ಬೆಳೆಯುತ್ತಿದ್ದು ಸಂಚಾರ ಮಾಹಿತಿ ಸೂಚಕ ಫಲಕಗಳು (Traffic Sign Board) ಮತ್ತು ಪ್ರಮುಖ ವೃತ್ತಗಳಲ್ಲಿ ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸುವ ಕುರಿತು ಪಟ್ಟಣ ಪಂಚಾಯಿತಿಯ ಸಮನ್ವಯದೊಂದಿಗೆ ಕ್ರಮ ಕೈಗೊಳ್ಳಲಾಗುತ್ತದೆ.

4) ಅಪರಾಧ ನಡೆಯುವುದನ್ನು ತಡೆಗಟ್ಟಲು ಮತ್ತು ಪತ್ತೆ ಹಚ್ಚುವಲ್ಲಿ ಸಿ.ಸಿ ಕ್ಯಾಮೆರಾಗಳು ಪ್ರಮುಖ ಪಾತ್ರವಹಿಸುತ್ತವೆ, ಆದ್ದರಿಂದ Public Safety Act ಅಡಿಯಲ್ಲಿ ಸಾರ್ವಜನಿಕರು ತಮ್ಮ ಅಂಗಡಿ ಮತ್ತುಮನೆಗಳಿಗೆ ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳುವುದು ಇದರಿಂದಾಗಿ ಯಾವುದೇ ಘಟನೆಗಳು ನಡೆದಾಗ, ತ್ವರಿತಗತಿಯಲ್ಲಿ ಪತ್ತೆ ಹಚ್ಚಲು ಪೊಲೀಸ್ ಇಲಾಖೆಗೆ ಸಹಕಾರಿಯಾಗುತ್ತದೆ.

5) ಸೊರಬ ಬಸ್ ನಿಲ್ದಾಣದಿಂದ ರಂಗನಾಥ ಸ್ವಾಮಿ ದೇವಾಲಯದ ವರೆಗಿನ ರಸ್ತೆಯಲ್ಲಿ ಪಾರ್ಕಿಂಗ್ ವ್ಯವಸ್ಥೆಯ ಕುರಿತಂತೆ ಪಟ್ಟಣ ಪಂಚಾಯಿತಿಗೆ ವರದಿ ಸಲ್ಲಿಸಿ ಆದೇಶವಾದ ನಂತರ ಕ್ರಮ ಕೈಗೊಳ್ಳಲಾಗುತ್ತದೆ.

6) ತನಿಖೆಯಲ್ಲಿರುವ ಪ್ರಕರಣಗಳನ್ನು ವಿಳಂಬವಿಲ್ಲದೆ, ಕಾಲ ಮಿತಿಯ ಒಳಗೆ ತನಿಖೆ ಪೂರೈಸಿ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ವರದಿಯನ್ನು ಸಲ್ಲಿಸಲಾಗುತ್ತಿದೆ.

7) ಸಾರ್ವಜನಿಕರು ತಮ್ಮ ಸಮಸ್ಯೆ ಮತ್ತು ಸಹಾಯಕ್ಕಾಗಿ ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳ ಪಿಎಸ್ಐ / ಪಿಐ ರವರನನು ಭೇಟಿ ಮಾಡುವುದು / ದೂರವಾಣಿ ಮೂಲಕ ಸಂಪರ್ಕಿಸಬಹುದಾಗಿರುತ್ತದೆ.

Traffic Rules 8) ಯಾವುದೇ ತುರ್ತು ಸಂದರ್ಭದಲ್ಲಿ ಸಹಾಯಕ್ಕಾಗಿ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ/ 112 ಸಹಾಯವಾಣಿ/ ಕಂಟ್ರೋಲ್ ರೂಮ್ ಗೆ ಸಂಪರ್ಕಿಸಿ ಸಹಾಯ ಪಡೆಯಲು ತಿಳಿಸಿರುತ್ತಾರೆ.

ಈ ಸಂದರ್ಭದಲ್ಲಿ ಶ್ರೀ ಶಿವಾನಂದ ಮದರಕಂಡಿ, ಪೊಲೀಸ್ ಉಪಾಧೀಕ್ಷಕರು, ಶಿಕಾರಿಪುರ ಉಪ ವಿಭಾಗ, ಶ್ರೀಮತಿ ಭ್ಯಾಗ್ಯವತಿ, ಪೊಲೀಸ್ ವೃತ್ತ ನಿರೀಕ್ಷಕರು, ಸೊರಬ ವೃತ್ತ, ಶ್ರೀ ನಾಗರಾಜ್ ಪೊಲೀಸ್ ಉಪ ನಿರೀಕ್ಷಕರು, ಸೊರಬ ಮತ್ತು ಶ್ರೀ ಶಿವಪ್ರಸಾದ್, ಪೊಲೀಸ್ ಉಪ ನಿರೀಕ್ಷಕರು, ಆನವಟ್ಟಿ ಹಾಗೂ ಶ್ರೀ ವಿಠಲ್ ಅಗಸಿ ಪೊಲೀಸ್ ಉಪ ನಿರೀಕ್ಷಕರು, ಆನವಟ್ಟಿ ಪೊಲೀಸ್ ಠಾಣೆ ರವರು ಉಪ ಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shikaripura News ಅಹಿಂದ ಸಂಘಟನೆ ಕರೆ ನೀಡಿದ್ದ ಶಿಕಾರಿಪುರ ಬಂದ್ ಯಶಸ್ವಿ

Shikaripura News ನಾಡಿನ ಅಹಿಂದ ವರ್ಗಕ್ಕೆ ಸೇರಿದ ಜನರ ಹಿತ ಕಾಯುವ...

New Delhi News ಅಪಹರಣಕ್ಕೊಳಗಾಗಿದ್ದ ಬಾಲಕನೇ ಇಂದು ವಕೀಲನಾಗಿ ಅದೇ ಕಿಡ್ನಾಪರ್ಸ್ ಗೆ ಶಿಕ್ಷೆ ಕೊಡಿಸಿದ

New Delhi News ಈ ಹಿಂದೆ 7 ವರ್ಷದವನಾಗಿದ್ದಾಗ ಅಪಹರಣಕ್ಕೊಳಗಾಗಿದ್ದ ಬಾಲಕ...

Kasturi Rangan Comittee Report ಕಸ್ತೂರಿ ರಂಗನ್ ವರದಿ ತಿರಸ್ಕಾರ: ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ

Kasturi Rangan Comittee Report ಜುಲೈನಲ್ಲಿ ಕೇಂದ್ರ ಸರ್ಕಾರ 6ನೇ ಕರಡು...

Hosanagara News ಇಸ್ಪೀಟ್ ಅಡ್ಡೆಗೆ ಪೊಲೀಸರ ದಾಳಿ – 11 ಜನರ ಬಂಧನ 17,640 ರೂಪಾಯಿ ವಶ

Hosanagara News ಹೊಸನಗರ ತಾಲ್ಲೂಕು ಮಾರುತೀಪುರ ಗ್ರಾಮ ಪಂಚಾಯಿತಿಯ ಹಳೆಬಾಣಿಗ ರಸ್ತೆಯ...