JCI ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ತರಬೇತಿ ಕಾರ್ಯಕ್ರಮಗಳು ಪೂರಕವಾಗುತ್ತವೆ ಎಂದು ಸರ್ಜಿ ಫೌಂಡೇಶನ್ನಿನ ಮ್ಯಾನೇಜಿಂಗ್ ಟ್ರಸ್ಟಿ ಡಾ.ಧನಂಜಯ ಸರ್ಜಿ ಅವರು ಹೇಳಿದರು.
ಶಿವಮೊಗ್ಗದ ಆರ್ಯ ವೈಶ್ಯ ಸಂಸ್ಕೃತಿ ಸಧನದಲ್ಲಿ ಜೆಸಿಐ ಹಮ್ಮಿಕೊಂಡಿದ್ದ ಅನ್ವೇಷಣಾ- ಲಾಟ್ಸ್ 2023, ಲೋಕಲ್ ಆರ್ಗನೈಸೇಷನ್ ಆಫೀಸರ್ಸ್ ಟ್ರೈನಿಂಗ್ ಸೆಮಿನಾರ್ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಜೆಸಿಐ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಪ್ರತಿಷ್ಠಿತ ಸಂಸ್ಥೆಯಾಗಿ ಗುರುತಿಸಿಕೊಂಡು ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಜೆಸಿಐ ಮ್ಯಾನೇಜ್‌ಮೆಂಟ್ ವಿಭಾಗದ ನಿರ್ದೇಶಕರಾದ ಎಚ್‌ಜಿಎಫ್ ಗೌರಿಶ್ ಭಾರ್ಗವ್ ಅಧ್ಯಕ್ಷತೆ ವಹಿಸಿದ್ದರು. ತರಬೇತಿದಾರರಾಗಿ ವಲಯ ಮಾಜಿ ಅಧ್ಯಕ್ಷರು ಹಾಗೂ ಇಂಟರ್ ನ್ಯಾಷನಲ್ ಟ್ರೈನರ್ ಆದ ಜೆಸಿ ಆರ್.ಎ. ಚೇತನ್‌ರಾಮ್ ಭಾಗವಹಿಸಿದ್ದರು.
JCI ಇಂಡಿಯಾ ವಲಯ 24ರ ಅಧ್ಯಕ್ಷರಾದ ಜೆ.ಸಿ.ಅನುಷ್ ಗೌಡ, ವಲಯ 24 ರ ಪೂರ್ವ ವಲಯ ಅಧ್ಯಕ್ಷರಾದ ವಿನಾಯಕ್ ಅರೆಮನೆ, ಜೆಸಿಐ ಇಂಡಿಯಾದ ನ್ಯಾಷನಲ್ ಟ್ರೈನರ್ ಡಿ.ಜೆ.ಪ್ರದೀಪ್ ಹಾಗೂ ವಲಯ ಉಪಾಧ್ಯಕ್ಷರಾದ ಪ್ರಶಾಂತ್ ಕುಬಸದ್, ಹೊಸನಗರ ಡೈಮಂಡ್ ಘಟಕಾಧ್ಯಕ್ಷರಾದ ಮಧುಸೂಧನ್ ಎಸ್.ನಾವಡ ಹಾಜರಿದ್ದರು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.