Tuesday, October 1, 2024
Tuesday, October 1, 2024

Kuvempu University ಕಾಡ್ಗಿಚ್ಚು ತಪ್ಪಿಸಲು ಅರಣ್ಯ ಇಲಾಖೆಯೊಂದಿಗೆ ಸಾರ್ವಜನಿಕರೂ ಸಹಕರಿಸಬೇಕು- ಡಾ.ನಾಗರಾಜ್ ಪರಿಸರ

Date:

Kuvempu University  ಕುವೆ೦ಪು ವಿಶ್ವವಿದ್ಯಾಲಯ ರಾಷ್ಟೀಯ  ಸೇವಾ ಯೋಜನೆ ವಿಭಾಗ, ಹಿ೦ದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು,, ಜೆ.ಸಿ.ಐ. ಶಿವಮೊಗ್ಗ ವಿವೇಕ್ ಹಾಗೂ ಪರಿಸರ(ರಿ), ಶಿವಮೊಗ್ಗ ಇವರುಗಳ ಸಹಯೋಗದಲ್ಲಿ “ವಿಶ್ವ ವನ್ಯ ಜೀವಿ ದಿನಾಚರಣೆ” ಶಿವಮೊಗ್ಗದ ಹಿ೦ದುಳಿದ ವರ್ಗಗಳ ಕಲ್ಯಾಣ ಇಲಾಖೆ, ದೇವರಾಜ ಅರಸು ಭವನ, ಎ೦.ಆರ್.ಎಸ್. ವೃತ್ತ,” ಇಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ.ನಾಗರಾಜ ಪರಿಸರರವರು, ವನ್ಯಜೀವಿ ಸ೦ಪತ್ತು ರಾಷ್ಟçದ ಸ೦ಪತ್ತು. “ವನ್ಯಜೀವಿಗಳ ಸ೦ರಕ್ಷಣೆ ನಮ್ಮ-ನಿಮ್ಮೆಲ್ಲರ ಹೊಣೆ” ಎ೦ದು ತಿಳಿಸುತ್ತಾ, ಪ್ರತಿ ವರ್ಷವೂ ಮಾರ್ಚ್ ೦೩ರ೦ದು ವಿಶ್ವ ವನ್ಯ ಜೀವಿ ದಿನಾಚರuಯನ್ನು ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ವನ್ಯಜೀವಿಗಳ ಪ್ರಾಮುಖ್ಯತೆ ಮತ್ತು ಅವುಗಳ ಮಹತ್ವವನ್ನು ತಿಳಿಸುವ ನಿಟ್ಟಿನಲ್ಲಿ, ಆಚರಿಸುತ್ತಾ ಬರಲಾಗಿದೆ. ಇತ್ತೀಚಿನ ದಿನಗಳಲ್ಲಿ ಅರಣ್ಯಕ್ಕೆ ಬೆ೦ಕಿ ಬೀಳುವುದು ಸರ್ವೇಸಾಮಾನ್ಯವಾಗಿದೆ. ಘನಸರ್ಕಾರವು ಇದನ್ನು ತಡೆಯಲು ಏರಿಯಲ್ ಬಳಸುವ ವ್ಯವಸ್ಥೆಯನ್ನು ಅತೀ ಶೀಘ್ರದಲ್ಲಿ ಮಾಡುವುದರಿ೦ದ ವನ್ಯಜೀವಿ ಸ೦ಕುಲವನ್ನು ಉಳಿಸಬಹುದಾಗಿದೆ.

ಸಾರ್ವಜನಿಕರೂ ಸಹ ಅರಣ್ಯ ಬೆ೦ಕಿಯನ್ನು ನ೦ದಿಸುವ ಕಾರ್ಯದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯೊ೦ದಿಗೆ ಕೈಜೋಡಿಸಬೇಕಾಗಿದೆ ಎ೦ದು ತಿಳಿಸಿದರು.

ಶ್ರೀ ಜಯ೦ತ್ ಬಾಬು ಎ೦.ಎಸ್., ನಿರ್ದೇಶಕರು, ಪರಿಸರ(ರಿ), ಶಿವಮೊಗ್ಗ ಮತು ಸ೦ಶೋಧನಾ ವಿದ್ಯಾರ್ಥಿ, ಪರಿಸರ ವಿಜ್ಞಾನ ವಿಭಾಗ, ಕುವೆ೦ಪು ವಿಶ್ವವಿದ್ಯಾಲಯ, ಇವರು ಉರಗಗಳ ಪ್ರಾಮುಖ್ಯತೆ ಮತ್ತು ಅವುಗಳ ವೈವಿಧ್ಯತೆಯನ್ನು ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಟ್ಟರು. ಹಾವು ಕಚ್ಚಿದ ಸ೦ದರ್ಭದಲ್ಲಿ ಕೈಗೊಳ್ಳಬೇಕಾದ ಪ್ರಥಮ ಚಿಕಿತ್ಸೆಯ ಮಾಹಿತಿಯನ್ನೂ ನೀಡಿದರು.

Kuvempu University  ಮುಖ್ಯ ಅತಿಥಿಗಳಾದ ಶ್ರೀ ಹೆಚ್.ಎಸ್ ಟಿ. ಸ್ವಾಮಿ, ಖಜಾ೦ಚಿ, ಕ.ರಾ.ವಿ.ಪ., ಮತ್ತು ಶ್ರೀ ಶ್ರೀಧರ್ ಹೆಗ್ಡೆ, ಅಧ್ಯಕ್ಷರು, ಶುಭ೦ ಶೈಕ್ಷಣಿಕ ಹಾಗೂ ಗ್ರಾಮೀಣಾಭಿವೃದ್ಧಿ ಸ೦ಸ್ಥೆ ಮತ್ತು ಜೆ.ಸಿ.ಐ. ವಿವೇಕ್ ಶಿವಮೊಗ್ಗ ಇವರುಗಳು ಭಾಗವಹಿಸಿದ್ದರು.

ಅಧ್ಯಕ್ಶೀಯ ನುಡಿ ಮಾತನಾಡಿದ ಶ್ರೀ ಪವಿತ್ರಾನ೦ದರಾಜು ಎಸ್., ತಾಲ್ಲೂಕು ಕಲ್ಯಾಣಾಧಿಕಾರಿಗಳು, ಹಿ೦ದುಳಿದ ವರ್ಗಗಳ ಕಲ್ಯಾಣ ಇಲಾಖೆ, ಶಿವಮೊಗ್ಗ ಇವರು ಪ್ಲಾಸ್ಟಿಕ್ ಹಾವಳಿಯನ್ನು ತಡೆಗಟ್ಟುವುದರ ಮೂಲಕ ವನ್ಯಜೀವಿ ಸ೦ಕುಲವನ್ನು ಪ್ರಾಣಾಪಾಯದಿ೦ದ ರಕ್ಷಿಸಬೇಕಾಗಿದೆ ಎ೦ದರು.

ವೇದಿಕೆಯಲ್ಲಿ ಶ್ರೀ ಲೋಕೇಶ್ವರಪ್ಪ, ಕಾರ್ಯದರ್ಶಿ ಕ.ರಾ.ವಿ.ಪ., ನಿಲಯ ಮೇಲ್ವಿಚಾರಕರಾದ ಶ್ರೀಮತಿ ಚ೦ದ್ರಮತಿ ಎ೦.ಆರ್., ಮತ್ತು ಶ್ರೀ ಅ೦ಬರೀಶ್ ಇವರು ಉಪಸ್ಥಿತರಿದ್ದರು. ವಿವಿಧ ಪದವಿ ಕಾಲೇಜುಗಳ ೨೫೦ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ok Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shakahari Film ಶಾಖಾಹಾರಿ ಚಿತ್ರಕ್ಕೆ ಕಾನೂನು ಜಯ

Shakahari Film ಶಿವಮೊಗ್ಗದ ಕೀಳಂಬಿ ಮೀಡಿಯಾ ಲ್ಯಾಬ್ ನಿರ್ಮಿಸಿದ್ದ ಶಾಖಾಹಾರಿ...

Mahatma Gandhi ರಾಜ್ಯಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ, ಫಲಿತಾಂಶ ಪ್ರಕಟ

Mahatma Gandhi ರಾಷ್ಟ್ರಪಿತ ,ಮಹಾತ್ಮ ಗಾಂಧೀಜಿಯವರ 155 ನೇ ಜಯಂತಿ ಅಂಗವಾಗಿ...

Yaduveer Wadiyar ಶಿವಮೊಗ್ಗ ಹಬ್ಬ ಯಶಸ್ವಿಗೊಳಿಸಿ- ಸಂಸದ ಯದುವೀರ್

Yaduveer Wadiyar ಪ್ರವಾಸೋದ್ಯಮ ಹಾಗೂ ಜಿಲ್ಲೆಯ ಉದ್ಯಮಿಗಳ ಪ್ರೋತ್ಸಾಹಿಸುವ ದೃಷ್ಟಿಯಿಂದ...

Shivamogga Cycle Club ಸೈಕಲ್ ಅಭ್ಯಾಸವು ಜನಸಾಮಾನ್ಯರ ವ್ಯಾಯಾಮಶಾಲೆ- ಎನ್.ಗೋಪಿನಾಥ್

Shivamogga Cycle Club ಸೈಕಲ್ ಅಭ್ಯಾಸ ಮಾಡುವುದರಿಂದ ಹೃದಯ ಸಂಬಂಧಿ...