Klive Editorial :ಸಾಕಷ್ಟು ತೀವ್ರತೆ ಪಡೆದಿದ್ದ ರಾಜ್ಯ ಸರ್ಕಾರಿ ನೌಕರರ ಸಂಪಿಗೆ ಈಗ ಏಕ್ ದಂ ಬ್ರೇಕ್ ಹಾಕಿದಂತಾಗಿದೆ.
ಮುಖ್ಯಮಂತ್ರಿ ಬೊಮ್ಮಾಯಿ ಅವರ
ತಕ್ಷಣದ ಭರವಸೆ ಸದ್ಯದ ಮುಷ್ಕರ ಕೊನೆಗಾಣಿಸಿದೆ.
ಶೇ17 ರಷ್ಟು ವೇತನ ಹೆಚ್ಚಳಕ್ಕೆ ತಾತ್ವಿಕ ಒಪ್ಪಿಗೆ ನೀಡಲಾಗಿದೆ.
ಬರುವ ಏ1 ರಿಂದ ಜಾರಿಗೆ ತರುವುದಾಗಿ
ಹೇಳಲಾಗಿದೆ.
ಶೇ 17 ರಷ್ಟು ವೇತನ ಹೆಚ್ಚಳ ಸಾಮಾನ್ಯದ್ದಲ್ಲ. ಈಗಾಗಲೇ ಕೋವಿಡ್ ನಂತಹ ಇಕ್ಕಟ್ಟಿಗೆ ಸಿಲುಕಿ ಈಗೀಗ ಸರ್ಕಾರ ಸರಾಗ ಉಸಿರಾಡುತ್ತಿದೆ. ಇಂತಹ ಸನ್ನಿವೇಶದಲ್ಲಿ ಈ ಕೊಡುಗೆಯನ್ನ ನೌಕರರ ಸಂಘಟನೆ ಒಪ್ಪಿರುವುದು ಒಳ್ಳೆಯದಾಗಿದೆ.
ಸಾಮಾನ್ಯರಿಗೆ ಸಾದಾ ದಿನಗಳಲ್ಲೇ ಕೆಲಸಗಳು ಆಗುವುದು ಕಷ್ಟ.ಅಂಥದ್ದರಲ್ಲಿ ಮುಷ್ಕರ ನಡೆಸಿದರೆ
ಸಾರ್ವಜನಿಕರ ಕೋಪಕ್ಕೂ ಗುರಿಯಾಗಬೇಕಾಗುತ್ತದೆ. ಸರ್ಕಾರಿ ಸೇವೆ ಅಂದರೆ ಅದರ ಫಲ ಶ್ರೀಸಾಮಾನ್ಯರಿಗೆ ಸಿಗಬೇಕು. ಈ ತತ್ವಕ್ಕೆ ಸರ್ಕಾರಿ ನೌಕರರ ಸಂಘಟನೆ ತನ್ನ ಬದ್ಧತೆಯನ್ನೂ ತೋರಿಸಬೇಕು.
ಸದ್ಯದ ವೇತನ ಹೆಚ್ಚಳ ಸಂಗತಿ ಎದುರು ನಮ್ಮ ಅಂಗನವಾಡಿ ಕಾರ್ಯಕರ್ತೆಯರ ಸ್ಥಿತಿ ನೋಡಿದರೆ ಕನಿಕರ ಬರುವಂತಿದೆ.
ಸರ್ಕಾರಿ ನೌಕರರಷ್ಟೇ ಪ್ರಮುಖ ಸೇವೆ ನಮ್ಮ
ಅಂಗನವಾಡಿ ಸಿಬ್ಬಂದಿಯವರದೂ ಆಗಿದೆ. ಅವರ ಅಳಲಿನ ಬಗ್ಗೆಯೂ ಸರ್ಕಾರ ತೀವ್ರ ಗಮನ ಕೊಡಬೇಕಿದೆ.
Klive Editorial ಸರ್ಕಾರಿ ನೌಕರರ ಸಂಘದಲ್ಲಿ ಅಪಸ್ವರವೂ ಎದ್ದಿದೆ.
ಎಂತಹ ಸಂದರ್ಭದಲ್ಲೂ ಒಗ್ಗಟ್ಟನ್ನು ಬಿಟ್ಟುಕೊಡಬಾರದು.
ಸಚಿವಾಲಯ ನೌಕರರು ಭಿನ್ನಮತೀಯರಂತೆ ಹೇಳಿಕೆ ನೀಡುವುದು ಈಗ ಸಮಯೋಚಿತವಲ್ಲ.
ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವಲ್ಲಿ ಮುಷ್ಕರದಂತಹ ಅಸ್ತ್ರ ಬಿಟ್ಟು ಯೋಚನೆ ಮಾಡ ಬೇಕಾದ ಕಾಲವೂ ಈಗ ಸನ್ನಿಹಿತವಾಗಿದೆ ಎಂಬುದನ್ನ ಯಾರೂ ಮರೆಯಬಾರದು.
ook Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.