Science Day ಶಿವಮೊಗ್ಗ : ಮೇಲಿನ ಹನಸವಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ದಿನಾಚರಣೆ ಕಾರ್ಯಕ್ರಮವನ್ನು ವಿಭಿನ್ನವಾಗಿ ಆಚರಿಸಲಾಯಿತು.
5,6ಮತ್ತು 7ನೇ ತರಗತಿಯ ಮಕ್ಕಳು ಸಣ್ಣ, ಸಣ್ಣ ಪ್ರಯೋಗಗಳನ್ನು ಪ್ರದರ್ಶಿಸಿದ್ದು, ಮಕ್ಕಳಲ್ಲಿ ಏಕೆ, ಏನು, ಹೇಗೆ ಎಂಬ ಪ್ರಶ್ನೆಗಳನ್ನು ಮನಸ್ಸಿನಲ್ಲಿ ಹುಟ್ಟು ಹಾಕಿತು. ಜೊತೆಗೆ ವೈಜ್ಞಾನಿಕ ಮನೋಭಾವ ಬೆಳೆಸುವ ಸಂಶೋದನೆ ಕೈಗೊಳ್ಳುವ ಪ್ರೇರಣೆಯನ್ನು ಉಂಟು ಮಾಡಿತು.ಕಾರ್ಯಕ್ರಮವನ್ನು ವೈಜ್ಞಾನಿಕ ಪರಿಕರಗಳನ್ನು ಉಪಯೋಗಿಸಿ ಉದ್ಘಾಟಿಸಲಾಯಿತು.
ಇದು ನೆರೆದಿದ್ದ ಪೋಷಕರು ಹಾಗೂ ಗಣ್ಯರಲ್ಲಿ ಅಚ್ಚರಿ ಮತ್ತು ಕುತೂಹಲ ಉಂಟು ಮಾಡಿತು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಹ್ಯಾದ್ರಿ ವಿಜ್ಞಾ ಕಾಲೇಜಿನ ಪ್ರೊ.ಪ್ರಭಾಕರ್ ಅತ್ಯಂತ ಸರಳವಾಗಿ ಮಕ್ಕಳಿಗೆ ಅರ್ಥವಾಗುವಂತೆ ವಿಜ್ಞಾನ ದಿನಾಚರಣೆಯ ಹಿನ್ನೆಲೆ, ಅದರ ಮಹತ್ವ ವಿವರಿಸಿದರು.
ನಮ್ಮ ಸುತ್ತ ಮುತ್ತ ನಡೆಯುವ ಪ್ರತಿಯೊಂದು ಚಟುವಟಿಕೆಯಲ್ಲೂ ವಿಜ್ಞಾನ ಅಡಗಿರುತ್ತದೆ. ನಾವು ಅದನ್ನು ಅವಲೋಕನ, ವೀಕ್ಷಣೆ ಮಾಡುವುದರಿಂದ ನಮ್ಮಲ್ಲಿ ಏಕೆ, ಹೇಗೆ ಎಂಬ ಪ್ರಶ್ನೆಗಳು ಮೂಡಿ ಅದನ್ನು ತಿಳಿಯುವ ಆಸಕ್ತಿ ಬೆಳೆಯುತ್ತದೆ ಎಂದರು.ಥಾಮಸ್ ಆಲ್ವಾ ಎಡಿಸನ್, ಆರ್ಕಿಮಿಡೀಸ್‌ರವರ ಕಥೆ ಹೇಳುತ್ತ, ಪ್ರತಿ ಮಗುವಿನಲ್ಲಿ ವಿಶೇಷವಾದ ಕೌಶಲ್ಯ ಹುದುಗಿದೆ. ಅದನ್ನು ಹೆಕ್ಕಿ ತೆಗೆಯಬೇಕಾದ್ದು ಶಿಕ್ಷöಕರ, ಪೋಷಕರ ಕರ್ತವ್ಯ ಎಂದು ತಿಳಿಸಿದರು.ಪಿಹೆಚ್‌ಡಿ ವಿದ್ಯಾರ್ಥಿಗಳಾದ ಕಿರಣ್, ಸಿದ್ದೇಶ್ ಮಕ್ಕಳೊಂದಿಗೆ ತಮ್ಮ ಅನುಭವ ಹಂಚಿಕೊಂಡರು.
Science Day ಮಕ್ಕಳೇ ತಯಾರಿಸಿ ಅಚ್ಚುಕಟ್ಟಾಗಿ ಜೋಡಿಸದ್ದ ಇತರ ಕಲಿಕೋಪಕರಣಗಳನ್ನು ವೀಕ್ಷಿಸಿ ಮಕ್ಕಳೊಂದಿಗೆ ಸಂವಹನ ನಡೆಸಿ ಮಾಹಿತಿ ತಿಳಿದರು.ಜಿಲ್ಲಾ ಶಿಕ್ಷöಕರ ಸಂಘದ ಅಧ್ಯಕ್ಷ ಡಿ.ಬಿ.ರುದ್ರಪ್ಪ, ತಾಲ್ಲೂಕು ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಚನ್ನಮಲ್ಲಪ್ಪ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಯೋಗೀಶ್ ಕಾರ್ಯಕ್ರಮವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಎಸ್‌ಡಿಎಂಸಿ ಅಧ್ಯಕ್ಷöರು, ಸದಸ್ಯರು, ಪೋಷಕರು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷöರು ಉಪಸ್ಥಿತರಿದ್ದರು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.