Friday, November 22, 2024
Friday, November 22, 2024

Criticism From Journalist ಹಿರಿಯ ಪತ್ರಕರ್ತ ಹಾಲಸ್ವಾಮಿ ಅವರಿಗೆ ಪೊಲೀಸ್ ಇಲಾಖೆ ಅಧಿಕಾರಿಯಿಂದ ಕಿರುಕುಳ ಪತ್ರಕರ್ತರಿಂದ ಖಂಡನೆ

Date:




 Criticism From Journalist  ಸೋಗಾನೆಯ ನೂತನ ವಿಮಾನ ನಿಲ್ದಾಣದ ಉದ್ಘಾಟನಾ ಸಮಾರಂಭದ ವರದಿಗಾಗಿ ತೆರಳಿದ್ದ ಹಿರಿಯ ಪತ್ರಕರ್ತ ಆರ್.ಎಸ್ ಹಾಲಸ್ವಾಮಿ ( ಟಿ ವಿ ಭಾರತ್ ) ಅವರನ್ನು ಅಕ್ರಮವಾಗಿ ಪೊಲೀಸ್ ವ್ಯಾನಿನಲ್ಲಿ ಕೂಡಿಟ್ಟು, ಉದ್ದಟನತದಿಂದ ವರ್ತಿಸಿದ ದಾವಣಗೆರೆ ಜಿಲ್ಲಾ ರಕ್ಷಣಾಧಿಕಾರಿ ಸಿ. ಬಿ. ರಿಷ್ಯಂತ್ ಅವರನಡೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಶಾಖೆ ತೀವ್ರವಾಗಿ ಖಂಡಿಸುತ್ತದೆ ಅಲ್ಲದೇ ಉದ್ಧಟನ ತೋರಿದ ಅವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರವರಿಗೆ ಪತ್ರವನ್ನೂ ಸಹ ಬರೆದಿದೆ.

ಫೆ. 27 ರಂದು ಶಿವಮೊಗ್ಗ ನಗರದ ಸೋಗಾನೆಯ ನೂತನ ವಿಮಾನ ನಿಲ್ದಾಣ ಉದ್ಘಾಟನಾ ಸಮಾರಂಭ ಮುಕ್ತಾಯವಾಗಿ ಪ್ರಧಾನ ಮಂತ್ರಿಗಳು, ಮುಖ್ಯಮಂತ್ರಿಗಳು ಸೇರಿದಂತೆ ಎಲ್ಲಾ ಅತಿಗಣ್ಯರು ವೇದಿಕೆಯಿಂದ ನಿರ್ಗಮಿಸಿದ್ದರು.

ಈ ಸಂದರ್ಭದಲ್ಲಿ ಸಾರ್ವಜನಿಕರು ಸಭಾಸ್ಥಳದಿಂದ ಹೊರ ಬರಲಾರಂಭಿಸಿದ್ದು, ವಿಮಾನ ನಿಲ್ದಾಣದ ಕಡೆಗೆ ಹೋಗುವ ಉತ್ಸಾಹದಲ್ಲಿದ್ದರು. ಆದರೆ ಅವರನ್ನು ತಡೆಯುವಲ್ಲಿ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ದಾವಣಗೆರೆಯ ಎಸ್ಪಿ ಸಿ.ಬಿ ರಿಷ್ಯಂತ್ ಅವರು ಸಮಯ ಪ್ರಜ್ಞೆಯಿಂದ ಕೆಲಸ ಮಾಡದೆ, ಪರಿಸ್ಥಿತಿ ಅಂತಹ ಗಂಭೀರವಲ್ಲದಿದ್ದರೂ ಲಾಠಿ ಚಾರ್ಜ್ ನಡೆಸಿ, ಉದ್ಧಟತನ ಪ್ರದರ್ಶಿಸಿದ್ದಾರೆ ಎಂದು ದೂರಲಾಗಿದೆ.

ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಟಿವಿ ಭಾರತ್‌ನ ಸಂಪಾದಕರಾದ ಆರ್.ಎಸ್ ಹಾಲಸ್ವಾಮಿ ಅವರು ಒಟ್ಟಾರೆ ಪರಿಸ್ಥಿತಿಯ ಚಿತ್ರೀಕರಣದಲ್ಲಿ ತೊಡಗಿದೆ. ಲಾಠಿ ಚಾರ್ಜ್ ಘಟನೆಯನ್ನು ಚಿತ್ರೀಕರಿಸಿಕೊಂಡಿದ್ದರು.

 Criticism From Journalist  ಇದನ್ನು ಕಂಡ ಎಸ್ಪಿ ರಿಷ್ಯಂತ್ ಅವರು ತಕ್ಷಣವೆ ಪೊಲೀಸ್ ಸಿಬ್ಬಂದಿಗಳ ಮೂಲಕ ಅವರನ್ನು ಬಲವಂತವಾಗಿ ಹಿಡಿದು ಎಳೆದೊಯ್ಯದು ಪೊಲೀಸ್ ವ್ಯಾನಿನಲ್ಲಿ ಕೂಡಿ ಹಾಕಿದ್ದಲ್ಲದೆ , ಮೊಬೈಲ್ ಕಿತ್ತುಕೊಂಡು ಅದರಲ್ಲಿದ್ದ ವಿಡಿಯೋಗಳನ್ನು ಡಿಲಿಟ್ ಮಾಡಿದ್ದಾರೆ ಎಂದು ಆರೋಪಿಸಿರುವ ಸಂಘದ ಪದಾಧಿಕಾರಿಗಳು, ಪತ್ರಕರ್ತರ ಆರ್ ಎಸ್ ಹಾಲಸ್ವಾಮಿ ತಾನೊಬ್ಬ ಪತ್ರಕರ್ತ ಎಂದೂ ಮತ್ತು ಜಿಲ್ಲಾ ಪೊಲೀಸ್ ಇಲಾಖೆ -ಜಿಲ್ಲಾಡಳಿತ ನೀಡಿದ ಗುರುತಿನ ಚೀಟಿ ಧರಿಸಿದ್ದರೂ ಅದಾವುದನ್ನು ಮಾನ್ಯ ಮಾಡದೆ ದಾವಣಗೆರೆ ಎಸ್ಪಿ ಅತಿರೇಕದಿಂದ ವರ್ತಿಸಿದ್ದಾರೆ. ಅಸಭ್ಯ ಮಾತುಗಳಿಂದ ಅವಮಾನಿಸಿದ್ದಾರೆ. ಸುಮಾರು ಒಂದು ಗಂಟೆಗೂ ಹೆಚ್ಚಿನ ಕಾಲ ಪತ್ರಕರ್ತ ಹಾಲಸ್ವಾಮಿ ಅವರನ್ನು ವ್ಯಾನಿನಲ್ಲಿ ಅಕ್ರಮವಾಗಿ ಕೂಡಿಟ್ಟು, ಗಂಭೀರ ಕೇಸುಗಳನ್ನಾಕಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಕೊನೆಗೆ ಮೊಬೈಲ್‌ನಲ್ಲಿದ್ದ ಎಲ್ಲಾ ವಿಡಿಯೋಗಳನ್ನು ಡಿಲಿಟ್ ಮಾಡಿ ಬಿಟ್ಟು ಕಳುಹಿಸಿದ್ದಾರೆ ಎಂದಿದ್ದಾರೆ.

ದಾವಣಗೆರೆ ಎಸ್ಪಿಯ ಈ ವರ್ತನೆ ಆಘಾತಕಾರಿಯಾದದ್ದು, ಸ್ಥಳದ ಸನ್ನಿವೇಶವನ್ನು ಪೊಲೀಸ್ ಅಧಿಕಾರಿಯಾಗಿ ನಿರ್ವಹಿಸುವಲ್ಲಿ ವಿಫಲವಾಗಿದ್ದಾರೆ. ತಾನೊಬ್ಬ ಐಪಿಎಸ್ ಅಽಕಾರಿ ಎಂಬ ಅಹಂಕಾರ ಪ್ರದರ್ಶಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ‍್ಯವನ್ನು ಹತ್ತಿಕ್ಕುವ ಅವರಲ್ಲಿನ ಧೋರಣೆ ಅಪಾಯಕಾರಿಯಾಗಿ ಕಂಡು ಬರುತ್ತಿದೆ ಎಂದಿರುವ ಅವರು, ಟವಿ ಭಾರತ್ ಸಂಪಾದಕರಾದ ಆರ್.ಎಸ್ ಹಾಲಸ್ವಾಮಿ ಅವರು ಕಳೆದ 25 ವರ್ಷಗಳಿಂದ ಕರ್ನಾಟಕದ ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ ಬಂದಿದ್ದಾರೆ. ಅಪಾರವಾದ ಅನುಭವ, ಎಂತಹುದ್ದೇ ಪರಿಸ್ಥಿತಿಯಲ್ಲೆ ಹೇಗೆ ತನ್ನ ಕಾರ್ಯನಿರ್ವಹಿಸಬೇಕೆಂಬ ಅರಿವು ಅವರಿಗಿದೆ. ಇಂತಹ ಪತ್ರಕರ್ತರನ್ನು ಅಕ್ರಮವಾಗಿ ಕೂಡಿಟ್ಟು, ಅವಮಾನಿಸಿ, ಪತ್ರಕರ್ತನ ಕೆಲಸಕ್ಕೆ ಅಡ್ಡಿಪಡಿಸಿರುವ ದಾವಣಗೆರೆ ಎಸ್ಪಿ ರಿಷ್ಯಂತ್ ಅವರ ವರ್ತನೆ ಅತ್ಯಂತ ಖಂಡನೀಯವಾದುದ್ದು, ಅವರ ಇಂತಹ ಅತಿರೇಕದ ವರ್ತನೆಗಳು ಪೊಲೀಸ್ ಇಲಾಖೆಯ ಘನತೆಗೆ ಕಪ್ಪುಮಸಿ ಬಳಿಯುವಂತದ್ದಾಗಿದೆ. ಎಸ್ಪಿ ರಿಷ್ಯಂತ್ ವಿರುದ್ದ ಶಿಸ್ತುಕ್ರಮ ಜರುಗಿಸಬೇಕು ಎಂದು ರಾಜ್ಯಗೃಹ ಸಚಿವರಿಗೆ , ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಮೂಲಕ ಆಗ್ರಹಿಸಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಶಾಖೆಯ ಅಧ್ಯಕ್ಷರಾದ ಕೆ. ವಿ. ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಅರುಣ್ ವಿ.ಟಿ ರಾಜ್ಯ ಸಮಿತಿ ನಿರ್ದೇಶಕರಾದ ಎನ್.ರವಿಕುಮಾರ್ ಅವರುಗಳು ಎಸ್ಪಿ ರಿಷ್ಯಂತ್ ಅವರು ಪತ್ರಕರ್ತ ಹಾಲಸ್ವಾಮಿ ಅವರಲ್ಲಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y.Vijayendra ಆಹಾರ ಭದ್ರತಾ ಕಾಯ್ದೆಯಡಿ ರಾಜ್ಯಕ್ಕೆಕೇಂದ್ರದಿಂದ ಶೇ.92.50 ರಷ್ಟು ಸಹಾಯ- ಬಿ.ವೈ.ವಿಜಯೇಂದ್ರ

B.Y.Vijayendra ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ಶ್ರೀ ನರೇಂದ್ರ ಮೋದಿ...

Kannada Sahitya Sammelana ೮೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಜನಪದ ಚೇತನ “ಗೊರುಚ” ಆಯ್ಕೆ

Kannada Sahitya Sammelana ಮಂಡ್ಯದಲ್ಲಿ ನಡೆಯುವ 87ನೇ ಅಖಿಲ ಭಾರತ ಕನ್ನಡ...

CM Siddhramaiah ನವದೆಹಲಿ ಮಾರುಕಟ್ಟೆ ಪ್ರವೇಶಿಸಿದ ರಾಜ್ಯದ ನಂದಿನಿ ಬ್ರಾಂಡ್. ಗ್ರಾಹಕರಿಂದ ಉತ್ತಮ ಸ್ಪಂದನೆ- ಸಿದ್ಧರಾಮಯ್ಯ

CM Siddhramaiah ದೇಶದ ಹಾಲು ಉತ್ಪಾದನೆಯಲ್ಲಿ ಗುಜರಾತ್ ಮೊದಲ ಸ್ಥಾನದಲ್ಲಿದ್ದರೆ,...

Department of Cooperation ಹಿರಿಯ ಸಹಕಾರಿ ಧುರೀಣ ಕೊಪ್ಪದ ಎಸ್.ಎನ್.ವಿಶ್ವನಾಥ್ ಗೆ ‘ ಸಹಕಾರಿ ರತ್ನ’ ಪ್ರಶಸ್ತಿ.

Department of Cooperation ಕರ್ನಾಟಕ ಸರ್ಕಾರದ ಕರ್ನಾಟಕ ಸಹಕಾರ ಮಹಾಮಂಡಲ ದ...