Tuesday, October 1, 2024
Tuesday, October 1, 2024

B.S.Yediyurappa ಸದಾ ಹೊಳೆವ ರಾಜಕೀಯ ನಕ್ಷತ್ರ ಬಿಎಸ್ ವೈ

Date:

B.S.Yediyurappa ರಾಜಕೀಯ ಎಲ್ಲರಿಗೂ ತೆರೆದ ಬಾಗಿಲು. ಆದರೆ ಒಳಹೋಗಿ ಕರಗಿ ಹೋಗುವವರೆ ಬಹಳ.‌ ಆದರೆ ಹೋದ ಬಾಗಿಲಿನಿಂದ ವಾಪಸ್ ಬರುವವರು ಬೆರಳೆಣಿಕೆಯ ಮಂದಿ. ಅದೇ ಖ್ಯಾತಿ,ಗರಂ, ತಾಜಾತನ ಉಳಿಸಿಕೊಂಡು ಬರುವುದು ಅಪರೂಪ. ಅಂತಹವರಲ್ಲಿ ರಾಜಾಹುಲಿ ಖ್ಯಾತಿಯ ಬಿ.ಎಸ್. ಯಡಿಯೂರಪ್ಪ ಒಬ್ಬರು.

ಒಂದು ಖ್ಯಾತಿ ಪಡೆಯದ ಪಕ್ಷ. ಒಂದೇ ಅಂಕಿಯ ಅಭ್ಯರ್ಥಿ ಗೆಲುವು ಪಡೆಯುತ್ತಿದ್ದ ಸುಮಾರು ಇಪ್ಪತ್ತು ವರ್ಷಗಳ ಚುನಾವಣಾ ಇತಿಹಾಸ ನಮಗೆಲ್ಲ ಗೊತ್ತೇ ಇದೆ.

B.S.Yediyurappa ಜನಸಂಘ
ನಂತರ ಜನತಾ ಪಕ್ಷ , ಆನಂತರ ಭಾರತೀಯ ಜನತಾ ಪಕ್ಷ.

ಈ ಸಂಘಟನೆಗೆ ತನ್ನದೇ ಪಾತಳಿಯಿದೆ. ಸುಭದ್ರ ಮಾನಸಿಕ
ಒಡಂಬಡಿಕೆ. ಅಂದರೆ ತನ್ನ ನಾಯಕರ ರಾಷ್ಟ್ರೀಯ ಚಿಂತನೆಗಳಿಗೆ ಸಮರ್ಪಣೆ.

ಈ ಸಮರ್ಪಣೆ ಸುಲಭವಲ್ಲ.
ಸಾಧನೆಗೆ ಅಸಾಧ್ಯವೆನಿಸಿದರೂ
ಅದನ್ನ ಸಾಧಿಸಿದವರು ನಮ್ಮ ಕಣ್ಣೆದುರು ಆಗಿ ಹೋಗಿದ್ದಾರೆ. ಆಗುತ್ತಿದ್ದಾರೆ. ಈ ಸಾಲಿನಲ್ಲಿ ಜೂಕಿನಕೆರೆ ಸಿದ್ಧಲಿಂಗಪ್ಪ ಯಡಿಯೂಪ್ಪ ನಮಗೆ ತೀರ ಹತ್ತಿರ ಕಾಣುತ್ತಿರುವ ಹಿರಿಯ ಚೇತನ.

ರಾಜ್ಯವಾರು ಅದರಲ್ಲೂ, ದಕ್ಷಿಣ ಭಾರತದಲ್ಲಿ ಪ್ರಾದೇಶಿಕ ಪಕ್ಷಗಳ ಮೇಲುಗೈಯಾಗಿತ್ತು. ಮತ್ತೆ ಬಿಜೆಪಿಗೆ ಆಡಳಿತ ಸೂತ್ರ ಸಿಗದು ಎಂದೇ ನಂಬಿಕೊಂಡು ಬಂದಿದ್ದ ಪರಿಣಿತರ ಲೆಕ್ಕಾಚಾರವನ್ನ ತಲೆಕೆಳಗು ಮಾಡಿದ ಬಿಎಸ್ ವೈ ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಒಂದು ಇಮೇಜನ್ನ ಸೃಷ್ಟಿಸಿದರು.

ಕರ್ನಾಟಕದಲ್ಲಿ ಅವರ ರಾಜಕೀಯ ಜಾಣ್ಮೆಯನ್ನ ಯಾರಾದರೂ ಮೆಚ್ಚಲೇಬೇಕು. ಜೆಡಿಎಸ್ ಕುಮಾರಸ್ವಾಮಿಯವರಿಗೆ ಬೇಷರತ್
ಮುಖ್ಯಮಂತ್ರಿಯನ್ನಾಗಿಸಿ ಬಿಜೆಪಿಗೆ
ಆಡಳಿತದಲ್ಲಿ ಪಾಲು ಪಡೆಯುವ ಕೌಶಲವನ್ನ ಮರೆಯುವಂತಿಲ್ಲ.

ಆರ್ ಎಸ್ಎಸ್ ನ ಕಟ್ಟಾ ಸ್ವಯಂಸೇವಕರ ಮನೋಧರ್ಮವೇ ಅದು. ನಾಯಕತ್ವ ಬೆಳೆಸುವ ಪರಿಯಲ್ಲಿ ತಾವೂ ಸಮಾನಾಂತರ
ಧ್ಯೇಯವಾಗಿ ರೂಪುಗೊಳ್ಳುವುದು.
ಏಕೆಂದರೆ ಒಡನಾಡಿ ದೌರ್ಬಲ್ಯಕ್ಕೆ ಒಳಗಾದರೆ ಆ ಹೊತ್ತಿನ ಸನ್ನಿವೇಶ
ನಿರ್ವಹಿಸಲೂ ಸಮರ್ಥರಾಗಿ ಜೊತೆಯಲ್ಲಿರುವ ಸಹಭಾಗಿತ್ವ.

ಇಡೀ ರಾಜ್ಯದ ರೈತಪರಧ್ವನಿಯಾಗಿ ವಿಧಾನಸೌಧದಕಂಭಗಳನ್ನ ಅಲುಗಾಡುವಂತೆ ಮಾಡಿದವರು. ಅಲ್ಲಿಂದಲೇ ಬಿಎಸ್ ವೈ ಚರಿಶ್ಮ ಶುರು. ನಂತರ ಬಿಜೆಪಿ ಪಕ್ಷದ ಶಾಸಕರಾಗಿ‌ ಗೆಲುವು ಪಡೆಯುತ್ತಾ ಬಂದರು. ಆ ಅವಧಿಯಲ್ಲಂತೂ ಬಿಎಸ್ ವೈ ಪಕ್ಕಾ ಅನುಭವಿಯಾಗಿಯೂ ಮತ್ತು ಸಮೂಹ ನಾಯಕರಾಗಿ ಜನಪ್ರಿಯ ನಾಯಕನಾಗಿ ಹೊರಹೊಮ್ಮಿದರು.

ಅವರ ರಾಜಕೀಯ ಜೀವನದಲ್ಲಿ ಮೇಲ್ನೋಟಕ್ಕೆ ಎರಡು ಗಾಢ ತಿರುವುಗಳನ್ನ ಗುರುತಿಸಬಹುದು.
( ಸಾರ್ವಜನಿಕ ವಲಯದಲ್ಲಿ ಕೇಳಿಬಂದಂತೆ) ಕೌಟುಂಬಿಕ ಮತ್ತು ಸ್ವಾರ್ಥಿಗಳ ಒತ್ತಡಗಳಿಂದಾಗಿ ಡಿನೋಟಿಫಿಕೇಷನ್ ಆರೋಪಕ್ಕೆ ಗುರಿಯಾಗಿ 23 ದಿನಗಳ ಕಾರಾಗೃಹವಾಸ.( ನಂತರ ಕೋರ್ಟ್ ಅವುಗಳನ್ನ ರದ್ದುಗೊಳಿಸಿತು)
ಮತ್ತೊಂದು ಪಕ್ಷವೇ ಅವರನ್ನ
ದೂರಮಾಡಿದಾಗ ತಮ್ಮ ವೈಯಕ್ತಿಕ
ವರ್ಚಸ್ಸನ್ನ ಕಡಿಮೆಯಾಗದಂತೆ
ಕೆಜೆಪಿ ಪಕ್ಷ ಸಂಘಟನೆ ಮಾಡಿದ ಪ್ರಸಂಗ.

ಫೀನಿಕ್ಸ್ ನಂತೆ ಮತ್ತೆ ಹುಟ್ಟುಪಡೆದ ಬಿಎಸ್ ವೈ ಅವರ ಗಂಭೀರ ಮತ್ತು ತೀವ್ರತೆಯನ್ನ ಯಾರೂ ತಡೆಯುವಂತಿರಲಿಲ್ಲ. ಪಕ್ಷಕ್ಕೆ ಮತ್ತೆ ಅವರೇ ಬೆನ್ನೆಲುಬಾದರು.

ಬಿಎಸ್ ವೈ ರಂತೆ ವರ್ಚಸ್ಸು ಪಡೆದ ಮತ್ತೊಬ್ಬ ನಾಯಕ ಅವರ ಆಗಿನ ಅವಧಿಯ ಗೈರುಹಾಜರಿಯಲ್ಲಿ ರೂಪುಗೊಳ್ಳಲೇ ಇಲ್ಲ ಅನ್ನಬಹುದು.

ಪಕ್ಷ ಸಂಘಟನೆ ಮತ್ತು ರಾಜ್ಯದಾದ್ಯಂತ ಅವರಿಗೆ ನಿರ್ಮಾಣವಾಗಿದ್ದ ಪ್ರಭಾವಲಯ
ಚೂರೂ ಕಳೆಗುಂದಿರಲಿಲ್ಲ. ಹಿಂದಿನ ಎಲ್ಲ ಕಹಿಘಟನೆಗಳೂ ಮಂಜಿನಂತೆ ಕರಗಿಹೋಗಿದ್ದವು.

ಇಷ್ಟುಹೊತ್ತಿಗೆ ಬಿಎಸ್ ವೈ ರಾಜ್ಯದ ಎಲ್ಲ ಜಾತಿಮತಗಳ ಒಲವಿಗೆ ಪಾತ್ರರಾಗಿದ್ದರು. ಅದರಲ್ಲಂತೂ ಜೆಡಿಸ್ ಜೊತೆ ಸಮ್ಮಿಶ್ರ ಸರ್ಕಾರಮಾಡಿದ ನಂತರ ನಡೆದ
ರಾಜಕೀಯ ಒಡಂಬಡಿಕೆಗೆ ಜೆಡಿಎಸ್
ಹಿಂದೇಟು ಹಾಕಿದ ನಂತರ ಪಕ್ಷಕ್ಕೆ ಅಪಾರ ಜನಾನುಕಂಪ ಗಳಿಸಿದ್ದರು.

ಮುಖ್ಯಮಂತ್ರಿಗಳಾಗಿ‌‌ ಅವರ ಜನಪ್ರಿಯತೆ ಹೆಚ್ಚುತ್ತಲೇ ಹೋಗಿತ್ತು.
ಜೈಲುವಾಸದ ಕಪ್ಪು ಚುಕ್ಕೆ ಕೂಡ ಆ ಜನಪ್ರಿಯತೆಯ ಮುಂದೆ ಮಂಕಾಯಿತು.

ಅವರು ನಾಕುಬಾರಿ ಮುಖ್ಯಮಂತ್ರಿಗಳಾಗುವ ಪ್ರಸಂಗ ಅನಿವಾರ್ಯವಾಗೇ ಬಂದಿತು.
ಬೇರೆಬೇರೆ ಮುಖಗಳು ಮುಖ್ಯ ಮಂತ್ರಿಗಳಾದರೂ ಬಿಎಸ್ ವೈ
ಇಮೇಜಿನ ಮುಂದೆ ನಿಲ್ಲಲಾಗಲಿಲ್ಲ.ಮತ್ತೆ ಬಿಎಸ್ ವೈ
ಅನಿವಾರ್ಯವಾಗಿದ್ದರು.

ಪಕ್ಷವು ಅವರಿಗೆ ಸ್ವಲ್ಪ ಕಾಲ ಇರಿಸುಮುರಿಸು ಉಂಟುಮಾಡಿತ್ತು.
ಆದರೆ ಬಿಎಸ್ ವೈ ಅವರ ಶಕ್ತಿ , ಸಾಮರ್ಥ್ಯದ ಬಗ್ಗೆ ಎಚ್ಚರಗೊಂಡು ಕೇಂದ್ರೀಯ ಚುನಾವಣಾ ಸಮಿತಿಯ ಸದಸ್ಯತ್ವ ನೀಡಿ ಗೌರವ ವ್ಯಕ್ತಪಡಿಸಿದೆ.ಇದೊಂದು ರೀತಿ ಸಣ್ಣಗಾಯಕ್ಕೆ ಮುಲಾಮು ಹಚ್ಚಿ ಉಪಶಮನ ಮಾಡಿದಂತಾಗಿದೆ.

ಬಹಳಷ್ಟು ಸಂಗತಿಗಳನ್ನ ಮಾಧ್ಯಮಗಳು ಬಿಚ್ಚಿಟ್ಟಿವೆ.
ಆದರೆ ಎಲ್ಲವನ್ನೂ ಮೀರಿ ಜನ ಒಪ್ಪಿಕೊಂಡ ನಾಯಕ ಎಂಬುದಂತೂ ನಿರ್ವಿವಾದ.

ಮೊನ್ನಿನ ಅವರ ಶಾಸನ ಸಭೆ ಅಧಿವೇಶನದ ವಿದಾಯ ಭಾಷಣ
ಅವರ ರಾಜಕೀಯ ಮಾಗುವಿಕೆಯ ಸಂಕೇತವಾಗಿದೆ.
ಮತ್ತೆ ನಾನು( ಶಾಸಕನಾಗಿ) ವಿಧಾನ ಸೌಧ ಪ್ರವೇಶಮಾಡೋದಿಲ್ಲ.
ಚುನಾವಣೆಗೆ ನಿಲ್ಲೋದಿಲ್ಲ.
ನಮಗೆ ಹಿರಿಯರಾದ ಮಾಜಿ ಪ್ರಧಾನಿ ದೇವೇಗೌಡರು ರಾಜಕೀಯವಾಗಿ ಆದರ್ಶ.
ಇತ್ಯಾದಿ ಅವರ ನುಡಿಗಳು ನೆನಪಿನಲ್ಲಿಟ್ಟುಕೊಳ್ಳುವಂಹವು.
ವಿಪಕ್ಷಗಳೂ ಕೂಡ ಬಿಎಸ್ ವೈ ಅವರಿಗೆ ರಾಜಕೀಯ ನಿವೃತ್ತಿ ಘೋಷಿಸಬೇಡಿ. ಶಾಸಕರಾಗಿ ಆಯ್ಕೆಯಾಗಿ ಬನ್ನಿ. ನಿಮ್ಮಂತಹ ಹಿರಿಯ ಅನುಭವಿಗಳು ಸದನದಲ್ಲಿರಬೇಕು ಎಂದು ಭಾವುಕರಾಗಿ ಹೇಳಿದ ಮಾತುಗಳು ಮನಮುಟ್ಟುವಂತಿವೆ.

ಬಿಎಸ್ ವೈ ಈಗ ಎಂಭತ್ತರ ಹರೆಯದಲ್ಲಿದ್ದಾರೆ. ಅಧಿಕಾರ,ಆಡಳಿತ, ಸಂಘಟನೆ, ಮಾರ್ಗದರ್ಶನ ಇವು ಮಿಳಿತಗೊಂಡ ಅನುಭವಗಳ ನಿಧಿಯಾಗಿದ್ದಾರೆ.
ರಾಜ್ಯದಾದ್ಯಂತ ಸಂಚರಿಸಿ ಪಕ್ಷ ಸಂಘಟಿಸುತ್ತೇನೆ ಎಂಬ ಅವರ
ಮಾತುಗಳು ಈ ವಯಸ್ಸಿನಲ್ಲೂ
ಚೈತನ್ಯದ ಚಿಲುಮೆಯಾಗಿರುವ ಅವರ ರಾಜಕೀಯ ಸಂಕಲ್ಪವನ್ನ
ಬಿಂಬಿಸುತ್ತವೆ.

ಅದಕ್ಕೆ ಕೆ ಲೈವ್ ನ್ಯೂಸ್ ಹಿರಿಯ ಚೇತನಕ್ಕೆ

ಲಾಂಗ್ ಲೀವ್ ,ಬಿಎಸ್ ವೈ
ಹಿರಿಯ ಚೇತನ ಬಿಎಸ್ ವೈ
ನಮ್ಮೊಂದಿಗೆ ನೂರ್ಕಾಲವಿರಲಿ
ಎಂದು ಎಂಭತ್ತರ ಜನ್ಮದಿನದ ಶುಭ ಸಂದರ್ಭದಲ್ಲಿ ಶುಭ ಹಾರೈಸುತ್ತದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...