Chitradurga ಚಿತ್ರದುರ್ಗ ಜಿಲ್ಲಾ ಅಂಧತ್ವ ನಿಯಂತ್ರಣಾ ಸಮಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನೇತ್ರಾ ಜ್ಯೋತಿ ಕಣ್ಣಿನ ಆಸ್ಪತ್ರೆ ಹಾಗೂ ಜಿಲ್ಲಾ ಸರ್ವೋದಯ ಮಿತ್ರ ಮಂಡಳಿ ಇವರ ಸಂಯುಕ್ತಾಶ್ರಯದಲ್ಲಿ ಫೆಬ್ರವರಿ 23ರಿಂದ 25ರ ವರೆಗೆ ಜಿಲ್ಲಾ ಆಸ್ಪತ್ರೆಯಲ್ಲಿ ರೂ.51ರಲ್ಲಿ ಉಚಿತ ನೇತ್ರ ಶಸ್ತ್ರಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ.
Chitradurga ಹಿರಿಯ ನೇತ್ರ ಹಾಗೂ ಜಿಲ್ಲಾ ಅಂದತ್ವ ನಿಯಂತ್ರಣಾಧಿಕಾರಿ ಡಾಕ್ಟರ್ ಆರ್ ಕೃಷ್ಣಮೂರ್ತಿ, ನೇತ್ರ ತಜ್ಞರಾದ ಡಾಕ್ಟರ್ ಶಿಲ್ಪ ಎಂ ಐ , ಡಾಕ್ಟರ್ ಸಂದೀಪ್ ಎಂ. ಶಿಬಿರದಲ್ಲಿ ಶಸ್ತ್ರಚಿಕಿತ್ಸೆ ನಡೆಸುವರು.
ರೋಗಿಗಳಿಗೆ ಫೆ.23ರಂದು ಕಣ್ಣಿನ ತಪಾಸಣೆ ನಡೆಸಲಾಗುವುದು.ಫೆ.24ರಂದು ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಬಿರ ಜರಗುವುದು. ಫೆಬ್ರವರಿ 25ರಂದು ರೋಗಿಗಳನ್ನು ಡಿಸ್ಚಾರ್ಜ್ ಮಾಡಲಾಗುವುದು.
ಶಿಬಿರಕ್ಕೆ ಆಗಮಿಸುವ ರೋಗಿಗಳು ಯಾವುದಾದರೂ ಒಂದು ಗುರುತಿನ ಚೀಟಿ ಹಾಗೂ ಅದರ ಜೆರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ತರಬೇಕು.
ತಲೆ ಸ್ನಾನ ಮಾಡಿ ಶುಭ್ರವಾದ ಬಟ್ಟೆ ತೊಟ್ಟು, ಶಿಬಿರಕ್ಕೆ ಆಗಮಿಸಬೇಕು. ರೋಗಿಗಳು ಜೊತೆಯಲ್ಲಿ ಒಬ್ಬ ಸಹಾಯಕರನ್ನು ಕರೆತರಬೇಕು. ವೈದ್ಯರು ನೀಡುವ ಸಲಹೆಗಳನ್ನ ಪಾಲಿಸಬೇಕು.