Friday, September 27, 2024
Friday, September 27, 2024

Reporting ನೊಂದ ಮಹಿಳೆಯರ ಕುರಿತ ವರದಿಗಾರಿಕೆ ಬಗ್ಗೆ ಮಾಧ್ಯಮಗಳಿಗೆ ಜಾಗೃತಿ ಮಾಹಿತಿ

Date:

Reporting ಮಹಿಳೆಯರಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ವಿಶೇಷವಾಗಿ ಅತ್ಯಾಚಾರ ಪ್ರಕರಣಗಳಲ್ಲಿ ಪತ್ರಕರ್ತರು ಈ ಹಿಂದೆ ‘ಮೊದಲು ತಮ್ಮ ಪತ್ರಿಕೆಯಲ್ಲಿ, ಸುದ್ದಿ ವಾಹಿನಿಯಲ್ಲಿ ಪ್ರಕಟಿಸುವ ಸ್ಪರ್ಧಾ ಹುಮ್ಮಸ್ಸಿನಲ್ಲಿ ಎಲ್ಲಾ ವಿವರಗಳನ್ನು ಪ್ರಕಟಿಸಿದ ನಂತರ ಕಾನೂನಿನ ಕ್ರಮಕ್ಕೆ ಒಳಗಾಗಿದನ್ನು ನೋಡಿದ್ದೇವೆ.

ಇಂತಹ ಪ್ರಕರಣಗಳಲ್ಲಿ ಪತ್ರಕರ್ತರು ಅದರಲ್ಲೂ ದೃಶ್ಯ ಮಾಧ್ಯಮದವರು ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ವರದಿಯನ್ನು ಮಾಡುವಾಗ ಕಾನೂನಿನಲ್ಲಿ ತಮಗಿರುವ ಸೀಮಿತ ನಿರ್ಬಂಧಗಳನ್ನು ಗಮನದಲ್ಲಿಟ್ಟುಕೊಂಡು ವರದಿ ಮಾಡುವುದು ಅತ್ಯಗತ್ಯ. ಒಂದು ವೇಳೆ ಮಾಧ್ಯಮದವರು ತಿಳಿದೋ ಅಥವಾ ನಿರ್ಲಕ್ಷ್ಯತನದಿಂದಲೋ ನೊಂದ ಮಹಿಳೆಯ ಗುರುತನ್ನು ಪ್ರಕಟಿಸಿದರೆ ಅದು ಭಾರತ ದಂಡ ಸಂಹಿತ ಕಲಂ 228ಎ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗುತ್ತದೆ.

Reporting ಮಹಿಳೆಯರ ಮೇಲಿನ ದೌರ್ಜನ್ಯ ಇತರೆ ಪ್ರಕರಣಗಳ ವರದಿ ಮಾಡುವಾಗ ಕಾನೂನು ಅಂಶಗಳನ್ನು ಪರಿಗಣಿಸಿದಾಗ, ವರದಿಗಾರರ ಮೇಲೆ ಹಾಗೂ ಮಾಧ್ಯಮಗಳಮೇಲೆ ಗುರುತರವಾದ ಜವಾಬ್ದಾರಿ ಇರುವುದು ಸ್ಪಷ್ಟವಾಗುತ್ತದೆ. ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳ ಕುರಿತಂತೆ ವರದಿಗಾರರು ಕಡ್ಡಾಯವಾಗಿ ಈ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.

ನೊಂದ ಮಹಿಳೆಯ ಪರಿಚಯ ಹಾಗೂ ಗುರುತನ್ನು ಯಾವುದೇ ಕಾರಣಕ್ಕೂ ಮಾಧ್ಯಮಗಳಲ್ಲಿ ಬಹಿರಂಗ ಪಡಿಸತಕ್ಕುದಲ್ಲ.

ಕೆಲವು ಚಾಣಾಕ್ಷ ವರದಿಗಾರರು ನೇರವಾಗಿ ಹೆಸರನ್ನು ವಿಳಾಸಗಳನ್ನು ಬಹಿರಂಗಪಡಿಸದೇ ಪರೋಕ್ಷವಾಗಿ ನೊಂದ ಮಹಿಳೆಯ ಗುರುತುಗಳನ್ನು ಬಹಿರಂಗಪಡಿಸುವುದನ್ನು ನಾವು ಕಾಣಬಹುದು.

ಉದಾಹರಣೆಗೆ ನೊಂದ ಮಹಿಳೆಯ ಊರಿನ ಅಥವಾ ಗ್ರಾಮದವರ ಹೇಳಿಕೆಗಳನ್ನು ಪ್ರಸಾರ ಮಾಡುವುದು. ಮಹಿಳೆಯ ಊರು, ಕೇರಿ ಹಾಗೂ ಇವುಗಳು ಕಾಣುವಂತಹ ಬಸ್ ನಿಲ್ದಾಣ, ಗ್ರಾ.ಪಂ, ದೇವಸ್ಥಾನ ಇತ್ಯಾದಿಗಳನ್ನು ವರದಿ ಮಾಡುವುದನ್ನೂ ಸಹ ನೊಂದ ಮಹಿಳೆಯ ಗುರುತನ್ನು ಬಹಿರಂಗಪಡಿಸಿದಂತಾಗುತ್ತದೆ.

ಇಲ್ಲಿ ‘ಗುರುತು’ ಎನ್ನುವ ಶಬ್ದವನ್ನು ಕೇವಲ ಸೀಮಿತವಾಗಿ ಅರ್ಥೈಸಿಕೊಳ್ಳದೇ ನೊಂದ ಮಹಿಳೆಯು ವಾಸಿಸುವ ಊರು, ಕೇರಿ, ಸಂಬಂಧಿಕರ ವಿವರಗಳು, ಸ್ನೇಹಿತರ ವಿವರಗಳನ್ನು ಬಹಿರಂಗಪಡಿಸುವುದನ್ನೂ ಸಹ ನೊಂದ ಮಹಿಳೆಯ ಗುರುತನ್ನು ಬಹಿರಂಗಪಡಿಸಿದಂತಾಗುತ್ತದೆ.

ನಿಪುಣ್ ಸಕ್ಸೇನಾ ಮತ್ತು ಎಎನ್‍ಆರ್ ವಿರುದ್ದ ಯೂನಿಯನ್ ಆಫ್ ಇಂಡಿಯಾ & ಓಆರ್‍ಎಸ್ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಈ ಕೆಳಗಿನಂತೆ ಅಭಿಪ್ರಾಯಪಟ್ಟಿರುತ್ತದೆ.

ಒಂದು ವೇಳೆ ವರದಿಯ ಪೂರ್ಣ ಪ್ರಮಾಣದ ಚಿತ್ರಣಕ್ಕೆ ನೊಂದ ಮಹಿಳೆಯ ಗುರುತನ್ನು ಬಹಿರಂಗ ಪಡಿಸಲೇಬೇಕಾದ ಅನಿವಾರ್ಯತೆ ಕಂಡು ಬಂದಲ್ಲಿ ಆಗ, ಈ ಕಾನೂನೇ ವರದಿಗಾರರಿಗೆ ಕೆಲವೊಂದು ಮಾರ್ಗಸೂಚಿಗಳನ್ನು ನಿರ್ದಿಷ್ಟಪಡಿಸಿದೆ.

ಮೊದಲು ವರದಿಗಾರರು ಸಂಬಂಧಿಸಿದ ಠಾಣಾಧಿಕಾರಿ ಅಥವಾ ತನಿಕಾಧಿಕಾರಿಗಳನ್ನು ಕಂಡು ಅವರಿಂದ ತನಿಖೆಗೆ ಅಡ್ಡಿಯಾಗದ ರೀತಿಯಲ್ಲಿ ವರದಿ ಮಾಡುವುದಾಗಿ ಮನವರಿಕೆ ಮಾಡಿಕೊಟ್ಟ ನಂತರ ಆ ಠಾಣಾಧಿಕಾರಿ/ತನಿಖಾಧಿಕಾರಿಯಿಂದ ಲಿಖಿತವಾಗಿ ಮಾಹಿತಿ ಹಾಗೂ ಅನುಮತಿ ಕೇಳಿ ಪಡೆಯಬೇಕು.

ಒಂದು ವೇಳೆ, ಪ್ರಕರಣವನ್ನು ಬೇಧಿಸಿದ ಮೇಲೆ, ಪೊಲೀಸ್ ಅಧಿಕಾರಿಗಳು ಸುದ್ದಿಗೋಷ್ಟಿ ನಡೆಸಿದಾಗ, ಪೂರೈಸಿದ ಸುದ್ದಿ ವರದಿಯನ್ನು ತಮ್ಮ ವರದಿಗೆ ಆಧಾರವನ್ನಾಗಿಸಬಹುದು. ಆದರೆ ಆ ವರದಿಯಲ್ಲಿ ಇಲ್ಲದ ನೊಂದ ಮಹಿಳೆಯ ಗುರುತನ್ನು ಬಹಿರಂಗಪಡಿಸಿ, ಪೊಲೀಸ್ ಅಧಿಕಾರಿಗಳೇ ಸುದ್ದಿಗೋಷ್ಟಿಯಲ್ಲಿ ಬಹಿರಂಗಪಡಿಸಿದ್ದಾರೆಂಬ ರಕ್ಷಣೆಯನ್ನು ಪಡೆಯಲು ಬರುವುದಿಲ್ಲ. ಆದ್ದರಿಂದ ವರದಿಗಾರರು ಈ ಕಾನೂನಿನ್ವಯ ತನಿಖಾಧಿಕಾರಿ/ಠಾಣಾಧಿಕಾರಿಯ ಲಿಖಿತವಾಗಿ ರುಜು ಮಾಡಿ ನೀಡಿದ ಮಾಹಿತಿಯನ್ನು ಪಡೆದು ನೊಂದ ಮಹಿಳೆಯ ಗುರುತನ್ನು ಬಹಿರಂಗಪಡಿಸುವುದು ಸೂಕ್ತ.

ಈ ಕಾನೂನಿನ ಇನ್ನೊಂದು ಅವಕಾಶದಂತೆ, ವರದಿಗಾರರು ಒಂದು ವೇಳೆ ಠಾಣಾಧಿಕಾರಿ/ತನಿಖಾಧಿಕಾರಿಯ ಲಿಖಿತ ಅನುಮತಿ ಹಾಗೂ ಮಾಹಿತಿ ದೊರೆಯದೇ ಇದ್ದಾಗ ಅಥವಾ ಪಡೆಯುವ ಬದಲು, ಸ್ವತಃ ನೊಂದ ಮಹಿಳೆಯಿಂದಲೇ ರುಜು ಮಾಡಿದ ಲಿಖಿತ ಅನುಮತಿ ಮೇರೆಗೆ ಆ ನೊಂದ ಮಹಿಳೆ ನೀಡಿದ ಅವಳ ಗುರುತಿನ ಮಾಹಿತಿಗಳನ್ನು ಮಾತ್ರ ತಮ್ಮ ವರದಿಗಳಲ್ಲಿ ಬಹಿರಂಗ ಪಡಿಸಬಹುದು.

ಒಂದು ವೇಳೆ ಅತ್ಯಾಚಾರಕ್ಕೆ ಒಳಗಾದ ಮಹಿಳೆ ಮರಣ ಹೊಂದಿದ್ದರೆ, ಅಪ್ರಾಪ್ತ ಬಾಲಕಿಯಾಗಿದ್ದರೆ ಅಥವಾ ಬುದ್ದಿ ಮಾಂದ್ಯಳಾಗಿದ್ದಲ್ಲಿ ಆಗ ಕಡ್ಡಾಯವಾಗಿ ಆ ಮಹಿಳೆಯ ಸಂಬಂಧಿಕರ ಅಥವಾ ಪೋಷಕರಿಂದ ಲಿಖಿತವಾಗಿ ಮಾಹಿತಿ ಪಡೆಯಬೇಕು. ಒಂದು ವೇಳೆ ಆ ನೊಂದ ಮಹಿಳೆ ಯಾವುದಾದರೂ ಅಧಿಕೃತ ಸಂಸ್ಥೆಯಲ್ಲಿ ಆಶ್ರಯ ಪಡೆದಿದ್ದರೆ ಆಗ ಆ ಸಂಸ್ಥೆಯ ಕಾರ್ಯದರ್ಶಿ ಅಥವಾ ಅಧ್ಯಕ್ಷರ ಲಿಖಿತ ಅನುಮತಿ ಅತ್ಯಗತ್ಯ.

ತನಿಖಾಧಿಕಾರಿಯು ಪ್ರಕರಣ ಪೂರ್ಣ ತನಿಖೆಯ ನಂತರ, ಆರೋಪಿಯ ವಿರುದ್ದ ಸಲ್ಲಿಸುವ ಅಂತಿಮ ವರದಿ ಅಥವಾ ದೋಷಾರೋಪಣ ವರದಿಗಳಲ್ಲಿಯೂ ಸಹ ನೊಂದ ಮಹಿಳೆಯ ಗುರುತುಗಳನ್ನು ಬಹಿರಂಗಪಡಿಸಬಾರದು. ತನಿಖಾಧಿಕಾರಿಯೂ ಸಹ ನೊಂದ ಮಹಿಳೆಯ ಗುರುತನ್ನು ಸೀಲು ಮಾಡಿದ ಲಕೋಟೆಯಲ್ಲಿರಿಸಿ ವರದಿಗಳಲ್ಲಿ ಮಾರ್ಪಡಿಸಿದ ಹೆಸರನ್ನು ಮಾತ್ರ ಉಲ್ಲೇಖಿಸಬೇಕು.

ಒಂದು ಬಾರಿ ಪ್ರಕರಣದ ವಿಚಾರಣೆಯನ್ನು ಪ್ರಾರಂಭಿಸಿದ ನಂತರ ವರದಿಗಾರರು ವಿಚಾರಣಾ ನ್ಯಾಯಾಲಯದ ಪೂರ್ವಾನುಮತಿ ಇಲ್ಲದೇ ನೊಂದ ಮಹಿಳೆಯ ಗುರುತನ್ನು ವರದಿ ಮಾಡತಕ್ಕುದಲ್ಲ. ಇನ್ನು ಇದೇ ವಿಷಯವನ್ನು ಪೋಕ್ಸೋ ಅಧಿನಿಯಮಕ್ಕೆ ಸಂಬಂಧಿಸಿದಂತೆ ಕಾರ್ಯವಿಧಾನ-(1) ಯಾರೇ ವ್ಯಕ್ತಿಯು, ಮಗುವಿನ ಗುಣ ಚಾರಿತ್ರ್ಯಕ್ಕೆ ಧಕ್ಕೆ ತರುವ ಅಥವಾ ಮಗುವಿನ ಏಕಾಂತತೆಗೆ ಭಂಗ ಉಂಟು ಮಾಡಬಹುದಾದಂತಹ ಪರಿಣಾಮವುಳ್ಳ ಯಾವುದೇ ವರದಿಯನ್ನು ಅಥವಾ ಅಭಿಪ್ರಾಯವನ್ನು ಅದರ ಬಗ್ಗೆ ಅಥವಾ ಅವುಗಳ ಬಗ್ಗೆ ಪರಿಪೂರ್ಣವಾದ ಹಾಗೂ ವಿಶ್ವಾಸಾರ್ಹವಾದ ಮಾಹಿತಿ ಇಲ್ಲದೆಯೇ ಯಾವುದೇ ಬಗೆಯ ಮಾಧ್ಯಮದಿಂದ ಅಥವಾ ಸ್ಟುಡಿಯೋದಿಂದ ಅಥವಾ ಛಾಯಾಚಿತ್ರ ಸೌಲಭ್ಯಗಳಿರುವ ಕಡೆಯಿಂದ ಮಗುವಿಗೆ ಸಂಬಂಧಿಸಿದಂತೆ ಯಾವುದೇ ರೀತಿಯಲ್ಲಿ ಅಂತಹ ಯಾವುದೇ ವರದಿಯನ್ನು ಮಾಡತಕ್ಕದ್ದಲ್ಲ ಅಥವಾ ಅಭಿಪ್ರಾಯಗಳನ್ನುಪ್ರಸ್ತುತಪಡಿಸತಕ್ಕದ್ದಲ್ಲ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Hassan Manikya Prakashana ಶಿವಮೊಗ್ಗದ ಕವಿ ಶಿ.ಜು.ಪಾಶಾ ಅವರಿಗೆ “ಜನ್ನ ಕಾವ್ಯ ಪ್ರಶಸ್ತಿ”

Hassan Manikya Prakashana ಹಾಸನದ ಮಾಣಿಕ್ಯ ಪ್ರಕಾಶನ(ರಿ) ರಾಜ್ಯಮಟ್ಟದ ಜನ್ನ ಕಾವ್ಯ...

Vajreshwari Co Operative Society ಶ್ರೀವಜ್ರೇಶ್ವರಿ ಸಹಕಾರ ಸಂಘದಿಂದ ಪ್ರತಿಭಾ ಪುರಸ್ಕಾರ

Vajreshwari Co Operative Society ಶಿವಮೊಗ್ಗ ನಗರದ ಹೊಸಮನೆ ಬಡಾವಣೆಯ ಶ್ರೀ...

Inner Wheel Shivamogga ದುರ್ಬಲರಿಗೆ ನೆರವು ನೀಡಿದಾಗ ಸೇವೆ ಸಾರ್ಥಕ- ಶಿಲ್ಪ ಗೋಪಿನಾಥ್

Inner Wheel Shivamogga ನಾವು ಮಾಡುವ ಸೇವೆ ಸಾರ್ಥಕಗೊಳ್ಳಬೇಕಾದರೆ...

National Education Committee ಬೆಳಗುತ್ತಿ & ಮಲ್ಲಿಗೇನಹಳ್ಳಿಯಲ್ಲಿ ಗಮನ ಸೆಳೆದ ಎನ್.ಎಸ್.ಎಸ್. ವಾರ್ಷಿಕ ಶಿಬಿರ

National Education Committee ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿರಂಗಪ್ರಯೋಗದ...