Navika newspaper ಕರ್ನಾಟಕ ರಾಜ್ಯ ಸರ್ಕಾರದ ಮಾಧ್ಯಮ ಅಕಾಡೆಮಿಯಿಂದ ಆದೋಲನ ಪ್ರಶಸ್ತಿ ಯನ್ನು ನಾವಿಕ ಕನ್ನಡ ದಿನಪತ್ರಿಗೆ ನೀಡಿರುವುದು ಪತ್ರಿಕಾ ತಂಡದ ನಿರಂತರ ಕ್ರಿಯಾಶೀಲತೆಗೆ ಸಂದ ಪ್ರತಿಫಲ ಎಂದು ಭಾವಿಸುವೆ ಎಂದು ಉಪಸಂಪಾದಕರಾದ ಎಸ್.ಆರ್ ರಂಜಿತ್ ರಂಗಸ್ವಾಮಿಯವರು ತಿಳಿಸಿದರು.
Navika newspaper ಅವರು ಜೆಸಿಐ ಶಿವಮೊಗ್ಗ ಶರಾವತಿ ಪೌಂಡೇಶನ್ ಹಾಗೂ ಘಟಕದ ವತಿಯಿಂದ ಜಂಟಿ ಆಶ್ರಯದಲ್ಲಿ ನಗರದ ಶುಭಂ ಹೋಟೆಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಪತ್ರಿಕೆ ಎಂಬುದು ಅಸಾಧಾರಣವಾದ ಹೆಜ್ಜೆಗಳು, ಅದರ ಮೂಲ ಮೌಲ್ಯ ಉಳಿಸಿಕೊಂಡು ವೃದ್ದಿಸಿಕೊಂಡು ಹೋಗುವುದು ಸಾಹಸವೇ ಹೌದು. ಈ ಪ್ರಯತ್ನ ತಂದೆಯವರ ಕಾಲದಲ್ಲಿಯು ಇತ್ತು ಇದೀಗಲೂ ಇದೆ ಹೀಗಾಗಿ ನಾವಿಕ ಎನ್ನುವುದು ಮಲೆನಾಡಿನಲ್ಲಿ ತನ್ನದೇ ಛಾಪು ಮೂಡಿಸಿದ ಮೊಹರಾಗಿದೆ ಎಂದು ಎಸ್.ಆರ್ ರಂಜಿತ್ ರಂಗಸ್ವಾಮಿಯವರು ಹೇಳಿದರಲ್ಲದೆ ನಾಗರೀಕ ಸಂಸ್ಥೆಯಾದ ನಿಮ್ಮ ಪೌಂಡೇಶನ್ ಹಾಗೂ ಘಟಕ ಒಟ್ಟಾಗಿ ಅಭಿನಂದನೆ ಸಲ್ಲಿಸಿ ಗೌರವಿಸಿರುವುದಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದು ಈ ಸಂದರ್ಭದಲ್ಲಿ ನುಡಿದರು.
ಪೌಂಡೇಶನ್ ಮ್ಯಾನೇಜ್ಮಂಟ್ ಟ್ರಸ್ಟಿಯಾದ ಜ್ಯೋತಿ ಅರಳಪ್ಪನವರು ಮಾತನಾಡಿ ನಾವಿಕ ಎರೆಡೆರೆಡು ತಲೆಮಾರುಗಳ ಕಂಡ ಶಿವಮೊಗ್ಗದ ಹೆಮ್ಮೆಯ ದಿನಪತ್ರಿಕೆ, ಅಕ್ಷರದ ಮೊಳೆ ಜೋಡಿಸುವ ಕಾಲದಿಂದ ತಾಂತ್ರಿಕ ಅಭಿವೃದ್ದಿಗಳ ಬದಲಾದ ಈ ಕಾಲದ ತನಕವೂ ತನ್ನ ಮೇರು ಅಸ್ತಿತ್ವವನ್ನು ಕಾಪಾಡಿಕೊಂಡು ಬಂದಿದೆ.
ಉತ್ತಮ ಸುದ್ದಿ, ಸಾಮಾಜಿಕ ಕಾರ್ಯಕ್ರಮಗಳಿಗೆ ಉತ್ತೇಜನ, ನೀಡುತ್ತಿರುವ ನಾವಿಕ ದಿನಪತ್ರಿಕೆ ಅನೇಕ ಸ್ಪರ್ಧಾತ್ಮಕ ಸವಾಲುಗಳನ್ನು ಸಮರ್ಥವಾಗಿ ಎದುರಿಸಿಯೇ ತನ್ನ ಹೆಸರನ್ನು ಉಳಿಸಿಕೊಂಡು ಬಂದಿದೆ, ಹೀಗಾಗಿ ಅವರಿಗೆ ಆಂದೋಲನಾ ಪ್ರಶಸ್ತಿ ಲಭಿಸಿದೆ ಎಂದು ಅಭಿಪ್ರಾಯಿಸುತ್ತೇನೆ ಮುಂದಿನ ದಿನಗಳಲ್ಲಿ ನಾವಿಕ ಪತ್ರಿಕೆ ಪ್ರಾದೇಶಿಕ ಪತ್ರಿಕೆಯಾಗಿ ರೂಪುಗೊಳ್ಳಲಿ ಎಂದು ಹಾರೈಸುತ್ತೇನೆ ಎಂದು ಜ್ಯೋತಿ ಅರಳಪ್ಪನವರು ತಿಳಿಸಿದರು.
ಘಟಕದ ಅಧ್ಯಕ್ಷರಾದ ಜೆಸಿ.ಶೋಭಾ ಸತೀಶ್‌ರವರು ಮಾತನಾಡಿ ನಾವಿಕ ಕನ್ನಡ ದಿನಪತ್ರಿಕೆ ಕಛೇರಿ ಗಾಂಧಿಬಜಾರಿನಲ್ಲಿದ್ದ ಸಂದರ್ಭದಲ್ಲಿ ಅತೀವ ಕುತೂಹಲದಿಂದ ನಾವು ನೋಡುವುದಕ್ಕೆ ತೆರಳುತ್ತಿದ್ವಿ ಏಕೆಂದರೆ ಕಛೇರಿ ನಮ್ಮ ಮನೆಯ ಹತ್ತಿರವೇ ಇತ್ತು, ಅಕ್ಷರದ ಮೊಳೆ ಜೋಡಿಸುವುದು, ನಂತರ ಮುದ್ರಿಸುವುದು ಹೇಗೆ ಎನ್ನುವುದು ನೋಡುವ ಕಾತುರತೆಗಳಿದ್ದವು, ಇದೀಗ ಎಲ್ಲವೂ ಬದಲಾಗಿದೆ, ಮ್ಯಾನ್ಯುಯಲ್ ನಿಂದ ಗಣಕಿಕೃತಗೊಂಡಿದೆ. ಅಂದು ಕೂಡ ಶಿವಮೊಗ್ಗ ಜನತೆಗೆ ನಾವಿಕ ದಿನಪತ್ರಿಕೆ ಓದುವ ಹವ್ಯಾಸಕ್ಕೆ ಒಳಗಾಗಿದ್ದರು ಒಂದು ಪತ್ರಿಕೆಯೊಳಗಿನ ಸಂಗತಿಗಳು ತಿಳಿದುಕೊಳ್ಳುವುದಾಗಿತ್ತು.
ಅಂತಹ ಉತ್ಸುಕತೆಯನ್ನು ನಾವಿಕ ಕನ್ನಡ ದಿನಪತ್ರಿಕೆ ಈ ತಾಂತ್ರಿಕತೆಯ ಬದಲಾಗುವ ಎಲ್ಲಾ ಸಂದರ್ಭದಲ್ಲಿಯೂ ತನ್ನ ಸಾರ್ವಜನಿಕ ಗುರಿ ಸಡಿಲಿಸಿಲ್ಲ, ಕರ್ನಾಟಕ ಮಾಧ್ಯಮ ಆಕಾಡೆಮಿಯವರು ಕೊಟ್ಟಿರುವ ಆಂದೋಲನಾ ಪ್ರಶಸ್ತಿ ಮೌಲ್ಯಾಧಾರಿತ ಪತ್ರಿಕೆಗೆ ನೀಡಿದೆ ಎಂದು ಭಾವಿಸಿ ಘಟಕ ಹಾಗೂ ಪೌಂಡೇಶನ್‌ನಿಂದ ಅಭಿನಂದಿಸುತ್ತೇನೆ ಎಂದರು.
ನಂತರ ಆಂದೋಲನಾ ಪ್ರಶಸ್ತಿ ಗೆ ಭಾಜನರಾದ ನಾವಿಕ ಕನ್ನಡ ದಿನಪತ್ರಿಕೆಯ ಉಪಸಂಪಾದಕರಾದ ಎಸ್.ಆರ್ ರಂಜೀತ್ ರವರಿಗೆ ಸನ್ಮಾನಿಸಿ ಗೌರವಿಸಲಾಯಿತು
ಕಾರ್ಯಕ್ರಮದ ವೇದಿಕೆಯಲ್ಲಿ ಪತ್ರಕರ್ತರಾದ ಹೆಚ್.ಎನ್ ಮಂಜುನಾಥ್, ರೈತ ಸಂಘದ ಮುಖಂಡರಾದ ಸತೀಶ್ ಶಿರಾಳಕೊಪ್ಪ, ಪೌಂಡೇಶನ್ ಕಾರ್ಯದರ್ಶಿ ಟ್ರಸ್ಟಿಯಾದ ಗಾರಾ.ಶ್ರೀನಿವಾಸ್, ಕಾರ್ಯಕ್ರಮದ ನಿರ್ದೇಶಕರಾದ ಜೆಸಿ.ಸಿದ್ದರಾಮರವರುಗಳು ಉಪಸ್ಥಿತರಿದ್ದರು.
ಹಾಗೂ ಸಮಾರಂಭದಲ್ಲಿ ಎಲ್ಲಾ ಜೆಸಿಗಳು ಉಪಸ್ಥಿತರಿದ್ದರು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.