Sangeeta academy ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ 2022-23 ನೇ ಸಾಲಿನಲ್ಲಿ ವಿಶೇಷ ಘಟಕ ಯೋಜನೆಯಡಿ ಗುರುಶಿಷ್ಯ ಪರಂಪರೆ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಗುರುಶಿಷ್ಯ ಪರಂಪರೆ ಅಕಾಡೆಮಿ ವ್ಯಾಪ್ತಿಯೊಳಗೆ ಬರುವ ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ನೃತ್ಯ (ಭರತನಾಟ್ಯ,ಕಥಕ್,ಕೂಚಿಪುಡಿ), ಕಥಾಕೀರ್ತನ ಮತ್ತು ಗಮಕ ಕ್ಷೇತ್ರಗಳಲ್ಲಿ ಪ್ರತಿಷ್ಠಿತ ಸಂಸ್ಥೆಯ ಗುರುಗಳ ಮೂಲಕ 5 ತಿಂಗಳ ಸಂಗೀತ ನೃತ್ಯ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳುವ ಶಿಬಿರಾರ್ಥಿಗಳು 16 ರಿಂದ 30 ವರ್ಷದ ಒಳಗಿರಬೇಕು. ಗುರುಗಳ ಬಳಿ ಕನಿಷ್ಠ 2 ವರ್ಷ ಅಭ್ಯಾಸ ಮಾಡಿರಬೇಕು. ಗುರುಗಳ ಪ್ರಮಾಣ ಪತ್ರ ಲಗತ್ತಿಸಬೇಕು. ಓದು ಬರಹ ಬಲ್ಲವರಾಗಿರಬೇಕು. ಪ್ರತಿಷ್ಠಿತ ಸಂಸ್ಥೆಗಳು ಅರ್ಜಿ ಸಲ್ಲಿಸಲು ಕನಿಷ್ಠ 10 ವರ್ಷಗಳ ಸೇವೆ ಸಲ್ಲಿಸಿರಬೇಕು. ಸಂಸ್ಥೆ ನೊಂದಣಿ ಹಾಗೂ ನವೀಕರಣ ಪತ್ರ ಲಗತ್ತಿಸಬೇಕು.
ಶಿಬಿರಾರ್ಥಿಗಳು ಹಾಗೂ ಪ್ರತಿಷ್ಠಿತ ಸಂಸ್ಥೆಗಳ ಗುರುಗಳು ನಿಗದಿತ ಅರ್ಜಿಯನ್ನು ಅಕಾಡೆಮಿಯಲ್ಲಿ ಹಾಗೂ ಬೇರೆಬೇರೆ ಜಿಲ್ಲೆಯ ಅಭ್ಯರ್ಥಿಗಳು ಆಯಾ ಜಿಲ್ಲೆಯ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಉಚಿತವಾಗಿ ಪಡೆಯಬಹುದಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ರಿಜಿಸ್ಟ್ರಾರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಬೆಂಗಳೂರು-2 ಇಲ್ಲಿಗೆ ಫೆ.28 ರೊಳಗೆ ಕಳಿಹಿಸಿಕೊಡಬೇಕು. ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿ ಅಂತರ್ಜಾಲತಾಣ https://sangeetanrityaacademy.karnataka.gov.in ನ್ನು ಸಂಪರ್ಕಿಸಬಹುದೆಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ರಿಜಿಸ್ಟ್ರಾರ್ ಬಿ.ನೀಲಮ್ಮ ತಿಳಿಸಿದ್ದಾರೆ.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.